ದುಬೈ[ಫೆ.10]: ಭಾರತದಲ್ಲಿ ಬ್ಯಾಂಕ್‌ಗಳಿಗೆ ವಂಚಿಸಿದ ಉದ್ಯಮಿಗಳಿಂದ ಸಾಲ ವಸೂಲಿಗೆ ಹಲವು ಕ್ರಮಗಳನ್ನು ಕೈಗೊಂಡಿದ್ದ ಕೇಂದ್ರ ಸರ್ಕಾರ, ಇದೀಗ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ)ನ ಬ್ಯಾಂಕ್‌ಗಳಿಗೆ ವಂಚಿಸಿದ್ದ ಭಾರತೀಯ ಕಂಪನಿಗಳಿಗೆ ಮೂಗುದಾರ ಹಾಕಲೂ ಮುಂದಾಗಿದೆ. ಅಂದರೆ ದುಬೈನಲ್ಲಿ ಸಾಲ ಬಾಕಿ ಉಳಿಸಿಕೊಂಡ ಭಾರತೀಯ ಉದ್ಯಮಿಗಳ ವಿರುದ್ಧ ಯುಎಇನ ಸಿವಿಲ್‌ ಕೋರ್ಟ್‌ಗಳ ಹೊರಡಿಸಿದ್ದ ಆದೇಶವನ್ನು ಭಾರತದಲ್ಲೂ ಜಾರಿ ಮಾಡಲು ಭಾರತ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

ಅದರ ಬೆನ್ನಲ್ಲೇ, ತಮ್ಮ ಬಳಿ 50000 ಕೋಟಿ ರು. ಸಾಲದ ಬಾಕಿ ಉಳಿಸಿಕೊಂಡ ಭಾರತೀಯ ಉದ್ಯಮಿಗಳು ಮತ್ತು ಉದ್ಯಮಗಳ ವಿರುದ್ಧ ಕಾನೂನು ಕ್ರಮಕ್ಕೆ ಯುಎಇನ ಹಲವು ಬ್ಯಾಂಕ್‌ಗಳು ಭಾರತ ಬಂದು ಕಾನೂನು ಹೋರಾಟಕೆ ಸಜ್ಜಾಗಿವೆ.

ಬ್ಯಾಂಕ್‌ನಲ್ಲಿನ ನಿಮ್ಮ ಎಫ್‌ಡಿ ಇನ್ನಷ್ಟು ಸುರಕ್ಷಿತ, 1 ಲಕ್ಷದಿಂದ 5 ಲಕ್ಷಕ್ಕೇರಿಕೆ?

ಈವರೆಗೆ ಯುಎಇನಲ್ಲಿ ಉದ್ಯಮ ಹೊಂದಿದ್ದ ಭಾರತೀಯರು ಅಲ್ಲಿನ ಉದ್ಯಮಕ್ಕಾಗಿ ಸಾಲ ಪಡೆದು, ಅದನ್ನು ಮರುಪಾವತಿ ಮಾಡದೇ ಭಾರತಕ್ಕೆ ಬಂದಿದ್ದರೆ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಕ್ಕೆ ಅಲ್ಲಿನ ಬ್ಯಾಂಕ್‌ಗಳಿಗೆ ಅವಕಾಶ ಇರುತ್ತಿರಲಿಲ್ಲ. ಆದರೆ ಇದೀಗ ಸಾಲಗಾರರ ವಿರುದ್ಧ ಸೌದಿ ಬ್ಯಾಂಕ್‌ಗಳ ಪರವಾಗಿ ಅಲ್ಲಿನ ಸಿವಿಲ್‌ ಕೋರ್ಟ್‌ಗ ಹೊರಡಿಸುವ ತೀರ್ಪುಗಳನ್ನು ಭಾರತದಲ್ಲೂ ಜಾರಿ ಮಾಡಲು ಭಾರತ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಇನ್ನು ದುಬೈ ಬ್ಯಾಂಕ್‌ಗಳು, ಬಾಕಿ ವಸೂಲಿಗೆ ಭಾರತಕ್ಕೆ ಬರಬಹುದು.

ದುಬೈ ಬ್ಯಾಂಕ್‌ಗಳು ಭಾರತಕ್ಕೆ ಆಗಮಿಸಿ ಸಾಲಗಾರರ ವಿರುದ್ಧ ರಾಷ್ಟ್ರೀಯ ಕಂಪನಿ ನ್ಯಾಯಾಧಿಕರಣಕ್ಕೆ ದೂರು ನೀಡಬಹುದು. ಸಾಲಗಾರರ ವಿರುದ್ಧ ದಿವಾಳಿ ಸಂಹಿತೆಯಡಿ ಕ್ರಮಕ್ಕೆ ಮನವಿ ಮಾಡಬಹುದು

ಬ್ಯಾಂಕ್‌ ಠೇವಣಿ ವಿಮೆ 1 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಳ!