ಚೆನ್ನೈ: ಆವಿನ್ ಎಂದೇ ಪ್ರಸಿದ್ಧವಾದ ತಮಿಳುನಾಡು ಹಾಲು ಉತ್ಪಾದಕರ ಸಂಘವಿನ್ನು ಪ್ರತಿಷ್ಠಿತ ತಿರುಮಲ ತಿರುಪತಿ ದೇವಸ್ಥಾನಮ್‌ಗೆ ಲಡ್ಡು ತಯಾರಿಸಲು ತುಪ್ಪ ಒದಗಿಸಲಿದೆ.

15 ವರ್ಷಗಳ ನಂತರ ಟಿಟಿಡಿಯೊಂದಿಗೆ ಆವಿನ್ ಒಪ್ಪಂದ ಮಾಡಿಕೊಂಡಿದ್ದು, ಸುಮಾರು 23 ಕೋಟಿ ರೂ. ಮೌಲ್ಯದ 7,24,000 ಕೆಜಿ ತುಪ್ಪವನ್ನು ಆವಿನ್ ಒದಗಿಸಲಿದೆ. ದರ ಹಾಗೂ ತುಪ್ಪದ ಗುಣಮಟ್ಟದ ಆಧಾರದ ಮೇಲೆ ಈ ಕಾಂಟ್ರ್ಯಾಕ್ಟ್ ಆವಿನ್‌ಗೆ ಸಿಕ್ಕಿದೆ. 

ತಿರುಪತಿ 3 ವಜ್ರ ಖಚಿತ ಕಿರೀಟ ಕಳವು

ರಾಜ್ಯದೆಲ್ಲೆಡೆಯಿಂದ ಆವಿನ್ ದಿನಕ್ಕೆ ಸುಮಾರ್ 32 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದ್ದು, ಇದರಲ್ಲಿ 23.7 ಲೀ. ಮಾರುತ್ತದೆ. ಉಳಿದದ್ದರಲ್ಲಿ ಹಲವು ಹಾಲಿನ ಉತ್ಪನ್ನಗಳನ್ನು ತಯಾರಿಸುತ್ತದೆ. ಅಲ್ಲದೇ ವಿವಿಧ ಟೆಂಡರ್‌ಗಳಲ್ಲಿ ಭಾಗವಹಿಸುತ್ತಿದ್ದು, ಹಲವೆಡೆಗೆ ಬೆಣ್ಣೆ, ಹಾಲಿನ ಪುಡಿ ಸೇರಿ ವಿವಿಧ ಉತ್ಪನ್ನಗಳನ್ನು ಪೂರೈಸುತ್ತದೆ. ಅಲ್ಲದೇ ವಿಶೇಷ ಹಾಲು ಹಾಗೂ ತುಪ್ಪವನ್ನು ಸಿಂಗಾಪುರ, ಹಾಂಗ್‌ಕಾಂಗ್ ಖತಾರ್ ಸೇರಿ ಹಲವು ದೇಶಗಳಿಗೂ ರಫ್ತು ಮಾಡುತ್ತಿದೆ.

ತಿರುಪತಿಗೆ ತೆರಳುವ ಭಕ್ತರಿಗೊಂದು ಗುಡ್ ನ್ಯೂಸ್

2015ರವರೆಗೂ ಹಲವು ವರ್ಷಗಳ ಕಾಲ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ ತಿರುಪತಿಗೆ ತುಪ್ಪವನ್ನು ಪೂರೈಸುತ್ತಿತ್ತು. ನಂತರ ಮಹಾರಾಷ್ಟ್ರ ಮೂಲದ ಡೈರಿವೊಂದರಿಂದ ತುಪ್ಪ ಪೂರೈಕೆಯಾಗುತ್ತಿತ್ತು. 

ಅಮರಾವತಿಯಲ್ಲಿ ಮತ್ತೊಂದು ತಿರುಪತಿ