ಚಲಾವಣೆಯಲ್ಲಿರುವ 2 ಸಾವಿರ ರೂ. ನೋಟುಗಳಲ್ಲಿ ಶೇ.76ರಷ್ಟು ಬ್ಯಾಂಕುಗಳಿಗೆ ವಾಪಸ್

2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಖಾತೆಗಳಲ್ಲಿ ಠೇವಣಿಯಿಡಲು ಅಥವಾ ಬ್ಯಾಂಕ್ ಗಳಲ್ಲಿ ವಿನಿಮಯ ಮಾಡಿಕೊಳ್ಳಲು ಆರ್ ಬಿಐ ಸೆ. 30ರ ತನಕ ಕಾಲಾವಕಾಶ ನೀಡಿದೆ. ಆದರೆ, ಈಗಾಗಲೇ   ಶೇ.76ರಷ್ಟು 2 ಸಾವಿರ ರೂ. ನೋಟುಗಳು ಬ್ಯಾಂಕುಗಳಿಗೆ ವಾಪಸ್ ಆಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 
 

Three fourth of Rs 2000 currency notes in circulation have returned to banks Govt anu

ನವದೆಹಲಿ (ಜು.26): ಭಾರತೀಯ ಬ್ಯಾಂಕ್ ಗಳು ಜೂನ್ 30ರ ತನಕ 2.72 ಟ್ರಿಲಿಯನ್ ಮೌಲ್ಯದ 2,000 ರೂ. ನೋಟುಗಳನ್ನು ಸ್ವೀಕರಿಸಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಮೇ 19ರಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯೋದಾಗಿ ಮಾಹಿತಿ ನೀಡಿತ್ತು. ಆದರೆ, ಆ ನೋಟುಗಳನ್ನು ಖಾತೆಗಳಲ್ಲಿ ಠೇವಣಿಯಿಡಲು ಅಥವಾ ಬ್ಯಾಂಕ್ ಗಳಲ್ಲಿ ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30ರ ತನಕ ಕಾಲಾವಕಾಶ ನೀಡಿದೆ. ಇನ್ನು ಇತರ ಮುಖಬೆಲೆಯ ನೋಟುಗಳ ದಾಸ್ತಾನು ಅಗತ್ಯ ಪ್ರಮಾಣದಲ್ಲಿದ್ದು, ಸಾರ್ವಜನಿಕರ ಕರೆನ್ಸಿ ಅಗತ್ಯಗಳನ್ನು ಪೂರೈಸುವಷ್ಟಿದೆ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. ಇನ್ನು ಕ್ಲೀನ್ ನೋಟ್ ಪಾಲಿಸಿ ಅಡಿಯಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ತೀರ್ಮಾನವನ್ನು ಆರ್ ಬಿಐ ಕೈಗೊಂಡಿತ್ತು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರ. 

ಇನ್ನು 2 ಸಾವಿರ ರೂ. ನೋಟುಗಳ ವಿನಿಮಯ ದಿನಾಂಕವನ್ನು ಸೆಪ್ಟೆಂಬರ್ 30ರ ಬಳಿಕ ವಿಸ್ತರಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ. ಇನ್ನು ಅಧಿಕ ಮೌಲ್ಯದ ಕರೆನ್ಸಿಯನ್ನು ಅಮಾನ್ಯೀಕರಣಗೊಳಿಸುವ ಯಾವುದೇ ಯೋಜನೆ ಸದ್ಯಕ್ಕಿಲ್ಲ ಎಂದು ಸರ್ಕಾರ ತಿಳಿಸಿದೆ. 2 ಸಾವಿರ ರೂ. ನೋಟಿನ ವಿನಿಮಯವನ್ನು ಸರ್ಕಾರ ಸೆ.30ರ ನಂತರ ವಿಸ್ತರಿಸುತ್ತದಾ ಎಂಬ ಪ್ರಶ್ನೆಗೆ ಪಂಕಜ್ ಚೌಧರಿ ಲಿಖಿತ ಉತ್ತರ ನೀಡಿದ್ದಾರೆ. 

2 ಸಾವಿರ ರೂ. ನೋಟು ಬದಲಾವಣೆ ನಿಯಮ: ಎಸ್ ಬಿಐ ಸೇರಿದಂತೆ ಪ್ರಮುಖ ಬ್ಯಾಂಕ್ ಗಳಲ್ಲಿ ಹೀಗಿದೆ

ಆರ್ ಬಿಐ ಪ್ರಕಾರ ಪ್ರಸ್ತುತ ಚಲಾವಣೆಯಲ್ಲಿರುವ ಶೇ.76ರಷ್ಟು 2 ಸಾವಿರ ರೂ. ನೋಟುಗಳನ್ನು ಠೇವಣಿಯಿಡಲಾಗಿದೆ ಅಥವಾ ಬ್ಯಾಂಕ್ ಗಳಲ್ಲಿ ವಿನಿಮಯ ಮಾಡಲಾಗಿದೆ. ಇನ್ನು ಚಲಾವಣೆಯಲ್ಲಿರುವ 2 ಸಾವಿರ ರೂ. ನೋಟುಗಳ ಒಟ್ಟು ಮೌಲ್ಯ ಹಿಂಪಡೆಯುವ ನಿರ್ಧಾರ ಪ್ರಕಟಿಸುವ ದಿನ 3.56 ಲಕ್ಷ ಕೋಟಿ ರೂ. ಇದ್ದು, ಜೂನ್ 30ಕ್ಕೆ 84,000 ಕೋಟಿ ರೂ.ಗೆ ಇಳಿಕೆಯಾಗಿದೆ. ಇದರಲ್ಲಿ ಈ ಪೈಕಿ ಶೇ.85ರಷ್ಟು ಠೇವಣಿ ರೂಪದಲ್ಲಿ ಹಾಗೂ ಶೇ.15ರಷ್ಟು ವಿನಿಮಯ ರೂಪದಲ್ಲಿ ಬ್ಯಾಂಕ್ ಗಳಿಗೆ ಬಂದಿವೆ.

ಇನ್ನು 2,000ರೂ. ಮುಖಬೆಲೆಯ  ಕರೆನ್ಸಿಯನ್ನು ವಿನಿಮಯ ಮಾಡಿಕೊಳ್ಳಲು ವ್ಯಕ್ತಿಯು ಬ್ಯಾಂಕಿನ ಗ್ರಾಹಕರಾಗಿರುವುದು ಅನಿವಾರ್ಯವಲ್ಲ. ಖಾತೆದಾರರಲ್ಲದವರು 2,000 ರೂ. ಮೌಲ್ಯದ ಬ್ಯಾಂಕ್‌ ನೋಟುಗಳನ್ನು ಯಾವುದೇ ಬ್ಯಾಂಕ್ ಶಾಖೆಯಲ್ಲಿ ಒಮ್ಮೆಗೆ 20,000ರೂ. ಮಿತಿಯವರೆಗೆ ಬದಲಾಯಿಸಬಹುದು. ಈ ವಿನಿಮಯ ಸೌಲಭ್ಯವನ್ನು ಪಡೆಯಲು ಜನರು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಇದಲ್ಲದೆ, 2,000ರೂ. ಬ್ಯಾಂಕ್‌ ನೋಟುಗಳನ್ನು ಬದಲಾಯಿಸಲು ಅಥವಾ ಠೇವಣಿ ಮಾಡಲು ಬಯಸುವ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಅನಾನುಕೂಲತೆಯನ್ನು ಕಡಿಮೆ ಮಾಡಲು ವ್ಯವಸ್ಥೆ ಮಾಡಲು ಬ್ಯಾಂಕ್‌ಗಳಿಗೆ ಆರ್ ಬಿಐ ಸೂಚನೆ ನೀಡಿತ್ತು. 2 ಸಾವಿರ ರೂ. ನೋಟುಗಳನ್ನು ಕೊಟ್ಟು ಕಡಿಮೆ ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಆದರೂ, ಈ ನೋಟುಗಳು ಕಾನೂನುಬದ್ಧವಾಗಿ ಉಳಿಯುತ್ತವೆ ಎಂದು ಆರ್‌ಬಿಐ ತಿಳಿಸಿತ್ತು.

2,000ರೂ. ನೋಟು ಹಿಂತೆಗೆತದ ಪರಿಣಾಮ ಠೇವಣಿ, ಬಡ್ಡಿದರಕ್ಕೆ ಹಿತಕಾರಿ: ಎಸ್ ಬಿಐ ಅಧ್ಯಯನ ವರದಿ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಳೆಯ 500 ರೂ. ಹಾಗೂ 1,000 ರೂ. ನೋಟುಗಳನ್ನು ಬ್ಯಾನ್‌ ಮಾಡಿದ ಬಳಿಕ 2016 ರಲ್ಲಿ ಹೊಸ 500 ರೂ. ನೋಟುಗಳ ಜತೆಗೆ 2 ಸಾವಿರ ರೂ. ನೋಟುಗಳನ್ನು ದೇಶದಲ್ಲಿ ಪರಿಚಯಿಸಲಾಯ್ತು. ಕಪ್ಪು ಹಣ, ಭಯೋತ್ಪಾದನೆ ಹಾಗೂ ಇತರೆ ಗುರಿಗಳನ್ನು ಈಡೇರಿಸಲು ಈ ರೀತಿ ಮಾಡಲಾಗಿತ್ತು ಎಂದು ಆಗ ವರದಿಯಾಗಿತ್ತು. 
 

Latest Videos
Follow Us:
Download App:
  • android
  • ios