ಜಿಯೋ ತನ್ನ ₹19 ಮತ್ತು ₹29 ಡೇಟಾ ವೋಚರ್‌ಗಳ ವ್ಯಾಲಿಡಿಟಿ ಕಡಿತಗೊಳಿಸಿದೆ. ಈ ಹಿಂದೆ ಮೂಲ ಪ್ಲಾನ್‌ನ ವ್ಯಾಲಿಡಿಟಿ ಇರುತ್ತಿದ್ದ ಈ ವೋಚರ್‌ಗಳು ಈಗ ಕ್ರಮವಾಗಿ ಒಂದು ಮತ್ತು ಎರಡು ದಿನಗಳ ವ್ಯಾಲಿಡಿಟಿ ಹೊಂದಿವೆ. ಡಿಸೆಂಬರ್ 27ರಿಂದ ಈ ಬದಲಾವಣೆ ಜಾರಿಯಲ್ಲಿದೆ. ಇದರಿಂದ ಗ್ರಾಹಕರಿಗೆ ಹೆಚ್ಚುವರಿ ವೆಚ್ಚ ಭರಿಸಬೇಕಾಗಬಹುದು.
ಭಾರತದ ಅತಿದೊಡ್ಡ ಟೆಲಿಕಾಂ ಕಂಪೆನಿ ಎನಿಸಿರುವ ರಿಲಯನ್ಸ್ ಜಿಯೋ ತನ್ನ ಅತ್ಯಂತ ಕೈಗೆಟುಕುವ ಡೇಟಾ ವೋಚರ್‌ಗಳ ಮಾನ್ಯತೆಗೆ ಪ್ರಮುಖ ಬದಲಾವಣೆಗಳನ್ನು ಮಾಡಿದ್ದು ವರ್ಷಾಂತ್ಯದಲ್ಲಿ ಗ್ರಾಹಕರಿಗೆ ಭಾರಿ ಶಾಕ್ ಕೊಟ್ಟಿದೆ. ಕಳೆದ ಆಗಸ್ಟ್‌ನಲ್ಲಷ್ಟೇ ಸಿಹಿ ಸುದ್ದಿ ನೀಡಿದ್ದ ಜಿಯೋ ಇದೀಗ ಡೇಟಾ ವೋಚರ್‌ಗಳಲ್ಲಿ ಭಾರಿ ಬದಲಾವಣೆ ಮಾಡುವ ಮೂಲಕ, ಗ್ರಾಹಕರಿಗೆ ನಿರಾಸೆಯುಂಟು ಮಾಡಿದೆ. ಹೊಸ ವರ್ಷಕ್ಕೆ ಕಡಿಮೆ ದರದ ಡೇಟಾ ವೋಚರ್ ಸೇರಿದಂತೆ ಕೆಲವೊಂದು ಸೌಲಭ್ಯಗಳನ್ನು ಕೊಟ್ಟು ಖುಷಿ ಪಡಿಸಿದ್ದ ಜಿಯೋ, ಇದೀಗ ಕಡಿಮೆ ಮೊತ್ತದ ರಿಚಾರ್ಜ್ ವೋಚರ್ ಮೇಲೆ ಬದಲಾವಣೆ ತಂದಿದ್ದು, ಇದರಿಂದ ಗ್ರಾಹಕರಿಗೆ ನಿರಾಸೆಯಾಗಲಿದೆ.
ಅತಿ ದೊಡ್ಡ ಬದಲಾವಣೆ ಆಗಿರುವುದು 19 ಮತ್ತು 29 ರೂಪಾಯಿಗಳ ಡೇಟಾ ವೋಚರ್‌ಗಳ ಮೇಲೆ. ಹೆಚ್ಚಿನ ರಿಲಯನ್ಸ್ ಜಿಯೋ ಗ್ರಾಹಕರು ತಮ್ಮ ಅಲ್ಪಾವಧಿಯ ಡೇಟಾ ಅಗತ್ಯಗಳಿಗಾಗಿ ಇದನ್ನು ರೀಚಾರ್ಜ್ ಮಾಡಿಸಿಕೊಳ್ಳುತ್ತಿದ್ದರು. ಕೆಲವು ತಿಂಗಳ ಹಿಂದಷ್ಟೇ 15 ರೂಪಾಯಿಗಳ ರೀಚಾರ್ಜ್ ಮೊತ್ತವನ್ನು 19ಕ್ಕೆ ಹಾಗೂ 25 ರೂಪಾಯಿಗಳ ಮೊತ್ತವನ್ನು 29ಕ್ಕೆ ಏರಿಸಲಾಗಿತ್ತು. ಆದರೆ ಇದೀಗ 19 ಮತ್ತು 29ರ ವೋಚರ್‌ನಲ್ಲಿ ಮತ್ತೆ ಬದಲಾವಣೆ ಮಾಡಲಾಗಿದೆ.
895 ರೂ.ಗೆ 336 ದಿನಗಳ ವ್ಯಾಲಿಡಿಟಿ, 24 ಜಿಬಿ ಡೇಟಾ: ಜಿಯೋದಿಂದ ಭರ್ಜರಿ ಆಫರ್: ಡಿಟೇಲ್ಸ್ ಇಲ್ಲಿದೆ...
ಅದೇನೆಂದರೆ, ಇಲ್ಲಿಯವರೆಗೆ, ರೂಪಾಯಿ 19ರ ಡೇಟಾ ರೀಚಾರ್ಜ್ ಮಾಡಿಕೊಂಡಿದ್ದರೆ, ಅದು ಬಳಕೆದಾರರ ಮೂಲ ಯೋಜನೆಯ ಅವಧಿಯವರೆಗೆ ಮಾನ್ಯವಾಗಿತ್ತು. ಅಂದರೆ, ಬಳಕೆದಾರರ ಮೂಲ ಯೋಜನೆಯು 70 ದಿನಗಳವರೆಗೆ ಮಾನ್ಯವಾಗಿದ್ದರೆ, ಈ 19 ರೂಪಾಯಿ ಡೇಟಾ ವೋಚರ್ ಸಹ 70 ದಿನಗಳವರೆಗೆ ಅಥವಾ ಡೇಟಾವನ್ನು ಸಂಪೂರ್ಣವಾಗಿ ಬಳಸುವವರೆಗೆ ಕಾರ್ಯನಿರ್ವಹಿಸುತ್ತಿತ್ತು. ಅದೇ ರೀತಿ 29 ರೂಪಾಯಿಗಳ ರೀಚಾರ್ಜ್ ಕೂಡ ಆಗಿತ್ತು. ಆದರೆ ಇದೀಗ ಇದರಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಇವೆರಡೂ ವೋಚರ್‌ಗಳ ಮೇಲಿನ ಡೇಟಾ ಕ್ರಮವಾರ ಒಂದು ಮತ್ತು ಎರಡು ದಿನಗಳಷ್ಟೇ ಮಾನ್ಯವಾಗಲಿದೆ!
ಇದರ ಅರ್ಥ, ನೀವು ಎಷ್ಟೇ ಮೂಲ ಬೆಲೆಯ ರೀಚಾರ್ಜ್ ಮಾಡಿಸಿಕೊಂಡಿದ್ದು, ಡೇಟಾ ಹೆಚ್ಚಿಗೆ ಬೇಕಾದರೆ 19 ರೂಪಾಯಿ ವೋಚರ್ ರೀಚಾರ್ಜ್ ಮಾಡಿಸಿಕೊಂಡರೆ ಇನ್ನು ಮುಂದೆ ಅದು ಒಂದು ದಿನ ಮಾತ್ರ ಬರಲಿದೆ, ಅದೇ ರೀತಿ 29 ರೂಪಾಯಿಗಳ ರೀಚಾರ್ಜ್ ಮಾಡಿಸಿಕೊಂಡರೆ ಡೇಟಾ ಎರಡು ದಿನಗಳವರೆಗೆ ಮಾತ್ರ ಬರಲಿದೆ. ಈ ಮೊದಲು ಮೂಲ ರೀಚಾರ್ಜ್ ಅವಧಿ ಇರುವವರೆಗೂ ಈ ಡೇಟಾ ಬಳಸಿಕೊಳ್ಳಬಹುದಿತ್ತು. ಅದನ್ನು ಈಗ ತೆಗೆಯಲಾಗಿದೆ. ನಿಮಗೆ ಹೆಚ್ಚು ಡೇಟಾ ಬೇಕು ಎಂದರೆ ಪುನಃ ರೀಚಾರ್ಜ್ ಮಾಡಿಸಿಕೊಳ್ಳಬೇಕಿದೆ. ಡೇಟಾ ಮತ್ತು ಬೆಲೆಯಲ್ಲಿ ವ್ಯತ್ಯಾಸ ಇರದಿದ್ದರೂ ವ್ಯಾಲಿಡಿಟಿಯಲ್ಲಿ ವ್ಯತ್ಯಾಸವಿದೆ. ಈ ಬದಲಾವಣೆ ಇಂದಿನಿಂದಲೇ ಅಂದರೆ ಡಿಸೆಂಬರ್ 27ರಿಂದ ಜಾರಿಗೆ ಬಂದಿದೆ.
ಇಂಗ್ಲೆಂಡ್, ಕೆನಡಾ, ಬ್ರೆಜಿಲ್ ದಾಖಲೆಗಳಿಗೆ ಬ್ರೇಕ್ ಹಾಕಿದ ಜಿಯೋ: ಕುತೂಹಲದ ಮಾಹಿತಿ ಇಲ್ಲಿದೆ...
