ಭವಿಷ್ಯ ನಿಧಿ, ಪಿಂಚಣಿ ಮೇಲೂ ತೆರಿಗೆ| ಹೆಚ್ಚು ವೇತನ ಪಡೆಯುವವರ ಜೇಬಿಗೆ ತೆರಿಗೆ ಕುತ್ತು| ಕಂಪನಿ ನೀಡುವ ಪಾಲು 7.50 ಲಕ್ಷಕ್ಕಿಂತ ಹೆಚ್ಚಿದ್ದರೆ ತೆರಿಗೆ

ನವದೆಹಲಿ[ಫೆ.03]: ತೆರಿಗೆ ಸಂಗ್ರಹಕ್ಕೆ ನಾನಾ ಮಾರ್ಗ ಹುಡುಕಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಇದೀಗ ಹೆಚ್ಚಿನ ವೇತನ ಪಡೆಯುವವರ ಭವಿಷ್ಯನಿಧಿ, ಪಿಂಚಣಿ ಮತ್ತು ನಿವೃತ್ತಿ ನಿಧಿಗೂ ತೆರಿಗೆ ಹಾಕಲು ನಿರ್ಧರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ಮುಂದೆ PF ಹಣ ಪಡೆಯುವುದು ಸುಲಭ: ಬಂದಿದೆ ಹೊಸ ಆಪ್ಶನ್!

ಶನಿವಾರ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಈ ಅಂಶವಿದೆ. ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಅನ್ವಯ, ಉದ್ಯೋಗದಾತ ಕಂಪನಿಯು, ಭವಿಷ್ಯನಿಧಿ, ಪಿಂಚಣಿ ಮತ್ತು ನಿವೃತ್ತಿ ನಿಧಿ ಹೆಸರಲ್ಲಿ ವಾರ್ಷಿಕ ಉದ್ಯೋಗಿಯೊಬ್ಬನಿಗೆ ತನ್ನ ಪಾಲಿನಿಂದ ಒಟ್ಟಾರೆ 7.5 ಲಕ್ಷ ರು.ಗಿಂತ ಹೆಚ್ಚಿನ ಹಣವನ್ನು ಪಾವತಿ ಮಾಡುತ್ತಿದ್ದರೆ ಅದಕ್ಕೆ ತೆರಿಗೆ ವಿಧಿಸಲಾಗುವುದು. ಆದರೆ ಈ ತೆರಿಗೆಯನ್ನು ಉದ್ಯೋಗಿಯೇ ಪಾವತಿಸಬೇಕಾಗುತ್ತದೆ. ಉನ್ನತ ವೇತನ ಪಡೆಯುವ ವ್ಯಕ್ತಿಗಳಿಗೆ ಕಂಪನಿಗಳು ಹೆಚ್ಚಿನ ಹಣವನ್ನು ಈ ಮೇಲ್ಕಂಡ ಬಾಬ್ತಿನ ರೂಪದಲ್ಲೇ ನೀಡುತ್ತವೆ. ಆದರೆ ಇವುಗಳು ಯಾವುದೇ ಹಂತದಲ್ಲೂ ತೆರಿಗೆ ಒಳಪಡುವುದಿಲ್ಲ. ಹೀಗಾಗಿ ಇವುಗಳಿಗೆ ತೆರಿಗೆ ವಿಧಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಕೇಂದ್ರದ ಈ ಹೊಸ ನಿರ್ಧಾರ ಸದ್ಯ ಭವಿಷ್ಯ ನಿಧಿಗೊಳಪಡುವ ಕಾರ್ಮಿಕರಿಗೆ ಮತ್ತು ಪಿಂಚಣಿದಾರರಿಗೆ ಆಘಾತ ನೀಡಿದೆ ಎಂಬುವುದರಲ್ಲಿ ಅನುಮಾನವಿಲ್ಲ