Asianet Suvarna News Asianet Suvarna News

ಏನಿಲ್ಲ ಏನಿಲ್ಲ ಕರ್ನಾಟಕಕ್ಕೆ ಏನಿಲ್ಲ,ಬಜೆಟ್ ಮನಿ ಮಾಲೀಕ ಆಂಧ್ರ ಬಿಹಾರ, ಹರಿದಾಡುತ್ತಿದೆ ಮೀಮ್ಸ್!

ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ ಹರಿದಾಡುತ್ತಿದೆ. ಪ್ರಮುಖವಾಗಿ ಆಂಧ್ರ ಪ್ರದೇಶ ಹಾಗೂ ಬಿಹಾರಕ್ಕೆ ಗರಿಷ್ಠ ಅನುದಾನ ಘೋಷಣೆಯಾಗಿದ್ದರೆ, ಹೆಚ್ಚಿನ ಕೇಂದ್ರ ಸಚಿವರನ್ನು ಹೊಂದಿರುವ ಕರ್ನಾಟಕಕ್ಕೆ ಏನಿಲ್ಲ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
 

Union Budget 2024 Memes on bihar and Andhra Pradesh for major fund allocation ckm
Author
First Published Jul 23, 2024, 3:11 PM IST | Last Updated Jul 23, 2024, 3:11 PM IST

ನವದೆಹಲಿ(ಜು.23) ಭಾರಿ ನೀರೀಕ್ಷೆ, ಕುತೂಹಲ, ಸವಾಲುಗಳ ನಡುವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಪ್ರಧಾನಿ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದೆ. ತೆರಿಗೆ ನೀತಿ ಸರಳೀಕರಣ, ಉದ್ಯೋಗ ಸೃಷ್ಟಿಗೆ ಕೆಲ ಮಹತ್ವದ ಯೋಜನೆಗಳು, ಮೂಲಭೂತ ಸೌಕರ್ಯ ಅಭಿವೃದ್ಧಿ, ಎಂಎಸ್ಎಂಇ ಕ್ಷೇತ್ರಕ್ಕೆ ಆದ್ಯತೆ ಸೇರಿದಂತೆ ಹಲವು ಹೊಸ ಯೋಜನೆಗಳು ಘೋಷಣೆಯಾಗಿದೆ. ಈ ಪೈಕಿ ಮೋದಿ ಸರ್ಕಾರ ರಚನೆಯಾಗಲು ಬಿಹಾರದ ನಿತೀಶ್ ಕಮಾರ್ ನೇತೃತ್ವದ ಜೆಡಿಯು ಹಾಗೂ ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ದು ನೇತೃತ್ವದ ಟಿಡಿಪಿ ನೀಡಿದ ಬೆಂಬಲಕ್ಕೆ ಪ್ರತಿಯಾಗಿ ಬಂಬರ್ ಅನುದಾನ ಘೋಷಣೆ ಮಾಡಲಾಗಿದೆ. ಈ ಘೋಷಣೆ ಬೆನ್ನಲ್ಲೇ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್‌ಗಳು ಹರಿದಾಡುತ್ತಿದೆ. ಆಂಧ್ರ ಪ್ರದೇಶ ಬಿಹಾರಕ್ಕೆ ಸಿಂಹಪಾಲು ಅನುದಾನ ಸಿಕ್ಕರೆ, ಕರ್ನಾಟಕ್ಕೆ ಏನಿಲ್ಲ ಅನ್ನೋ ಮೀಮ್ಸ್ ಹರಿದಾಡುತ್ತಿದೆ.

ಬಿಹಾರ ಹಾಗೂ ಆಂಧ್ರ ಪ್ರದೇಶಕ್ಕೆ ವಿಶೇಷ ಅನುದಾನವನ್ನು ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.  ಈ ಎರಡು ರಾಜ್ಯಗಳಿಗೆ ಸಾವಿರಾರು ಕೋಟಿ ರೂಪಾಯಿ ಅನುದಾವನ್ನು ಮೀಸಲಿಡಲಾಗಿದೆ.  ಇತ್ತ ಕರ್ನಾಟಕ ಕೆಲ ನೀರಾವರಿ ಯೋಜನೆಗಳು ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಘೋಷಣೆ ಇಲ್ಲದಿರುವ ಕಾರಣ ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ ಹರಿದಾಡುತ್ತಿದೆ. 

Union Budget 2024 ಬಜೆಟ್ ಮಂಡನೆ ಬೆನ್ನಲ್ಲೇ ಕುಸಿದ ಷೇರು ಮಾರುಕಟ್ಟೆ, ಹೂಡಿಕೆದಾರರಿಗೆ ನಿರಾಸೆ!

ಬಿಹಾರ ಹಾಗೂ ಆಂಧ್ರ ಪ್ರದೇಶ ಈ ಬಜೆಟ್ ಬಳಿಕ ಸಂಭ್ರಮ ಆಚರಿಸುತ್ತಿದೆ. ಈ ಕುರಿತು ಹಲವು ಮೀಮ್ಸ್ ಹರಿದಾಡುತ್ತಿದೆ. ಇತರ ರಾಜ್ಯಗಳು ಸೊರಗಿದ ಹಾಗೂ ಬಿಹಾರ ಹಾಗೂ ಆಂಧ್ರ ನಳನಳಿಸುತ್ತಿರುವ ಮೀಮ್ಸ್ ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ. 

 

 

ಬಿಹಾರಕ್ಕೆ ಈ ಬಾರಿಯ ಬಜೆಟ್‌ನಲ್ಲಿ ನೆರೆ, ಪ್ರವಾಹ ಪರಿಸ್ಥಿತಿ ತಡೆಯಲು 11,500 ಕೋಟಿ  ರೂಪಾಯಿ ಘೋಷಿಸಲಾಗಿದೆ. ಹೊಸ ವಿಮಾನ ನಿಲ್ದಾಣ, ರಸ್ತೆ, ವೈದ್ಯಕೀ ಕಾಲೇಜು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಅನುದಾನ ಘೋಷಿಸಲಾಗಿದೆ. ಹೆದ್ದಾರಿ ಸೇರಿದಂತೆ ಸಾರಿಗೆ ಸಂಪರ್ಕ ಅಭಿವೃದ್ಧಿಗೆ 26,000 ಕೋಟಿ ರೂಪಾಯಿ, ವಿದ್ಯುತ್ ಸ್ಥಾವರ ಸ್ಥಾಪನೆಗೆ 21,000 ಕೋಟಿ ರೂಪಾಯಿ ಘೋಷಿಸಲಾಗಿದೆ.

 

 

ಇತ್ತ ಆಂಧ್ರ ಪ್ರದೇಶದಲ್ಲಿ ಹೊಸ ವಿದ್ಯುತ್ ಸ್ಥಾವರ ಆರಂಭನೆಗೆ 21,400 ಕೋಟಿ ರೂಾಯಿ, ವಿಶೇಷ ರಾಜ್ಯ ಸ್ಥಾನಮಾನ ಅಡಿಯಲ್ಲಿ 15,000 ಕೋಟಿ ರೂಪಾಯಿ ಆರ್ಥಿಕ ಸಹಾಯ ಸೇರಿದಂತೆ ವಿವಿಧ ಯೋಜನೆಗಳನ್ನು ಘೋಷಿಸಲಾಗಿದೆ. ಈ ಘೋಷಣೆ ಮಾಡುತ್ತಿದ್ದಂತೆ ಪ್ರತಿಪಕ್ಷಗಳು ಗದ್ದಲ ನಡೆಸಿತ್ತು.  

Union Budget 2024, ಮೊಬೈಲ್, ಚಿನ್ನ ಸೇರಿ ಕೆಲ ವಸ್ತುಗಳು ಅಗ್ಗ, ಯಾವುದು ದುಬಾರಿ?


 

Latest Videos
Follow Us:
Download App:
  • android
  • ios