Asianet Suvarna News Asianet Suvarna News

ತೈಲದ ಮೇಲಿನ ಸುಂಕ ಇಳಿಸಲು ಸಾಧ್ಯವೇ ಇಲ್ಲ: ಜೇಟ್ಲಿ

ತೈಲ ದರ ಏರಿಳಿತದ ಹಾದಿಯಲ್ಲಿದ್ದು ಕೇಂದ್ರ ಸರಕಾರದ ಮೇಲೆ ತೈಲದ ಮೇಲಿನ ಸುಂಕ ಕಡಿಮೆ ಮಾಡಲು ನಾಗರಿಕರು ಒತ್ತಡವನ್ನು ಹೇರಿದ್ದರು. ಸಾಮಾಜಿಕ ತಾಣಗಳಲ್ಲೂ  ಪ್ರತಿಕ್ರಿಯೆ ಹೊರಹಾಕಿದ್ದರು. ಆದರೆ ಇದೀಗ ಇದೆಲ್ಲದಕ್ಕೆ ಉತ್ತರ ನೀಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತೈಲದ ಮೇಲಿನ ಸುಂಕ ಇಳಿಸಲು ಸಾದ್ಯವೇ ಇಲ್ಲ ಎಂಬ ಸೂಚನೆ ನೀಡಿದ್ದಾರೆ.

Union Finance Minister Arun Jaitley hints at no cut in excise on oil

ನವದೆಹಲಿ [ಜೂನ್ 18] ತೈಲ ದರ ಏರಿಳಿತದ ಹಾದಿಯಲ್ಲಿದ್ದು ಕೇಂದ್ರ ಸರಕಾರದ ಮೇಲೆ ತೈಲದ ಮೇಲಿನ ಸುಂಕ ಕಡಿಮೆ ಮಾಡಲು ನಾಗರಿಕರು ಒತ್ತಡವನ್ನು ಹೇರಿದ್ದರು. ಸಾಮಾಜಿಕ ತಾಣಗಳಲ್ಲೂ  ಪ್ರತಿಕ್ರಿಯೆ ಹೊರಹಾಕಿದ್ದರು. ಆದರೆ ಇದೀಗ ಇದೆಲ್ಲದಕ್ಕೆ ಉತ್ತರ ನೀಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತೈಲದ ಮೇಲಿನ ಸುಂಕ ಇಳಿಸಲು ಸಾದ್ಯವೇ ಇಲ್ಲ ಎಂಬ ಸೂಚನೆ ನೀಡಿದ್ದಾರೆ.

ತೆರಿಗೆದಾರರು ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡಿದರೆ ಸರಕಾರದ ಮೇಲೆ ಹೊಣೆಗಾರಿಕೆ ಕಡಿಮೆಯಾಗುತ್ತದೆ. ಯಾವ ಕಾರಣಕ್ಕೂ ಪೆಟ್ರೋಲ್ ಹಾಗೂ ಡೀಸಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಲಾಗದು ಎಂದು ಹೇಳಿದರು.

ವೇತನ ಪಡೆಯುವ ವರ್ಗ ತೆರಿಗೆ ಪಾವತಿ ಮಾಡುವಂತೆ ಇತರೆ ವರ್ಗದ ಜನ ಸಹ ತೆರಿಗೆ ಪಾವತಿಯನ್ನು ಮಾಡಿದರೆ ಭಾರತ ಹಲವಾರು ಸಮಸ್ಯೆಗಳಿಂದ ಮುಕ್ತವಾಗಲಿದೆ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.

ಫೇಸ್ ಬುಕ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಜೇಟ್ಲಿ  ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರದ ತೆರಿಗೆ -ಜಿಡಿಪಿ ಅನುಪಾತವು ಶೇಕಡಾ 10 ರಿಂದ 11.5 ಕ್ಕೆ ಏರಿದೆ. ಇದು ನಿಜಕ್ಕೂ ಒಂದು ಸಾಧನೆ ಎಂಬುದನ್ನು ನಾವೆಲ್ಲ ಮನಗಾಣಬೇಕಿದೆ ಎಂದಿದ್ದಾರೆ.ಪೆಟ್ರೋಲ್ ಮತ್ತು ಡಿಸೇಲ್ ಗೆ ಸಂಬಂಧಿಸಿದ ಆದಾಯದಲ್ಲಿ ಆಯಾ ರಾಜ್ಯಗಳಿಗೂ ಪಾಲಿದೆ ಎಂಬುದನ್ನು ಮರೆಯಬಾರದು. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ದರ ಏರಿಳಿತವಾಗುತ್ತದೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios