Asianet Suvarna News Asianet Suvarna News

Union Budget 2024: ಗೆಲುವಿನ ವಿಶ್ವಾಸದ ಮೋದಿ ಬಜೆಟ್‌, ಆದಾಯ ತೆರಿಗೆ ವಿಚಾರದಲ್ಲಿಲ್ಲ ಯಾವುದೇ ರಿಲೀಫ್‌!

ಪಂಚರಾಜ್ಯ ಚುನಾವಣೆ, ರಾಮ ಮಂದಿರ ಉದ್ಘಾಟನೆ ಬಳಿಕ ಮುಂಬರುವ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸದಲ್ಲಿರುವ ಮೋದಿ ಸರ್ಕಾರ, ಮಧ್ಯಂತರ ಬಜೆಟ್‌ನಲ್ಲಿ ಯಾವುದೇ ಹೊಸ ಘೋಷಣೆಗಳನ್ನು ಮಾಡಿಲ್ಲ. ಆದಾಯ ತೆರಿಗೆ ವಿಚಾರದಲ್ಲಿ ಯಾವುದೇ ಬದಲಾವಣೆಯನ್ನೂ ಮಾಡಿಲ್ಲ.
 

Union Budget 2024 Finance Minister Nirmala Sitharaman says No change in income tax slabs san
Author
First Published Feb 1, 2024, 12:25 PM IST

ನವದೆಹಲಿ (ಫೆ.1): ಹಿಂದಿನೆಲ್ಲಾ ವರ್ಷಗಳಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಆಯಾ ಸರ್ಕಾರಗಳು ಮಧ್ಯಂತರ ಬಜೆಟ್‌ನಲ್ಲೀ ದೊಡ್ಡ ದೊಡ್ಡ ಘೋಷಣೆಗಳನ್ನು ಮಾಡುತ್ತಿದ್ದವು. ಆದರೆ, ಪಂಚರಾಜ್ಯ ಚುನಾವಣೆ ಹಾಗೂ ರಾಮ ಮಂದಿರ ಉದ್ಘಾಟನೆ ಬಳಿಕ ಮುಂದಿನ ಚುನಾವಣೆಯಲ್ಲಿ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿರುವ ನರೇಂದ್ರ ಮೋದಿ ಸರ್ಕಾರ ಮತದಾರರನ್ನು ಓಲೈಕೆ ಮಾಡುವ ನಿಟ್ಟಿನಲ್ಲಿ ಯಾವುದೇ ಹೊಸ ಉಚಿತ ಘೋಷಣೆಗಳನ್ನು ಮಾಡಿಲ್ಲ. 2019ರ ತನ್ನ ಮಧ್ಯಂತರ  ಬಜೆಟ್‌ನಲ್ಲಿ ಕಿಸಾನ್‌ ಸಮ್ಮಾನ್‌ ನಿಧಿಯಂಥ ಪ್ರಮುಖ ಘೋಷಣೆ ಮಾಡಿ ಅದನ್ನು ಜಾರಿಗೆ ತಂದಿದ್ದ ಎನ್‌ಡಿಎ ಸರ್ಕಾರ ಈ ಬಾರಿ ಅಂಥ ಯಾವುದೇ ಸಾಹಸಕ್ಕೆ ಇಳಿದಿಲ್ಲ. ಸಾಮಾನ್ಯವಾಗಿ ಬಜೆಟ್‌ ಅಂದಾಗ ಜನಸಾಮಾನ್ಯರು ಹಾಗೂ ಉದ್ಯೋಗಿಗಳಿಗೆ ಕೆಲವೊಂದು ನಿರೀಕ್ಷೆಗಳಿರುತ್ತೆವೆ. ಜನಸಾಮಾನ್ಯರು ಯಾವುದಾದರೂ ಹೊಸ ಯೋಜನೆ ತಮಗೆ ಇರಲಿದೆಯೇ ಎನ್ನುವ ಕುತೂಹಲದಲ್ಲಿದ್ದರೆ, ಉದ್ಯೋಗಿಗಳು ಆದಾಯ ತೆರಿಗೆ ವಿಚಾರದ ಬಗ್ಗೆ ಗಮನ ನೀಡುತ್ತಾರೆ. ಆದರೆ, ಅಭಿವೃದ್ಧಿ ಮಂತ್ರದಲ್ಲಿ ಮುಂದುವರಿಯುತ್ತಿರುವ ಎನ್‌ಡಿಎಸ ಸರ್ಕಾರ ಮಧ್ಯಂತರ ಬಜೆಟ್‌ಅನ್ನು ಚುನಾವಣೆ ಗೆಲ್ಲುವ ನಿಟ್ಟಿನಲ್ಲಿ ಅಸ್ತ್ರವಾಗಿ ಬಳಸದೇ, ದೇಶಕ್ಕೆ ಏನು ಅಗತ್ಯ ಆ ನಿಟ್ಟಿನಲ್ಲಿ ಗಮನವಹಿಸಿ ಮಂಡನೆ ಮಾಡಲಾಗಿದೆ. ಅದರಂತೆ ಯಾವುದೇ ಹೊಸ ಯೋಜನೆಗಳು ಇದರಲ್ಲಿಲ್ಲ. ಇನ್ನು ಆದಾಯ ತೆರಿಗೆ ವಿಚಾರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಮಧ್ಯಂತರ ಬಜೆಟ್ ಸಂಪ್ರದಾಯವನ್ನು ನಾವು ಮುಂದುವರಿಸಿದ್ದೇವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ ಭಾಷಣದ ವೇಳೆ ಹೇಳಿದ್ದಾರೆ. ವಾಸ್ತವವಾಗಿ, ಮಧ್ಯಂತರ ಬಜೆಟ್‌ನಲ್ಲಿ ಯಾವುದೇ ಜನಪರ ಘೋಷಣೆಗಳನ್ನು ಮಾಡೋದಿಲ್ಲ/ಈ ಕಾರಣಕ್ಕಾಗಿಯೇ ಸರ್ಕಾರ ಯಾವುದೇ ರೀತಿಯ ಘೋಷಣೆಗಳನ್ನು ಮಾಡದೆ ದೂರ ಉಳಿದಿದೆ. ಆದರೆ, ಕಾರ್ಪೊರೇಟ್ ತೆರಿಗೆಯನ್ನು ಶೇ 22ಕ್ಕೆ ಇಳಿಸಲಾಗಿದೆ ಎಂದು ತಿಳಿಸಿದ್ದಾರೆ.

ತೆರಿಗೆ ಸ್ಲ್ಯಾಬ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸದ್ಯ ಆದಾಯ ತೆರಿಗೆ ಪಾವತಿದಾರರಿಗೆ ಯಾವುದೇ ಪರಿಹಾರ ಘೋಷಣೆ ಮಾಡಲಾಗಿಲ್ಲ. 7 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ. ಆದಾಯ ತೆರಿಗೆ ಪಾವತಿ ಪ್ರಕ್ರಿಯೆಯನ್ನು ಸಾಕಷ್ಟು ಸರಳ ಮಾಡಲಾಗಿದೆ. ಮರುಪಾವತಿಯನ್ನು ಸಹ ತ್ವರಿತವಾಗಿ ನೀಡಲಾಗುತ್ತದೆ. ಜಿಎಸ್‌ಟಿ ಸಂಗ್ರಹ ದ್ವಿಗುಣಗೊಂಡಿದ್ದು,  ಜಿಎಸ್‌ಟಿಯಿಂದ ಪರೋಕ್ಷ ತೆರಿಗೆ ವ್ಯವಸ್ಥೆ ಕೂಡ ಬದಲಾಗಿದೆ ಎಂದು ತಿಳಿಸಿದ್ದಾರೆ.

Live Blog ಕೇಂದ್ರ ಬಜೆಟ್‌ 2024: ಜನಪ್ರಿಯ ಬಜೆಟ್ ಅಲ್ಲ, ಜುಲೈನಲ್ಲಿ ವಿಕಸಿತ ಭಾರತದ ನೀಲಿನಕ್ಷೆ ಘೋಷಣೆ ...

ದೇಶದಲ್ಲಿ ವಿತ್ತೀಯ ಕೊರತೆಯು ಶೇಕಡಾ 5.1 ರಷ್ಟಿದೆ ಎಂದು ಅಂದಾಜಿಸಲಾಗಿದೆ. ವೆಚ್ಚ 44.90 ಕೋಟಿ ಮತ್ತು ಅಂದಾಜು ಆದಾಯ 30 ಲಕ್ಷ ಕೋಟಿ. 10 ವರ್ಷಗಳಲ್ಲಿ ಆದಾಯ ತೆರಿಗೆ ಸಂಗ್ರಹ ಮೂರು ಪಟ್ಟು ಹೆಚ್ಚಾಗಿದೆ. ತೆರಿಗೆ ದರವನ್ನು ಕಡಿತಗೊಳಿಸಿದ್ದೇನೆ. 7 ಲಕ್ಷ ಆದಾಯ ಹೊಂದಿರುವವರಿಗೆ ಯಾವುದೇ ತೆರಿಗೆ ಪಾವತಿಸಲಾಗುವುದಿಲ್ಲ. 2025-2026 ರ ವೇಳೆಗೆ ಕೊರತೆಯು ಮತ್ತಷ್ಟು ಕಡಿಮೆಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

BUDGET 2024: ನೀಲಿ-ಕೆನೆ ಬಣ್ಣದ ಸೀರೆಯುಟ್ಟು ಬಜೆಟ್ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್‌

ತೆರಿಗೆಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆಗಳನ್ನು ಮಾಡಲು ನಾನು ಪ್ರಸ್ತಾಪಿಸುವುದಿಲ್ಲ ಮತ್ತು ಆಮದು ಸುಂಕಗಳು ಸೇರಿದಂತೆ ನೇರ ಮತ್ತು ಪರೋಕ್ಷ ತೆರಿಗೆಗಳಿಗೆ ಅದೇ ತೆರಿಗೆ ದರಗಳನ್ನು ಉಳಿಸಿಕೊಳ್ಳಲು ಪ್ರಸ್ತಾಪ ಮಾಡುತ್ತಿದ್ದೇನೆ ಎಂದು ಬಜೆಟ್‌ ಭಾಷಣದಲ್ಲಿ ತಿಳಿಸಿದ್ದಾರೆ. ಸಾವರ್ಜಿನ್‌ ವೆಲ್ತ್‌ ಅಥವಾ ಪಿಂಚಣಿ ನಿಧಿಗಳಿಂದ ಮಾಡಿದ ಸ್ಟಾರ್ಟಪ್‌ಗಳು ಮತ್ತು ಹೂಡಿಕೆಗಳಿಗೆ ಕೆಲವು ತೆರಿಗೆ ಪ್ರಯೋಜನಗಳು ಮತ್ತು ಕೆಲವು IFSC ಘಟಕಗಳ ಕೆಲವು ಆದಾಯದ ಮೇಲಿನ ತೆರಿಗೆ ವಿನಾಯಿತಿ ಮಾರ್ಚ್‌ 31ಕ್ಕೆ ಮುಕ್ತಾಯಗೊಳ್ಳಲಿದೆ. ಈ ದಿನಾಂಕವನ್ನು 2025ರ ಮಾರ್ಚ್‌ 31ಕ್ಕೆ ವಿಸ್ತರಿಸಲು ಪ್ರಸ್ತಾಪ ಮಾಡಿದ್ದೇನೆ ಎಂದಿದ್ದಾರೆ.

 

Follow Us:
Download App:
  • android
  • ios