ಕೇಂದ್ರ ಬಜೆಟ್‌ನಲ್ಲಿ ಓಲಾ ಮತ್ತು ಸ್ವಿಗ್ಗಿ ಕಾರ್ಮಿಕರಿಗೆ ಐ-ಕಾರ್ಡ್ ಮತ್ತು e-shram ಪೋರ್ಟಲ್ ನೋಂದಣಿ ಘೋಷಣೆ. ಈ ಯೋಜನೆಯಿಂದ 1 ಕೋಟಿ ಗಿಗ್ ವರ್ಕರ್ಸ್‌ಗಳಿಗೆ ಲಾಭ.

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 8ನೇ ಬಜೆಟ್ ಮಂಡಿಸಿದ್ದು, ಓಲಾ ಮತ್ತು ಸ್ವಿಗ್ಗಿ ಕಾರ್ಮಿಕರ ಆರ್ಥಿಕ ಪರಿಸ್ಥಿತಿ ಬಲ ತುಂಬುವ ಕೆಲಸ ಮಾಡಿದ್ದಾರೆ. ಓಲಾ ಮತ್ತು ಸ್ವಿಗ್ಗಿಯಲ್ಲಿ ಕಾರ್ಯ ನಿರ್ವಹಿಸುವ ಯುವಕರಿಗೆ I-Card ಮಾಡಲಾಗುವುದು ಮತ್ತು e-shram ಪೋರ್ಟಲ್‌ನಲ್ಲಿ ಇವರ ಹೆಸರುಗಳನ್ನು ನೋಂದಾಯಿಸಲಾಗುವುದು. ಈ ಯೋಜನೆಯಲ್ಲಿ 1 ಕೋಟಿ ಗಿಗ್ ವರ್ಕರ್ಸ್‌ (Gig Worker) ಲಾಭ ಸಿಗಲಿದೆ . ನಗರ ಪ್ರದೇಶದ ಬಡ ಮತ್ತು ವಂಚಿತ ಗುಂಪುಗಳ ಆದಾಯ, ಸುಸ್ಥಿರ ಜೀವನೋಪಾಯ ಮತ್ತು ಉತ್ತಮ ಜೀವನವನ್ನು ಹೆಚ್ಚಿಸಲು ನಗರ ಕಾರ್ಮಿಕರ ಉನ್ನತಿಗಾಗಿ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. 

ಯುವಕರಿಗೆ ಸಂಬಂಧಿಸಿದ ಜಾಬ್-ಸ್ಕಿಲ್ಲಿಂಗ್‌ ಕುರಿತು ಪ್ರಮುಖ ಘೋಷಣೆಗಳು 
1.IITs ಮತ್ತು IIMs ನಲ್ಲಿ 10 ಸಾವಿರ ಫೆಲೋಶಿಪ್ ಸಿಗಲಿದೆ. 
2.ಮುಂದಿನ ವರ್ಷದಿಂದ ವೈದ್ಯಕೀಯ ಶಿಕ್ಷಣದಲ್ಲಿ 10 ಸಾವಿರ ಸೀಟ್‌ಗಳ ಸಂಖ್ಯೆ ಹೆಚ್ಚಾಗಲಿದೆ. 5 ವರ್ಷದಲ್ಲಿ 75,000 ಸೀಟ್‌ಗಳ ಸಂಖ್ಯೆ ಏರಿಕೆಯಾಗಲಿದೆ. 
3.ಕೌಶಲ್ಯ ಕೋರ್ಸ್‌ಗಳಿಗಾಗಿ 50 ಸಾವಿರ ಅಟಲ್ ಟಿಕರಿಂಗ್ ಲ್ಯಾಬ್‌ಗಳ ನಿರ್ಮಾಣ.
4.ಭಾರತೀಯ ಭಾಷಾ ಪುಸ್ತಕ ಯೋಜನೆಯ ಸಹಾಯದಿಂದ ಶಾಲೆ ಮತ್ತು ಉನ್ನತ ಶಿಕ್ಷಣಕ್ಕಾಗಿ ಡಿಜಿಟಲ್ ಪುಸ್ತಕಗಳು ಲಭ್ಯವಿರುತ್ತವೆ.
5.ನ್ಯಾಷನಲ್ ಸೆಂಟರ್ ಫಾರ್ ಸ್ಕಿಲ್ಲಿಂಗ್ ಅಡಿಯಲ್ಲಿ 5 ಹೊಸ ಕೇಂದ್ರಗಳನ್ನು ನಿರ್ಮಿಸಲಾಗುವುದು.

ಇದನ್ನೂ ಓದಿ: Budget 2025: ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಸಾಲದ ಮಿತಿ ಏರಿಕೆ, ಪ್ರಧಾನಮಂತ್ರಿ ಧನಧಾನ್ಯ ಯೋಜನೆ ಘೋಷಣೆ!

6.ದೇಶದ 23 ಐಐಟಿಗಳಲ್ಲಿ 65,000 ಸೀಟುಗಳ ಹೆಚ್ಚಳ. ಇದರರಲ್ಲಿ ಪಾಟ್ನಾದ ಐಐಟಿ ಸಹ ಸೇರ್ಪಡೆಯಾಗಿದೆ.
7.ಶಿಕ್ಷಣ ಕ್ಷೇತ್ರದ ಬೆಳವಣಿಗೆಗಾಗಿ AI ನಲ್ಲಿ 3 ಶ್ರೇಷ್ಠತೆಯ ಕೇಂದ್ರಗಳ ನಿರ್ಮಾಣ ಮಾಡಲಾಗುವುದು. 5 ಸಾವಿರ ಕೋಟಿ ಬಜೆಟ್‌ನಲ್ಲಿ ಕೃಷಿ, ಆರೋಗ್ಯ ಮತ್ತು ಎಐ ಕೇಂದ್ರಗಳನ್ನು ನಿರ್ಮಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

ಇದನ್ನೂ ಓದಿ: ತೆರಿಗೆದಾರರಿಗೆ ಪ್ರಧಾನಿ ಮೋದಿ ಗುಡ್ ನ್ಯೂಸ್, ₹12 ಲಕ್ಷವರೆಗೆ ಯಾವುದೇ ಆದಾಯ ತೆರಿಗೆ ಇಲ್ಲ