Asianet Suvarna News Asianet Suvarna News

ಹೋಯ್ತು ಮಾನ: ಅಮೆರಿಕ ನೀಡಿದ ಗುದ್ದಿಗೆ ಪತರುಗುಟ್ಟಿದ ಪಾಕಿಸ್ತಾನಿಯರು!

ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ಕೊಟ್ಟ ಟ್ರಂಪ್ ಸರ್ಕಾರ| ಅಮೆರಿಕದ ಹೊಡೆತಕ್ಕೆ ಸುಸ್ತಾದ ಪಾಕಿಸ್ತಾನ ಸರ್ಕಾರ| ಪಾಕಿಸ್ತಾನ ನಾಗರಿಕರ ವೀಸಾ ಅವಧಿ 5 ವರ್ಷದಿಂದ 3 ತಿಂಗಳಿಗೆ ಇಳಿಕೆ| ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಭಾರೀ ಮುಖಭಂಗ| ಪಾಕಿಸ್ತಾನ ವೀಸಾ ಅರ್ಜಿ ಶುಲ್ಕ 160 ಡಾಲರ್ ನಿಂದ 192 ಡಾಲರ್ ಗೆ  ಏರಿಕೆ|

U.S. Reduces Visa Duration For Pakistani Citizens
Author
Bengaluru, First Published Mar 6, 2019, 7:36 PM IST

ವಾಷಿಂಗ್ಟನ್(ಮಾ.06): ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ ನೀಡಲಾಗಿದ್ದು, ಪಾಕಿಸ್ತಾನದ ನಾಗರಿಕರಿಗೆ ನೀಡಲಾಗುವ ವೀಸಾ ಅವಧಿಯನ್ನು 5 ವರ್ಷದಿಂದ ಕೇವಲ 3 ತಿಂಗಳಿಗೆ ಇಳಿಕೆ ಮಾಡಲಾಗಿದೆ. 

ಪಾಕಿಸ್ತಾನಕ್ಕೆ ಆರ್ಥಿಕ ನೆರವನ್ನು ಕಡಿತಗೊಳಿಸಿದ್ದ ಅಮೆರಿಕ, ಇದೀಗ ವೀಸಾ ಹೊಡೆತ ನೀಡಿದ್ದು, ವೀಸಾ ಅವಧಿ ಕೇಳಿದ ಪಾಕಿಸ್ತಾನಿಯರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. 

 ಹೊಸ ನಿಯಮ ಪಾಕಿಸ್ತಾನದ ಪೌರತ್ವ ಹೊಂದಿರುವ ನಾಗರಿಕರಿಗಷ್ಟೇ ಅಲ್ಲದೇ ಪಾಕಿಸ್ತಾನದ ಪತ್ರಕರ್ತರಿಗೂ ಅನ್ವಯವಾಗಲಿದೆ ಎಂದು ಅಮೆರಿಕ ರಾಯಭಾರಿ ಕಚೇರಿ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಇಷ್ಟೇ ಅಲ್ಲದೇ ಪಾಕಿಸ್ತಾನದ ವೀಸಾ ಅರ್ಜಿಯ ಶುಲ್ಕವನ್ನೂ ಅಮೆರಿಕ 160 ಡಾಲರ್ ನಿಂದ 192 ಡಾಲರ್ ಗೆ  ಏರಿಕೆ ಮಾಡಿದೆ. 
 

Follow Us:
Download App:
  • android
  • ios