ಕೋಟಿ ಲೆಕ್ಕ ತೋರಿಸಿ ದೇಶ ಲೂಟಿ, ಸೂಪರ್ ಹಿಟ್ ಪಠಾಣ್ ರೀತಿ, ಕೇಂದ್ರದ ಬಜೆಟ್‌ಗೆ ನಾಯಕರ ಪ್ರತಿಕ್ರಿಯೆ!

ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಿದೆ. ಹಲವು ಹೊಸ ಘೋಷಣೆ, ಕೆಲ ಜಾಣ್ಮೆ ನಡೆಗಳ ಮೂಲಕ ಬಜೆಟ್ ಮಂಡನೆಯಾಗಿದೆ. ಈ ಬಜೆಟ್ ಐತಿಹಾಸಿಕ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಆದರೆ ಎಂದಿನಂತೆ ಪ್ರತಿಪಕ್ಷಗಳು ಬಜೆಟ್ ವಿರುದ್ಧ ಕಿಡಿ ಕಾರಿದೆ. ಕೇಂದ್ರ ಬಜೆಟ್ ಕುರಿತು ಪ್ರಮುಖ ನಾಯಕ ಪ್ರತಿಕ್ರಿಯೆ ಇಲ್ಲಿದೆ.
 

Union Budget 2023 Reactions PM Modi looted country by increasing the prices says Mallikarjun kharge ckm

ನವದೆಹಲಿ(ಫೆ.01);  ಹಲವು ಸವಾಲು, ಆರ್ಥಿಕತೆ ಸಂಕಷ್ಟಗಳ ನಡುವೆ ಕೇಂದ್ರದ ಮಹತ್ವದ ಬಜೆಟ್ ಮಂಡಿಸಿದೆ. ಇದು ಆರ್ಥಿಕ ಹಿಂಜರಿತೆ ನಡುವೆ ಭಾರತದ ಆರ್ಥಿಕತೆಯನ್ನು ಚೇತರಿಕೆ ಹಾದಿಯಲ್ಲಿ ಮುನ್ನಡೆಸಲಿದೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. ಇತ್ತ ಪ್ರತಿಪಕ್ಷಗಳು ಇದು ಸುಳ್ಳಿನ ಸರಮಾಲೆ, ಎಲೆಕ್ಷನ್ ಬಜೆಟ್ ಎಂದು ಟೀಕಿಸಿದೆ. ಇದರ ನಡುವೆ ಬಹುಜನ ಸಮಾಜವಾದಿ ಪಾರ್ಟಿ ನಾಯಕ ಕೇಂದ್ರ ಮಂಡಿಸಿದ ಬಜೆಟ್ ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರದ ರೀತಿ ಹಿಟ್ ಆಗಿದೆ ಎಂದಿದ್ದಾರೆ. ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದೆ.

ಮೋದಿ ಸರ್ಕಾರ ದೇಶವನ್ನು ಲೂಟಿ ಮಾಡಿದೆ; ಖರ್ಗೆ
ದೇಶದ ಪ್ರತಿ ಮನೆಯಲ್ಲಿ ಹಣದುಬ್ಬರದ ಬಿಸಿ ತಟ್ಟಿದೆ. ಜನಸಾಮಾನ್ಯ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ. ಆದರೆ ಈ ಬಜೆಟ್‌ನಲ್ಲಿ ವಸ್ತುಗಳ ಬೆಲೆ ಇಳಿಕೆ, ಹಣದುಬ್ಬರ ಇಳಿಕೆ ಮಾಡುವ ಯಾವುದೇ ಯೋಜನೆಗಳಿಲ್ಲ. ಆದರೆ ಮೋದಿ ಸರ್ಕಾರ ಹಾಲು, ಗ್ಯಾಸ್ ಸಿಲಿಂಡರ್ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆ ಮಾಡಿ ದೇಶವನ್ನೇ ಲೂಟಿ ಮಾಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

Union Budget 2023: ಮದ್ಯಮ ವರ್ಗದ ಬಯಕೆ ಈಡೇರಿಸಿದ ನಿರ್ಮಲಾ, 7 ಲಕ್ಷ ರೂ.ಆದಾಯಕ್ಕೆ ತೆರಿಗೆ ಇಲ್ಲ

ಅರ್ಧ ಗಂಟೆ ಕೊಡಿ ಬಿಜೆಪಿ ನಾಯಕರಿಗೆ ಬಜೆಟ್ ತಯಾರು ಹೇಗೆ ಮಾಡಬೇಕೆಂದು ತೋರಿಸುತ್ತೇನೆ, ಮಮತಾ!
ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಜನವಿರೋಧಿಯಾಗಿದೆ. ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಬಜೆಟ್ ತಯಾರಿ ಮಾಡಿಲ್ಲ. ಇದು ಬಡವರ ವಿರೋಧಿ ಬಜೆಟ್ ಆಗಿದೆ. ಈ ಬಜೆಟ್ ದೇಶ ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆಗೆ ಯಾವುದೇ ಉತ್ತರ ನೀಡಿಲ್ಲ. ತೆರಿಗೆ ನೀತಿಯಲ್ಲಿ ಸ್ಲಾಬ್ ಯಾರಿಗೂ ನೆರವಾಗವುದಿಲ್ಲ. ಈ ಬಜೆಟ್ ಮೇಲೆ ಯಾವುದೇ ಭರವಸೆ ಇಲ್ಲ. ನನಗೆ ಅರ್ಧಗಂಟೆ ಕೊಡಿ ನಾನು ಬಿಜೆಪಿ ನಾಯಕರಿಗೆ ಬಜೆಟ್ ಹೇಗೆ ತಯಾರಿಸಬೇಕು ಅನ್ನೋದನ್ನು ತೋರಿಸಿಕೊಡುತ್ತೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೇಂದ್ರದ ಬದೆಟ್ ಪಠಾಣ್ ಮೂವಿ ರೀತಿ ಸೂಪರ್ ಹಿಟ್, ಬಿಎಸ್‌ಪಿ ಸಂಸದ 
ಉತ್ತರ ಪ್ರದೇಶದ ಮಲೂಕ್ ನಗರದ ಬಹುಜನ ಸಮಾಜವಾದಿ ಪಾರ್ಟಿ ಸಂಸದ, ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಇದು ಮಧ್ಯಮ ವರ್ಗದ ಜನರ ತೆರಿಗೆ ವಿನಾಯಿತಿ ಹೆಚ್ಚಳ, ಸೇರಿದಂತೆ ಇತರ ಕೆಲ ಸೌಲಭ್ಯಗಳನ್ನು ನೀಡಿದೆ. ಹೀಗಾಗಿ ಈ ಬಜೆಡ್ ಶಾರೂಖ್ ಖಾನ್ ಅಭಿನಯದ ಪಠಾಣ್ ಮೂವಿ ರೀತಿ ಹಿಟ್ ಎಂದಿದ್ದಾರೆ. 

ಬಜೆಟ್ ಭಾರತದ ಹಣದುಬ್ಬರ ಹೆಚ್ಚಿಸಲಿದೆ, ಕೇಜ್ರಿವಾಲ್!
ಕೇಂದ್ರ ಸರ್ಕಾರದ ಬಜೆಟ್ ಹಣದುಬ್ಬರ ಹೆಚ್ಚಿಸಲಿದೆ. ಹಣದುಬ್ಬರ ನಿಯಂತ್ರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.ನಿರುದ್ಯೋಗ ಸಮಸ್ಯೆಗೆ ಯಾವುದೇ ಪರಿಹಾರ ನೀಡಿಲ್ಲ. ಇಷ್ಟೇ ಅಲ್ಲ ಶಿಕ್ಷಣ ಮೀಸಲಿಟ್ಟಿದ್ದ ಬಜೆಟ್ ಗಾತ್ರವನ್ನು ಶೇಕಡಾ 2.64ರಿಂದ 2.5ಕ್ಕೆ ಇಳಿಸಲಾಗಿದೆ. ಹೀಗಾಗಿ ಈ ಬಜೆಟ್‌ನಿಂದ ಯಾವುದೇ ಪ್ರಯೋಜನವಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

Union Budget 2023 ಕೈಗೆಟುಕುವ ದರದಲ್ಲಿ ಸಿಗಲಿದೆ ಎಲೆಕ್ಟ್ರಿಕ್ ವಾಹನ!

ಕೇಂದ್ರದ ಬಜೆಟ್‌ನಿಂದ ಬಡತನ ಹೆಚ್ಚು, ಮುಫ್ತಿ
ಕಳೆದ 8-9 ವರ್ಷಗಳಲ್ಲಿ ಕೇಂದ್ರ ಬಿಜೆಪಿ ಮಂಡಿಸಿದ ಬಜೆಟ್‌ನಿಂದ ಯಾವುದೇ ಪ್ರಯೋಜನವಾಗಿಲ್ಲ. ಬಿಜೆಪಿ ಮಂಡಿಸುವ ಬಜೆಟ್‌ನಿಂದ ಬಡವರು ಮತ್ತಷ್ಟು ಬಡವರಾಗಿದ್ದಾರೆ. ಸಬ್ಸಿಡಿಗಳನ್ನು ತೆಗೆದು ಹಾಕಲಾಗಿದೆ. 

Latest Videos
Follow Us:
Download App:
  • android
  • ios