ಆನ್​ಲೈನ್​ನಲ್ಲಿ ಮೊಬೈಲ್​ ರೀಚಾರ್ಜ್​ ಮಾಡ್ತೀರಾ? ಈ ಹೊಸ ವಂಚನೆ ಬಗ್ಗೆ ಇರಲಿ ಎಚ್ಚರ!

ಆನ್​ಲೈನ್​ನಲ್ಲಿ ಮೊಬೈಲ್​ ರೀಚಾರ್ಜ್​ ಮಾಡ್ತೀರಾ? ಜಿಯೋ, ಏರ್​ಟೆಲ್​, ಬಿಎಸ್​ಎನ್​ಎಲ್​  ಆಫರ್​ ಕೊಟ್ಟಿತು ಎಂದು ಬಂದ ಲಿಂಕ್​  ಒತ್ತುತ್ತೀರಾ? ಈ ಹೊಸ ವಂಚನೆ ಬಗ್ಗೆ ಇರಲಿ ಎಚ್ಚರ! 
 

TRAI alerts New mobile recharge scam targeting Jio Airtel Vi and BSNL users

ದಿನನಿತ್ಯವೂ ಮೊಬೈಲ್​ ರೀಚಾರ್ಜ್​ ಮಾಡಿಸುವವರು ಕೋಟ್ಯಂತರ ಜನರಿದ್ದಾರೆ. ಅವರ ಪೈಕಿ ಅತ್ಯಧಿಕ ಮಂದಿ ಆನ್​ಲೈನ್​ನಲ್ಲಿಯೇ ಮೊಬೈಲ್​ ರೀಚಾರ್ಜ್​ ಮಾಡಿಸುತ್ತಾರೆ. ಜಿಯೋ, ಏರ್​ಟೆಲ್​, ಬಿಎಸ್​ಎನ್​ಎಲ್​ ಸೇರಿದಂತೆ ಯಾವುದೇ ಕಂಪೆನಿಯ ಮೊಬೈಲ್​ ರೀಚಾರ್ಜ್​ ಮಾಡುವುದಿದ್ದರೂ ಆನ್​ಲೈನ್​ ಮೊರೆ ಹೋಗುವುದು ಸಾಮಾನ್ಯ. ಆದರೆ ಇದನ್ನೇ ಈಗ ಬಂಡವಾಳವಾಗಿಸಿಕೊಂಡಿರುವ ಸೈಬರ್​ ಕ್ರಿಮಿನಲ್ಸ್​, ಹೊಸ ವಂಚನೆ ಶುರುವಿಟ್ಟುಕೊಂಡಿದ್ದಾರೆ. ಇದಾಗಲೇ ಡಿಜಿಟಲ್​ ಅರೆಸ್ಟ್​ ಬಗ್ಗೆ ಕೇಳಿರುತ್ತೀರಿ, ಯಾವುದೋ ಲಿಂಕ್​ ಕಳಿಸಿ, ಯಾವುದೋ ಗಿಫ್ಟ್​ ಆಮಿಷ ಒಡ್ಡಿ ಅದೆಷ್ಟೋ ಮಂದಿಯಿಂದ ಲಕ್ಷಗಟ್ಟಲೆ ಹಣವನ್ನು ಈ ಸೈಬರ್​ ಅಪರಾಧಿಗಳು ಗುಳುಂ ಮಾಡಿದ್ದಿದೆ. ಎಷ್ಟೋ ಮಂದಿಯ ಬ್ಯಾಂಕ್​ ಖಾತೆಯೂ ಖಾಲಿಯಾಗಿದ್ದಿದಿ. ಒಮ್ಮೆ ನಿಮ್ಮ ಹಣ ಹೋಯಿತು ಎಂದರೆ ಅದು ಅಷ್ಟು ಸುಲಭಕ್ಕೆ ಸಿಗುವುದಂತೂ ಸಾಧ್ಯವೇ ಇಲ್ಲ. ಏಕೆಂದರೆ ಸೈಬರ್​ ಕ್ರೈಂ ಎನ್ನುವುದು ಅಷ್ಟು ವ್ಯವಸ್ಥಿತವಾಗಿ ನಡೆಯುತ್ತಿರುವ ವಂಚನೆಯಾಗಿದೆ. ಇದೀಗ ಅದಕ್ಕೆ ಮೊಬೈಲ್​ ರೀಚಾರ್ಜ್​ ಕೂಡ ಸೇರ್ಪಡೆಯಾಗಿದೆ!

ಈ ಬಗ್ಗೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ದೇಶಾದ್ಯಂತ ಲಕ್ಷಾಂತರ ಮೊಬೈಲ್ ಬಳಕೆದಾರರಿಗೆ ಎಚ್ಚರಿಕೆಯ ಸೂಚನೆಯನ್ನು ನೀಡಿದೆ. ಹಲವಾರು ರೀತಿಯ ವಂಚನೆ ಮೊಬೈಲ್ ರೀಚಾರ್ಜ್​ನಿಂದ ನಡೆಯುತ್ತಿದೆ. ಅದರಲ್ಲಿ ಮುಖ್ಯವಾದದ್ದು, ನೀವು ಬಳಸುತ್ತಿರುವ ಸಿಮ್​ಕಾರ್ಡ್​ ಬಗ್ಗೆ ತಿಳಿದುಕೊಳ್ಳುತ್ತಿರುವ ಈ ವಂಚಕರು, ಅದರಲ್ಲಿ ಆಫರ್​ ನೀಡಲಾಗಿದೆ ಎಂದು ಒಂದು ಲಿಂಕ್​ ಕಳಿಸುತ್ತಾರೆ. ಇದು ನಿಮ್ಮ ಮೊಬೈಲ್​ಗೆ ಮಾತ್ರ ನೀಡಿರುವ ಆಫರ್​. ಈ ಲಿಂಕ್​ ಒತ್ತಿ ಆಫರ್​ ಪಡೆದುಕೊಳ್ಳಬಹುದು ಎನ್ನುತ್ತಾರೆ. ಆಗ ನೀವು ಜಾಗ್ರತರಾಗಬೇಕು. ಒಂದು ವೇಳೆ ನೀವು ಆಫರ್ ಆಸೆಗೆ ಬಲಿಯಾಗಿ ಲಿಂಕ್​ ಒತ್ತಿದರೆ ನಿಮ್ಮ ಬ್ಯಾಂಕ್​ ಖಾತೆ ಖಾಲಿಯಾದೀತು ಎಚ್ಚರ! ಹೆಚ್ಚಾಗಿ ಎಸ್​ಎಂಎಸ್​ಗಳಲ್ಲಿ ಈ ಸಂದೇಶ ಬರುತ್ತದೆ ಎಂದು ಟ್ರಾಯ್​ ಹೇಳಿದೆ.  

ಇನ್ಮುಂದೆ ಈ 20ಕ್ಕೂ ಅಧಿಕ ಫೋನ್​ಗಳಲ್ಲಿ ವಾಟ್ಸ್​ಆ್ಯಪ್​ ವರ್ಕ್​ ಆಗಲ್ಲ: ನಿಮ್ಮ ಫೋನ್​ ಇದ್ಯಾ ಚೆಕ್​ ಮಾಡಿಕೊಳ್ಳಿ...

ಇನ್ನು ಟೆಲಿಕಾಂ ನಿಯಂತ್ರಣದ ಹೆಸರು ಹೇಳಿಕೊಂಡು ಉಚಿತ ಕೊಡುಗೆ ನೀಡುವುದಾಗಿ ನೇರವಾಗಿ ಫೋನ್​ ಕರೆಗಳು ಇಲ್ಲವೇ ಮೆಸೇಜ್​ ಬರುತ್ತಿವೆ. ನೀವು ಇದನ್ನು ನಿಜ ಎಂದು ನಂಬಿ ಲಿಂಕ್​ ಒತ್ತಿದರೆ ಅಥವಾ ಅವರು 1 ಒತ್ತಿ, 2 ಒತ್ತಿ ಎಂದು ಹೇಳಿದಂತೆ ಕೇಳುತ್ತಾ ಹೋದರೆ ಅವರು ನಿಮ್ಮ ಬ್ಯಾಂಕ್​ ಖಾತೆಯಲ್ಲಿರುವ ಹಣವನ್ನು ಒತ್ತಿ ಖಾಲಿ ಮಾಡಿರುತ್ತಾರಷ್ಟೇ! ಇದು ಲಿಂಕ್​ಗಳ ಮಾತಾದರೆ, ಇನ್ನು ಆನ್​ಲೈನ್​ನಲ್ಲಿ ಮೊಬೈಲ್​ ರೀಚಾರ್ಜ್​ ಮಾಡಿಸುವಾಗಲೇ ಮೈಯೆಲ್ಲಾ ಕಣ್ಣಾಗಿರಬೇಕು. ಏಕೆಂದರೆ, ಫೇಕ್​ ವೆಬ್​ಸೈಟ್​ಗಳ ಭರ್ಜರಿ ಆಫರ್​ ಕೊಟ್ಟು ಮೊಬೈಲ್​ ರೀಚಾರ್ಜ್​ ಮಾಡಲು ಉತ್ತೇಜಿಸುತ್ತವೆ. ನೀವು ಮೊಬೈಲ್​ ರೀಚಾರ್ಜ್​ ಎಂದು ಟೈಪ್​ ಮಾಡಿದ ತಕ್ಷಣ ಬರುವುದೇ ಈ ಫೇಕ್​ ವೆಬ್​ಸೈಟ್​ಗಳು. ಅಲ್ಲಿ ನೀಡುವ ಆಫರ್​ ನೋಡಿ ನೀವು ಆಕರ್ಷಿತರಾದರೆ ಅಷ್ಟೇ ಕಥೆ.

ಆದ್ದರಿಂದ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಎಚ್ಚರಿಕೆ ನೀಡಿದ್ದು, ನೀವು ಯಾವುದೇ ಸಿಮ್​ಗೆ ರೀಚಾರ್ಜ್​ ಮಾಡಿಸುವುದಿದ್ದರೂ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಎಂದು ಎಚ್ಚರಿಕೆ ನೀಡಿದೆ. ಇಲ್ಲದಿದ್ದರೆ ನಿಮ್ಮ ಅರಿವಿಗೆ ಬಾರದಂತೆ ನಿಮ್ಮ ಬ್ಯಾಂಕಿಂಗ್ ವಿವರಗಳು ಸೇರಿದಂತೆ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ನೀವು ಖದೀಮರ ಕೈಗೆ ನೀಡುತ್ತಿದ್ದೀರಿ ಎಂದು ಅದು ಎಚ್ಚರಿಕೆ ನೀಡಿದೆ. ಆ ಕ್ಷಣದಲ್ಲಿ ನಿಮಗೆ ಆಫರ್​ ನೀಡಿ ರೀಚಾರ್ಜ್​ ಮಾಡಿದಂತೆ ಕಂಡರೂ, ನಿಮ್ಮ ಎಲ್ಲಾ ಮಾಹಿತಿಗಳು ಅವರ ಕೈಯಲ್ಲಿ ಇರುವ ಕಾರಣ, ನಿಮ್ಮ ಅರಿವಿಗೆ ಬಾರದೇ ಬ್ಯಾಂಕ್​ ಖಾತೆ ಖಾಲಿ ಮಾಡಲಾಗುತ್ತದೆ ಎನ್ನುವುದು ಟ್ರಾಯ್​ ಎಚ್ಚರಿಕೆ.  ಒಂದು ವೇಳೆ ನಿಮಗೆ ವಂಚನೆ ಆಗಿದ್ದರೆ, ಇಲ್ಲವೇ ಈ ರೀತಿಯ ಸಂದೇಶಗಳು ಬಂದಿದ್ದರೆ, ನಿಮಗೆ ಯಾವುದಾದರೂ ರೀತಿಯ ಅನುಮಾನ ಮೂಡಿದ್ದರೆ, ಕೂಡಲೇ ನೀವು   ಈ ಮೋಸದ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲು ಸಹಾಯ ಮಾಡಲು ಸೈಬರ್‌ಕ್ರೈಮ್ ವೆಬ್‌ಸೈಟ್ https://Cybercrime.gov.in ಮತ್ತು ಸಂಚಾರ್ ಸಾಥಿ ಪೋರ್ಟಲ್ https://sancharsaathi.gov.in ಸೇರಿದಂತೆ ವರದಿ ಮಾಡಬೇಕು. ಇದಾಗಲೇ ಒಂದು ಲಕ್ಷಕ್ಕೂ ಅಧಿಕ ಮಂದಿ ಇಲ್ಲಿ ದೂರು ದಾಖಲಿಸಿದ್ದಾರೆ. ಇದರಿಂದ ಟ್ರಾಯ್​ಗೆ ಕೂಡ ಕ್ರಮ ತೆಗೆದುಕೊಳ್ಳಲು ಅನುಕೂಲ ಆಗುತ್ತದೆ.

ಜಿಯೋ ಗ್ರಾಹಕರಿಗೆ ಶಾಕ್‌! ಕನಿಷ್ಠ ಡೇಟಾ ಪ್ಯಾಕೇಜ್‌ನಲ್ಲಿ ಭಾರಿ ಬದಲಾವಣೆ

Latest Videos
Follow Us:
Download App:
  • android
  • ios