Asianet Suvarna News Asianet Suvarna News

ಏರ್ ಇಂಡಿಯಾಗೆ ‘ಮೈ ಹೂ ನಾ’ಎಂದ ಮೋದಿ: ಆರ್ಥಿಕ ನೆರವು!

ಏರ್ ಇಂಡಿಯಾಗೆ ಆರ್ಥಿಕ ನೆರವು ಘೋಷಿಸಿದ ಕೇಂದ್ರ! 2 ಕಂತುಗಳಲ್ಲಿ 7 ಸಾವಿರ ಕೋಟಿ ರೂ. ನೆರವು ಘೋಷಣೆ! 2 ಸಾವಿರ ಕೋಟಿ ರೂ. ಬ್ಯಾಂಕ್ ಖಾತರಿಗೆ ಹಣಕಾಸು ಸಚಿವಾಲಯ ಅಸ್ತು! ಏರ್ ಇಂಡಿಯಾ ಮುಚ್ಚುವ ಸುದ್ದಿ ಸುಳ್ಳು ಎಂದ ಸಂಸ್ಥೆ
 

Union Government announce financial support to Air India
Author
Bengaluru, First Published Aug 28, 2018, 2:33 PM IST

ನವದೆಹಲಿ(ಆ.28): ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಏರ್ ಇಂಡಿಯಾಗೆ ಹಣಕಾಸು ನೆರವು ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ೨ ಕಂತುಗಳಲ್ಲಿ ಏರ್ ಇಂಡಿಯಾಗೆ ೭೦೦೦ ಕೋಟಿ ರೂ. ನೆರವು ನೀಡಲು ಹಣಕಾಸು ಸಚಿವಾಲಯ ಉದ್ದೇಶಿಸಿದೆ.

ವಿಶೇಷ ಉದ್ದೇಶಿತ ವಾಹಕಕ್ಕೆ ಏರ್ ಇಂಡಿಯಾ ಸಾಲವನ್ನು ವರ್ಗಾಯಿಸಲಾಗುತ್ತದೆ. ಅಲ್ಲದೇ ೨,೦೦೦ ಕೋಟಿ ರೂ. ಬ್ಯಾಂಕ್ ಖಾತರಿಯನ್ನು ಹಣಕಾಸು ಸಚಿವಾಲಯ ಒದಗಿಸಲಿದೆ. 

ಈ ಸಾಲದ ಹಣವನ್ನು ಏರ್ ಇಂಡಿಯಾ ಕಾರ್ಯನಿರ್ವಹಣೆ ಬಂಡವಾಳವಾಗಿ ಬಳಸಿಕೊಳ್ಳಲಿದೆ. ಈ ಹಿಂದೆಯೂ ಹಲವು ಬಾರಿ ಏರ್ ಇಂಡಿಯಾಗೆ ಸರ್ಕಾರ ಹಣಕಾಸಿನ ನೆರವು ಒದಗಿಸಿದೆ.

ಇದೇ ವೇಳೆ ಏರ್ ಇಂಡಿಯಾ ಇದೇ ಅಕ್ಟೋಬರ್ 1ರಂದು ಸಂಪೂರ್ಣವಾಗಿ ಮುಚ್ಚಲಾಗುವುದು ಎಂಬ ಸುದ್ದಿಯನ್ನು ಸಂಸ್ಥೆ ತಳ್ಳಿ ಹಾಕಿದೆ. ಸಂಸ್ಥೆಯನ್ನು ಮುಚ್ಚುವ ಕುರಿತು ಕೇಂದ್ರ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ ಎಂಬ ಸುದ್ದಿ ಸುಳ್ಳು ಎಂದು ಸಂಸ್ಥೆ ಖಚಿತಪಡಿಸಿದೆ.  ಇಂತದ್ದೊಂದು ಪತ್ರ ಏರ್ ಇಂಡಿಯಾ ಸಂಸ್ಥೆಯ ನೌಕರರಲ್ಲಿ ಗೊಂದಲ ಸೃಷ್ಟಿಸಿತ್ತು. ಅದರೆ ಈ ಪತ್ರ ನಕಲಿ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

Follow Us:
Download App:
  • android
  • ios