ಊಬರ್ ಆಟೋ ಚಾಲಕರಿಗಾಗಿ ಕಮಿಷನ್ ರಹಿತ ಮಾದರಿಯನ್ನು ಪರಿಚಯಿಸಿದೆ. ಚಾಲಕರು ನಿಗದಿತ ಶುಲ್ಕ ಪಾವತಿಸಿ ಊಬರ್‌ನ ಸೇವೆ ಪಡೆಯಬಹುದು. ಗ್ರಾಹಕರು ಪ್ರಯಾಣ ದರವನ್ನು ಚಾಲಕನಿಗೆ ನೇರವಾಗಿ ಪಾವತಿಸಬೇಕು.

ಬೆಂಗಳೂರು (ಫೆ.19): ದೇಶದ ಪ್ರಮುಖ ಕ್ಯಾಬ್‌ ಅಗ್ರಿಗೇಟರ್‌ ಅಥವಾ ರೈಡ್‌ ಹೇಲಿಂಗ್‌ಕಂಪನಿಗಳಲ್ಲಿ ಒಂದಾಗಿರುವ ಊಬರ್‌, ದೇಶದ ಆಟೋ ಡ್ರೈವರ್‌ಗಳಿಗಾಗಿ ಸ್ಟಾಫ್ಟ್‌ವೇರ್‌ ಆಸ್‌ ಎ ಸರ್ವೀಸ್‌ (ಸಾಸ್‌) ಆಧಾರಿತ ಜೀರೋ ಕಮೀಷನ್‌ ಮಾಡೆಲ್‌ಅನ್ನು ಪರಿಚಯಿಸಿದೆ. ಕಳೆದ ಸೋಮವಾರ ತನ್ನ ಬ್ಲಾಗ್‌ಪೋಸ್ಟ್‌ನಲ್ಲಿ ಇದನ್ನು ಕಂಪನಿ ಪ್ರಕಟಿಸಿದೆ. ಈ ಮಾದರಿಯಡಿಯಲ್ಲಿ, ಆಟೋ ಚಾಲಕರು ಪ್ರತಿ ಟ್ರಿಪ್‌ಗೆ ಕಮಿಷನ್ ಪಾವತಿಸುವ ಬದಲು ಉಬರ್‌ಗೆ ನಿಗದಿತ ಚಂದಾದಾರಿಕೆ ಶುಲ್ಕವನ್ನು ಪಾವತಿಸುವ ಮೂಲಕ ಊಬರ್‌ನ ಸರ್ವೀಸ್‌ ಪಡೆದುಕೊಳ್ಳಬಹುದಾಗಿದೆ. ಪ್ರತಿಸ್ಪರ್ಧಿ ರಾಪಿಡೊ ತನ್ನ ಚಂದಾದಾರಿಕೆ ಶುಲ್ಕ ಆಧಾರಿತ ಮಾದರಿಯನ್ನು ಆಟೋಗಳಿಗೆ ವಿಸ್ತರಿಸಿದ ಒಂದು ವರ್ಷದ ನಂತರ ಬಂದಿದೆ. ಫೆಬ್ರವರಿ 18 ರಿಂದ ಉಬರ್‌ ತನ್ನ ಅಪ್ಲಿಕೇಶನ್‌ಗಳಲ್ಲಿ ಈ ಕುರಿತಾದ ನೋಟಿಫಿಕೇಶನ್‌ಅನ್ನು ಕಳಿಸಲು ಆರಂಭಿಸಿದೆ.

ರೈಡ್‌ ಹೇಲಿಂಗ್‌ ಫ್ಲಾಟ್‌ಫಾರ್ಮಗಳು ವಿಧಿಸುವ ಕಮೀಷನ್‌ಗಳ ಕಾರಣಕ್ಕಾಗಿ ಆಟೋ ಚಾಲಕರು ಹಲವು ಬಾರಿ ಮುಷ್ಕರ ನಡೆಸಿದ್ದರು. ಇದರ ಬೆನ್ನಲ್ಲಿಯೇ ಉಬರ್‌ ಈ ನಿರ್ಧಾರಕ್ಕೆ ಬಂದಿದೆ. ಸೇವಾ ಸಮಸ್ಯೆಗಳ ಬಗ್ಗೆ ಗ್ರಾಹಕರಿಂದ ಹಲವಾರು ದೂರುಗಳು ಸಾಮಾಜಿಕ ಮಾಧ್ಯಮಗಳಲ್ಲಿಯೂ ಬರುತ್ತಿದ್ದ ಬೆನ್ನಲ್ಲಿಯೇ ಈ ನಿರ್ಧಾರ ಮಾಡಲಾಗಿದೆ.

ಗ್ರಾಹಕರು ಅರ್ಥ ಮಾಡಿಕೊಳ್ಳಬೇಕಾಗಿರೋದೇನು: ಈ ಆ್ಯಪ್ ಕೇವಲ ಪ್ರಯಾಣ ದರವನ್ನು ಮಾತ್ರ ಸೂಚಿಸುತ್ತದೆ, ಆದರೆ ಚಾಲಕ ಮತ್ತು ಸವಾರರ ನಡುವಿನ ಮಾತುಕತೆಯ ಮೂಲಕ ಇದನ್ನು ಅಂತಿಮಗೊಳಿಸಲಾಗುತ್ತದೆ. ಗ್ರಾಹಕರು ಚಾಲಕನಿಗೆ ನೇರವಾಗಿ ನಗದು ರೂಪದಲ್ಲಿ ಅಥವಾ UPI ಮೂಲಕ (ಚಾಲಕರ UPI ಐಡಿ ಬಳಸಿ) ಪಾವತಿಸಬೇಕಾಗುತ್ತದೆ. Uber ಅಪ್ಲಿಕೇಶನ್ ಅಥವಾ Uber ಕ್ರೆಡಿಟ್‌ಗಳ ಮೂಲಕ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು/ ಸಂಯೋಜಿತ UPI ಪಾವತಿಗಳಂತಹ ಡಿಜಿಟಲ್ ಪಾವತಿ ವಿಧಾನಗಳನ್ನು ಇದಕ್ಕೆ ಬಳಸುವಂತಿಲ್ಲ. ಇದು 100% ಪಾವತಿಗಳು ನೇರವಾಗಿ ಚಾಲಕನಿಗೆ ಹೋಗುವುದನ್ನು ಖಚಿತಪಡಿಸುತ್ತದೆ.

ಚಾಲಕನ ಕಡೆಯಿಂದ ಸವಾರಿ ರದ್ದತಿಗೆ ಅಥವಾ ಯಾವುದೇ ಹಂತದಲ್ಲಿ ಸಾರಿಗೆ ಸೇವೆಗಳನ್ನು ಒದಗಿಸಲು ನಿರಾಕರಿಸುವ ಚಾಲಕರಿಗೆ ಉಬರ್ ಜವಾಬ್ದಾರನಾಗಿರುವುದಿಲ್ಲ.ಉಬರ್ ಇನ್ನು ಮುಂದೆ ಸವಾರಿಗಳ ನಿಯಂತ್ರಣವನ್ನು ತೆಗೆದುಕೊಳ್ಳುವುದಿಲ್ಲವಾದ್ದರಿಂದ, ಆಟೋ ಪ್ರಯಾಣಗಳಿಗಾಗಿ ಗ್ರಾಹಕರು ಅಥವಾ ಚಾಲಕರಿಂದ ಯಾವುದೇ ಜಿಎಸ್ಟಿ ಸಂಗ್ರಹಿಸಲಾಗುವುದಿಲ್ಲ.

ಕರ್ನಾಟಕದಲ್ಲೂ Rapido ಬೈಕ್‌ ಪಿಂಕ್, ಮಹಿಳೆಯರಿಗೆ ಮಾತ್ರವೇ ಇರುವ ಬೈಕ್‌ ಟ್ಯಾಕ್ಸಿ ಸರ್ವೀಸ್‌!

ಆದರೆ, ಪ್ರಯಾಣದ ಸಮಯದಲ್ಲಿ ಸುರಕ್ಷತಾ ಕಾಳಜಿಗಳನ್ನು ಅಪ್ಲಿಕೇಶನ್ ಮೂಲಕ ವರದಿ ಮಾಡಬಹುದು ಎಂದು ಕಂಪನಿ ಹೇಳಿದೆ. ಉಬರ್ ಕಳೆದ ಏಪ್ರಿಲ್‌ನಲ್ಲಿ ಆಟೋ ರಿಕ್ಷಾ ಚಾಲಕರಿಗಾಗಿ ಇಂತಹ ಚಂದಾದಾರಿಕೆ ಆಧಾರಿತ ಯೋಜನೆಯ ಪ್ರಾಯೋಗಿಕ ಆವೃತ್ತಿಯನ್ನು ಪ್ರಾರಂಭಿಸಿತ್ತು. ಇದು ಚೆನ್ನೈ, ಕೊಚ್ಚಿ ಮತ್ತು ವಿಶಾಖಪಟ್ಟಣಂನಿಂದ ಹಿಡಿದು ಆರು ನಗರಗಳಲ್ಲಿ ಜಾರಿ ಮಾಡಲಾಗಿತ್ತು.

ಮಹಿಳೆಯ ಪರ್ಫ್ಯೂಮ್ ಬಗ್ಗೆ ಪ್ರಶ್ನಿಸಿ ಕೆಲಸ ಕಳಕೊಂಡ ಉಬರ್​ ಚಾಲಕ! ತಲೆಬಿಸಿ ಮಾಡಿಕೊಂಡ ಕಂಪೆನಿ

ಉಬರ್ ಸಹ ಹಕ್ಕು ನಿರಾಕರಣೆಯನ್ನು ಕೂಡ ಹೊಂದಿದ್ದು, ಇದು ಸವಾರರನ್ನು ಸ್ವತಂತ್ರ ಚಾಲಕ ಪಾಲುದಾರರೊಂದಿಗೆ ಸಂಪರ್ಕಿಸುವ ತಂತ್ರಜ್ಞಾನ ವೇದಿಕೆಯಾಗಿ ಮಾತ್ರ ಕಾರ್ಯನಿರ್ವಹಿಸುತ್ತದೆ ಮತ್ತು ಯಾವುದೇ ಸಾರಿಗೆ ಸೇವೆಗಳನ್ನು ಒದಗಿಸುವುದಿಲ್ಲ ಎಂದು ತಿಳಿಸಿದೆ. ಸವಾರಿಗಳ ಕಾರ್ಯಗತಗೊಳಿಸುವಿಕೆ, ಪೂರ್ಣಗೊಳಿಸುವಿಕೆ ಅಥವಾ ಗುಣಮಟ್ಟದ ಮೇಲೆ ಇದು ಇನ್ನು ಮುಂದೆ ನಿಯಂತ್ರಣವನ್ನು ಹೊಂದಿರುವುದಿಲ್ಲ.