ಕ್ರೆಡಿಟ್ ಕಾರ್ಡ್ ಬಳಕೆಯಿಂದ ಸಿಗುವ ಕ್ಯಾಶ್ ಬ್ಯಾಕ್, ಡಿಸ್ಕೌಂಟ್ಸ್ ಮುಂತಾದ ಪ್ರಯೋಜನಗಳ ಬಗ್ಗೆ ಬಹುತೇಕರಿಗೆ ತಿಳಿದಿದೆ. ಆದರೆ, ಇನ್ನೂ ಕೆಲವು ಪ್ರಯೋಜನಗಳಿದ್ದು, ಆ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ.  

Business Desk: ಆರ್ಥಿಕ ಜಗತ್ತಿನಲ್ಲಿ ಕ್ರೆಡಿಟ್ ಕಾರ್ಡ್ ಗಳನ್ನು ಎರಡು ಅಂಚಿನ ಕತ್ತಿ ಎನ್ನುತ್ತಾರೆ. ಏಕೆಂದರೆ ಇದು ಒಂದು ಕಡೆ ಇದು ಶಿಸ್ತಿನಿಂದ ಕೂಡಿದ್ದು, ನಿಯಮಿತ ಬಳಕೆಯಿಂದ ಕ್ಯಾಶ್ ಬ್ಯಾಕ್, ಡಿಸ್ಕೌಂಟ್ಸ್, ಕ್ರೆಡಿಟ್ ಸ್ಕೋರ್ ಹೆಚ್ಚಳ ಸೇರಿದಂತೆ ಕೆಲವೊಂದು ಗರಿಷ್ಠ ಪ್ರಯೋಜನಗಳನ್ನು ಪಡೆಯಬಹುದಾಗಿದೆ.ಇನ್ನೊಂದು ಕಡೆ ಸಮರ್ಪಕವಾಗಿ ಬಳಸದಿದ್ರೆ ಹಾಗೂ ನಿಯಮಿತವಾಗಿ ಮರುಪಾವತಿಸದಿದ್ರೆ ಅದು ನಿಮ್ಮ ಜೇಬಿನ ಹೊರೆಯನ್ನು ಹೆಚ್ಚಿಸಲಿದೆ. ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸದಿದ್ರೆ ಶೇ.49ರಷ್ಟು ಶುಲ್ಕ ಬೀಳಲಿದೆ. ಇದರಿಂದ ನಿಮ್ಮ ಮೇಲಿನ ಸಾಲದ ಹೊರೆ ಕೂಡ ಹೆಚ್ಚಲಿದೆ. ಹೀಗಾಗಿ ನಿಮ್ಮ ಹಣಕಾಸನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದರ ಆಧಾರದಲ್ಲಿ ಕ್ರೆಡಿಟ್ ಕಾರ್ಡ್ ನಿಮಗೆ ವರವಾಗುತ್ತದೋ ಇಲ್ಲವೇ ಶಾಪವಾಗುತ್ತದೋ ಎಂಬುದನ್ನು ನಿರ್ಧರಿಸಬಹುದು. ಒಂದು ವೇಳೆ ನೀವು ಕ್ರೆಡಿಟ್ ಕಾರ್ಡ್ ಪ್ರಯೋಜನಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದರೆ ಹಾಗೂ ಬಿಲ್ ಪಾವತಿಗಳಿಗೆ ಸಂಬಂಧಿಸಿ ಶಿಸ್ತು ಕಾಪಾಡಿಕೊಂಡರೆ ಆಗ ಯಾವುದೇ ಸಮಸ್ಯೆಯಾಗೋದಿಲ್ಲ. ಇನ್ನು ಕ್ರೆಡಿಟ್ ಕಾರ್ಡ್ ಬಳಕೆಯಿಂದ ಕೆಲವೊಂದು ಜನಪ್ರಿಯವಲ್ಲದ ಪ್ರಯೋಜನಗಳು ಕೂಡ ಇವೆ. ಅವು ಯಾವುವು? ಇಲ್ಲಿದೆ ಮಾಹಿತಿ.

1.ರೋಡ್ ಸೈಡ್ ಅಸಿಸ್ಟೆನ್ಸ್: ಕ್ರೆಡಿಟ್ ಕಾರ್ಡ್ ಗಳ ಮೇಲೆ ಕೆಲವು ಬ್ಯಾಂಕುಗಳು ತುರ್ತು ರೋಡ್ ಸೈಡ್ ಅಸಿಸ್ಟೆನ್ಸ್ ನೀಡುತ್ತವೆ. ಅಂದರೆ ಒಂದು ವೇಳೆ ನಿಮ್ಮ ವಾಹನ ಬ್ಯಾಟರಿ ಸಮಸ್ಯೆ, ಫ್ಲ್ಯಾಟ್ ಟೈರ್ ಅಥವಾ ಇಂಧನ ಕೊರತೆ ಸೇರಿದಂತೆ ಇತರ ಸಮಸ್ಯೆಗಳಿಂದ ರಸ್ತೆ ಮಧ್ಯೆ ಕೈಕೊಟ್ಟರೆ ಆಗ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಕೆಲವು ಬ್ಯಾಂಕುಗಳು ರೋಡ್ ಸೈಡ್ ಅಸಿಸ್ಟೆನ್ಸ್ ನೀಡುತ್ತವೆ. ಅದು ಕೂಡ ಅತ್ಯಂತ ಕನಿಷ್ಠ ವೆಚ್ಚದಲ್ಲಿ ಈ ಸೌಲಭ್ಯ ನೀಡುತ್ತವೆ.

2.ಏರ್ ಫೋರ್ಟ್ ಲಾಂಜ್ ಗೆ ಪ್ರವೇಶಿಸಲು ಅವಕಾಶ: ಒಂದು ವೇಳೆ ನೀವು ನಿರ್ದಿಷ್ಟ ಟ್ರಾವೆಲ್ ಸಂಬಂಧಿ ಕ್ರೆಡಿಟ್ ಕಾರ್ಡ್ ಖರೀದಿಸಿದ್ದರೆ ಆಗ ವಿಮಾನನಿಲ್ದಾಣ ಹಾಗೂ ರೈಲ್ವೆಗಳಲ್ಲಿ ಉಚಿತ ಲಾಂಜ್ ಸೌಲಭ್ಯ ಸಿಗಲಿದೆ. ನೀವು ಆಗಾಗ ಪ್ರವಾಸಕ್ಕೆ ತೆರಳುವ ಅಭ್ಯಾಸ ಹೊಂದಿದ್ದರೆ ಆಗ ಕ್ರೆಡಿಟ್ ಕಾರ್ಡ್ ನಿಮಗೆ ಖಂಡಿತಾ ನೆರವಾಗುತ್ತದೆ. ನೀವು ಟ್ರಾವೆಲ್ ಹಾಲಿಡೇ ವೋಚರ್ ಕೂಡ ಪಡೆಯಬಹುದು. 

ಎಸ್ ಬಿಐ ಕಾರ್ಡ್ ಜೊತೆಗೆ ರಿಲಯನ್ಸ್ ರಿಟೇಲ್ ಒಪ್ಪಂದ; ಗ್ರಾಹಕರಿಗಾಗಿ ಕ್ರೆಡಿಟ್ ಕಾರ್ಡ್ ಬಿಡುಗಡೆ

3. ತುರ್ತು ಟ್ರಾವೆಲ್ ಪ್ರಯೋಜನ: ನಿಮ್ಮ ಎಲ್ಲ ಟ್ರಾವೆಲ್ ಅಗತ್ಯಗಳಿಗೆ ತುರ್ತು ಭದ್ರತೆ ಪಡೆಯಲು ಕ್ರೆಡಿಟ್ ಕಾರ್ಡ್ ನೆರವು ನೀಡುತ್ತದೆ. ನಿಮ್ಮ ಬ್ಯಾಗೇಜ್ ಕಳೆದುಹೋಗಿದ್ದರೆ ಆಗ ಈ ಸೌಲಭ್ಯವನ್ನು ನೀವು ಬಳಸಿಕೊಳ್ಳಬಹುದು. ಹಾಗೆಯೇ ನಿಮ್ಮ ಫ್ಲೈಟ್ ತಡವಾಗಿದ್ದರೆ ಅಥವಾ ಟ್ರಾವೆಲ್ ಮಾಡುವಾಗ ನಿಮಗೆ ಹರ್ಟ್ ಆದ ಸಂದರ್ಭದಲ್ಲಿ ತುರ್ತು ಪ್ರಯಾಣದ ಪ್ರಯೋಜನ ಪಡೆಯಬಹುದು. ಆದರೆ, ಈ ಎಲ್ಲ ಪ್ರಯೋಜನಗಳನ್ನು ಪಡೆಯಲು ನೀವು ಟ್ರಾವೆಲ್ ಪರ್ಕ್ಸ್ ಹೊಂದಿರುವ ಕ್ರೆಡಿಟ್ ಕಾರ್ಡ್ ಖರೀದಿ ಮಾಡೋದು ಅಗತ್ಯ.

4.ಖರೀದಿ ಮೇಲೆ ಸುರಕ್ಷತೆ: ಕೆಲವೊಂದು ಕ್ರೆಡಿಟ್ ಕಾರ್ಡ್ ಗಳಲ್ಲಿ ವಸ್ತುಗಳ ಖರೀದಿ ಮೇಲೆ ಸುರಕ್ಷತೆ ಇರುತ್ತದೆ. ಅಂದರೆ ಕ್ರೆಡಿಟ್ ಕಾರ್ಡ್ ಬಳಸಿ ನೀವು ಖರೀದಿಸಿದ ವಸ್ತು ಅಧಿಕ ಮೊತ್ತದಾಗಿದ್ದು, ಅದರ ದುರಸ್ತಿ ಅಥವಾ ಬದಲಾವಣೆಗೆ ತಗಲುವ ವೆಚ್ಚವನ್ನು ನಿರ್ದಿಷ್ಟ ಅವಧಿಗೆ ಇದರಡಿ ಕವರ್ ಮಾಡಲು ಅವಕಾಶವಿದೆ.

ನೀವು ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಿದ್ರೆ ಆರ್ ಬಿಐಗೆ ತಲೆನೋವು, ಯಾಕೆ ಗೊತ್ತಾ?

5. ಕ್ರೆಡಿಟ್ ಸ್ಕೋರ್ ನಿರ್ಮಾಣಕ್ಕೆ ನೆರವು: ಕ್ರೆಡಿಟ್ ಕಾರ್ಡ್ ಬಳಸಿ ವಹಿವಾಟು ನಡೆಸುವಾಗ ನಮ್ಮ ಖಾತೆಯಿಂದ ಹಣ ಕಡಿತವಾಗೋದಿಲ್ಲ. ಆ ಬಳಿಕ ನಾವು ಆ ಹಣವನ್ನು ಮರುಪಾವತಿಸಬೇಕು. ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಲು ಒಂದು ತಿಂಗಳ ಅವಕಾಶವಿರುತ್ತದೆ. ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸೋದ್ರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ಉತ್ತಮವಾಗಿರುತ್ತದೆ. ಹೀಗಾಗಿ ಕ್ರೆಡಿಟ್ ಕಾರ್ಡ್ ಕ್ರೆಡಿಟ್ ಸ್ಕೋರ್ ನಿರ್ಮಾಣಕ್ಕೆ ಕೂಡ ನೆರವು ನೀಡುತ್ತದೆ.