Asianet Suvarna News Asianet Suvarna News

ಕೇಂದ್ರ ಬಜೆಟ್: ಇನ್ಮುಂದೆ ಆಟಿಕೆ, ಪಾದರಕ್ಷೆ, ಫರ್ನಿಚರ್ ದುಬಾರಿ!

ಮೇಕ್‌ ಇನ್‌ ಇಂಡಿಯಾ ಉತ್ತೇಜಿಸಲು ವಿದೇಶಿ ಉತ್ಪನ್ನಕ್ಕೆ ಸೀಮಾ ಸುಂಕ ಹೆಚ್ಚಳ| ಅಗ್ಗದ ಮತ್ತು ಗುಣಮಟ್ಟದಲ್ಲಿರದ ವಸ್ತುಗಳ ಆಮದು| ಪಾದರಕ್ಷೆಗಳ ಮೇಲಿನ ಸೀಮಾ ಸುಂಕ ಶೇ.25ರಿಂದ 

Toy Footwear Furniture is Expensive for Union Budget Effect
Author
Bengaluru, First Published Feb 2, 2020, 10:50 AM IST

ನವದೆಹಲಿ(ಫೆ.02): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮೇಕ್‌ ಇನ್‌ ಇಂಡಿಯಾ ಯೋಜನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮತ್ತು ಸ್ಥಳೀಯ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಉತ್ಪನ್ನಗಳ ಸೀಮಾ ಸುಂಕವನ್ನು ಏರಿಸಲು ಸರ್ಕಾರ ನಿರ್ಧರಿಸಿದೆ. 

ಕಿರು, ಸಣ್ಣ ಮತ್ತು ಮದ್ಯಮ ವಲಯದಲ್ಲಿ ಕಾರ್ಮಿಕ ಆಧರಿತ ವಿಭಾಗವು ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಗ್ಗದ ಮತ್ತು ಗುಣಮಟ್ಟದಲ್ಲಿರದ ವಸ್ತುಗಳ ಆಮದು, ಈ ವಲಯಗಳ ಬೆಳವಣಿಗೆಗೆ ಮಾರಕವಾಗಿದೆ. ಹೀಗಾಗಿ ಕೆಲ ವಸ್ತುಗಳ ಮೇಲಿನ ಸೀಮಾ ಸುಂಕ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಕೇಂದ್ರ ಬಜೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

2017-18 ಮತ್ತು 2018-19ನೇ ಸಾಲಿನಲ್ಲಿ ಚೀನಾ ಮತ್ತು ಹಾಂಗ್‌ಕಾಂಗ್‌ನಿಂದ ಕ್ರಮವಾಗಿ 2015 ಕೋಟಿ ರು. ಮತ್ತು 2160 ಕೋಟಿ ರು. ಮೌಲ್ಯದ ಆಟಿಕೆ ಸಾಮಾನುಗಳು ಆಮದಾಗಿದ್ದವು.
ಪಾದರಕ್ಷೆಗಳ ಮೇಲಿನ ಸೀಮಾ ಸುಂಕವನ್ನು ಶೇ.25ರಿಂದ ಶೇ.35ಕ್ಕೆ, ಪಾದರಕ್ಷೆಯಲ್ಲಿ ಬಳಸುವ ವಸ್ತುಗಳ ಮೇಲಿನ ಸೀಮಾ ಸುಂಕವನ್ನು ಶೇ.15ರಿಂದ ಶೇ.20ಕ್ಕೆ ಹೆಚ್ಚಿಸಲಾಗಿದೆ.

ಇನ್ನು ಮೂರು ಚಕ್ರದ ಸೈಕಲ್‌, ಆಟಿಕೆಗಳು, ಗೊಂಬೆಗಳು, ಎಲ್ಲಾ ರೀತಿಯ ಪಜಲ್ಸ್‌ಗಳ ಮೇಲಿನ ಸೀಮಾ ಸುಂಕವನ್ನು ಪ್ರಸಕ್ತ ಇರುವ ಶೇ.20ರಿಂದ ಶೇ.60ಕ್ಕೆ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ.
ಇನ್ನು ಪೀಠೋಪಕರಣ ವಲಯದಲ್ಲಿ ಸೀಟ್‌, ಹಾಸಿಗೆಗೆ ಬಳಸುವ ವಸ್ತುಗಳು, ದೀಪ, ಲೈಟಿಂಗ್ಸ್‌ ಫಿಟ್ಟಿಂಗ್ಸ್‌ಗಳ ಮೇಲಿನ ಸೀಮಾ ಸುಂಕವನ್ನು ಶೇ.20ರಿಂದ ಶೇ.25ಕ್ಕೆ ಹೆಚ್ಚಳ ಮಾಡಲಾಗಿದೆ.

ವಾಲ್‌ ಫ್ಯಾನ್‌ಗಳ ಸೀಮಾ ಸುಂಕವನ್ನು ಶೆ.7.5ರಿಂದ ಶೇ.20ಕ್ಕೆ, ಚೀನಾ ಸೆರಾಮಿಕ್‌ನಿಂದ ತಯಾರಿಸಿದ ಟೇಬಲ್‌ವೇರ್‌, ಕಿಚನ್‌ವೇರ್‌ಗಳ ಮೇಲಿನ ಸೀಮಾ ಸುಂಕವನ್ನು ಶೇ.20ಕ್ಕೆ, ವಾಣಿಜ್ಯ ವಾಹನಗಳಲ್ಲಿ ಬಳಸುವ ಕ್ಯಾಟಲಿಕ್ಟ್ ಕನ್‌ವರ್ಟರ್‌ಗಳ ಸುಂಕ ಹೆಚ್ಚಿಸಲಾಗಿದೆ.
 

Follow Us:
Download App:
  • android
  • ios