Personal Finance: ನೀವು ಕೂಡ ಕೋಟ್ಯಧೀಶರಾಗ್ಬೇಕಾ? ಹಾಗಾದ್ರೆ ಈ 6 ಅಭ್ಯಾಸಗಳನ್ನು ತಪ್ಪದೇ ಪಾಲಿಸಿ

ಕೋಟಿ ಸಂಪಾದಿಸಬೇಕೆಂಬ ಆಸೆ ಯಾರಿಗೆ ತಾನೇ ಇಲ್ಲ ಹೇಳಿ? ಆದ್ರೆ ಕೋಟಿ ಗಳಿಸೋದು ಹೇಗೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಈ 6 ಟಿಪ್ಸ್ ಪಾಲಿಸಿದ್ರೆ ನೀವು ಕೂಡ ಕೋಟ್ಯಧೀಶರಾಗ್ಬಹುದು. 

Tips to become a crorepati: Adopt these 6 habits to build wealth anu

Business Desk: ಹಣ ಯಾರಿಗೆ ತಾನೇ ಬೇಡ ಹೇಳಿ? ಅದರಲ್ಲೂ ಕೋಟ್ಯಧೀಶರಾಗುವ ಅವಕಾಶವನ್ನು ಯಾರಾದರೂ ಮಿಸ್ ಮಾಡಿಕೊಳ್ಳುತ್ತಾರಾ? ಖಂಡಿತಾ ಇಲ್ಲ. ಕೋಟಿ ಗಳಿಸೋದು ಹೇಗೆ, ಏನಾದರೂ ಟಿಪ್ಸ್ ಇದೇನಾ ಅನ್ನೋರು ಇಲ್ಲಿರುವ ಮಾಹಿತಿಯನ್ನು ತಪ್ಪದೇ ಓದಬೇಕು. ಕಠಿಣ ಪರಿಶ್ರಮ ಪಡುವ, ದುಡಿದ ಹಣವನ್ನು ಶಿಸ್ತು ಬದ್ಧವಾಗಿ ಬಳಸಿಕೊಳ್ಳುವ ವ್ಯಕ್ತಿಗೆ ಕೋಟ್ಯಧೀಶನಾಗೋದು ಖಂಡಿತಾ ಕಷ್ಟದ ಕೆಲಸವೇನಲ್ಲ. ನಿಮ್ಮ ವೃತ್ತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸ ತಂತ್ರಜ್ಞಾನ ಅಥವಾ ಇತರ ಪ್ರಗತಿಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಹಾಗೆಯೇ ನೀವು ದುಡಿದ ಹಣವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಬಗ್ಗೆ ಕೂಡ ಸೂಕ್ತ ಯೋಜನೆ ರೂಪಿಸೋದು ಅಗತ್ಯ. ಗಳಿಕೆ ಹಾಗೂ ಹಣದ ನಿರ್ವಹಣೆಯಲ್ಲಿ ಶಿಸ್ತು ರೂಢಿಸಿಕೊಂಡರೆ ಕೋಟಿ ಸಂಪಾದಿಸೋದು ಖಂಡಿತಾ ಕಷ್ಟದ ಕೆಲಸವೇನಲ್ಲ. ಖ್ಯಾತ ಹೂಡಿಕೆದಾರ ವಾರನ್ ಬಫೆಟ್ ಉಳಿತಾಯ ಹಾಗೂ ಖರ್ಚಿಗೆ ಸಂಬಂಧಿಸಿ ಒಂದು ಸಲಹೆ ನೀಡಿದ್ದಾರೆ. ಅದೇನೆಂದರೆ ಖರ್ಚು ಮಾಡಿದ ಬಳಿಕ ಉಳಿದದ್ದನ್ನು ಉಳಿತಾಯ ಮಾಡಬೇಡ. ಬದಲಿಗೆ ಉಳಿತಾಯ ಮಾಡಿದ ಬಳಿಕ ಉಳಿದ ಹಣವನ್ನು ಖರ್ಚು ಮಾಡೆಂದು. ಹೀಗಾಗಿ ನಿಮ್ಮ ಆದಾಯದಲ್ಲಿ ಪ್ರತಿ ತಿಂಗಳು ಒಂದು ಭಾಗವನ್ನು ಉಳಿತಾಯಕ್ಕೆ ಮೀಸಲಿಡಿ. ಆ ಬಳಿಕ ಉಳಿದ ಹಣವನ್ನು ಖರ್ಚು ಮಾಡಿ. ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಇಲ್ಲಿದೆ ಕೆಲವು ಟಿಪ್ಸ್.

1.ಬಜೆಟ್ ರೂಪಿಸಿ: ನಿಮ್ಮ ಆದಾಯಕ್ಕೆ ಅನುಗುಣವಾಗಿ ಬಜೆಟ್ ರೂಪಿಸೋದು ಅತ್ಯಗತ್ಯ. ನಿಮ್ಮ ಒಟ್ಟು ಆದಾಯ ಹಾಗೂ ವೆಚ್ಚಗಳ ಸಂಪೂರ್ಣ ಮಾಹಿತಿ ನಿಮಗೆ ಇರಬೇಕು. ಬಜೆಟ್ ರೂಪಿಸುವಾಗ ನಿಮ್ಮ ವೆಚ್ಚಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರೋದು ಅಗತ್ಯ. ಹಾಗೆಯೇ ಎಲ್ಲಿಯೂ ಅನಗತ್ಯವಾಗಿ ವೆಚ್ಚ ಮಾಡದಂತೆ ಬಜೆಟ್ ನಲ್ಲಿ ನೋಡಿಕೊಳ್ಳಿ. ಪ್ರತಿ ತಿಂಗಳ ನಿಮ್ಮ ಅಗತ್ಯ ವೆಚ್ಚಗಳು ಹಾಗೂ ದುಬಾರಿ ವಸ್ತುಗಳ ಖರೀದಿಗೆ ವ್ಯಯಿಸಲು ನಿಮ್ಮ ಬಳಿ ಎಷ್ಟು ಹಣವಿದೆ ಎಂಬುದನ್ನು ತಿಳಿಯಲು ಬಜೆಟ್ ನೆರವು ನೀಡುತ್ತದೆ. ಇದರಿಂದ ನಿಮ್ಮ ಗುರಿಗಳನ್ನು ತಲುಪಲು ನಿಮ್ಮ ಆದಾಯದ ಒಂದು ಭಾಗವನ್ನು ಉಳಿತಾಯ ಮಾಡಲು ಸಾಧ್ಯವಾಗುತ್ತದೆ.

ಧಂತೇರಸ್ ದಿನ ಚಿನ್ನ ಖರೀದಿಸೋ ಮುನ್ನ ಈ ವಿಷಯಗಳ ಕಡೆ ಇರಲಿ ಗಮನ

2.ಅನಗತ್ಯ ಶಾಪಿಂಗ್ ಗೆ ಕಡಿವಾಣ ಹಾಕಿ: ಶಾಪಿಂಗ್ ಮಾಡುವ ಮುನ್ನ ತಪ್ಪದೇ ಪಟ್ಟಿ ಸಿದ್ಧಪಡಿಸಿ. ಯಾವೆಲ್ಲ ವಸ್ತುಗಳು ಅಗತ್ಯ ಎಂಬುದರ ಪಟ್ಟಿ ಸಿದ್ಧಪಡಿಸಿ ಅದಕ್ಕೆ ಮಾತ್ರ ಹಣ ವ್ಯಯಿಸಿ. ಇದರಿಂದ ಅನಗತ್ಯ ವಸ್ತುಗಳ ಖರೀದಿಯನ್ನು ತಪ್ಪಿಸಬಹುದು. ಇದರಿಂದ ನಿಮ್ಮ ಉಳಿತಾಯದ ಹಣ ಹೆಚ್ಚುತ್ತದೆ. ಇದನ್ನು ಜಾಣತನದಿಂದ ಹೂಡಿಕೆ ಮಾಡಬಹುದು

3.ಮಾಡಬೇಕಿರುವ ಕೆಲಸಗಳ ಪಟ್ಟಿ ಮಾಡಿ: ಜಗತ್ತಿನ ಶೇ.81ರಷ್ಟು ಶ್ರೀಮಂತರು ಯಾವೆಲ್ಲ ಕೆಲಸಗಳನ್ನು ಮಾಡಬೇಕು ಎಂಬ ಪಟ್ಟಿ ಸಿದ್ಧಪಡಿಸಿರುತ್ತಾರೆ. ಹಾಗೆಯೇ ಪ್ರತಿದಿನ ಅವರು ಈ ಪಟ್ಟಿಯನ್ನು ಅಪ್ಡೇಟ್ ಮಾಡುತ್ತಾರೆ. ಅದರಲ್ಲಿ ಮಾಡಿರುವ ಕೆಲಸಗಳನ್ನು ತೆಗೆದು ಮಾಡಬೇಕಾಗಿರುವ ಕೆಲಸಗಳನ್ನು ಸೇರಿಸುತ್ತಾರೆ. ನೀವು ಕೂಡ ಇಂಥ ಅಭ್ಯಾಸ ಬೆಳೆಸಿಕೊಳ್ಳಬಹುದು. ಇದು ನಿಮಗೆ ನಿಮ್ಮ ವೆಚ್ಚ ಹಾಗೂ ಇತರ ಚಟುವಟಿಕೆಗಳನ್ನು ಪರಿಶೀಲಿಸಲು ನೆರವು ನೀಡುತ್ತದೆ. ಅಲ್ಲದೆ, ಈ ಮಾಹಿತಿ ನಿಮ್ಮ ನಿತ್ಯದ ಬಜೆಟ್ ಅನ್ನು ಉತ್ತಮವಾದ ರೀತಿಯಲ್ಲಿ ರೂಪಿಸಲು ನೆರವು ನೀಡುತ್ತದೆ.

4.ಉಳಿತಾಯ ಖಾತೆಯಲ್ಲಿ ಹಣವಿಡಬೇಡಿ: ಫೋರ್ಬ್ಸ್ ವರದಿ ಅನ್ವಯ ನೀವು ಉಳಿತಾಯ ಖಾತೆಯಲ್ಲಿ ಹಣವನ್ನು ಸುಮ್ಮನೆ ಇಡಬಾರದು. ಬದಲಿಗೆ ಆ ಹಣವನ್ನು ಜನಪ್ರಿಯ ಹೂಡಿಕೆ ಆಯ್ಕೆಗಳಾದ ಷೇರು ಮಾರುಕಟ್ಟೆ, ಎಫ್ ಡಿ, ಪಿಪಿಎಫ್ , ಚಿನ್ನ ಇತ್ಯಾದಿಗಳಲ್ಲಿ ಹೂಡಿಕೆ ಮಾಡಬೇಕು.

ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಹಾಗಾದ್ರೆ ಈ 5 ಪ್ರಯೋಜನಗಳನ್ನು ಮಿಸ್ ಮಾಡ್ಬೇಡಿ!

5.ಸಾಲ ಹಾಗೂ ಇಎಂಐ ಇಲ್ಲದಂತೆ ನೋಡಿಕೊಳ್ಳಿ:  ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಉಳಿದ ಸಮಯಗಳಲ್ಲಿ ಹೂಡಿಕೆ ಮಾಡಬೇಡಿ. ಅಂದರೆ ಸಾಲದ ಇಎಂಐ ಅಥವಾ ಕ್ರೆಡಿಟ್ ಕಾರ್ಡ್ ವೆಚ್ಚಗಳ ಮೇಲೆ ಬಡ್ಡಿ ಪಾವತಿಸೋದನ್ನು ಇಟ್ಟುಕೊಳ್ಳಬೇಡಿ. ಸಾಲದ ಮೊತ್ತ ಹಾಗೂ ಅದರ ಮೇಲಿನ ಬಡ್ಡಿ ನಿಮಗೆ ಹೊರೆಯಾಗೋದು ಮಾತ್ರವಲ್ಲ, ಬದಲಿಗೆ ನಿಮ್ಮ ಹಣ ಸಂಗ್ರಹದ ಅವಕಾಶವನ್ನು ಕೂಡ ತಗ್ಗಿಸುತ್ತದೆ. 


 

Latest Videos
Follow Us:
Download App:
  • android
  • ios