ಸರಳ ಉದ್ಯಮಿಯ ತಂದೆ ಭೂರಹಿತ ರೈತರಾಗಿದ್ದರು. ಮನೆಗೆ ಮೂರು ಹೊತ್ತಿನ ಊಟಕ್ಕೆ ವ್ಯವಸ್ಥೆ ಮಾಡುವುದು ಕೂಡ ಕಷ್ಟವಾಗಿತ್ತು. ಉದ್ಯಮಿ ಹೇಳುವ ಪ್ರಕಾರ ,ಅವರು ಹಾಗೂ ಅವರ ಸಹೋದರರು ತಾಯಿ ಪ್ರತಿ ವಾರ ಸಂಪಾದನೆ ಮಾಡುತ್ತಿದ್ದ 50 ರೂಪಾಯಿಯಲ್ಲೇ ಜೀವನ ಸಾಗಿಸಿದ್ದರು.
ಬೆಂಗಳೂರು (ಜೂ.18): ಇಂದು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಹಾದು ಹೋಗುವಾಗ ಈ ಕಂಪನಿಯ ಬೋರ್ಡ್‌ಗಳು ನಿಮ್ಮ ಗಮನಕ್ಕೆ ಬಿದ್ದೇ ಬಿದ್ದಿರುತ್ತದೆ. 'ಥೈರೋಕೇರ್' ಎನ್ನುವ ಬೋರ್ಡ್‌ನತ್ತ ಕಣ್ಣು ಹಾಯಿಸಿಯೇ ಇರುತ್ತೀರಿ. ಇಂಥ ಥೈರೋಕೇರ್ ಕಂಪನಿಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕೆ ಎ.ವೇಲುಮಣಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರು. ಒಂದುಹೊತ್ತಿನ ಊಟಕ್ಕಾಗಿ ಪರದಾಟ ನಡೆಸುತ್ತಿದ್ದ ವೇಲುಮಣಿ ಇಂದು ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಕಂಪನಿಯ ಮಾಲೀಕರಾಗಿರುವುದು ಮಾತ್ರವಲ್ಲ ಅದನ್ನಉ ಬಹಳ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಶನಿವಾರ ಸಂಜೆ ಅವರು ಮುಂಬೈನ ಲೋಕಲ್ ಟ್ರೇನ್‌ನಲ್ಲಿ ಪ್ರಯಾಣ ಮಾಡಿದ ಚಿತ್ರಗಳನ್ನು ಹಂಚಿಕೊಂಡಿದ್ದರು. ಹಾಗಂತ ಅವರಲ್ಲಿ ಐಷಾರಾಮಿ ಕಾರುಗಳು ಇಲ್ಲವೆಂತಲ್ಲ. ಟೈಮ್ ಮ್ಯಾನೇಜ್‌ಮೆಂಟ್‌ಗೆ ಮುಂಬೈನಲ್ಲಿ ಐಷಾರಾಮಿ ಕಾರುಗಳನ್ನು ರಸ್ತೆಗೆ ಇಳಿಸೋದು ಒಳ್ಳೆಯದಲ್ಲ ಎನ್ನುವ ವೇಲುಮಣಿ, ಅದಕ್ಕೆ ಏನಿದ್ದರೂ ಲೋಕನ್ ಟ್ರೇನ್‌ಗಳೇ ಬೆಸ್ಟ್ ಎಂದಿದ್ದಾರೆ. ಕಾರ್‌ನಲ್ಲಿ ಬೊರಿವಿಲಿಗೆ ಹೋಗಲು 70 ನಿಮಿಷ ತೆಗೆದುಕೊಂಡರೆ, ಟ್ರೇನ್‌ನಲ್ಲಿ ಬರೀ 18 ನಿಮಿಷದಲ್ಲಿ ತಲುಪಬಹುದು ಎಂದು ಅವರು ಬರೆದುಕೊಂಡಿದ್ದರು. ಈ ಚಿತ್ರ ವೈರಲ್ ಆಗಿತ್ತು.
ನೆನಪಿರಲಿ ಎ.ವೇಲುಮಣಿ ವಿನಮ್ರ ಉದ್ಯಮಿ. ಸರಳ ಸ್ವಭಾವದಿಂದಲೇ ಪರಿಚಿತರು. ಅದಕ್ಕೆ ಕಾರಣ ಇವರ ಬಾಲ್ಯ. ವೇಲುಮಣಿಯವರ ತಂದೆ ಭೂರಹಿತ ರೈತರಾಗಿದ್ದರು. ವೇಲುಮಣಿ ಸೇರಿದಂತೆ ತಮ್ಮ ಮಕ್ಕಳಿಗೆ ಒಂದು ಜೊತೆ ಪ್ಯಾಂಟ್ ಹಾಗೂ ಚಪ್ಪಲಿಗಳನ್ನು ಹೊಂದಿಸುವುದು ಕೂಡ ಅವರಿಗೆ ಸಾಧ್ಯವಾಗಿರಲಿಲ್ಲ. ಹಾಗಾಗಿ ವೇಲುಮಣಿ ಅವರ ಬಾಲ್ಯದ ಜೀವನ ಅಕ್ಷರಶಃ ಬರಿಗಾಲ ಫಕೀರನ ಹಾಗೆ ಕಳೆದಿದ್ದರು. ಪ್ರತಿವಾರ ತಾಯಿ ಸಂಪಾದನೆ ಮಾಡುತ್ತಿದ್ದ 50 ರೂಪಾಯಿಗಳೇ ವೇಲುಮಣಿ ಹಾಗೂ ಅವರ ಸಹೋದರರ ಹೊಟ್ಟೆ ತುಂಬಿಸುತ್ತಿತ್ತು.
ಶಿಕ್ಷಣದ ಬಗ್ಗೆ ಹೆಚ್ಚೇನೂ ಆಸಕ್ತಿ ಹೊಂದಿಲ್ಲದ ಕುಟುಂಬದಲ್ಲಿ, ವೇಲುಮಣಿ ಬಿಎಸ್‌ಸಿಯಲ್ಲಿ ಪದವಿ ಸಂಪಾದನೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅದಾದ ಬಳಿಕ ಕೊಯಮತ್ತೂರು ಸಮೀಪದ ಫಾರ್ಮಾ ಕಂಪನಿಯಲ್ಲಿ ಕ್ಯಾಪ್ಸುಲ್ ಮಾಡುವ ಕೆಲಸಕ್ಕೆ ಸೇರಿದ್ದರು. ಆದರೆ, ಸಂಬಳ ಮಾತ್ರ ಯಾವುದಕ್ಕೂ ಸಾಲುತ್ತಿರಲಿಲ್ಲ. ಆದರೆ, ಹಣೆಬರಹ ಕೆಟ್ಟದಾಗಿತ್ತು. ಕಂಪನಿ ಹೆಚ್ಚು ದಿನ ಉಳಿಯಲಿಲ್ಲ. ಕಂಪನಿ ಆದ ನಾಲ್ಕೇ ವರ್ಷಕ್ಕೆ ಮುಳುಗಿಹೋಯಿತು. ವೇಲುಮಣಿ ಮತ್ತೊಮ್ಮೆ ನಿರುದ್ಯೋಗಿಯಾದರು.
ಆ ನಂತರ ಕೈಯಲ್ಲಿ ಬರೀ 400 ರೂಪಾಯಿ ಹಿಡಿದುಕೊಂಡು ಅವಕಾಶಗಳ ನಗರಿಯಾದ ಮುಂಬೈಗೆ ಕಾಲಿಟ್ಟದ್ದರು. ಇದ್ದ ಅನುಭವನ್ನು ಬಳಸಿಕೊಂಡು ಬಿಎಆರ್‌ಸಿ ಕಂಪನಿಗೆ ನೀಡಿದ್ದ ಸಂದರ್ಶನ ಫಲಪ್ರದವಾಗಿತ್ತು. 14 ವರ್ಷಗಳ ಕಾಲ ಈ ಕಂಪನಿಯಲ್ಲಿ ದುಡಿದ ವೇಲುಮಣಿ ನಂತರ ಇಲ್ಲಿನ ಪಿಎಫ್ ಹಣದಿಂದ ಥೈರೋಕೇರ್ ಎನ್ನುವ ಕಂಪನಿಯನ್ನು ಸ್ಥಾಪನೆ ಮಾಡಿದ್ದರು.
ರಷ್ಯಾದಿಂದ ರಫ್ತಾಗ್ತಿರೋ ಶೇ.80 ರಷ್ಟು ತೈಲ ಭಾರತ, ಚೀನಾದಿಂದ್ಲೇ ಖರೀದಿ!
1996ರಲ್ಲಿ ಬರೀ 1 ಲಕ್ಷ ರೂಪಾಯಿ ಬಂಡವಾಳದಲ್ಲಿ ಸ್ಥಾಪನೆ ಮಾಡಿದ್ದ ಕಂಪನಿ, 2021ರಲ್ಲಿ 7 ಸಾವಿರ ಕೋಟಿಸ ರೂಪಾಯಿ ಮೌಲ್ಯದ ಕಂಪನಿ ಎನಿಸಿಕೊಂಡಿತ್ತು. ಈ ನಡುವೆ ಕಂಪನಿಯಲ್ಲಿ ವೇಲುಮಣಿ ಅವರ ಷೇರುಗಳ ಬೆಲೆ 5 ಸಾವಿರ ಕೋಟಿಗೆ ಏರಿತ್ತು ಎಂದು ಫೋರ್ಬ್ಸ್ ವರದಿ ತಿಳಿಸಿದೆ. ತಮ್ಮಲ್ಲಿದ್ದ ಶೇ.66ರಷ್ಟು ಷೇರುಗಳನ್ನು ಫಾರ್ಮ್‌ಈಸಿ ಕಂಪನಿಗೆ 4546 ಕೋಟಿ ರೂಪಾಯಿ ಮೊತ್ತಕ್ಕೆ ಮಾರಾಟ ಮಾಡಿದರು. ಇಂದು ಥೈರೋಕೇರ್ ಕಂಪನಿ 2500 ಕೋಟಿ ರೂಪಾಯಿ ಮೌಲ್ಯದ ಕಂಪನಿಯಾಗಿ ಉಳಿದುಕೊಂಡಿದೆ.
Lakshmi to Lakme: ಬ್ಯೂಟಿ ಪ್ರಾಡಕ್ಟ್ ಬ್ರ್ಯಾಂಡ್ ಆರಂಭದ ಹಿಂದಿದೆ ನೆಹರೂ ಕೈ!
