Asianet Suvarna News Asianet Suvarna News

ಕ್ರೆಡಿಟ್ ಕಾರ್ಡ್ ಬಳಸ್ತೀರಾ?: ಈ 10 ಅಂಶ ನೆನಪಿನಲ್ಲಿಡಿ!

ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದೆಯಾ?! ಕ್ರೆಡಿಟ್ ಕಾರ್ಡ್ ಬಳಕೆ ಹೇಗೆಂದು ನಿಮಗೆ ಗೊತ್ತಾ?! ಕ್ರೆಡಿಟ್ ಕಾರ್ಡ್ ಸರಿಯಾದ ಬಳಕೆಗೆ ಇಲ್ಲಿವೆ ಟಿಪ್ಸ್! ನಿಗದಿತ ದಿನಾಂಕದೊಳಗೆ ಬಿಲ್ ಪಾವತಿಸಿ! ಕ್ರೆಡಿಟ್ ಕಾರ್ಡಿನಿಂದ ನಗದು ವಿತ್’ಡ್ರಾ ಮಾಡಬೇಡಿ! ರಿವಾರ್ಡ್ ಪಾಯಿಂಟ್’ನ್ನು ಸದ್ಬಳಕೆ ಮಾಡಿಕೊಳ್ಳಿ
 

Tips to smart use of credit card
Author
Bengaluru, First Published Oct 9, 2018, 8:56 PM IST
  • Facebook
  • Twitter
  • Whatsapp

ಬೆಂಗಳೂರು(ಅ.9): ಕ್ರೆಡಿಟ್ ಕಾರ್ಡ್ ಹೊಂದಿರುವುದು ಇಂದಿನ ದಿನಗಳಲ್ಲಿ ಸಾಮಾನ್ಯ. ವೇತನಕ್ಕೆ ತಕ್ಕಂತೆ ಕ್ರೆಡಿಟ್ ಕಾರ್ಡ್ ಹೊಂದುವುದು ಇಂದಿನ ತುರ್ತು ಅಗತ್ಯ ಕೂಡ ಹೌದು. ಆದರೆ ಕ್ರೆಡಿಟ್ ಕಾರ್ಡ್ ನ ಸರಿಯಾದ ಬಳಕೆ ನಿಮ್ಮ ಜೇಬಿನ ಹಣ ಉಳಿಸಬಲ್ಲದು. ಹಾಗಾದರೆ ಕ್ರೆಡಿಟ್ ಕಾರ್ಡ್ ಬಳಸುವ ವೇಳೆ ಗಮನದಲ್ಲಿಡಬೇಕಾದ 10 ಪ್ರಮುಖ ಅಂಶಗಳ ಪಟ್ಟಿ ಇಲ್ಲಿದೆ.   


ನಿಗದಿತ ದಿನಾಂಕದೊಳಗೆ ಬಿಲ್ ಪಾವತಿಸಿ:

ಬಾಕಿಯಿರುವ ಮೊತ್ತವನ್ನು ನಿಗದಿತ ದಿನಾಂಕದೊಳಗೆ ಪಾವತಿಸದಿದ್ದಲ್ಲಿ ಗ್ರಾಹಕರು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ವಿಳಂಬವಾದಲ್ಲಿ ಬಳಕೆದಾರರಿಗೆ ಶೇ. 24 ರಿಂದ ಶೇ. 48 (ವಾರ್ಷಿಕ)  ಬಡ್ಡಿದರವನ್ನು ವಿಧಿಸಲಾಗುತ್ತದೆ.  ಪ್ರತಿ ತಿಂಗಳು ಬಿಲ್’ನ ಕನಿಷ್ಠ ಮೊತ್ತವನ್ನು ಪಾವತಿಸಲು ವಿಫಲರಾದರೆ CBIL ಸ್ಕೋರ್ ಮೇಲೆ ಅದು ವ್ಯತಿರಿಕ್ತ ಪರಿಣಾಮ ಬೀರುವುದು.  ಆದುದರಿಂದ ನಿಗದಿತ ಸಮಯದೊಳಗೆ ನಿಮ್ಮ ಬಿಲ್ ಪಾವತಿ ಮಾಡುವುದು ಬಹಳ ಮುಖ್ಯವಾಗಿದೆ.  ಆ ಮೂಲಕ ನೀವು ದಂಡ ಹಾಗೂ ಬಡ್ಡಿಯನ್ನು ಪಾವತಿಸುವುದನ್ನು ತಪ್ಪಿಸಬಹುದು. ಅದಕ್ಕಾಗಿ ನೀವು ಫೋನ್’ನಲ್ಲಿ ರಿಮೈಂಡರ್ ಇಟ್ಟುಕೊಳ್ಳಬಹುದು,  ಅಥವಾ  ಆನ್’ಲೈನ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಟೋ ಡೆಬಿಟ್ ಇನ್ಸ್ಟ್ರಕ್ಷನ್ ಮೂಲಕ ಪಾವತಿಸುವ ಆಯ್ಕೆಮಾಡಿಕೊಳ್ಳಬಹುದು.

ಕ್ರೆಡಿಟ್ ಕಾರ್ಡ್ ಬಳಕೆಯ ಪ್ರಮಾಣ ಕಡಿಮೆಯಾಗಿರಲಿ:

ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆ ಅನುಪಾತವು ( Credit Card Utilization Ratio ) ಆದಷ್ಟು ಕಡಿಮೆಯಾಗಿರಲಿ. ಸಾಲದ ಪೂರ್ಣ ಮಿತಿಯನ್ನು ಬಳಸಿಕೊಳ್ಳುವುದರಿಂದ ಸಮಸ್ಯೆ ಎದುರಿಸಬೇಕಾದಿತು. ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆ ಪ್ರಮಾಣ ಹೆಚ್ಚಾಗಿದ್ದಲ್ಲಿ ಬ್ಯಾಂಕುಗಳು/ ಕ್ರೆಡಿಟ್ ಕಾರ್ಡ್ ಕಂಪನಿಗಳು ನಿಮ್ಮನ್ನು ಸಾಲಗಾರರ ಪಟ್ಟಿಯಲ್ಲಿ  ಗುರತಿಸಬಹುದು. ಸಾಲದ ಗರಿಷ್ಠ ಮಿತಿಗೆ ಹೋಲಿಸಿದಾಗ ನಿಮ್ಮ ಬಳಕೆಯ ಪ್ರಮಾಣ ಶೇ. 40 ರಷ್ಟು ಇದ್ದರೆ ಚೆನ್ನ.

ಕ್ರೆಡಿಟ್ ಕಾರ್ಡಿನಿಂದ ನಗದು ವಿತ್’ಡ್ರಾ ಮಾಡಬೇಡಿ:

ಕ್ರೆಡಿಟ್ ಕಾರ್ಡ್’ನಲ್ಲಿ ನಗದನ್ನು ವಿತ್’ಡ್ರಾ ಮಾಡುವ ಆಯ್ಕೆಯೂ ಇರುತ್ತದೆ. ಆದರೆ ಅದಕ್ಕೆ ಬಡ್ಡಿ-ರಹಿತ ಅವಧಿ ಅನ್ವಯವಾಗುವುದಿಲ್ಲ. ಹಣ ವಿತ್’ಡ್ರಾ ಮಾಡಿದ ದಿನದಿಂದಲೇ ಅದರ ಮೇಲೆ ಶೇ.24 ರಿಂದ ಶೇ. 48 (ವಾರ್ಷಿಕ) ಬಡ್ಡಿ ಬೀಳುವುದು ಆರಂಭಾಗುತ್ತದೆ.  ನಗದು ಹಣಕ್ಕಾಗಿ ಡೆಬಿಟ್ ಕಾರ್ಡ್ ಮೇಲೆಯೇ ಅವಲಂಬಿತರಾಗಿರುವುದು ಹೆಚ್ಚು ಸೂಕ್ತ. 

ಬಡ್ಡಿರಹಿತ ಅವಧಿಯ ಸದುಪಯೋಗ:

ಕ್ರೆಡಿಟ್ ಕಾರ್ಡ್’ಗಳ ಸುಲಭ ಲಭ್ಯತೆಯು ಸಾಮಾನ್ಯವಾಗಿ ಕೊಳ್ಳುಬಾಕತನಕ್ಕೆ ದಾರಿ ಮಾಡಿಕೊಡುತ್ತದೆ. ನೆನಪಿಡಿ, ಕ್ರೆಡಿಟ್ ಕಾರ್ಡ್ ಸಾಲ ಮಾಡುವ ಸಾಧನವಲ್ಲ. ಸಾಲದ ಅಗತ್ಯವಿದ್ದರೆ ಮೊದಲು ವೈಯುಕ್ತಿಕ ಅಥವಾ ಸುರಕ್ಷಿತ ಸಾಲಗಳಂತಹ ಪರ್ಯಾಯ ಆಯ್ಕೆಗಳನ್ನು ಪ್ರಯತ್ನಿಸಿ. ಅವುಗಳ ಬಡ್ಡಿದರವು ಕ್ರೆಡಿಟ್ ಕಾರ್ಡ್’ಗಳ ಬಡ್ಡಿದರಕ್ಕಿಂತ ಕಡಿಮೆಯಿರುತ್ತದೆ.

ರಿವಾರ್ಡ್ ಪಾಯಿಂಟ್’ನ್ನು ಸದ್ಬಳಕೆ ಮಾಡಿಕೊಳ್ಳಿ:

ಕ್ರೆಡಿಟ್ ಕಾರ್ಡ್’ಗಳೊಂದಿಗೆ ರಿಯಾಯಿತಿಗಳು, ರಿವಾರ್ಡ್’ಗಳು ಹಾಗೂ ನಗದು ವಾಪಾಸು ಮುಂತಾದ ಆಫರ್’ಗಳು ಸಿಗುತ್ತವೆ.  ಅಂತಹ ಆಫರ್’ಗಳ ಮೇಲೆ ಕಣ್ಣಿಡಿ ಹಾಗೂ ಬಳಸಿಕೊಳ್ಳಿ. ಅದರಲ್ಲಿ ಸಿಗುವ ರಿವಾರ್ಡ್ ಪಾಯಿಂಟ್’ಗಳನ್ನು ಪಡೆಯಿರಿ.

ಕ್ರೆಡಿಟ್ ಕಾರ್ಡ್ ಮತ್ತು ವ್ಯಾಲೆಟ್ ಸಮೀಕರಣ:

ಕೆಲವು ಇ-ವ್ಯಾಲೆಟ್ ಕಂಪನಿಗಳು ಹಾಗೂ  ಕ್ರೆಡಿಟ್ ಕಾರ್ಡ್ ಕಂಪನಿಗಳು ಒಪ್ಪಂದವನ್ನು ಮಾಡಿಕೊಂಡಿದ್ದು, ಮೊಬೈಲ್ ಇ-ವ್ಯಾಲೆಟ್’ಗೆ ಹಣ ವರ್ಗಾವಣೆ ಮೇಲೆ ಬಡ್ಡಿ-ರಹಿತ ಅವಧಿಯ ಸೌಲಭ್ಯವನ್ನು ಒದಗಿಸುತ್ತಿವೆ.  ಕ್ರೆಡಿಟ್ ಕಾರ್ಡ್ ಹಾಗೂ ಇ-ವ್ಯಾಲೆಟ್’ಗಳ  ಸೌಲಭ್ಯವನ್ನು ಬಳಸಿ ಹಣ ಉಳಿತಾಯ ಮಾಡಬಹುದು.

ಬೇರೆ ಬೇರೆ ಕ್ರೆಡಿಟ್ ಕಾರ್ಡ್’ಗಳನ್ನು ಸರತಿಯಲ್ಲಿ (ರೊಟೇಶನ್) ಬಳಸಿ:

ನೀವು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ಗಳನ್ನು ಹೊಂದಿದ್ದರೆ, ಅದನ್ನು ಸರದಿಯಲ್ಲಿ ಬಳಸಿ. ಹಾಗೆ  ಮಾಡುವುದರಿಂದ  ಆಯಾ ಕಾರ್ಡ್’ನ ಬಳಕೆಯ ಪ್ರಮಾಣವನ್ನು ಹತೋಟಿಯಲ್ಲಿಡಬಹುದಾಗಿದೆ. ಹಾಗೂ ದೀರ್ಘಕಾಲದವರೆಗೂ ಬಳಕೆ ಮಾಡಬಹುದಾಗಿದೆ.

ನಿಮಗೆ ಹೊಂದುವ ಸೂಕ್ತವಾದ ಕಾರ್ಡನ್ನು ಪಡೆಯಿರಿ:

 ಮಾರುಕಟ್ಟೆಯಲ್ಲಿ ಬೇರೆ ಬೇರೆ ರೀತಿಯ ಕಾರ್ಡ್’ಗಳು ಲಭ್ಯವಿದೆ. ನಿಮ್ಮ ಬಳಕೆಗೆ ಹೊಂದುವಂತಹ ಕಾರ್ಡನ್ನು ಪಡೆದುಕೊಳಿ. ಉದಾಹರಣೆಗೆ, ಕೆಲವು ಕಾರ್ಡ್’ಗಳಲ್ಲಿ ವಿಮಾನ ಟಿಕೆಟ್ ಖರೀದಿಸುವವರಿಗೆ ರಿಯಾಯಿತಿಗಳಿರುತ್ತವೆ, ಕೆಲವು ಇಂಧನದ/ಪೆಟ್ರೋಲ್/ಡೀಸೆಲ್ ಖರಿದಿ ಮೇಲೆ ರಿಯಾಯಿತಿ ಈಡುತ್ತವೆ.  ನಿಮ್ಮ ಬಖಲ್ಲೆ ತಕ್ಕ ಕಾರ್ಡನ್ನು ಪಡೆಯಯುದರಿಂದ ಹಣವನ್ನು ಉಳಿಸಬಹುದಾಗಿದೆ.

ರಿವಾರ್ಡ್ ಪಾಯಿಂಟ್’ಗಳನ್ನು ನಿಗದಿತ ಸಮಯದೊಳಗೆ ರಿಡೀಮ್ ಮಾಡಿಕೊಳ್ಳಿ:

ಒಂದು ಅವಧಿಯಲ್ಲಿ ನೀವು ಸಂಪಾದಿಸಿರುವ ರಿವಾರ್ಡ್ ಪಾಯಿಂಟ್’;ಗಳನ್ನು ಕ್ಲಪ್ತ ಸಮಯಕ್ಕೆ ರಿಡೀಮ್ ಮಾಡಿಕೊಳ್ಳುಇ. ರಿವಾರ್ಡ್ ಪಾಯಿಂಡಟ್’ಗಳನ್ನು ನಿಗದಿತ ಻ವಧಿಯೊಳಗೆ ರಿಡೀಮ್ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕೆ ವ್ಯಾಲಿಡಿಟಿ ಅವಿಧಿ ( 1 ರಿಂದ 3 ವರ್ಷ) ರುತ್ತದೆ, ವಿಳಂಬವಾದಲ್ಲಿ ನೀವು ಸಂಪಾದಿಸಿದ ಪಾಯಿಂಟ್’ಗಳನ್ನು ಕಳೆದುಕೊಲ್ಳಬೇಕಾಗುತ್ತದೆ.

ಕ್ರೆಡಿಟ್ ಕಾರ್ಡ್ ಸ್ಟೇಟ್’ಮೆಂಟನ್ನು ತಪ್ಪದೇ ನೋಡಿ:

ನಿಮ್ಮ ಖರೀದಿ ವಿವರ, ಶುಲಕ್ಗಳು, ಬಡ್ಡಿದರ, ದಂಡ ತ್ತಾದಿ ಪ್ರಮುಖ ವಿವರಗಳು ಕ್ರೆಡಿಟ್ ಕಾರ್ಡ್ ಸ್ಟೇಟ್’ಮೆಂಟನ್ನಲ್ಲಿರುತ್ತದೆ.  ಆದುದರಿಂದ ಅದನ್ನು ಕೂಲಂಕುಷವಾಗಿ ನೋಡುವುದು ಬಹಳ ಅಗತ್ಯವಾಗಿದೆ.  ಒಂದು ವೇಳೆ ಯಾವುದೇ ವ್ಯತ್ಯಾಸಗಳಿದ್ದರೆ, ಅದನ್ನು ಬ್ಯಾಂಕಿನ/ ಕ್ರೆಡಿಟ್ ಕಾರ್ಡ್ ಕಂಪನಿಯ ಗಮನಕ್ಕೆ ಕೂಡಲೇ ತರಬೇಕು.

ಕ್ರೆಡಿಟ್ ಕಾರ್ಡ್’ನ ಸ್ಮಾರ್ಟ್ ಬಳಕೆ ನಿಮ್ಮ ಹಣವನ್ನು ಉಳಿಸುವುದು ಅಲ್ಲದೇ, ನಿಮ್ಮ  ಕ್ರೆಡಿಟ್ ಪ್ರೊಫೈಲ್ ಹಾಗೂ ಹಣಕಾಸು ವ್ಯವಹಾರದಲ್ಲಿ ಯಶಸ್ಸನ್ನು ಗಳಿಸಬಹುದಾಗಿದೆ.

Follow Us:
Download App:
  • android
  • ios