Asianet Suvarna News Asianet Suvarna News

ಈ ನಾಣ್ಯ ನಿಮ್ಮ ಬಳಿಯಿದ್ರೆ ಕೋಟ್ಯಧೀಶರಾಗ್ಬಹುದು!

ಹಳೆಯ ಕಾಲದ ನಾಣ್ಯ ಹಾಗೂ ನೋಟುಗಳು ನಿಮ್ಮ ಬಳಿಯಿದ್ರೆ ಮನೆಯಲ್ಲೇ ಕುಳಿತು ಲಕ್ಷಾಂತರ ರೂ. ಗಳಿಸಬಹುದು. ಆನ್ ಲೈನ್ ನಲ್ಲಿ ನಾಣ್ಯಗಳನ್ನು ಮಾರಾಟ ಮಾಡಿದ್ರೆ ಆಯ್ತು. ಹಾಗಾದ್ರೆ ಆನ್ ಲೈನ್ ನಲ್ಲಿ ನಾಣ್ಯಗಳನ್ನು ಮಾರಾಟ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ. 

THIS Rs 1 COIN can get you Rs 10 CRORE Do you have it
Author
First Published Dec 6, 2022, 11:32 AM IST

ನವದೆಹಲಿ (ಡಿ.6): ಸುಲಭವಾಗಿ ಹಣ ಸಿಗುತ್ತೆ ಅಂದ್ರೆ ಯಾರು ತಾನೇ ಬಿಡ್ತಾರೆ ಹೇಳಿ? ಅದೂ ಮನೆಯಲ್ಲೇ ಕುಳಿತು ಏನೂ ಕೆಲಸ ಮಾಡದೆ ಕೋಟ್ಯಂತರ ರೂ. ಸಂಪಾದಿಸುವ ಅವಕಾಶ ಸಿಕ್ಕರೆ, ಕೇಳಬೇಕೆ ಅದನ್ನು ಬಳಸಿಕೊಳ್ಳದೆ ಇರೋರು ಯಾರೂ ಇಲ್ಲ. ಅಂಥದೊಂದು ಅವಕಾಶವನ್ನು ನಿಮ್ಮ ಸಂಗ್ರಹದಲ್ಲಿರುವ ಹಳೆಯ ಕಾಲದ ನಾಣ್ಯಗಳು ಕಲ್ಪಿಸಬಲ್ಲವು. ಹೌದು, ಇತ್ತೀಚಿನ ದಿನಗಳಲ್ಲಿ ಹಳೆಯ ಅಥವಾ ಪುರಾತನ ಕಾಲದ ನಾಣ್ಯಗಳಿಗೆ ಬೇಡಿಕೆ ಹೆಚ್ಚಿದೆ. ಕೆಲವೊಂದು ವೆಬ್ ಸೈಟ್ ಗಳು ಇಂಥ ಪುರಾತನ ಹಾಗೂ ವಿಶಿಷ್ಟ ನಾಣ್ಯಗಳು ಹಾಗೂ ನೋಟುಗಳ ಬಿಡ್ಡಿಂಗ್ ನಡೆಸುತ್ತಿದ್ದು, ಲಕ್ಷಾಂತರ ರೂ. ಗಳಿಸುವ ಅವಕಾಶವನ್ನು ನೀಡಿವೆ. ಹಾಗೆಯೇ ಒಂದು ರೂ. ಮುಖಬೆಲೆಯ ಹಳೆಯ ನಾಣ್ಯ ನಿಮ್ಮ ಸಂಗ್ರಹದಲ್ಲಿದ್ದರೆ, ಕೋಟ್ಯಂತರ ರೂಪಾಯಿ ಗಳಿಸುವ ಅವಕಾಶವಿದೆ. 1885ರಲ್ಲಿ ಬ್ರಿಟಿಷರ ಕಾಲಾವಧಿಯಲ್ಲಿ ಸಿದ್ಧಗೊಂಡ ಒಂದು ರೂ. ಮುಖಬೆಲೆಯ ನಾಣ್ಯ ಹರಾಜಿನಲ್ಲಿ 10 ಕೋಟಿ ರೂ.ಗೆ ಮಾರಾಟವಾಗಿದೆ. ಹೀಗಾಗಿ ನಿಮ್ಮ ಬಳಿಯು ಇದೇ ಮಾದರಿಯ ನಾಣ್ಯವಿದ್ರೆ ನೀವು ಕೂಡ ಆನ್ ಲೈನ್ ಹರಾಜಿನಲ್ಲಿ ಭಾಗವಹಿಸುವ ಮೂಲಕ 10 ಕೋಟಿ ರೂ. ಗಳಿಸಬಹುದು. 

ಹಳೆಯ ನಾಣ್ಯ ಮಾರಾಟ ಮಾಡೋದು ಹೇಗೆ?
-ಇಂಡಿಯಾ ಮಾರ್ಟ್ ಅಧಿಕೃತ ವೆಬ್ ಸೈಟ್ www.indiamart.com ಭೇಟಿ ನೀಡಿ.
-ನೀವು ಮಾರಾಟ ಮಾಡಲು ಬಯಸಿರುವ ನಾಣ್ಯ ಅಥವಾ ನೋಟಿನ ಫೋಟೋ ಕ್ಲಿಕಿಸಿ.
-ಈ ಫೋಟೋವನ್ನು ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿ.
-ಆಗ ಆ ವೆಬ್ ಸೈಟ್ ನಿಮ್ಮ ಬಳಿ ನಾಣ್ಯವಿರುವ ಜಾಹೀರಾತು ನೀಡುತ್ತದೆ.
-ಈ ಜಾಹೀರಾತು ನೋಡಿ ಖರೀದಿಗೆ ಆಸಕ್ತಿ ಹೊಂದಿರುವ ಜನರು ನಿಮ್ಮನ್ನು ಸಂಪರ್ಕಿಸುತ್ತಾರೆ.
-ನೀವು ಅವರೊಂದಿಗೆ ಮಾತುಕತೆ ನಡೆಸಿ, ವ್ಯಾಪಾರ ಕುದುರಿಸಬಹುದು.

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ಮಾರ್ಚ್ ನಲ್ಲಿ ಡಿಎ ಹೆಚ್ಚಳ ಸಾಧ್ಯತೆ

RBI ಎಚ್ಚರಿಕೆ
ಹಳೆಯ ನೋಟು (Old note) ಹಾಗೂ ನಾಣ್ಯಗಳ (Coins) ಆನ್ ಲೈನ್  ಮಾರಾಟ (Online sale) ಹಾಗೂ ಖರೀದಿಗೆ (Purchase) ಸಂಬಂಧಿಸಿ ಆರ್ ಬಿಐ (RBI) ಕೆಲವು ಮಾರ್ಗಸೂಚಿ ಹಾಗೂ ಎಚ್ಚರಿಕೆ ಸಂದೇಶಗಳನ್ನು ಸಾರ್ವಜನಿಕರಿಗೆ ರವಾನಿಸಿದೆ ಕೂಡ. 'ಕೆಲವು ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕಿನ ಹೆಸರು ಹಾಗೂ ಲೋಗೋವನ್ನು ಅಕ್ರಮವಾಗಿ ಬಳಸಿಕೊಂಡು ಹಳೆಯ ಬ್ಯಾಂಕಿನ ನೋಟುಗಳು ಹಾಗೂ ನಾಣ್ಯಗಳ ಆನ್ ಲೈನ್ ಹಾಗೂ ಆನ್ ಲೈನ್ ಹೊರತಾದ ಮಾರಾಟ ಹಾಗೂ ಖರೀದಿಗೆ ಸಂಬಂಧಿಸಿದ ವಹಿವಾಟುಗಳಿಗೆ ಶುಲ್ಕ (Fees) ವಿಧಿಸುತ್ತಿರೋದು ಅಥವಾ ಕಮೀಷನ್ ಅಥವಾ ತೆರಿಗೆ ಪಡೆಯುತ್ತಿರೋದು ಆರ್ ಬಿಐ ಗಮನಕ್ಕೆ ಬಂದಿದೆ' ಎಂದು ಆರ್ ಬಿಐ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ ಕೂಡ.  ಅಷ್ಟೇ ಅಲ್ಲ, ಇಂಥ ವ್ಯವಹಾರಗಳಲ್ಲಿ ಆರ್ ಬಿಐ ಭಾಗಿಯಾಗಿಲ್ಲ. ಅಲ್ಲದೆ, ಇಂಥ ವಹಿವಾಟುಗಳ ಮೇಲೆ ಯಾವುದೇ ಶುಲ್ಕಗಳು ಅಥವಾ ಕಮೀಷನ್ ಪಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ ಕೂಡ.

ವಿವಾಹಿತರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಸಿಗುತ್ತೆ ತಿಂಗಳಿಗೆ 5000ರೂ. ಪಿಂಚಣಿ

2ರೂ. ನಾಣ್ಯಕ್ಕೆ 5ಲಕ್ಷ ರೂ.
ನಿಮ್ಮ ಬಳಿ ಕೆಲವು ನಿರ್ದಿಷ್ಟ ವರ್ಷಗಳಿಗೆ ಸಂಬಂಧಿಸಿದ ನಾಣ್ಯಗಳಿದ್ರೆ ಲಕ್ಷಾಂತರ ರೂಪಾಯಿ ಗಳಿಸಬಹುದು.  1994, 1995, 1997 ಹಾಗೂ 2000 ಸರಣಿ ವರ್ಷಗಳಿಗೆ ಸೇರಿದ 2ರೂ. ನಾಣ್ಯಗಳು ನಿಮ್ಮ ಬಳಿಯಿದ್ರೆ ಆನ್ ಲೈನ್ ನಲ್ಲಿ ಮಾರಾಟ ಮಾಡಿ 5ಲಕ್ಷ ರೂ. ಗಳಿಸಬಹುದು. ಈ ನಾಣ್ಯವನ್ನು ನೀವು OLX ನಲ್ಲಿ ಮಾರಾಟ ಮಾಡಬಹುದು. ಇದಕ್ಕೆ ನೀವು OLX ನಲ್ಲಿ ಮಾರಾಟಗಾರರಾಗಿ ಹೆಸರು ನೋಂದಾಯಿಸಬೇಕು. ಆ ಬಳಿಕ ನಾಣ್ಯದ ಎರಡೂ ಮುಖಗಳ ಫೋಟೋ ಅಪ್ ಲೋಡ್ ಮಾಡಿ. ಆ ಬಳಿಕ ನಿಮ್ಮ ಮೊಬೈಲ್ ಹಾಗೂ ಇ-ಮೇಲ್ ವಿಳಾಸ ನಮೂದಿಸಿ. ನೀವು ನೀಡಿರೋ ಎಲ್ಲ ಮಾಹಿತಿಗಳನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ಖರೀದಿದಾರರು ನಿಮ್ಮನ್ನು ನೇರವಾಗಿ ಸಂಪರ್ಕಿಸುತ್ತಾರೆ. 

Follow Us:
Download App:
  • android
  • ios