Asianet Suvarna News Asianet Suvarna News

UAE Lifted Ban On Poultry Products:ಭಾರತದ ಕುಕ್ಕುಟೋದ್ಯಮ ಉತ್ಪನ್ನಗಳ ಆಮದಿನ ಮೇಲಿನ ನಿರ್ಬಂಧ ತೆರವುಗೊಳಿಸಿದ ಯುಎಇ

*ಮೊಟ್ಟೆ ಸೇರಿದಂತೆ ಕುಕ್ಕುಟೋದ್ಯಮ ಉತ್ಪನ್ನಗಳ ಆಮದಿನ ಮೇಲೆ ನಿರ್ಬಂಧ ವಿಧಿಸಿದ್ದ ಯುಎಇ
*ಹಕ್ಕಿಜ್ವರ ಸೋಂಕಿನ ಭೀತಿಯಿಂದ ಸುಮಾರು 5 ವರ್ಷಗಳಿಂದ ನಿರ್ಬಂಧ
*ಪ್ರಧಾನಿ ನರೇಂದ್ರ ಮೋದಿ ಮುಂದಿನ ತಿಂಗಳು ಯುಇಎಗೆ ಭೇಟಿ ನೀಡಲಿದ್ದಾರೆ
 

UAE lifted ban on import of poultry products from India anu
Author
Bangalore, First Published Dec 28, 2021, 4:26 PM IST

ದುಬೈ (ಡಿ.28): ಮುಂದಿನ ತಿಂಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಭೇಟಿ(visit) ಹಿನ್ನೆಲೆಯಲ್ಲಿ ಭಾರತದಿಂದ ಮೊಟ್ಟೆಗಳು (eggs) ಸೇರಿದಂತೆ ಇತರ ಕುಕ್ಕುಟೋದ್ಯಮ ಉತ್ಪನ್ನಗಳ(poultry products) ಆಮದಿನ (import) ಮೇಲೆ ಹೇರಿದ್ದ ನಿಷೇಧವನ್ನು(ban) ಸಂಯುಕ್ತ ಅರಬ್ ಸಂಸ್ಥಾನ (UAE) ತೆರವುಗೊಳಿಸಿದೆ.  ಹಕ್ಕಿಜ್ವರ(bird flu)ಸೋಂಕು ತಡೆಗೆ ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆ (World Organization for Animal Health) ರೂಪಿಸಿರೋ ಜೈವಿಕ ಸುರಕ್ಷಾ(biosafety) ನಿಯಮಗಳನ್ನು ಪಾಲಿಸೋದಾಗಿ ಭಾರತ ಸರ್ಕಾರ ಆಶ್ವಾಸನೆ ನೀಡಿದ ಬೆನ್ನಲ್ಲೇ ಯುಎಇ  ಈ ತೀರ್ಮಾನ ಕೈಗೊಂಡಿದೆ. 

ನಿಷೇಧ ತೆರವಿನ ಹಿನ್ನೆಲೆಯಲ್ಲಿ ಯುಎಇಗೆ ಇನ್ನುಮುಂದೆ ತಮಿಳುನಾಡಿನಲ್ಲಿರೋ ಎರಡು ಫಾರ್ಮ್ ಗಳಲ್ಲಿ ಉತ್ಪಾದಿಸೋ ವಿವಿಧ ಪ್ರಕಾರದ ಮೊಟ್ಟೆಗಳನ್ನು ರಫ್ತು ಮಾಡಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಕ್ಕಿಜ್ಷರ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಭಾರತದ ಕುಕ್ಕುಟೋದ್ಯಮ ಉತ್ಪನ್ನಗಳ ಆಮದಿನ ಮೇಲೆ ಯುಎಇ ಐದು ವರ್ಷಗಳ ಹಿಂದೆಯೇ ನಿಷೇಧ ಹೇರಿತ್ತು. 

Antidumping duty:ಚೀನಾದ 5 ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ ಭಾರತ

ವ್ಯಾಪಾರ ಒಪ್ಪಂದದಡಿಯಲ್ಲಿ ಮೊಟ್ಟೆಗಳ ರಫ್ತಿಗೆ ಅವಕಾಶ ನೀಡುವಂತೆ ಯುಎಇ ಸರ್ಕಾರಕ್ಕೆ ಭಾರತ ನಿರಂತರವಾಗಿ ಮನವಿ ಮಾಡುತ್ತಲೇ ಬಂದಿತ್ತು. ಕೊನೆಗೂ ಯುಎಇ ಭಾರತದ ಮನವಿಯನ್ನು ಪುರಸ್ಕರಿಸಿ ಕುಕ್ಕುಟೋದ್ಯಮ ಉತ್ಪನ್ನಗಳ ಆಮದಿನ ಮೇಲಿನ ನಿರ್ಬಂಧ ತೆರವುಗೊಳಿಸಿದೆ. ಭಾರತ ಹಾಗೂ ಯುಎಇ ನಡುವಿನ ವ್ಯಾಪಾರ ಒಪ್ಪಂದದ ಪ್ರಕಾರ ವಾಷಿಂಗ್‌ ಮಷಿನ್ಸ್ (washing machines), ಹವಾ ನಿಯಂತ್ರಕಗಳು(air-conditioners), ರೆಫ್ರಿಜರೇಟರ್ ಗಳು ( refrigerators), ಮಸಾಲ ಪದಾರ್ಥಗಳು (spices)ತಂಬಾಕು( tobacco), ಹತ್ತಿಯ ಬಟ್ಟೆಗಳು(cotton fabrics), ಜವಳಿ(textiles) ಹಾಗೂ ಚರ್ಮದ ಉತ್ಪನ್ನಗಳನ್ನು(leather)ಸೇರಿದಂತೆ  1,100 ಉತ್ಪನ್ನಗಳನ್ನು ಭಾರತದಿಂದ ಯುಎಇಗೆ ರಫ್ತು ಮಾಡಲು ಅವಕಾಶವಿದೆ. ಹಾಗೆಯೇ ಯುಇಎಯಿಂದ ಖರ್ಜೂರ, ಮಿಠಾಯಿ ಹಾಗೂ ಸಕ್ಕರೆ ಉತ್ಪನ್ನಗಳನ್ನು ಭಾರತ ಈ ಒಪ್ಪಂದದ ಅನ್ವಯ ಆಮದು ಮಾಡಿಕೊಳ್ಳಬಹುದಾಗಿದೆ. 

ಯುಎಇ ಭಾರತದ ಮೂರನೇ ಅತೀದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದು, 2020ನೇ ಆರ್ಥಿಕ ಸಾಲಿನಲ್ಲಿ ಎರಡು ರಾಷ್ಟ್ರಗಳ ನಡುವೆ 60 ಬಿಲಿಯನ್ ಡಾಲರ್ ದ್ವಿಮುಖ (bilateral) ವ್ಯಾಪಾರ (trade) ನಡೆದಿದೆ. ಯುಎಇ ಅಮೆರಿಕದ  ಬಳಿಕ ಭಾರತದ ಎರಡನೇ ಅತಿದೊಡ್ಡ ರಫ್ತು ರಾಷ್ಟ್ರವಾಗಿದೆ. ಯುಎಇಗೆ ಭಾರತದಿಂದ ಸುಮಾರು 29 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ರಫ್ತು ಮಾಡಲಾಗುತ್ತಿದೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಯುಎಇ ಭೇಟಿ ಸಂದರ್ಭದಲ್ಲಿ  ಉಭಯ ರಾಷ್ಟ್ರಗಳ ವ್ಯಾಪಾರ ಸಂಬಂಧ ಸುಧಾರಣೆಗೆ 'ಭಾರತ ಯುಎಇ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ' (CEPA) ಘೋಷಣೆ ಮಾಡುವ ಸಾಧ್ಯತೆಯಿದೆ.   ಗಲ್ಫ್ ರಾಷ್ಟ್ರಗಳಲ್ಲಿ ಭಾರತ ಇದೇ ಮೊದಲ ಬಾರಿಗೆ ಇಂಥ ಒಪ್ಪಂದ  ಮಾಡಿಕೊಳ್ಳುತ್ತಿದೆ. ಸರಕು ವ್ಯಾಪಾರದ ಜೊತೆಗೆ ಸೇವೆಗಳು ಹಾಗೂ ಹೂಡಿಕೆ ಕ್ಷೇತ್ರಗಳಿಗೆ ಸಂಬಂಧಿಸಿಯೂ ಉಭಯ ರಾಷ್ಟ್ರಗಳ ನಡುವೆ ವ್ಯವಹಾರ ಬೆಳೆಸಲು ಪ್ರಯತ್ನಿಸಲಾಗೋದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ದೀರ್ಘಾವಧಿ ಉದ್ಯಮ ವೀಸಾ ನೀಡೋ ಬಗ್ಗೆಯೂ ಈ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ನಡುವೆ  ಮಾತುಕತೆ ನಡೆಯೋ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 

Edible Oil: ಖಾದ್ಯ ತೈಲ ಕಂಪನಿಗಳಿಂದ ಶೇ.10-15ರಷ್ಟು ಬೆಲೆ ಕಡಿತ!

ಕುವೈತ್ ಗೆ ಪ್ರಧಾನಿ ಭೇಟಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನವರಿ ಮೊದಲ ವಾರದಲ್ಲಿ ಕುವೈತ್‌ಗೆ ಭೇಟಿ ನೀಡೋ ಸಾಧ್ಯತೆಯಿದೆ. ಇದು  40 ವರ್ಷಗಳಲ್ಲಿ ಕುವೈಟ್‌ಗೆ  ಭಾರತದ ಪ್ರಧಾನಿಯ  ಮೊದಲ ಭೇಟಿಯಾಗಿದೆ. ಭಾರತಕ್ಕೆ ಕುವೈತ್ ಹೂಡಿಕೆಗಳನ್ನು ಹೆಚ್ಚಿಸುವುದು ಮತ್ತು ಎರಡು ದೇಶಗಳ ನಡುವೆ ರಕ್ಷಣಾ ಪಾಲುದಾರಿಕೆಗೆ ಸ್ಥಾನ ನೀಡುವುದು ಈ ಭೇಟಿಯ ಗುರಿಯಾಗಿದೆ. 

Follow Us:
Download App:
  • android
  • ios