ನವದೆಹಲಿ(ಜ.31) ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಕೊರೋನಾದಿಂದಾಗಿ ದೇಶ ಆರ್ಥಿಕವಾಗಿ ಹಿಂದುಳಿದಿದೆ. ಹೀಗಿರುವಾಗಲೇ ಅತ್ತ ಕೃಷಿ ಬಿಲ್ ವಿರೋಧಿಸಿ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದೆ. ಇನ್ನು ಮಹಾಮಾರಿಯಿಂದಾಗಿ ಅನೇಕ ಮಂದಿ ಉದ್ಯೋಗವನ್ನೂ ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಬಜೆಟ್‌ನಿಂದ ದೇಶವಾಸಿಗರು ಬಹಳಷ್ಟು ನಿರೀಕ್ಷಿಸುತ್ತಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಜನರ ಕಷ್ಟ ನಿವಾರಿಸುವಂತಹ ಅನೇಕ ಮಹತ್ವದ ಘೋಷಣೆಗಳನ್ನು ಹಣಕಾಸು ಸಚಿವೆ ಮಾಡಬಹುದೆಂಬ ನಿರೀಕ್ಷೆ ಜನರಲ್ಲಿದೆ. ಹಾಗಾದ್ರೆ ರೈಲ್ವೇಯಿಂದ ಹಿಡಿದು ಕೃಷಿ ಕ್ಷೇತ್ರದವರೆಗೆ ಈ ಬಜೆಟ್‌ನಲ್ಲಿ ಯಾವೆಲ್ಲಾ ಘೋಷಣೆಗಳಾಗಬಹುದು? ಇಲ್ಲಿದೆ ಒಂದು ವರದಿ

ಮೂಲಸೌಕರ್ಯ ಕ್ಷೇತ್ರ: ನಿರೀಕ್ಷೆಗಳೇನು?

* ಕೃಷಿ ಕ್ಷೇತ್ರ ಕಳೆದ ಕೆಲ ವರ್ಷಗಳಿಂದ ಭಾರತದ ಆರ್ಥಿಕತೆಗೆ ಬಲ ತುಂಬುತ್ತಿರುವ ಏಕೈಕ ಕ್ಷೇತ್ರವಾಗಿದೆ.
* ಹೀಗಿರುವಾಗ ರೈತರ ಪ್ರತಿಭಟನೆ ಗಮನದಲ್ಲಿಟ್ಟುಕೊಂಡು, ರೈತರ ಹಿತದೃಷ್ಟಿಯಿಂದ ಸರ್ಕಾರ ಕೆಲವು ಪ್ರಮುಖ ಕ್ರಮಗಳನ್ನು ಪ್ರಕಟಿಸಬಹುದು.
* 2021-22ರ ಆರ್ಥಿಕ ವರ್ಷದಲ್ಲಿ ಸರ್ಕಾರ ಕೃಷಿ ಮತ್ತು ಇದಕ್ಕೆ ಸಂಬಂಧಿಸಿದ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡುವ ನಿರೀಕ್ಷೆಯಿದೆ.
* ಬಜೆಟ್‌ನಲ್ಲೂ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳು ಒದಗಿಸುವ ಬಗ್ಗೆ ವಿಶೇಷ ಒತ್ತು ನೀಡಬಹುದು.

ಶಿಕ್ಷಣ: ಆನ್‌ಲೈನ್‌ ಶಿಕ್ಷಣದ ಬಗ್ಗೆ ಗಮನ

* ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ಘೋಷಣೆಗಳನ್ನು ಈ ಬಾರಿ ನಿರೀಕ್ಷಿಸಬಹುದು
* ಆನ್‌ಲೈನ್ ಶಿಕ್ಷಣವನ್ನು ಉತ್ತೇಜಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬಹುದು
* ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಮತ್ತಷ್ಟು ನವೀಕರಿಸಿ ಅಳವಡಿಸುವ ಅಗತ್ಯವಿದೆ. ಈ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖಿಸಬಹುದು.
* ಆನ್‌ಲೈನ್ ಶಿಕ್ಷಣವನ್ನು ಉತ್ತೇಜಿಸಲು ತಂತ್ರಜ್ಞಾನವನ್ನು ಕೈಗೆಟಕುವಂತೆ ಮಾಡಬೇಕು.

ಆರೋಗ್ಯ: ಕೊರೋನಾದಿಂದಾಗಿ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ, ಮಹತ್ವ

* 2021ರ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಅನುದಾನ ಹೆಚ್ಚಿಸುವ ನಿರೀಕ್ಷೆ ಇದೆ. 
* ವೈದ್ಯಕೀಯ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲು ಸರ್ಕಾರ ಕೌಶಲ್ಯಾಭಿವೃದ್ಧಿಗೂ ಹೆಚ್ಚಿನ ಅನುದಾನ ಘೋಷಿಸಬಹುದು.
* ಆರೋಗ್ಯ ವಿಮೆ ಮಾಡಿಸಿಕೊಳ್ಳಲು, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಡಿ ಅಡಿಯಲ್ಲಿ ಸರ್ಕಾರ ಆರೋಗ್ಯ ವಿಮೆಯಲ್ಲಿ ವಿನಾಯಿತಿ ನೀಡಬಹುದು.
* ಸಣ್ಣ ಪಟ್ಟಣಗಳು ​​ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಉತ್ತೇಜಿಸಲು ಒತ್ತು ನೀಡಬಹುದು

ಉದ್ಯಮ: ಆತ್ಮನಿರ್ಭರ ಭಾರತಕ್ಕೆ ಹೆಚ್ಚಿನ ಒತ್ತು

* ಉದ್ಯಮ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತ ನಿರ್ಮಿಸುವ ಬಗ್ಗೆ ಸರ್ಕಾರ ಹೆಚ್ಚು ಗಮನಹರಿಸಬಹುದು. 
* ಈ ಗುರಿ ತಲುಪಲು ಆಮದು ತಗ್ಗಿಸುವ ಸಾಧ್ಯತೆ
* ಉತ್ಪಾದನೆಯನ್ನು ಹೆಚ್ಚಿಸಲು ದೊಡ್ಡ ಪ್ರಮಾಣದ ಅನುದಾನ ಘೋಷಣೆ
* ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಬೇಕು. ಕಚ್ಚಾ ವಸ್ತುಗಳನ್ನು ಅಗ್ಗವಾಗಿಸಲು ಆಮದು ಸುಂಕವನ್ನು ಕಡಿಮೆ ಮಾಡಬಹುದು.

ರಕ್ಷಣಾ: ಸ್ವದೇಶೀ ಎಂಬ ಬಲ

* ಚೀನಾ ಮತ್ತು ಪಾಕಿಸ್ತಾನದೊಂದಿಗಿನ ವಿವಾದದಿಂದಾಗಿ ರಕ್ಷಣಾ ಬಜೆಟ್ ಹೆಚ್ಚಾಗಬಹುದು.
* ರಕ್ಷಣಾ ವಲಯದಲ್ಲಿ ಸ್ವಾವಲಂಭಿಯಾಗಲು ಯತ್ನ
* ಸ್ಥಳೀಯ ಶಸ್ತ್ರಾಸ್ತ್ರಗಳಿಗೆ ಪ್ರಾಮುಖ್ಯತೆ
* ರಕ್ಷಣಾ ಕ್ಷೇತ್ರವನ್ನು ಸ್ವಾವಲಂಬಿಯಾಗಿಸಲು ಪ್ರಮುಖ ಘೋಷಣೆಗಳ ನಿರೀಕ್ಷೆ

ರೈಲು: ಸೌಲಭ್ಯಗಳತ್ತ ಹೆಚ್ಚಿನ ಗಮನ

* ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಈ ಬಾರಿಯ ಬಜೆಟ್ ಕಳೆದ 100 ವರ್ಷಗಳಿಗಿಂತ ಭಿನ್ನವಾಗಿರುತ್ತದೆ ಎಂದು ಹೇಳಿದ್ದರು.
* ಬಜೆಟ್‌ನಲ್ಲಿ ಪ್ರಯಾಣಿಕರ ಸೌಲಭ್ಯಗಳ ಬಗ್ಗೆಯೂ ಸರ್ಕಾರ ಗಮನ ಹರಿಸಬಹುದು.
* ಕರೋನಾ ಬಿಕ್ಕಟ್ಟಿನ ಮಧ್ಯೆ, ಭಾರತೀಯ ರೈಲ್ವೆ ತನ್ನ ಮೂಲಸೌಕರ್ಯವನ್ನು ವಿಸ್ತರಿಸಿದೆ ಎಂಬುವುದು ಉಲ್ಲೇಖನೀಯ
* ಬುಲೆಟ್ ರೈಲು ನೆಟ್ವರ್ಕ್‌ಗೆ ಸಂಬಂಧಿಸಿದಂತೆ ಸರ್ಕಾರ ತನ್ನ ಯೋಜನೆಯನ್ನು ಬಹಿರಂಗಗೊಳಿಸಬಹುದು.

ಉದ್ಯೋಗ: ಉದ್ಯೋಗ ಉಳಿಸಿಕೊಳ್ಳುವ ಸವಾಲು

* ಅಸ್ತಿತ್ವದಲ್ಲಿರುವ ಉದ್ಯೋಗಗಳನ್ನು ಉಳಿಸುವುದು ಮತ್ತು ಹೊಸ ಉದ್ಯೋಗಗಳನ್ನು ಸೃಷ್ಟಿಸುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲು.
* ಬಜೆಟ್‌ನಲ್ಲಿ ಸರ್ಕಾರ ಉದ್ಯೋಗ ಸೃಷ್ಟಿಸುವತ್ತ ಗಮನ ಹರಿಸಬೇಕು. ಖಾಲಿ ಇರುವ ಸ್ಥಾನವನ್ನು ತುಂಬಲು ಶೀಘ್ರದಲ್ಲೇ ತುಂಬುವಂತೆ ನೋಡಿಕೊಳ್ಳಬೇಕು.
* ಫಾರ್ಮ್ ಭರ್ತಿ ಮಾಡಲು ಒಂದೇ ಪ್ಲಾಟ್‌ಫಾರ್ಮ್ ಇಬೇಕು. ಈ ಮೂಲಕ ಸಾರ್ವಜನಿಕ-ಖಾಸಗಿ ವಲಯದಲ್ಲಿ ಸಮತೋಲನವನ್ನು ಸೃಷ್ಟಿಸುವ ಅವಶ್ಯಕತೆಯಿದೆ.
* ಶಿಕ್ಷಣದ ಪ್ರಕಾರ ಆದಾಯ ಪಾವತಿಸುವ ಘೋಷಣೆ ಹಾಗೂ ಪದವಿಯ ಪಡೆದವರಿಗೆ ಜಾಬ್ ಗ್ಯಾರಂಟಿಯಂತಹ ಯೋಜನೆಗಳನ್ನು ಸರ್ಕಾರ ಘೋಷಿಸಬೇಕು.

ಇತರ (ರಿಯಲ್ ಎಸ್ಟೇಟ್ ವಲಯ)

* ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಬಜೆಟ್‌ನಿಂದ ಸಾಕಷ್ಟು ಲಾಭ ಸಿಗುವ ನಿರೀಕ್ಷೆಯಿದೆ.
* ರಿಸರ್ವ್ ಬ್ಯಾಂಕ್ ಮತ್ತು ಸಬ್‌ವೆಂಷನ್‌ ಬ್ಯಾಂಕ್ ಮೇಲಿನ ನಿಷೇಧವನ್ನು ತೆಗೆದುಹಾಕಬಹುದು.
* ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಮೇಲಿನ ತೆರಿಗೆ ವಿನಾಯಿತಿ ಹೆಚ್ಚಿಸಬೇಕು.
* ಹೆಚ್ಚುವರಿಯಾಗಿ, ಬಾಡಿಗೆ ಆದಾಯದಿಂದ ನಷ್ಟವನ್ನು ಮುಂದಿನ ವರ್ಷಕ್ಕೆ ಬದಲಾಯಿಸಲು ಅನುಮತಿ ನೀಡಬೇಕು.