ತಿರುಪತಿ[ಫೆ.01]: ರಾಜ್ಯ ವಿಭಜನೆ ಬಳಿಕ ತಿರುಪತಿ ತಿರುಮಲ ದೇಗುಲ ನೂತನ ತೆಲಂಗಾಣ ರಾಜ್ಯದ ಪಾಲಾದ ಹಿನ್ನೆಲೆಯಲ್ಲಿ, ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು, ಇದೀಗ ತಮ್ಮ ರಾಜ್ಯದ ರಾಜಧಾನಿ ಅಮರಾವತಿಯಲ್ಲಿ ತಿರುಪತಿ ದೇಗುಲದ ಪ್ರತಿರೂಪಿ ದೇಗುಲ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ದೇಗುಲಕ್ಕೆ ಭೂಮಿ ಪೂಜೆ ಕಾರ್ಯಕ್ರಮವನ್ನು ಗುರುವಾರ ನೆರವೇರಿಸಲಾಗಿದೆ.

ಸುಮಾರು 25 ಎಕರೆ ಪ್ರದೇಶದಲ್ಲಿ 150 ಕೋಟಿ ರು. ವೆಚ್ಚದಲ್ಲಿ ದೇಗುಲ ಮತ್ತು ದೇಗುಲ ಸಂಕೀರ್ಣದಲ್ಲಿ ಇತರೆ ಕಟ್ಟಡಗಳನ್ನು ನಿರ್ಮಿಸಲು ಸರ್ಕಾರ ಉದ್ದೇಶಿಸಲಾಗಿದೆ. ಫೆ.10ರಂದು ಅಡಿಗಲ್ಲಿಟ್ಟು ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಮುಂದಿನ ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ದೇವಾಲಯಕ್ಕೆ ಸರ್ಕಾರ ಯಾವುದೇ ಶುಲ್ಕವಿಲ್ಲದೇ ಭೂಮಿಯನ್ನು ದೇಣಿಗೆ ನೀಡಿದೆ. ದೇವಾಲಯ ರಾಜಗೋಪುರ, ಹನುಮಂತನ ಗುಡಿಯನ್ನೂ ಒಳಗೊಂಡಿರುತ್ತದೆ ಎಂದು ತಿಳಿಸಿದರು.

ದೇಗುಲವನ್ನು ಸಂಪೂರ್ಣವಾಗಿ ಆಗಮ ಮತ್ತು ವಾಸ್ತುಶಾಸ್ತ್ರದ ಅನ್ವಯವೇ ನಿರ್ಮಿಸಲಾಗುವುದು. ತಿರುಪತಿ ದೇಗುಲದ ನೇತೃತ್ವದಲ್ಲೇ ದೇಗುಲದ ವಿನ್ಯಾಸವನ್ನು ಸಿದ್ಧಗೊಳಿಸಲಾಗಿದೆ. ದೇಗುಲವು ಚೋಳ, ಪಲ್ಲವ, ಚಾಲುಕ್ಯ, ವಿಜಯನಗರ ಕಾಲದ ಶಿಲ್ಪಕಲೆಯನ್ನು ಒಳಗೊಂಡಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.