ಟ್ರೈನ್ 18ರ ಟಿಕೆಟ್‌ ದರ ಶತಾಬ್ದಿಗಿಂತ 3 ಪಟ್ಟು ಅಧಿಕ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Feb 2019, 9:48 AM IST
Train 18 Delhi to Varanasi Executive Class to Cost Rs 3520
Highlights

ಶತಾಬ್ದಿಗೆ ಹೋಲಿಸಿದರೆ ಟ್ರೈನ್ 18 ಎಕ್ಸ್‌ಪ್ರೆಸ್‌ ರೈಲಿನ ಟಿಕೆಟ್‌ ದರ ದುಬಾರಿಯಾಗಿರಲಿದೆ. ಹಾಗಾದ್ರೆ ಟಿಕೆಟ್‌ ದರವೆಷ್ಟು? ಇಲ್ಲಿದೆ ಮಾಹಿತಿ

ನವದೆಹಲಿ[ಫೆ.12]: ಶತಾಬ್ದಿ ರೈಲುಗಳಿಗೆ ಪರ್ಯಾಯ ಎಂದೇ ಪರಿಗಣಿತ, ದೇಶದ ಅತಿವೇಗದ ರೈಲಾದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಫೆ.15ರಂದು ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಆದರೆ ಶತಾಬ್ದಿಗೆ ಹೋಲಿಸಿದೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಟಿಕೆಟ್‌ ದರ ದುಬಾರಿಯಾಗಿರಲಿದೆ.

ಟ್ರೈನ್‌-18 ರೈಲಿನಲ್ಲಿ ದೆಹಲಿಯಿಂದ ವಾರಾಣಸಿಗೆ ಎಸಿ ಚೇರ್‌ ಕಾರ್‌ನಲ್ಲಿ 1,850 ರು. ಶುಲ್ಕ ನಿಗದಿ ಮಾಡಿದ್ದರೆ, ಎಕ್ಸಿಕ್ಯೂಟಿವ್‌ ಕ್ಲಾಸ್‌ನಲ್ಲಿ 3,520 ರು. ದರ ನಿಗದಿ ಮಾಡಲಾಗಿದೆ. ಪ್ರಯಾಣದ ವೇಳೆಯ ಊಟೋಪಚಾರ ಸೇವೆ ಪಡೆಯುವುದು ಕಡ್ಡಾಯ.

ಇನ್ನು ವಾರಾಣಸಿಯಿಂದ ಮರಳಿ ದೆಹಲಿಗೆ ಬರುವ ಶುಲ್ಕ ಕಾರ್‌ ಚೇರ್‌ ಟಿಕೆಟ್‌ ದರ ರು. 1,795, ಎಕ್ಸಿಕ್ಯೂಟಿವ್‌ ಕ್ಲಾಸ್‌ ದರ 3,470 ರು. ಆಗಿರಲಿದೆ. ಎರಡು ಬದಿಯಲ್ಲಿ ಕ್ರಮಿಸಿದರೆ ಸ್ವಲ್ಪಮಟ್ಟಿಗೆ ಕಡಿಮೆ ಆಗಲಿದೆ.

loader