ಹೊಸ ಆದಾಯ ತೆರಿಗೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಂದಿನ ವಾರ ಈ ಮಸೂದೆ ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಪ್ರಮುಖವಾಗಿ ತೆರಿಗೆ ಆಧುನೀಕರಣದ ನೀತಿ ಜನಸಾಮಾನ್ಯರಿಗೆ ನೆರವಾಗಲಿದೆ.

ನವದೆಹಲಿ(ಫೆ.08) ಬರೋಬ್ಬರಿ 60 ವರ್ಷಗಳಿಂದ ಭಾರತದಲ್ಲಿದ್ದ ಹಳೇ ಆದಾಯ ತೆರಿಗೆ ನೀತಿ ಬದಲಾಗುತ್ತಿದೆ. ಇದೀಗ ಹಲವು ಬದಲಾವಣೆ, ಸುಧಾರಣೆಗಳನ್ನು ಮಾಡಿರುವ ಹೊಸ ಆದಾಯ ತೆರಿಗೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದ ಜನಸಾಮಾನ್ಯರ ಆದಾಯ ತೆರಿಗೆಯಲ್ಲಿ ಮಹತ್ವದ ಬದಲಾವಣೆಯಾಗುತ್ತಿದೆ. ಬರೋಬ್ಬರಿ 60 ವರ್ಷಗಳ ಬಳಿಕ ಭಾರತ ಹೊಸ ಆದಾಯ ತೆರಿಗೆ ನೀತಿ ಜಾರಿಗೆ ಬರಲಿದೆ. ಸಚಿವ ಸಂಪುಟದಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಮುಂದಿನ ವಾರದ ಸಂಸತ್ತಿನಲ್ಲಿ ಹೊಸ ಆದಾಯ ತೆರಿಗೆ ಬಿಲ್ ಮಂಡನೆಯಾಗಲಿದೆ.

ಕೇಂದ್ರ ಬಜೆಟ್ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆ ವಿನಾಯಿತಿ ಸೇರಿದಂತೆ ಆದಾಯ ತೆರಿಗೆ ನೀತಿಯಲ್ಲಿ ಹಲವು ಬದಲಾವಣೆ ಘೋಷಿಸಿಸಿದ್ದರು. ಇದೀಗ ಈ ಬದಲಾವಣೆ, ಘೋಷಣೆಗಳ ಸಂಪೂರ್ಣ ವಿವರಣೆಯೊಂದಿಗೆ ಹೊಸ ಬಿಲ್ ಮಂಡನೆಯಾಗಲಿದೆ. ಸದ್ ಭಾರತದಲ್ಲಿ ಚಾಲ್ತಿಯಲ್ಲಿರುವುದು ಇದಾಯ ತೆರಿಗೆ ಕಾಯ್ದೆ 1961. ಕಳೆದ ಆರು ದಶಕಗಳ ಹಿಂದಿನ ನೀತಿಯಲ್ಲಿ ಮಹತ್ವದ ಬದಲಾವಣೆಯೊಂದಿಗೆ ಹೊಸ ತೆರಿಗೆ ನೀತಿ ಮಂಡನೆಯಾಗಲಿದೆ.

Breaking: ಮನೆ ಕಟ್ಟುವವರಿಗೆ ಗುಡ್‌ನ್ಯೂಸ್‌ ನೀಡಿದ ಆರ್‌ಬಿಐ, ರೇಪೋ ರೇಟ್‌ 25 ಬೇಸಿಸ್‌ ಪಾಯಿಂಟ್ಸ್‌ ಕಡಿತ!

ಹೊಸ ಆದಾಯ ತೆರಿಗೆ ಮಸೂದೆ ಜನಸಾಮಾನ್ಯರ ಆದಾಯ ತೆರಿಗೆ ಪಾವತಿಯನ್ನು ಸುಲಭಗೊಳಿಸುವುದು, ತೆರಿಗೆ ವಿನಾಯಿತಿ ಏರಿಕೆ ಸೇರಿದಂತೆ ಕೆಲ ಮಹತ್ತರ ಬದಲಾವಣೆ ಮಾತ್ರವಲ್ಲ, ಕಾನೂನಾತ್ಮಕ ಸಂಕಷ್ಟಗಳು, ಅಡೆತಡೆಗಳನ್ನು ದೂರ ಮಾಡಲಿದೆ. ಪ್ರಮುಖವಾಗಿ ಹಲವು ತೆರಿಗೆ ಪಾವತಿ ವಿಳಂಬವನ್ನು ಅಪರಾಧ ಅಡಿಯಲ್ಲಿ ಪರಿಗಣಿಸಲಾಗುವುದಿಲ್ಲ. ಈ ಮೂಲಕ ತೆರಿಗೆದಾರರು ಸುಲಭವಾಗಿ ತೆರಿಗೆ ಪಾವತಿ ಮಾಡಲು ಸಾಧ್ಯವಾಗುತ್ತಿದೆ. ಇಷ್ಟೇ ಅಲ್ಲ, ತೆರಿಗೆ ಉಳಿತಾಯ ಮಾಡಲು ಸಹಾಯ ಮಾಡುತ್ತದೆ. ತೆರಿಗೆದಾರರ ಫ್ರೆಂಡ್ಲಿ ಈ ಹೊಸ ಮಸೂದೆ ಮೂಲಗಳ ಪ್ರಕಾರ ಫೆಬ್ರವರಿ 10 ರಂದು ಮಂಡನೆಯಾಗಲಿದೆ.ಹೊಸ ಬಿಲ್ 2025-26ರ ಆರ್ಥಿಕ ವರ್ಷದಿಂದ ಜಾರಿಯಾಗಲಿದೆ. 

ಹೊಸ ಕಾಯ್ದೆ ಅನ್ವ, ಕೆಲ ತೆರಿಗೆ ವಿನಾಯ್ತಿ ಅಥವಾ ಆದಾಯ ತೆರಿಗೆ ಕಾಯ್ದೆ ತಿದ್ದುಪಡಿಗೆ ಸರ್ಕಾರವು ಬಜೆಟ್‌ವರೆಗೆ ಕಾಯುವ ಬದಲು ಕಾರ್ಯಾದೇಶದ ಮೂಲಕ ಬದಲಾವಣೆಗೆ ಅವಕಾಶ ಮಾಡಿಕೊಡಲಿದೆ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತರಲುದ್ದೇಶಿಸಿರುವ ಆದಾಯ ತೆರಿಗೆ ಕಾಯ್ದೆಯು ಹಾಲಿ ಇರುವ ತೆರಿಗೆ ವ್ಯವಸ್ಥೆಗೆ ಹೊಸರೂಪ ನೀಡುವುದಲ್ಲದೆ ಅನಗತ್ಯ ಎಂದು ಕಂಡು ಬಂದ ಅಂಶಗಳನ್ನು ತೆಗೆದು ಹಾಕಲಿದೆ.

ಹಳೆಯ ಕಾಯ್ದೆಯನ್ನು ಯುವ ಭಾರತದ ಪರಿಸ್ಥಿತಿಗೆ ಅನುಗುಣವಾಗಿ ರೂಪಿಸಲಾಗಿತ್ತು. ಆ ಬಳಿಕ 60 ವರ್ಷಗಳಲ್ಲಿ ದೇಶ, ಉದ್ಯಮ, ವ್ಯವಹಾರಗಳು, ತೆರಿಗೆ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ತೆರಿಗೆ ಪಾವತಿಸುವ ರೀತಿಯಲ್ಲೂ ತಾಂತ್ರಿಕವಾಗಿ ಸಾಕಷ್ಟು ಬದಲಾವಣೆಗಳು ಆಗಿವೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಹೊಸ ಆದಾಯ ತೆರಿಗೆಯನ್ನು ಜಾರಿಗೆ ತರಲಾಗುತ್ತಿದೆ. ಓದುಗ ಸ್ನೇಹಿ: ಹೊಸ ಆದಾಯ ತೆರಿಗೆ ಕಾಯ್ದೆಯು ಓದುಗ ಸ್ನೇಹಿಯಾಗಿರಲಿದೆ. ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಇರಲಿದೆ. ಹಾಲಿ ಕಾಯ್ದೆಯಲ್ಲಿರುವ ಗೊಂದಲಗಳನ್ನು ನಿವಾರಿಸಿ ವಿವಾದಗಳನ್ನು ಕಡಿಮೆಗೊಳಿಸುವ ಉದ್ದೇಶ ಹೊಂದಿದೆ.

1961ರ ತೆರಿಗೆ ನೀತಿಯು ನೇರ ತೆರಿಗೆ, ವೈಯಕ್ತಿಕ ಆದಾಯ ತೆರಿಗೆ, ಕಾರ್ಪೊರೆಟ್‌ ಟ್ಯಾಕ್ಸ್‌, ಸೆಕ್ಯುರಿಟಿ ಮತ್ತು ಟ್ರಾನ್ಸಾಕ್ಷನ್‌ ಟ್ಯಾಕ್ಸ್‌, ಗಿಫ್ಟ್‌ ಮತ್ತು ಸಂಪತ್ತಿನ ತೆರಿಗೆಯ ಕುರಿತು ವಿವರಿಸುತ್ತದೆ. ಸದ್ಯ ಈ ಕಾಯ್ದೆಯು 298 ಸೆಕ್ಷನ್‌ಗಳು ಮತ್ತು 23 ಅಧ್ಯಾಯಗಳನ್ನು ಒಳಗೊಂಡಿದೆ. ಕಾಲಾನುಕಾಲದಲ್ಲಿ ಸರ್ಕಾರವು ಸಂಪತ್ತಿನ ಮೇಲಿನ, ಗಿಫ್ಟ್‌ ಮೇಲಿನ ತೆರಿಗೆ ಸೇರಿ ಹಲವು ತೆರಿಗೆಗಳನ್ನು ತೆಗೆದುಹಾಕಿದೆ. ಅಲ್ಲದೆ, 2022ರಲ್ಲಿ ಹೊಸ ಆದಾಯ ತೆರಿಗೆ ವ್ಯವಸ್ಥೆ ಜಾರಿಗೆ ಬಂದಿದೆ. ಈ ರೀತಿ ಕಳೆದ ಆರು ದಶಕಗಳಲ್ಲಿ ತೆರಿಗೆ ನೀತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹೀಗಾಗಿ ಉದ್ದೇಶಿತ ಹೊಸ ಕಾಯ್ದೆಯಲ್ಲಿ ಅನಗತ್ಯವೆನಿಸಿದ ಅಧ್ಯಾಯನ, ಕಲಂಗಳನ್ನು ತೆಗೆದುಹಾಕಲಾಗಿದ್ದು, ಗೊಂದಲಗಳಿಲ್ಲದಂತೆ ನೋಡಿಕೊಳ್ಳಲಾಗಿದೆ.

ಈ ಹೊಸ ಆದಾಯ ತೆರಿಗೆ ಮಸೂದೆಯು ಈ ಬಜೆಟ್‌ ಅಧಿವೇಶನದಲ್ಲೇ ಮಂಡನೆಯಾಗುವ ನಿರೀಕ್ಷೆ ಇದ್ದು, ಬಳಿಕ ಮತ್ತಷ್ಟು ಕೂಲಂಕಷ ಪರಿಶೀಲನೆಗಾಗಿ ಹಣಕಾಸಿಗೆ ಸಂಬಂಧಿಸಿದ ಸ್ಥಾಯಿ ಸಮಿತಿ ಮುಂದೆ ಹೋಗಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಆಫ್​ಲೈನ್​ ಹಾಗೂ ಆನ್​ಲೈನ್​ನಲ್ಲಿ ಆದಾಯ ತೆರಿಗೆ ಇ-ಫೈಲಿಂಗ್ ಮಾಡುವುದು ಹೇಗೆ? ಸ್ಟೆಪ್​ ಬೈ ಸ್ಟೆಪ್​ ಮಾಹಿತಿ