Asianet Suvarna News Asianet Suvarna News

ಇನ್ಮುಂದೆ PF ಹಣ ಪಡೆಯುವುದು ಸುಲಭ: ಬಂದಿದೆ ಹೊಸ ಆಪ್ಶನ್!

ಇನ್ಮುಂದೆ ಪಿಎಫ್ ದುಡ್ಡು ಪಡೆಯುವುದು ಸುಲಭ: ವರ್ಗಾವಣೆ ನೀತಿಯಲ್ಲಿ ಬದಲಾವಣೆ| ಹೊಸ ಆಯ್ಕೆಯಿಂದ ಹಣ ವರ್ಗಾವಣೆ, ವಿತ್ ಡ್ರಾ ಇನ್ನಷ್ಟು ಸರಳ| ಏನು ಮಾಡಬೇಕು? ಇಲ್ಲಿದೆ ವಿವಾದ

Withdrawing Transferring Funds Becomes Easier For Employees Provident Fund Account Holders
Author
Bangalore, First Published Jan 23, 2020, 5:01 PM IST

ನವದೆಹಲಿ[ಜ.23]: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ[Employees' Provident Fund Organisation] ಭವಿಷ್ಯ ನಿಧಿ ಮೊತ್ತವನ್ನು ಟ್ರಾನ್ಸ್ ಫರ್ ಅಥವಾ ವಿತ್ ಡ್ರಾ ಪ್ರಕ್ರಿಯೆ ಸರಳಗೊಳಿಸುವ ನಿಟ್ಟಿನಲ್ಲಿ ಬಹುದೊಡ್ಡ ಹೆಜ್ಜೆ ಇರಿಸಿದೆ. EPFO ನೂತನ ಆನ್ ಲೈನ್ ಫೀಚರ್ ಲಾಂಚ್ ಮಾಡಿದೆ. ಈ ಮೂಲಕ ಕಾರ್ಮಿಕರು ಉದ್ಯೋಗಕ್ಕೆ ರಾಜೀನಾಮೆ ನೀಡಿದ ಬಳಿಕ ನೌಕರರು ಖುದ್ದು ತಾವು ಕೆಲಸ ಬಿಟ್ಟ ದಿನಾಂಕ ಬದಲಾಯಿಸಬಹುದು.

6 ಕೋಟಿ ನೌಕರರ ಭವಿಷ್ಯ ನಿಧಿ ಬಡ್ಡಿದರ ಹೆಚ್ಚಳಕ್ಕೆ ಕೇಂದ್ರದ ಆದೇಶ!

PF ವರ್ಗಾವಣೆ ಮಾಡಲು ಅಥವಾ ವಿತ್ ಡ್ರಾ ಮಾಡಲು ಕೆಲಸದ ಕೊನೆಯ ದಿನಾಂಕ ಬಹು ದೊಡ್ಡ ಪಾತ್ರ ವಹಿಸುತ್ತದೆ. EPFO ಪೋರ್ಟಲ್ ನಲ್ಲಿ, ಹೊಸ ಉದ್ಯೋಗ ಆರಂಭಿಸಿದ ಬಳಿಕ PF ಟ್ರಾನ್ಸ್ ಫರ್ ಮಾಡಲು ಅಥವಾ ವಿತ್ ಡ್ರಾ ಮಾಡುವ ನಿಟ್ಟಿನಲ್ಲಿ ಈ ದಿನಾಂಕ ನಮೂದಿಸುವುದು ಅತೀ ಅವಶ್ಯಕ. ಹೀಗಿರುವಾಗ ನೌಕರಿ ಬಿಟ್ಟ ದಿನಾಂಕವನ್ನು, ಹಿಂದಿನ ಉದ್ಯೋಗಕ್ಕೆ ರಾಜೀನಾಮೆ ನೀಡಿದ ಕನಿಷ್ಟ ಎರಡು ತಿಂಗಳ ಬಳಿಕ ಅಪ್ಡೇಟ್ ಮಾಡಬಹುದು. 

ಈ ಮೊದಲು ಕೇವಲ ಉದ್ಯೋಗದಾತರಿಗಷ್ಟೇ EPFO ಪೋರ್ಟಲ್ ನಲ್ಲಿ, ಉದ್ಯೋಗಿ ಕೆಲಸ ಮಾಡಿದ ಕೊನೆಯ ದಿನಾಂಕ ನಮೂದಿಸುವ ಅಧಿಕಾರವಿತ್ತು.

ಕಾರ್ಮಿಕರಿಗೆ ಗುಡ್ ನ್ಯೂಸ್, ಇಪಿಎಫ್ ಬಡ್ಡಿದರದಲ್ಲಿ ಎಂಥ ಏರಿಕೆ!

UNO ಅಕೌಂಟ್ ಮೂಲಕ ನೌಕರಿ ಬಿಟ್ಟ ದಿನಾಂಕ ಅಪ್ಡೇಟ್ ಮಾಡುವ ಪ್ರಕ್ರಿಯೆ ಹೀಗಿದೆ

* ನಿಮ್ಮ UAN[ಯೂನಿವರ್ಸಲ್ ಅಕೌಂಟ್ ನಂಬರ್] ಹಾಗೂ ಪಾಸ್ ವರ್ಡ್ ಸಹಾಯದಿಂದ UAN ಅಕೌಂಟ್ ಗೆ ಲಾಗಿನ್ ಆಗಿ

Withdrawing Transferring Funds Becomes Easier For Employees Provident Fund Account Holders

* ಬಳಿಕ ಮ್ಯಾನೆಜ್[Manage] ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ

Withdrawing Transferring Funds Becomes Easier For Employees Provident Fund Account Holders

* ಬಳಿಕ ಮಾರ್ಕ್ ಎಕ್ಸಿಟ್ [Mark Exit] ಕ್ಲಿಕ್ ಮಾಡಿ, ಸೆಲೆಕ್ಟ್ ಎಂಪ್ಲಾಯ್ಮೆಂಟ್[Select Employment] ನಿಂದ ಈ ಹಿಂದಿನ PF ಅಕೌಂಟ್ ನಂಬರ್ ಆಯ್ಕೆ ಮಾಡಿ.

*ಬಳಿಕ ದಿನಾಂಕ ಆಯ್ಕೆ ಮಾಡಿ, ಉದ್ಯೋಗಕ್ಕೆ ರಾಜೀನಾಮೆ ನೀಡಲು ಕಾರಣವೇನೆಂಬುವುದನ್ನು ನಮೂದಿಸಿ.

Withdrawing Transferring Funds Becomes Easier For Employees Provident Fund Account Holders
ಬಳಿಕ ನಿಮ್ಮ ಗುರುತು ದೃಢೀಕರಿಸಲು ಆಧಾರ್ ಲಿಂಕ್ ಮಾಡಿದ ಮೊಬೈಲ್ ನಂಬರ್ ಗೆ ಒಂದು OTP ಬರುತ್ತದೆ. ಇದನ್ನು ನಮೂದಿಸಿದ ಬಳಿಕ ಕೌಂಟ್ ವರ್ಗಾವಣೆ ಅಥವಾ ವಿತ್ ಡ್ರಾ ಮಾಡುವ ಕೆಲಸವಾಗುತ್ತದೆ.

Follow Us:
Download App:
  • android
  • ios