ಸಂಪೂರ್ಣ ಎಲೆಕ್ಟ್ರಿಕ್ ವಾಹನ ಗುರಿ, ಬಜೆಟ್‌ನಲ್ಲಿ ಇವಿ ಉತ್ಪಾದನೆ, ಚಾರ್ಜಿಂಗ್‌ಗೆ ಉತ್ತೇಜನ!

ಕೇಂದ್ರ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಭರಪೂರ ಕೊಡುಗೆ ಘೋಷಣೆಯಾಗಿಲ್ಲ. ಆದರೆ ಕಾರ್ಬನ್ ಮುಕ್ತ ಭಾರತದ ಗುರಿ ಸಾಧನೆಗೆ ಎಲೆಕ್ಟ್ರಿಕ್ ವಾಹನ ಉತ್ಪಾದನೆ, ಚಾರ್ಚಿಂಗ್ ಹಾಗೂ ಜೈವಿಂಗ ಇಂಧನಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಯೋಜನೆ ರೂಪಿಸಲಾಗಿದೆ.

Union Budget 2024 Strengthening e vehicle ecosystem by supporting manufacturing and charging says Nirmala Sitharaman ckm

ನವದೆಹಲಿ(ಫೆ.01) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ರ ಸಾಲಿನ ಬಜೆಟ್ ಮಂಡಿಸಿದ್ದಾರೆ. ಮಧ್ಯಂತರ ಬಜೆಟ್‌ನಲ್ಲಿ ಜನಪ್ರಿಯ ಘೋಷಣೆ ಬದಲು ಅರ್ಥಪೂರ್ಣ ಬಜೆಟ್ ಘೋಷಣೆಗಳಿವೆ. ಈ ಪೈಕಿ ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಬೂಸ್ಟರ್ ಡೋಸ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಎಲೆಕ್ಟ್ರಿಕ್ ವಾಹನ ಉತ್ಪಾದನೆ, ಚಾರ್ಜಿಂಗ್ ಹಾಗೂ ಜೈವಿಕ ಇಂಧನ ಉತ್ಪಾದನೆ ಗುರಿ ಸಾಧಿಸಲು ಈ ಬಜೆಟ್ ಉತ್ತೇಜನ ನೀಡುತ್ತಿದೆ.

ಪರಿಸರ ಸ್ನೇಹಿ ಪರ್ಯಾಯ ಮಾರ್ಗಗಳನ್ನು ಉತ್ತೇಜಿಸುತ್ತಿರುವ ಕೇಂದ್ರ ಸರ್ಕಾರ ಇದೀಗ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಪೂರಕ ವಾತವಾರಣ ನಿರ್ಮಿಸಲು ಮುಂದಾಗಿದೆ. ಸದ್ಯ ಎಲೆಕ್ಟ್ರಿಕ್ ವಾಹನದ ಪ್ರಮುಖ ಬ್ಯಾಟರಿ ಆಮದು ಮೇಲಿನ ಆಮದು ಸುಂಕ, ಸೆಸ್ ಸೇರಿದಂತೆ ಇತರ ತೆರಿಗೆಳ ಇಳಿಕೆ ಇಂಡಸ್ಟ್ರಿಯ ಬೇಡಿಕೆಯಾಗಿದೆ. ಆದರೆ ತೆರಿಗೆ ವಿಚಾರದಲ್ಲಿ ಹೆಚ್ಚಿನ ಬದಲಾವಣೆ ಮಾಡದ ಸರ್ಕಾರ, ಉತ್ಪಾದನೆ ಹೆಚ್ಚಿಸಲು ಹಾಗೂ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ವಾಹನವನ್ನು ನೀಡಲು ಪೂರಕ ಕ್ರಮ ಕೈಗೊಳ್ಳಲು ಮುಂದಾಗಿದೆ.

ಬಾಡಿಗೆ, ಸ್ಲಂನಲ್ಲಿರುವವರ ಮನೆ ಕನಸು ನನಸಾಗಿಸಲು ಹೊಸ ಯೋಜನೆ,ನಿರ್ಮಲಾ ಸೀತಾರಾಮ್ ಘೋಷಣೆ!

2070ರ ವೇಳೆ ಕಾರ್ಬನ್ ಮುಕ್ತ ಭಾರತ ಗುರಿ ಇಟ್ಟುಕೊಂಡಿರುವ ಸರ್ಕಾರ ಎಲೆಕ್ಟ್ರಿಕ್ ವಾಹನ ಬಳಕೆಯಲ್ಲಿ ಕೆಲ ಸೂತ್ರ ಅನುಸರಿಸಲು ಮುಂದಾಗಿದೆ. ಇಂದನ ಚಾಲಿತ ಸಾರಿಗೆ ಬಸ್‌ಗಳನ್ನು ಎಲೆಕ್ಟ್ರಿಕ್ ಚಾಲಿತ ಸಾರಿಗೆ ಬಸ್‌ಗಳಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಗಿದೆ. ಎಲೆಕ್ಟ್ರಿಕ್ ವಾಹನ ಮಾರಾಟದ ಪ್ರಮಾಣವನ್ನು ಹೆಚ್ಚಿಸಲು ಈ ಬಜೆಟ್ ಕೆಲ ಯೋಜನೆ ರೂಪಿಸಲಿದೆ. ಖಾಸಗಿ ಎಲೆಕ್ಟ್ರಿಕ್ ಕಾರು ಬಳಕೆಯನ್ನು ಶೇಕಜಾ 30 ಕ್ಕೆ ಹೆಚ್ಚಿಸಲು, ವಾಣಿಜ್ಯ ವಾಹನ ಬಳಕೆಯನ್ನು ಶೇಕಡಾ 70 ರಷ್ಟು ಹೆಚ್ಚಿಸಲು ಮುಂದಾಗಿದೆ. ಇನ್ನು ಶೇಕಡಾ 80 ರಷ್ಟು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಳಕೆ ಮಾಡುವಂತೆ ಉತ್ತೇಜಿಸಲು ಹಾಗೂ ಶೇಕಡಾ 40 ರಷ್ಟು ಸಾರಿಗೆ ಬಸ್‌ಗಳ ಬಳಕೆಗೆ ಯೋಜನೆ ರೂಪಿಸಲಾಗಿದೆ.

ಪೆಟ್ರೋಲ್, ಡೀಸೆಲ್‌ಗೆ ಪರ್ಯಾಯವಾಗಿ ಜೈವಿಕ ಇಂಧನಗಳ ಬಳಕೆ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಎಥೆನಾಲ್ ಇಂಧನ ಬಳಕೆ ಮಾಡಲಾಗುತ್ತಿದೆ. ಇದೀಗ ಎಥೆನಾಲ್ ಪೂರಕ ವಾಹನಗಳ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡಲು ಈ ಬಜೆಟ್‌ನಲ್ಲಿ ನಿರ್ಧರಿಸಲಾಗಿದೆ.

50 ವರ್ಷದ ಬಡ್ಡಿ ರಹಿತ ಸಾಲ ಮತ್ತೊಂದು ವರ್ಷ ಮುಂದುವರಿಕೆ, ಇದರಿಂದ ರಾಜ್ಯಕ್ಕೇನು ಲಾಭ?
 

Latest Videos
Follow Us:
Download App:
  • android
  • ios