ನವರಾತ್ರಿ ಹಬ್ಬಕ್ಕೆ ಗುಡ್ ನ್ಯೂಸ್, ಸರ್ಕಾರಿ ನೌಕರರಿಗೆ ಶೇ.4 ರಷ್ಟು DA ಹೆಚ್ಚಳಕ್ಕೆ ಅನುಮೋದನೆ!
ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡಾ 4 ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ದೀಪಾವಳಿ ಹಬ್ಬಕ್ಕೆ ಪರಿಷ್ಕೃತ ಸ್ಯಾಲರಿ ಉದ್ಯೋಗಿಗಳ ಕೈಸೇರಲಿದೆ.
ನವದೆಹಲಿ(ಅ.18) ದಸರಾ ಹಬ್ಬಕ್ಕೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಛಳ ನಿರ್ಧಾರಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಶೇಕಡಾ 4 ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇಕಡಾ 42ರಿಂದ ಶೇಕಡಾ 46ಕ್ಕೆ ಏರಿಕೆಯಾಗಿದೆ. ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಈ ನಿರ್ಧಾರ ನೆರವಾಗಲಿದೆ.
ಸರ್ಕಾರಿ ನೌಕರರ ಸುದೀರ್ಘ ದಿನಗಳಿಂದ ತುಟ್ಟಿಭತ್ಯೆ ಹೆಚ್ಚಳ ಬೇಡಿಕೆ ಕೊನೆಗೂ ಈಡೇರಿದೆ. ವಿಶೇಷವಾಗಿ ನವರಾತ್ರಿ ಹಬ್ಬದ ಆವೃತ್ತಿಯಲ್ಲೇ ಕೇಂದ್ರ ಸರ್ಕಾರ ಉದ್ಯೋಗಿಗಳಿಗೆ ಶುಭ ಸುದ್ದಿ ನೀಡಿದೆ. ಕೇಂದ್ರ ಸರ್ಕಾರದ ಅನುಮೋದನೆಯಿಂದ 47 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 68 ಲಕ್ಷ ಪಿಂಚಣಿದಾರರಿಗೆ ನೆರವಾಗಲಿದೆ.
ITR Filing:ಸ್ವ ಉದ್ಯೋಗ ಹೊಂದಿರುವ ವ್ಯಕ್ತಿ ಕೂಡ HRA ಕ್ಲೇಮ್ ಮಾಡಬಹುದಾ?
ನವರಾತ್ರಿ ಹಬ್ಬದ ಸಂದರ್ಭದಲ್ಲಿ ತುಟ್ಟಿ ಭತ್ಯೆ ಹೆಚ್ಚಳಕ್ಕೆ ಕೇಂದ್ರ ಅನುಮೋದನೆ ನೀಡಿರುವುದರಿಂದ ದೀಪಾವಳಿ ಹಬ್ಬಕ್ಕೆ ನೌಕರರಗೆ ಪರಿಷ್ಕೃತ ವೇತನ ಕೈಸೇರಲಿದೆ. ಕೇಂದ್ರ ಸರ್ಕಾರಿ ನೌಕರರು ಜುಲೈ ಮತ್ತು ಅಕ್ಟೋಬರ್ ನಡುವಿನ ಅವಧಿಯ ಬಾಕಿ ಜೊತೆಗೆ ನವೆಂಬರ್ ತಿಂಗಳನಿಂದ ಪರಿಷ್ಕೃತ ವೇತನ ಪಡೆಯಲಿದ್ದಾರೆ.
ಶೇಕಡಾ 4 ರಷ್ಟು ತುಟ್ಟಿ ಭತ್ಯೆ ಹೆಚ್ಚಳದಿಂದ ನೌಕರರು ನವೆಂಬರ್ ತಿಂಗಳಿನಿಂದ ಸ್ಯಾಲರಿ ಹೆಚ್ಚಾಗಲಿದೆ. ಉದಾಹರಣೆಗೆ ಕನಿಷ್ಠ ಮೂಲ ವೇತನ 18,000 ರೂಪಾಯಿ ನಿಗದಿಪಡಿಸಿದ್ದರೆ, ಸದ್ಯ ಇರುವ ಶೇಕಡಾ 42 ರಷ್ಟು ತುಟ್ಟಿಭತ್ಯೆ ಅಡಿಯಲ್ಲಿ ತಿಂಗಳಿೆ 7,500 ರೂಪಾಯಿ ಪಡೆಯುತ್ತಾರೆ. ಇದೀಗ ಶೇಕಡಾ 4 ರಷ್ಟು ಹೆಚ್ಚಳದಿಂದ ತುಟ್ಟಿಭತ್ಯೆ ಶೇಕಡಾ 46ಕ್ಕೆ ಏರಿಕೆಯಾಗಿದೆ. ಇದರಿಂದ ಮಾಸಿಕ ವೇತನವೂ 8,280 ರೂಪಾಯಿಗೆ ಏರಿಕೆಯಾಗಲಿದೆ. ಇನ್ನು 56,900 ರೂಪಾಯಿ ಗರಿಷ್ಠ ಮೂಲವೇತನ ಹೊಂದಿರುವ ವ್ಯಕ್ತಿಗಳು ಸದ್ಯದ ಶೇಕಡಾ 42ರಷ್ಟು ಡಿಎ ದಿಂದ ಮಾಸಿಕ 23,898 ರೂಪಾಯಿ ಪಡೆಯುತ್ತಿದ್ದಾರೆ. ಇದೀಗ ಡಿಎ ಹೆಚ್ಚಳದಿಂದ ಮಾಸಿಕವಾಗಿ 26,174 ರೂಪಾಯಿ ಪಡೆಯಲಿದ್ದಾರೆ.
ಬೆಂಗಳೂರಿನ ಉದ್ಯೋಗಿಗಳ ಬಾಡಿಗೆ ಭತ್ಯೆ ಶೇ.50ಕ್ಕೆ ಹೆಚ್ಚಿಸಿ: ತೇಜಸ್ವಿ ಸೂರ್ಯ ಮನವಿ
ನಿಯಮದ ಪ್ರಕಾರ ಕೇಂದ್ರ ಸರ್ಕಾರ ಕನಿಷ್ಠ 6 ತಿಂಗಳಿಗೊಮ್ಮೆ ಸರ್ಕಾರಿ ನೌಕರರ ಡಿಎ ಹಾಗೂ ಡಿಆರ್ ಪರಿಷ್ಕರಣೆ ಮಾಡಲಿದೆ. ಆದರೆ ಹಲವು ಭಾರಿ ಆರ್ಥಿಕ ಸ್ಥಿತಿಗತಿ, ಆದಾಯ, ಆರ್ಥಿಕತೆ ಸೇರಿದಂತೆ ಹಲವು ಕಾರಣಗಳಿಂದ ಪರಿಷ್ಕರಣೆ ವೇಳೆ ಯಥಾ ಸ್ಥಿತಿ ಕಾಪಾಡಿಕೊಳ್ಳಲಾಗುತ್ತದೆ. ಆದರೆ ಕೇಂದ್ರ ಸರ್ಕಾರ ಇದೀಗ ಶೇಕಾಡ 4 ರಷ್ಟು ತುಟ್ಟಿಭತ್ಯೆ ಹೆಚ್ಚಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ.