ಹಣ ಮಾಡ್ಬೇಕು ಎನ್ನುವ ಕನಸಿರುತ್ತೇ ವಿನಃ ಕಷ್ಟಪಡಲು ಮನಸ್ಸು ಇರೋದಿಲ್ಲ. ಕೆಲವೊಂದು ಆಸೆಯನ್ನು ಬಿಟ್ಟು ರಣರಂಗಕ್ಕೆ ಇಳಿಯಬೇಕಾಗುತ್ತದೆ. ಆದ್ರೆ ನಾವು ಸ್ನೇಹ, ಮೋಜು, ಮಸ್ತಿ, ಕುಟುಂಬ, ಸಂಬಂಧದ ಬಂಧದಲ್ಲಿ ಗುರಿ ಮರೆಯುತ್ತೇವೆ.
ಜೀವನದಲ್ಲಿ ಏನಾದರೂ ಸಾಧಿಸಬೇಕು, ಯಶಸ್ಸನ್ನು ಹೊಂದಬೇಕು, ಹೆಚ್ಚು ಹಣ ಸಂಪಾದನೆ ಮಾಡಬೇಕು ಎನ್ನುವುದು ಬಹಳ ಜನರ ಆಸೆ. ಏನನ್ನಾದರೂ ಪಡೆದುಕೊಳ್ಳಬೇಕೆಂದರೆ ಇನ್ನೊಂದನ್ನು ಕಳೆದುಕೊಳ್ಳಲೇಬೇಕು ಎನ್ನುವ ಹಾಗೆ ನಾವು ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎಂದಾದರೆ ನಮ್ಮ ಪರಿಶ್ರಮ, ಛಲ ನೀಡಬೇಕು. ಪ್ರತಿದಿನ ಪ್ರತಿ ನಿಮಿಷವನ್ನು ವ್ಯರ್ಥ ಮಾಡದೇ ಗುರಿಯ ಕಡೆ ಗಮನಹರಿಸಬೇಕು, ಮೋಜು – ಮಸ್ತಿಗೆ ಅವಕಾಶ ನೀಡಬಾರದು.
ಲೈಫ್ (Life) ಅಲ್ಲಿ ಸಕ್ಸೆಸ್ ಆಗಬೇಕಂದ್ರೆ ನಾವು ಕೆಲವು ರೂಲ್ಸ್ (Rules) ಗಳನ್ನು ಫಾಲೋ ಮಾಡ್ಬೇಕಾಗುತ್ತೆ. ಅದರ ಪ್ರಕಾರವೇ ನಡೆದುಕೊಳ್ಳಬೇಕಾಗುತ್ತೆ. ಕೆಲವು ವಸ್ತುಗಳನ್ನು, ಅಭ್ಯಾಸಗಳನ್ನು ಹಾಗೂ ಜನರನ್ನು ದೂರ ಇಟ್ಟಾಗ ಮಾತ್ರ ಸಕ್ಸಸ್ ನಮ್ಮದಾಗುತ್ತೆ. ಇಲ್ಲೊಬ್ಬ ಯುವಕ ಕೂಡ ತನ್ನ ಸಕ್ಸಸ್ ಗೆ ಕಾರಣ ಏನು ಎನ್ನುವುದನ್ನು ಹೇಳಿದ್ದಾನೆ. 23 ವರ್ಷದ ಲ್ಯೂಕ್ ಲಿಂಟ್ಸ್ (Luke Lintz) ಎನ್ನುವಾತ ಚಿಕ್ಕ ವಯಸ್ಸಿನಲ್ಲೇ ತಾನು ಕೋಟ್ಯಾಧಿಪತಿಯಾದ ಕುರಿತು ಹೇಳಿಕೊಂಡಿದ್ದಾನೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದೀರಾ? ಹಾಗಾದ್ರೆ ಈ 10 ತಪ್ಪುಗಳನ್ನು ಮಾಡ್ಬೇಡಿ!
ಸಕ್ಸಸ್ ಆಗಲು ಈ 3 ನಿಯಮಗಳನ್ನು ಫಾಲೋ ಮಾಡಿ : ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದಾದರೆ ಸಮಯವನ್ನು ಹಾಳುಮಾಡದೇ ಇರುವುದು ಹಾಗೂ ನಮ್ಮ ಗಮನವನ್ನು ಪೂರ್ತಿಯಾಗಿ ನಮ್ಮ ಗುರಿಯ ಕಡೆ ಹರಿಸುವುದು ಮುಂತಾದ ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ಲ್ಯೂಕ್ ಲಿಂಟ್ಸ್ ಹೇಳುತ್ತಾನೆ. 23 ವರ್ಷದ ಲ್ಯೂಕ್ ಲಿಂಟ್ಸ್, “ನಾನು ಜೀವನದಲ್ಲಿ ಸಕ್ಸಸ್ ಆಗಲು ನನ್ನ ಗೆಳೆಯರಿಂದ ಹಾಗೂ ನನ್ನ ಕುಟುಂಬದಿಂದ ದೂರ ಉಳಿದೆ ಮತ್ತು ಇಡೀ ಜಗತ್ತನ್ನು ಸುತ್ತಿದೆ” ಎಂದು ಹೇಳುತ್ತಾನೆ. ಏನನ್ನಾದರೂ ಸಾಧಿಸಬೇಕಂದ್ರೆ ನಾವು ಜೀವನದಲ್ಲಿ ಈ ಮೂರು ನಿಯಮಗಳನ್ನು ಪಾಲಿಸಬೇಕು ಎಂದು ಲಿಂಟ್ಸ್ ಹೇಳುತ್ತಾನೆ.
ಚಿಕ್ಕ ವಯಸ್ಸಿನಲ್ಲೇ ಹೈಕಿ ಏಜೆನ್ಸಿ ಎಂಬ ಪಿಆರ್ ಸಂಸ್ಥೆಯನ್ನು ನಡೆಸುತ್ತಿರುವ ಲಿಂಟ್ಸ್ ತಾನು ಹೈ ಸ್ಕೂಲ್ ಶಿಕ್ಷಣ ಹೊಂದುವ ಸಮಯದಿಂದಲೇ ಹೆಚ್ಚು ಪೊಪ್ಯುಲರ್ ಆಗಿದ್ದೆ. ಆದರೆ ನನ್ನ ಫ್ರೆಂಡ್ಸ್ ನನ್ನನ್ನು ಬರ್ತಡೇ ಸೆಲೆಬ್ರೇಷನ್, ಪ್ರಮೋಷನ್, ಮದುವೆ ಮುಂತಾದ ಸಮಾರಂಭಗಳಿಗೆ ಕರೆಯುತ್ತಿದ್ದರು. ಇದರಿಂದ ನನಗೆ ಏಕಾಗ್ರತೆ ಸಿಗುತ್ತಿರಲಿಲ್ಲ. ಹಾಗಾಗಿ ನಾನು ನನ್ನ ಗೆಳೆಯರಿಂದ ದೂರವಾದೆ ಎನ್ನುತ್ತಾನೆ.
ಕುಟುಂಬ ಹಾಗೂ ಸಂಬಂಧಿಕರಿಂದಲೂ ದೂರ : ಲ್ಯೂಕ್ ಲಿಂಟ್ಸ್ ವಾರದ ಏಳು ದಿನವೂ ಕೆಲಸ ಮಾಡುತ್ತಾನೆ. ಲಿಂಟ್ಸ್ ನ ಇಬ್ಬರು ಸಹೋದರರರಾದ ಜಾರ್ಡನ್ ಮತ್ತು ಜಾಕ್ಸನ್ ಕೂಡ ಲಿಂಟ್ಸ್ ಜೊತೆ ಕೆಲಸ ಮಾಡುತ್ತಾರೆ. ಲಿಂಟ್ಸ್ ಕೆಲಸ ಮುಗಿದ ನಂತರ ಉಳಿದ ಸಮಯದಲ್ಲಿ ಸಹೋದರರ ಜೊತೆ ಕುಳಿತು ಕಂಪನಿಯ ಬಗ್ಗೆ ಚರ್ಚೆ ಮಾಡುತ್ತಾನೆ. ಆದ್ರೆ ಸಂಬಂಧಿಕರ ಜೊತೆ ಹರಟೆ ಹೊಡೆದು ಸಮಯ ಹಾಳು ಮಾಡೋದಿಲ್ಲ.
ಹೀಗೆ ಏಕಾಏಕಿ ಕೆಲಸದಿಂದ ತೆಗೆದಾಗ ಏನು ಮಾಡಬೇಕು, ರೆಡಿಟ್‌ನಲ್ಲಿ ದುಃಖ ತೋಡಿಕೊಂಡ ವ್ಯಕ್ತಿ!
ಗೆಳೆಯರು ಹಾಗೂ ಗೆಳೆತನ ನಮ್ಮನ್ನು ನಮ್ಮ ಗುರಿಯಿಂದ ಹಿಂದೆ ಎಳೆಯುತ್ತದೆ ಎಂದು ಲಿಂಟ್ಸ್ ಹೇಳುತ್ತಾನೆ. ಜೀವನಪೂರ್ತಿ ನಮ್ಮ ಜೊತೆ ಇರುವ ಗೆಳೆತನ ಹಾಗೂ ಸಂಬಂಧ ನಮ್ಮ ಅಮೂಲ್ಯ ಸಮಯವನ್ನು ಹಾಳುಮಾಡುತ್ತದೆ ಎನ್ನುವುದು ಬಿಲೇನಿಯರ್ ಲಿಂಟ್ಸ್ ಅಭಿಪ್ರಾಯವಾಗಿದೆ.
“ನನ್ನಲ್ಲೂ ಎಲ್ಲರೊಂದಿಗೆ ಬೆರೆಯುವ ಸ್ವಭಾವವಿದೆ. ಜನರು ಕೂಡ ನನ್ನ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಆದರೆ ಎಲ್ಲರ ಬಳಿ ನಮ್ಮ ಗುರಿ ತಲುಪಲು ಬೇಕಾಗುವ ಅವಶ್ಯಕ ವಸ್ತುಗಳು ಇರೋದಿಲ್ಲ. ಗೆಳೆತನ, ಸಂಬಂಧ ಎಲ್ಲವನ್ನು ದಾಟಿ ಮುಂದೆ ಬಂದಾಗಲೇ ನಮ್ಮ ಗುರಿಯನ್ನು ತಲುಪಲು ಸಾಧ್ಯ” ಎಂದು ಲ್ಯೂಕ್ ಲಿಂಟ್ಸ್ ತನ್ನ ದೃಢ ನಿರ್ಧಾರವನ್ನು ಹೇಳುತ್ತಾನೆ. ವಾರದಲ್ಲಿ ಐದಾರು ದಿನ ಕೆಲಸ ಮಾಡಿ ಉಳಿದ ಸಮಯದಲ್ಲಿ ಫ್ರೆಂಡ್ಸ್ ಜೊತೆ ಮೋಜು ಮಸ್ತಿಯಲ್ಲಿ ತೊಡಗುವ ಯುವಕರ ನಡುವೆ ಈತ ಭಿನ್ನವಾಗಿರುವುದಂತೂ ನಿಜ.
