Top IPOs in 2023: ಈ ವರ್ಷ ಹೂಡಿಕೆದಾರರಿಗೆ ಅದೃಷ್ಟದ ಬಾಗಿಲು ತೆರೆದ ಐಪಿಒ ಯಾವುದು ಗೊತ್ತಾ?
2023ನೇ ಸಾಲಿನಲ್ಲಿ ಒಟ್ಟು 120 ಆರಂಭಿಕ ಷೇರು ಮಾರಾಟ (ಐಪಿಒ) ನಡೆದಿದೆ. ಒಟ್ಟು ಐಪಿಒಗಳಲ್ಲಿ ವಿತರಣೆ ಬೆಲೆಯ ಆಧಾರದಲ್ಲಿ ನೋಡಿದರೆ102 ಪ್ರಸ್ತುತ ಗಳಿಕೆಯಲ್ಲಿವೆ. ಇನ್ನು ವಿತರಣೆ ಬೆಲೆಗೆ ಹೋಲಿಸಿದರೆ 17 ನಷ್ಟದಲ್ಲಿವೆ.
Business Desk: 2024ನೇ ಸಾಲಿನ ಸ್ವಾಗತಕ್ಕೆ ನಾವೀಗ ಹೊಸ್ತಿಲಿನಲ್ಲಿ ನಿಂತಿದ್ದೇವೆ. ಹೀಗಿರುವಾಗ ಷೇರು ಮಾರುಕಟ್ಟೆಯಲ್ಲಿ ಈ ವರ್ಷ ನಡೆದ ವಿದ್ಯಮಾನಗಳ ಬಗ್ಗೆ ಒಂದು ಅವಲೋಕನ ಮಾಡೋದು ಉತ್ತಮ. ಅದರಲ್ಲೂ ಈ ವರ್ಷದ ಆರಂಭಿಕ ಷೇರು ಮಾರಾಟದ (ಐಪಿಒ) ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಇದು ಈ ಹಿಂದೆ ಷೇರು ಮಾರುಕಟ್ಟೆಯಲ್ಲಿ ನೀವು ಹೂಡಿಕೆ ಮಾಡುವಾಗ ಮಾಡಿದ ತಪ್ಪುಗಳನ್ನು ತಿಳಿದುಕೊಳ್ಳಲು ಹಾಗೂ ಮುಂದೆ ಯಾವ ಷೇರಿನಲ್ಲಿ ಹೂಡಿಕೆ ಮಾಡೋದು ಸೂಕ್ತ ಎಂಬುದನ್ನು ತಿಳಿಯಲು ನೆರವು ನೀಡುತ್ತದೆ. 2023ನೇ ಸಾಲಿನಲ್ಲಿ ಒಟ್ಟು 120 ಆರಂಭಿಕ ಷೇರು ಮಾರಾಟ (ಐಪಿಒ)ನಡೆದಿದೆ. ಇದರಲ್ಲಿ 61 ಎಸ್ ಎಂಇ ಐಪಿಒ ಕೂಡ ಸೇರಿದೆ. 2022ನೇ ಸಾಲಿಗೆ ಹೋಲಿಸಿದರೆ ಈ ವರ್ಷ ಅತ್ಯಧಿಕ ಪ್ರಮಾಣದಲ್ಲಿ ಐಪಿಒ ನಡೆದಿದೆ. 2022ನೇ ಸಾಲಿನಲ್ಲಿ 90 ಐಪಿಒಗಳು ನಡೆದಿವೆ.
2023ನೇ ಸಾಲಿನಲ್ಲಿ ನಡೆದ 120 ಐಪಿಒಗಳಲ್ಲಿ 95 ದಾಖಲೆಯ ಲಿಸ್ಟಿಂಗ್ ಗಳಿಕೆ ಮಾಡಿದೆ. ಇನ್ನು 24 ಲಿಸ್ಟಿಂಗ್ ದಿನಾಂಕದಂದು ನಷ್ಟ ತೋರಿಸಿವೆ. ಇನ್ನು ಒಂದು ಐಪಿಒ ಇನ್ನಷ್ಟೇ ಲಿಸ್ಟ್ ಆಗಬೇಕಿದೆ. ಈ ವರ್ಷ ನಡೆದ ಒಟ್ಟು ಐಪಿಒಗಳಲ್ಲಿ ವಿತರಣೆ ಬೆಲೆಯ ಆಧಾರದಲ್ಲಿ ನೋಡಿದರೆ102 ಪ್ರಸ್ತುತ ಗಳಿಕೆಯಲ್ಲಿವೆ. ಇನ್ನು ವಿತರಣೆ ಬೆಲೆಗೆ ಹೋಲಿಸಿದರೆ 17 ನಷ್ಟದಲ್ಲಿವೆ.
Stock Market Holidays:2024ನೇ ಸಾಲಿನಲ್ಲಿ ಷೇರು ಮಾರುಕಟ್ಟೆ 14 ದಿನ ಬಂದ್; BSE, NSE ರಜಾಪಟ್ಟಿ ಹೀಗಿದೆ
2023ನೇ ಸಾಲಿನ ಟಾಪ್ ಐಪಿಒಗಳು
ಲಿಸ್ಟಿಂಗ್ ಗಳಿಕೆ ಆಧಾರದಲ್ಲಿ 2023ನೇ ಸಾಲಿನ ಟಾಪ್ ಐಪಿಒಗಳು ಹೀಗಿವೆ:
ಗೋಯಲ್ ಸಾಲ್ಟ್: ಈ ಐಪಿಒ 267 ಪಟ್ಟು ಚಂದಾದಾರಿಕೆ ಪಡೆದಿದೆ. ಇದನ್ನು ಅಕ್ಟೋಬರ್ 11ರಂದು ಲಿಸ್ಟೆಡ್ ಮಾಡಲಾಗಿದೆ. ಈ ಐಪಿಒ ಶೇ.258.2ರಷ್ಟು ಲಿಸ್ಟಿಂಗ್ ಗಳಿಕೆ ಪಡೆದಿದೆ.
ಸನ್ ಗಾರ್ನರ್ ಎನರ್ಜೀಸ್ : ಈ ಐಪಿಒ 138.2ಕ್ಕಿಂತಲೂ ಅಧಿಕ ಬಾರಿ ಚಂದಾದಾರಿಕೆಯಾಗಿದೆ. ಇದು ಆಗಸ್ಟ್ 31ರಂದು ಲಿಸ್ಟಿಂಗ್ ಆಗಿತ್ತು. ಈ ಐಪಿಒ ಶೇ.216.1ರಷ್ಟು ಲಿಸ್ಟಿಂಗ್ ಗಳಿಕೆ ದಾಖಲಿಸಿದೆ.
ಬೇಸಿಲಿಕ್ ಫ್ಲೈ ಸ್ಟುಡಿಯೋ: ಈ ಐಪಿಒ 286.6 ಬಾರಿ ಚಂದಾದಾರಿಕೆಗೆ ಒಳಪಟ್ಟಿದೆ. ಇದು ಸೆಪ್ಟೆಂಬರ್ 11ರಂದು ಲಿಸ್ಟಿಂಗ್ ಆಗಿದೆ. ಈ ಐಪಿಒ ಶೇ.193.3ರಷ್ಟು ಲಿಸ್ಟಿಂಗ್ ಗಳಿಕೆ ದಾಖಲಿಸಿದೆ.
ಟ್ರಿಡೆಂಟ್ ಟೆಕ್ ಲ್ಯಾಬ್ಸ್ : ಈ ಐಪಿಒ 502.6 ಬಾರಿ ಚಂದಾದಾರಿಕೆ ಪಡೆದಿದೆ. ಡಿಸೆಂಬರ್ 29ರಂದು ಈ ಐಪಿಒ ಲಿಸ್ಟಿಂಗ್ ಆಗಿದೆ. ಇನ್ನು ಈ ಐಪಿಒ ಶೇ.180.4ರಷ್ಟು ಲಿಸ್ಟಿಂಗ್ ಗಳಿಕೆ ದಾಖಲಿಸಿದೆ.
ಒರಿಯಾನ ಪವರ್ : ಈ ಐಪಿಒ 117.4 ಬಾರಿ ಚಂದಾದಾರಿಕೆ ಪಡೆದಿದೆ. ಇದನ್ನು ಆಗಸ್ಟ್ 11ರಂದು ಲಿಸ್ಟಿಂಗ್ ಮಾಡಲಾಗಿದೆ. ಇನ್ನು ಈ ಐಪಿಒ ಶೇ.168.7 ರಷ್ಟು ಲಿಸ್ಟಿಂಗ್ ಗಳಿಕೆ ದಾಖಲಿಸಿದೆ.
ಅನ್ಲೋನ್ ಟೆಕ್ನಾಲಜೀಸ್ ಸಲ್ಯೂಷನ್ಸ್ : ಈ ಐಪಿಒ 428.5 ಬಾರಿ ಚಂದಾದಾರಿಕೆ ಪಡೆದಿದೆ. ಇದು ಜನವರಿ 23ರಂದು ಲಿಸ್ಟೆಡ್ ಆಗಿತ್ತು. ಇನ್ನು ಈ ಐಪಿಒ ಶೇ.163.7 ರಷ್ಟು ಲಿಸ್ಟಿಂಗ್ ಗಳಿಕೆ ದಾಖಲಿಸಿದೆ.
ಟಾಟಾ ಟೆಕ್ನಾಲಜೀಸ್ : ಈ ಐಪಿಒ 69.4 ಬಾರಿ ಚಂದಾದಾರಿಕೆ ಪಡೆದಿದೆ. ಇದು ನವೆಂಬರ್ 30ರಂದು ಲಿಸ್ಟ್ ಆಗಿದೆ. ಇನ್ನು ಈ ಐಪಿಒ ಶೇ.162.6 ರಷ್ಟು ಲಿಸ್ಟಿಂಗ್ ಗಳಿಕೆ ದಾಖಲಿಸಿದೆ.
ಹಣ ಬಿತ್ತಿ, ಹಣ ಬೆಳೆದ ಷೇರು ಮಾರ್ಕೆಟ್ ರೈತರು.. 2023ರಲ್ಲಿ 82 ಲಕ್ಷ ಕೋಟಿ ಶ್ರೀಮಂತರಾದ ಹೂಡಿಕೆದಾರರು!
ಸಿಪಿಎಸ್ ಶೇಪರ್ಸ್: ಈ ಐಪಿಒ 236.7 ಬಾರಿ ಚಂದಾದಾರಿಕೆಗೆ ಒಳಪಟ್ಟಿದೆ. ಇದು ಸೆಪ್ಟೆಂಬರ್ 7ರಂದು ಲಿಸ್ಟೆಡ್ ಆಗಿದೆ. ಇನ್ನು ಈ ಐಪಿಒ ಶೇ.155.4ರಷ್ಟು ಲಿಸ್ಟಿಂಗ್ ಗಳಿಕೆ ದಾಖಲಿಸಿದೆ.
ಶ್ರೀವರಿ ಸ್ಪೈಸಸ್ ಹಾಗೂ ಫುಡ್ಸ್ : ಈ ಐಪಿಒ 418.4 ಬಾರಿ ಚಂದಾದಾರಿಕೆಗೆ ಒಳಪಟ್ಟಿದೆ. ಇನ್ನು ಆಗಸ್ಟ್ 18ರಂದು ಲಿಸ್ಟಿಂಗ್ ಆಗಿದೆ. ಇನ್ನು ಈ ಐಪಿಒ ಶೇ.153.7 ರಷ್ಟು ಲಿಸ್ಟಿಂಗ್ ಗಳಿಕೆ ದಾಖಲಿಸಿದೆ.
ಇನ್ಫೋಲಿಯೋನ್ ರಿಸರ್ಚ್ ಸರ್ವೀಸ್: ಈ ಐಪಿಒ 259.1 ಬಾರಿ ಚಂದಾದಾರಿಕೆಗೊಳಪಟ್ಟಿಎ. ಇದು ಜೂನ್ 8ರಂದು ಲಿಸ್ಟೆಡ್ ಆಗಿದೆ. ಇನ್ನು ಈ ಐಪಿಒ ಶೇ.142.1 ರಷ್ಟು ಲಿಸ್ಟಿಂಗ್ ಗಳಿಕೆ ದಾಖಲಿಸಿದೆ.