ಬೆಂಗಳೂರಿನ ಉದ್ಯೋಗಿಗಳ ಬಾಡಿಗೆ ಭತ್ಯೆ ಶೇ.50ಕ್ಕೆ ಹೆಚ್ಚಿಸಿ: ತೇಜಸ್ವಿ ಸೂರ್ಯ ಮನವಿ
ಬೆಂಗಳೂರಿನಲ್ಲಿ ಕೆಲಸ ಮಾಡುವ ಬಹುತೇಕ ಉದ್ಯೋಗಿಗಳು ಮಧ್ಯಮ ವರ್ಗದವರಾಗಿದ್ದರೂ, ವಿವಿಧ ಕಾರಣಗಳಿಂದಾಗಿ ವೇಗವಾಗಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಸತಿ ಮತ್ತು ಮನೆ ಬಾಡಿಗೆ ವೆಚ್ಚಗಳು ಹೆಚ್ಚಾಗುತ್ತಿದ್ದು ಮಂದ್ಯಮ ವರ್ಗದ ಉದ್ಯೋಗಿಗಳಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಬೆಂಗಳೂರಿನ ಉದ್ಯೋಗಿಗಳ ಮನೆ ಬಾಡಿಗೆಯ ಭತ್ಯೆಯನ್ನು ಶೇ. 50ಕ್ಕೆ ಹೆಚ್ಚಳ ಮಾಡಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದರು.
ಬೆಂಗಳೂರು (ಡಿ.13): ದೇಶದಲ್ಲಿರುವ ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಮೆಟ್ರೋ ಪಾಲಿಟಿನ್ ಸಿಟಿಗಳಿಗೆ ಸಾಟಿಯಿಲ್ಲದಂತೆ ನಗರವು ಬೆಳೆಯುತ್ತಿದ್ದು, ವಸತಿ ಮತ್ತು ಬಾಡಿಗೆ ವೆಚ್ಚ ತೀವ್ರ ಹೆಚ್ಚಳ ಆಗುತ್ತಿದೆ. ಆದರೆ, ಇಲ್ಲಿ ಕೆಲಸ ಮಾಡುವ ಬಹುತೇಕ ಉದ್ಯೋಗಿಗಳು ಮಧ್ಯಮ ವರ್ಗದವರಾಗಿದ್ದು, ಕೂಡಲೇ ಕೇಂದ್ರ ಸರ್ಕಾರ ಆದಾಯ ತೆರಿಗೆ ನಿಯಮಗಳಿಗೆ ತಿದ್ದುಪಡಿ ತಂದು ಮನೆ ಬಾಡಿಗೆ ಭತ್ಯೆಯನ್ನು (HRA) ಶೇ.40 ರಿಂದ 50ಕ್ಕೆ ಏರಿಸುವಂತೆ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದರು.
ಲೋಕಸಭೆ ಅಧಿವೇಶನದ ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ವಿಷಯಗಳ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೆಲಸ ಮಾಡುವ ಸಂಬಳದಾರರ ಮನೆ ಬಾಡಿಗೆ ಭತ್ಯೆ ಈಗ ಶೇ.40 ಇದೆ. ಆದರೆ, ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ನಿಯಮಾವಳಿಗಳಿಗೆ ಸೂಕ್ತ ತಿದ್ದುಪಡಿ ತಂದು ಈಗಿರುವ ಶೇ.೪೦ ಮನೆ ಬಾಡಿಗೆ ಭತ್ಯೆಯನ್ನು ಶೇ.50 ಕ್ಕೆ ಏರಿಕೆ ಮಾಡಬೇಕು. ಈ ಮೂಲಕ ದೇಶದ ಇತರೆ ಮೆಟ್ರೋ ಪಾಲಿಟಿನ್ ನಗರಗಳಿಗೆ ಪಟ್ಟಿಗೆ ಬೆಂಗಳೂರನ್ನು ಸೇರ್ಪಡೆಗೊಳಿಸಬೇಕು. ಈ ಮೂಲಕ ಮಧ್ಯಮ ವರ್ಗದ ಸಂಬಳದಾರರ ಹಿತಾಸಕ್ತಿ ಕಾಪಾಡಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದರು.
ಆದಾಯ ತೆರಿಗೆ ವಿನಾಯ್ತಿ 5 ಲಕ್ಷಕ್ಕೆ ಹೆಚ್ಚಳ..? ಕೇಂದ್ರ ಬಜೆಟ್‌ನಲ್ಲಿ ಮಹತ್ವದ ಘೋಷಣೆ ಸಾಧ್ಯತೆ
ತೆರಿಗೆ ನಿಯಮಾವಳಿ ಪರಾಮರ್ಶಿಸಿ: ಬೆಂಗಳೂರು ಮಹಾನಗರದಲ್ಲಿ ಮಧ್ಯಮ ವರ್ಗದ ಸಂಬಳದಾರ ವರ್ಗವು ಅತಿ ಹೆಚ್ಚು ವಾಸಿಸುತ್ತಿದ್ದಾರೆ. ದೆಹಲಿ, ಚೆನ್ನೈ, ಮುಂಬೈ ಮತ್ತು ಕೋಲ್ಕತ್ತಾಗಳ ಸಾಲಿಗೆ ಬೆಂಗಳೂರನ್ನು ಕೂಡ ಸೇರಿಸಿದಲ್ಲಿ, ನಗರದ ಮಧ್ಯಮ ವರ್ಗದ ಸಂಬಳದಾರ ವರ್ಗದ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ. ಆದಾಯ ತೆರಿಗೆ ನಿಯಮಾವಳಿಗಳನ್ನು ಪರಾಮರ್ಶಿಸುವ ಮೂಲಕ ಬೆಂಗಳೂರು ನಗರದ ಜನತೆಯ ಮನೆ ಬಾಡಿಗೆ ಭತ್ಯೆ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.
ಮೆಟ್ರೋ ಪಾಲಿಟಿನ್ ನಗರವನ್ನಾಗಿ ಘೋಷಿಸಿ: ಬೆಂಗಳೂರು ಮತ್ತು ಇತರ ಬೆಳವಣಿಗೆ ಹೊಂದುತ್ತಿರುವ ನಗರಗಳಲ್ಲಿ ಮನೆ ಬಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ, ಬೆಂಗಳೂರು ಮತ್ತು ಇಂತಹ ನಗರಗಳನ್ನು ಮಹಾನಗರಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದಲ್ಲಿ ಮಧ್ಯಮ ವರ್ಗದ ಸಂಬಳದಾರ ವರ್ಗದ ಜನತೆಗೆ ಅನುಕೂಲವಾಗಲಿದೆ ಎಂದು ಸಂಸತ್ತಿನ ಮನವಿ ಮಾಡಿದರು.
ಶಿರಾಡಿ ಸುರಂಗ ಹೆದ್ದಾರಿ ಕಾರ್ಯಸಾಧುವಲ್ಲ: ಕೇಂದ್ರ ಸಚಿವ ಗಡ್ಕರಿ
ಸ್ಟಾರ್ಟ್ ಅಪ್ ರಾಜಧಾನಿ ಖ್ಯಾತಿ: ಇನ್ನು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸರಿಸುಮಾರು 1.20 ಕೋಟಿ ಜನರು ವಾಸವಾಗಿದ್ದಾರೆ. ಒಟ್ಟಾರೆ ಕರ್ನಾಟಕ ರಾಜ್ಯದ ಜಿಡಿಪಿಗೆ ಅತಿಹೆಚ್ಚು ಶೇ.80 ರಷ್ಟು ಕೊಡುಗೆ ನೀಡುತ್ತಿದೆ. ಸಿಲಿಕಾನ್ ಸಿಟಿ ಎಂದು ಪ್ರಸಿದ್ಧ ಪಡೆದಿರುವ ಜೊತೆಗೆ 7,500 ಸ್ಟಾರ್ಟ್-ಅಪ್ ಗಳ ಕಾರ್ಯನಿರ್ವಹಣೆಯಿಂದ ಸ್ಟಾರ್ಟ್ ಅಪ್ ರಾಜಧಾನಿ ಎಂದು ಪ್ರಖ್ಯಾತಿ ಪಡೆದಿದೆ. ಐಟಿ-ಐಟಿ ಸಂಬಂಧಿತ ಸೇವೆಗಳು, ಸಾಫ್ಟ್ ವೇರ್ ತಂತ್ರಜ್ಞಾನದಲ್ಲಿ ಭಾರತದ ಶೇ.40 ರಷ್ಟು ಐಟಿ ರಪ್ತು ವಹಿವಾಟು ನಡೆಸುವ ಬಹು ಮುಖ್ಯ ನಗರವಾಗಿದೆ. ಬಯೋ ಟೆಕ್ನಾಲಜಿ ಗೆ ಸಂಬಂಧಿಸಿದ ಅತೀ ಹೆಚ್ಚಿನ ಸಂಸ್ಥೆಗಳು ಬೆಂಗಳೂರಿನಲ್ಲಿವೆ. ದೇಶದ ಶೇ.80 ರಷ್ಟು ಸೆಮಿ ಕಂಡಕ್ಟರ್ ಉದ್ಯಮವು ಬೆಂಗಳೂರು ಕೇಂದ್ರಿತವಾಗಿದೆ. ನಗರದ ಜನತೆಗೆ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.