Asianet Suvarna News Asianet Suvarna News

Budget 2023:ಕೇಂದ್ರ ಬಜೆಟ್ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿವೆ ಬಜೆಟ್ ಕುರಿತ ಆಸಕ್ತಿಕರ ಸಂಗತಿಗಳು

ಕೇಂದ್ರ ಬಜೆಟ್ ಮಂಡನೆಗೆ ಒಂದೇ ದಿನ ಬಾಕಿ ಉಳಿದಿದೆ. ಹೀಗಿರುವಾಗ ಕೇಂದ್ರ ಬಜೆಟ್ ಕುರಿತು ಜನಸಾಮಾನ್ಯರಲ್ಲಿ ಅನೇಕ ಪ್ರಶ್ನೆಗಳು ಮೂಡಬಹುದು. ಅಂಥ ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. 

Union Budget 2023 Take a Look at the Fascinating History of Indian Budget
Author
First Published Jan 30, 2023, 2:15 PM IST

Business Desk: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ. 2024 ರ ಲೋಕಸಭೆ ಚುನಾವಣೆಗಿಂತ ಮುನ್ನ ಮೋದಿ ಸರ್ಕಾರ ಮಂಡನೆ ಮಾಡಲಿರುವ ಕೊನೆಯ ಬಜೆಟ್ ಕೂಡ ಇದಾಗಿದೆ. ಹೀಗಾಗಿ ಸಹಜವಾಗಿ ಈ ಬಾರಿಯ ಬಜೆಟ್ ಕುರಿತು ಸಾರ್ವಜನಿಕರಲ್ಲಿ ತುಸು ಹೆಚ್ಚಿನ ನಿರೀಕ್ಷೆಗಳಿವೆ. ಇದು 257ನೇ ಬಜೆಟ್ ಅಧಿವೇಶನವಾಗಿದ್ದು, ಜನವರಿ 31ರಿಂದ ಪ್ರಾರಂಭವಾಗಲಿದೆ. ಭಾರತ ಸಂವಿಧಾನದ ಅನುಚ್ಛೇದ 112 ವಾರ್ಷಿಕ ಹಣಕಾಸಿನ ವಿವರಣ ಪಟ್ಟಿ ಬಗ್ಗೆ ವಿವರಣೆ ನೀಡುತ್ತದೆ. ಇದರ ಪ್ರಕಾರ ಏಪ್ರಿಲ್ 1ರಿಂದ ಮಾರ್ಚ್ 31ರ ತನಕದ  ಪ್ರತಿ ಆರ್ಥಿಕ ಸಾಲಿನ ಭಾರತ ಸರ್ಕಾರದ ಅಂದಾಜು  ಸ್ವೀಕೃತಿ ಹಾಗೂ ವೆಚ್ಚದ ಮಾಹಿತಿಯನ್ನು ಸಂಸತ್ತಿನ ಮುಂದಿಡಬೇಕು. ಈ ವಿವರಣ ಪಟ್ಟಿಯನ್ನೇ 'ವಾರ್ಷಿಕ ಹಣಕಾಸಿನ ವಿವರಣೆ' ಎಂದು ಕರೆಯಲಾಗುತ್ತದೆ. ಹಾಗಾದ್ರೆ ಭಾರತಕ್ಕೆ ಸ್ವಾತಂತ್ರ್ಯ ಸಿಗೋದಕ್ಕಿಂತ ಮೊದಲಿನಿಂದ ಹಿಡಿದು 2023ರಲ್ಲಿ ಮಂಡನೆಯಾಗಲಿರುವ ಬಜೆಟ್ ತನಕ ಏನೆಲ್ಲ ಬದಲಾವಣೆಗಳು ಆಗಿವೆ?  ಬಜೆಟ್ ಅನ್ನು ಎಲ್ಲಿ ಮುದ್ರಿಸಲಾಗುತ್ತದೆ? ರೈಲ್ವೆ ಬಜೆಟ್ ಅನ್ನು ಕೇಂದ್ರ ಬಜೆಟ್ ಜೊತೆಗೆ ವಿಲೀನಗೊಳಿಸಿದ್ದು ಯಾವಾಗ? ಬಜೆಟ್ ಕುರಿತು ಜನಸಾಮಾನ್ಯರ ಮನಸ್ಸಿನಲ್ಲಿ ಮೂಡುವ ಇಂಥ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಮೊದಲ ಕಾಗದರಹಿತ ಬಜೆಟ್
ಬ್ರಿಟಿಷ್ ಸಂಪ್ರದಾಯದ ಪ್ರಕಾರ ಹಣಕಾಸು ಸಚಿವರು ಬಜೆಟ್ ಮಂಡನೆಗೆ ಸಂಸತ್ತಿಗೆ ಭೇಟಿ ನೀಡುವಾಗ ಬಜೆಟ್ ಪ್ರತಿಗಳನ್ನು ಕಂದು ಅಥವಾ ಕೆಂಪು ಬ್ಯಾಗಿನಲ್ಲಿಟ್ಟುಕೊಂಡು ಹೋಗಬೇಕಿತ್ತು. 2019ರಲ್ಲಿ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವೆಯಾಗಿ ಅಧಿಕಾರ ಸ್ವೀಕರಿಸುವ ತನಕ ಈ ಟ್ರೆಂಡ್ ಮುಂದುವರಿದಿತ್ತು. ಆದರೆ,  2020ರಲ್ಲಿ ಕೊರೋನಾ ಕಾಣಿಸಿಕೊಂಡ ಬಳಿಕ 2021ನೇ ಸಾಲಿನಿಂದ ಮತ್ತೊಂದು ಪ್ರಮುಖ ಬದಲಾವಣೆಯಾಯಿತು. ಅದೇ ಕಾಗದರಹಿತ ಬಜೆಟ್.

Budget 2023:ಈ ಬಾರಿಯ ಬಜೆಟ್ ನಲ್ಲಿ ಆದಾಯ ತೆರಿಗೆ ಸ್ಲ್ಯಾಬ್ ಬದಲಾವಣೆ ಆಗುತ್ತಾ? ಜನರ ನಿರೀಕ್ಷೆಗಳು ಏನಿವೆ?

ಬಜೆಟ್ ಮಂಡನೆ ದಿನಾಂಕ ಹಾಗೂ ಸಮಯ
1999ರ ತನಕ ಕೇಂದ್ರ ಬಜೆಟ್ ಮಂಡನೆ ಸಮಯ ಹಾಗೂ ದಿನ ಎರಡೂ ನಿಗದಿಯಂತೆ ನಡೆಯುತ್ತಿತ್ತು. ಬ್ರಿಟಿಷರ ಪದ್ಧತಿಯಂತೆ ಕೇಂದ್ರ ಬಜೆಟ್ ಅನ್ನು ಫೆಬ್ರವರಿ ತಿಂಗಳ ಕೊನೆಯ ದಿನ ಸಂಜೆ 5 ಗಂಟೆಗೆ ಮಂಡನೆ ಮಾಡಲಾಗುತ್ತಿತ್ತು. ಆದರೆ, 1999ರಲ್ಲಿ ಅಂದಿನ ಹಣಕಾಸು ಸಚಿವ ಯಶವಂತ್ ಸಿನ್ಹಾ ಬಜೆಟ್ ಮಂಡನೆ ಸಮಯವನ್ನು ಬೆಳಗ್ಗೆ 11 ಗಂಟೆಗೆ ಬದಲಾಯಿಸಿದರು. ಹಾಗೆಯೇ 2017ರಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡನೆ ದಿನಾಂಕವನ್ನು ಫೆಬ್ರವರಿ 1ಕ್ಕೆ ಬದಲಾಯಿಸಿದರು. 

ಕೇಂದ್ರ ಬಜೆಟ್ ನಲ್ಲಿ ರೈಲ್ವೆ ಬಜೆಟ್ ವಿಲೀನ
1924ರಲ್ಲಿ ಬ್ರಿಟಿಷರು ರೈಲ್ವೆ ಬಜೆಟ್ ಅನ್ನು ಕೇಂದ್ರ ಬಜೆಟ್ ನಿಂದ ಬೇರ್ಪಡಿಸಿ ಪ್ರತ್ಯೇಕವಾಗಿ ಮಂಡಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು. ಇದು 2016ರ ತನಕವೂ ಮುಂದುವರಿದಿತ್ತು. 2017ರಲ್ಲಿ ಅರುಣ್ ಜೇಟ್ಲಿ ರೈಲ್ವೆ ಬಜೆಟ್ ಅನ್ನು ಕೇಂದ್ರ ಬಜೆಟ್ ನೊಂದಿಗೆ ವಿಲೀನಗೊಳಿಸುವ ಬಗ್ಗೆ ಚರ್ಚಿಸಿದರು. ಆ ಬಳಿಕ ಈ ಎರಡೂ ಬಜೆಟ್ ವಿಲೀನಗೊಳಿಸುವ ಬಗ್ಗೆ ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಯಿತು. 2017ರಲ್ಲಿ ಅರುಣ್ ಜೇಟ್ಲಿ ಮೊದಲ ವಿಲೀನಗೊಂಡ ಕೇಂದ್ರ ಹಾಗೂ ರೈಲ್ವೆ ಬಜೆಟ್ ಮಂಡಿಸಿದರು. 

ಬಜೆಟ್ ಭಾಷೆ
1955ರ ತನಕ ಕೇಂದ್ರ ಬಜೆಟ್ ಅನ್ನು ಇಂಗ್ಲಿಷ್ ನಲ್ಲಿ ಮಾತ್ರ ಮಂಡಿಸಲಾಗುತ್ತಿತ್ತು. ಆದರೆ, ಆ ಬಳಿಕ ಬಜೆಟ್ ಕಾಗದಗಳನ್ನು ಹಿಂದಿ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಮುದ್ರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು.

ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಬಂಪರ್‌?

ಬಜೆಟ್ ಪ್ರತಿ ಮುದ್ರಣ
1980ರಲ್ಲಿ ಕೇಂದ್ರ ಸರ್ಕಾರ ನಾರ್ಥ್ ಬ್ಲಾಕ್ ನಲ್ಲಿ ಪ್ರಿಂಟಿಂಗ್ ಪ್ರೆಸ್ ನಿರ್ಮಾಣ ಮಾಡಲು ನಿರ್ಧರಿಸಿತ್ತು. ಹೀಗಾಗಿ ಅಲ್ಲಿಂದ ಮುಂದೆ ಬಜೆಟ್ ಪ್ರತಿಗಳು ಈ ಪ್ರೆಸ್ ನಲ್ಲೇ ಮುದ್ರಣಗೊಳ್ಳುತ್ತಿವೆ. ಬಜೆಟ್ ಮುದ್ರಣಕ್ಕೂ ಮುನ್ನ ಹಲ್ವಾ ಕಾರ್ಯಕ್ರಮ ನಡೆಯುತ್ತದೆ. 

Follow Us:
Download App:
  • android
  • ios