Asianet Suvarna News Asianet Suvarna News

ಬಂಗಾರದ ದರದಲ್ಲಿ ತುಸು ಏರಿಕೆ: ಹೇಗಿದೆ ಬೆಳ್ಳಿ ದರ

ಚಿನ್ನ ಖರೀದಿಸುವವರಿಗೆ ಇದು ಸ್ವಲ್ಪ ಬೇಜಾರಿನ ವಿಷಯ ಇದು, ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದ್ದು, ಆಭರಣ ಕೊಳ್ಳುವವರನ್ನು ಚಿಂತಿಗೀಡು ಮಾಡುತ್ತಿದೆ.

Today silver and gold rate august 24 akb
Author
Mumbai, First Published Aug 24, 2022, 10:44 AM IST

ಚಿನ್ನ ಖರೀದಿಸುವವರಿಗೆ ಇದು ಸ್ವಲ್ಪ ಬೇಜಾರಿನ ವಿಷಯ ಇದು, ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದ್ದು, ಆಭರಣ ಕೊಳ್ಳುವವರನ್ನು ಚಿಂತಿಗೀಡು ಮಾಡುತ್ತಿದೆ. ಚಿನ್ನವೂ ಹೂಡಿಕೆದಾರರ ಮೆಚ್ಚಿನ ಹೂಡಿಕೆ ವಸ್ತುವಾಗಿದ್ದು, ಹೀಗಾಗಿ ಚಿನ್ನಾಭರಣದ ದರದಲ್ಲಿ ಸದಾ ಏರಿಳಿತ ಉಂಟಾಗುತ್ತಿದೆ. ಹಾಗಾದ್ರೆ ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ..? ದೇಶದ ಪ್ರಮುಖ ನಗರಗಳಲ್ಲಿ ದರ ಹೇಗಿದೆ..? ಇಲ್ಲಿದೆ ವಿವರ.

ಒಂದು ಗ್ರಾಂ (1GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,725
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,155

ಎಂಟು ಗ್ರಾಂ (8GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 37,800
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,240

ಹತ್ತು ಗ್ರಾಂ (10GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 47,250
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 51,550

ನೂರು ಗ್ರಾಂ (100GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ.  4,72, 500
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,15, 500


ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,300 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 48,050, ರೂ. 47,250, ರೂ. 47,250 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,400 ರೂ. ಆಗಿದೆ.

ಇಂದಿನ ಬೆಳ್ಳಿ ದರ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.

ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್
ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 609, ರೂ. 6,090 ಹಾಗೂ ರೂ. 60,900 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 60,900 ಆಗಿದ್ದರೆ, ದೆಹಲಿಯಲ್ಲಿ 55,000, ಮುಂಬೈನಲ್ಲಿ 55,000 ಹಾಗೂ ಕೋಲ್ಕತ್ತದಲ್ಲೂ ರೂ. 55,0000 ಗಳಾಗಿದೆ.

Follow Us:
Download App:
  • android
  • ios