ಇನ್ಮುಂದೆ ಈ 20ಕ್ಕೂ ಅಧಿಕ ಫೋನ್‌ಗಳಲ್ಲಿ ವಾಟ್ಸ್‌ಆ್ಯಪ್ ವರ್ಕ್ ಆಗಲ್ಲ: ನಿಮ್ಮ ಫೋನ್ ಇದ್ಯಾ ಚೆಕ್ ಮಾಡಿಕೊಳ್ಳಿ...
ಸ್ಯಾಮ್ಸಂಗ್, ಮೋಟೋರೋಲಾ ಸೇರಿದಂತೆ ಈ 20ಕ್ಕೂ ಅಧಿಕ ಫೋನ್‌ಗಳಲ್ಲಿ ವಾಟ್ಸ್‌ಆ್ಯಪ್ ಇನ್ಮುಂದೆ ವರ್ಕ್ ಆಗಲ್ಲ: ಅದರ ಡಿಟೇಲ್ಸ್ ಇಲ್ಲಿದೆ...
ಸ್ಮಾರ್ಟ್‌ಫೋನ್, ಅದರಲ್ಲಿಯೂ ವಾಟ್ಸ್‌ಆ್ಯಪ್ ಇಲ್ಲದೇ ಇಂದು ಜೀವನ ನಡೆಸಲು ಸಾಧ್ಯವೇ ಇಲ್ಲವೇನೋ ಎನ್ನುವಷ್ಟರಮಟ್ಟಿಗೆ ಕಾಲ ಬದಲಾಗಿಬಿಟ್ಟಿದೆ. ಸ್ಮಾರ್ಟ್ಫೋನೇ ಇಂದಿನ ಬಹುತೇಕರಿಗೆ ಜೀವನವೇ ಆಗಿ ಹೋಗಿದೆ. ಒಂದು ಹೊತ್ತು ಊಟವನ್ನಾದರೂಬಿಟ್ಟಾರು, ಫೋನ್ ಬಿಡಲು ಸಾಧ್ಯವೇ ಇಲ್ಲ ಎನ್ನುವ ಅದೆಷ್ಟು ಮಂದಿ ಇದ್ದಾರೆ ಅಲ್ಲವೆ? ಮೊಬೈಲ್ ಫೋನ್ ಕೊಡಿಸಿಲ್ಲ ಎಂದು ವಿದ್ಯಾರ್ಥಿಗಳು ಆತ್ಮಹತ್ಯೆಯವರೆಗೂ ಹೋಗಿರುವ ಘಟನೆಗಳು ವರದಿಯಾಗುತ್ತಿವೆ ಎಂದರೆ, ಫೋನ್ ಎಂಬ ಮಾಯೆ ಅದ್ಯಾವ ಮಟ್ಟಿಗೆ ಜನರ ಜೀವನವನ್ನು ತುಂಬಿಬಿಟ್ಟಿವೆ ಎನ್ನುವುದು ತಿಳಿಯುತ್ತದೆ. ಇಂದು ಸುಮಾರು 2 ಶತಕೋಟಿ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ ಪ್ರಪಂಚದಲ್ಲಿ ಹೆಚ್ಚು ಬಳಸಿದ ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್ WhatsApp ಆಗಿದೆ.
ಆದರೆ ಇಂದಿನಿಂದ ಅಂದರೆ ಜನವರಿ 1ರಿಂದಲೇ ಕೆಲವೊಂದು ಫೋನ್ಗಳಿಗೆ ವಾಟ್ಸ್‌ಆ್ಯಪ್ ಕೆಲಸ ನಿರ್ವಹಿಸುವುದಿಲ್ಲ. ಇದರ ಅನುಭವ ಇದಾಗಲೇ ಕೆಲವರಿಗೆ ಆಗಿದ್ದಿರಬಹುದು. ಇದ್ದಕ್ಕಿದ್ದಂತೆಯೇ ವಾಟ್ಸ್ಆ್ಯಪ್ಗೆ ಏನಾಯಿತೆಂದು ಗಾಬರಿಯೂ ಆಗಿರಬೇಕು ಅಲ್ಲವೆ? ಅದಕ್ಕೆ ಕಾರಣ, ವಾಟ್ಸ್‌ಆ್ಯಪ್ ಅನ್ನು ನಿರ್ವಹಿಸುತ್ತಿರುವ ಮೆಟಾ ಕೆಲವೊಂದು ಅಂಡ್ರಾಯ್ಡ್ ಫೋನ್ಗಳಿಗೆ ವಾಟ್ಸ್‌ಆ್ಯಪ್ ಅನ್ನು ಬಂದ್ ಮಾಡಿದೆ. ಇದಕ್ಕೆ ಕಾರಣ, WhatsApp ನಿರಂತರವಾಗಿ ವಿಕಸನಗೊಳ್ಳುತ್ತಿದೆ ಮತ್ತು ಹೊಸ ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗುತ್ತಿದೆ.
ವರ್ಷಾಂತ್ಯದಲ್ಲಿ ಜಿಯೋ ಗ್ರಾಹಕರಿಗೆ ಶಾಕ್! ಕನಿಷ್ಠ ಡೇಟಾ ಪ್ಯಾಕೇಜ್‌ನಲ್ಲಿ ಭಾರಿ ಬದಲಾವಣೆ
ಇದೇ ಕಾರಣಕ್ಕೆ ಕೆಲವು ಹಳೆಯ ಸಾಧನಗಳು ಇನ್ನು ಮುಂದೆ ಈ ಅಪ್ಲಿಕೇಶನ್ ಅನ್ನು ಬೆಂಬಲಿಸುವುದಿಲ್ಲ. ಜನವರಿ 1, 2025 ರಿಂದ, 20 ಕ್ಕೂ ಹೆಚ್ಚು Android ಸ್ಮಾರ್ಟ್‌ಫೋನ್‌ಗಳು WhatsApp ಗೆ ಪ್ರವೇಶವನ್ನು ಕಳೆದುಕೊಳ್ಳುತ್ತವೆ. ಈ ಸಾಧನಗಳು ಆಂಡ್ರಾಯ್ಡ್‌ನ ಹಳೆಯ ಆವೃತ್ತಿಗಳು, ನಿರ್ದಿಷ್ಟವಾಗಿ Android 4.4 ಅಕಾ KitKat ಅಥವಾ ಹಿಂದಿನ ಸಾಫ್ಟ್‌ವೇರ್ ಆವೃತ್ತಿಗಳನ್ನು ಚಾಲನೆ ಮಾಡುತ್ತಿದ್ದರೆ ಅದು ಇಂದಿನಿಂದಲೇ ಕೆಲಸ ಮಾಡುವುದನ್ನು ನಿಲ್ಲಿಸಿವೆ. HDblog ನ ಇತ್ತೀಚಿನ ವರದಿಯ ಪ್ರಕಾರ, WhatsApp ನಿರ್ವಹಿಸುತ್ತಿರುವ ಕಂಪೆನಿಯಾದ Meta, ಉತ್ತಮ ಸುರಕ್ಷತೆ ಮತ್ತು ಕಾರ್ಯವನ್ನು ಖಚಿತಪಡಿಸಿಕೊಳ್ಳಲು ಅದರ ನಡೆಯುತ್ತಿರುವ ನವೀಕರಣಗಳ ಭಾಗವಾಗಿ ಈ ಹಳೆಯ ಸಾಧನಗಳಿಗೆ ಬೆಂಬಲವನ್ನು ಹಂತಹಂತವಾಗಿ ತೆಗೆದುಹಾಕುತ್ತಿದೆ. ಹತ್ತು ವರ್ಷಗಳ ಹಿಂದೆ ತೆಗೆದುಕೊಂಡಿರುವ ಬಹುತೇಕ ಫೋನ್ಗಳು ಈಗ ವಾಟ್ಸ್‌ಆ್ಯಪ್ ಸಂಪರ್ಕವನ್ನು ಕಳೆದುಕೊಳ್ಳಲಿವೆ. ಹೆಚ್ಚಾಗಿ, ವರ್ಷಗಳ ಹಿಂದೆ ಸ್ಮಾರ್ಟ್‌ಫೋನ್ ತಯಾರಿಕೆಯನ್ನು ನಿಲ್ಲಿಸಿರುವ HTC ಮತ್ತು LG ಯಂತಹ ಬ್ರ್ಯಾಂಡ್‌ಗಳ ಫೋನ್ಗಳ ಮೇಲೆ ಇದು ಹೆಚ್ಚಾಗಿ ಪರಿಣಾಮ ಬೀರುತ್ತವೆ. ನೀವು ಇನ್ನೂ ಈ ಫೋನ್‌ಗಳಲ್ಲಿ ಒಂದನ್ನು ಬಳಸುತ್ತಿದ್ದರೆ, ಕೂಡಲೇ ಬೇರೆ ಫೋನ್ ಖರೀದಿಸುವ ಅನಿವಾರ್ಯತೆ ಇದೆ.
2025 ರಲ್ಲಿ WhatsApp ಬೆಂಬಲವನ್ನು ಕಳೆದುಕೊಳ್ಳುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಸಂಪೂರ್ಣ ಪಟ್ಟಿ ಇಲ್ಲಿದೆ:
ಸ್ಯಾಮ್ಸಂಗ್ (Samsung), ಗ್ಯಾಲಕ್ಸಿ S3 (Galaxy S3), ಗ್ಯಾಲಕ್ಸಿ ಏಸ್- 3 (Galaxy Ace 3), ಗ್ಯಾಲಕ್ಸಿ ನೋಟ್-2 (Galaxy Note 2), ಗ್ಯಾಲಕ್ಸಿ ಎಸ್4 ಮಿನಿ (Galaxy S4 Mini)
Motorola (ಮೋಟೊರೊಲಾ), Moto G (1st Gen)- ಮೋಟೀ ಜಿ, Motorola Razr HD (ಮೋಟೋರೋಲಾ ರೇಜರ್ ಎಚ್ಡಿ), Moto E 2014 (ಮೋಟೋ ಇ 2014),
HTC (ಎಚ್ಟಿಸಿ), One X (ಒನ್ ಎಕ್ಸ್), One X+ (ಒನ್ ಎಕ್ಸ್ ಪ್ಲಸ್), Desire 500 (ಡಿಸೈರ್ 500), Desire 601 (ಡಿಸೈರ್ 601), ಎಲ್ಜಿ (LG), ಆಪ್ಟಿಮಸ್ ಜಿ (Optimus G), ನೆಕ್ಸಸ್ 4 (Nexus 4)
G2 Mini (ಜಿ2 ಮಿನಿ), L 90 (ಎಲ್ 90), Sony (ಸೋನಿ), Xperia Z (ಎಕ್ಸ್ಪೆರಿಯಾ ಜೆಡ್), Xperia SP (ಎಕ್ಸ್ಪೆರಿಯಾ ಎಸ್ಪಿ), Xperia T (ಎಕ್ಸ್ಪೆರಿಯಾ ಟಿ), Xperia V (ಎಕ್ಸ್ಪೆರಿಯಾ ವಿ).
895 ರೂ.ಗೆ 336 ದಿನಗಳ ವ್ಯಾಲಿಡಿಟಿ, 24 ಜಿಬಿ ಡೇಟಾ: ಜಿಯೋದಿಂದ ಭರ್ಜರಿ ಆಫರ್: ಡಿಟೇಲ್ಸ್ ಇಲ್ಲಿದೆ...