Asianet Suvarna News Asianet Suvarna News

ವಿವಾಹಿತರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಸಿಗುತ್ತೆ ತಿಂಗಳಿಗೆ 5000ರೂ. ಪಿಂಚಣಿ

ವೃದ್ಧಾಪ್ಯದಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಯೌವನದಲ್ಲೇ ಹೂಡಿಕೆ ಮಾಡೋದು ಅಗತ್ಯ. ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ನಿಮಗೆ 5ಸಾವಿರ ರೂ. ಪಿಂಚಣಿ ಸಿಗುತ್ತದೆ. ಆದ್ರೆ ನೀವು ವಿವಾಹಿತರಾಗಿರಬೇಕು ಅಷ್ಟೆ.

Atal Pension Yojana You can get up to Rs 5000 every month if you are married know how
Author
First Published Dec 5, 2022, 12:26 PM IST

Business Desk:ಮದುವೆ ಅನ್ನೋದು ಬದುಕಿನ ಮಹತ್ವದ ತಿರುವುಗಳಲ್ಲಿ ಒಂದು. ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಮೇಲೆ ದುಡ್ಡಿನ ಬೆಲೆ ಚೆನ್ನಾಗಿ ಅರಿವಾಗುತ್ತದೆ. ಕೈಯಲ್ಲಿ ಎಷ್ಟೇ ದುಡ್ಡಿದ್ದರೂ ಸಾಲದು ಎಂಬ ಸ್ಥಿತಿ ನಿರ್ಮಾಣವಾಗುತ್ತದೆ. ನಿತ್ಯದ ಖರ್ಚು-ವೆಚ್ಚ, ಮಕ್ಕಳ ಪಾಲನೆ, ಶಿಕ್ಷಣ, ಮದುವೆ ಹೀಗೆ ಬದುಕಿನ ಇಳಿಸಂಜೆಯ ತನಕ ಜವಾಬ್ದಾರಿಗಳು ಹೆಚ್ಚುತ್ತಲೇ ಸಾಗುತ್ತವೆ. ಹೀಗಿರುವಾಗ ಸಣ್ಣ ಆದಾಯದ ಮೂಲ ಸಿಕ್ಕಿದರೂ ಸಾಕು ದೊಡ್ಡ ಪ್ರಮಾಣದಲ್ಲೇ ನೆರವಾಗುತ್ತದೆ. ಹೀಗಿರುವಾಗ ವೃದ್ಧಾಪ್ಯದಲ್ಲಿ ವಿವಾಹಿತರಾಗಿರೋರಿಗೆ ಪ್ರತಿ ತಿಂಗಳು 5,000 ರೂ. ನೀಡುವಂತಹ ಯೋಜನೆಯೊಂದು ಇದೆ. ಅದೇ ಅಟಲ್ ಪಿಂಚಣಿ ಯೋಜನೆ.  ಇದರ ಪ್ರಯೋಜನವನ್ನು ಕೇವಲ ವಿವಾಹಿತರು ಮಾತ್ರ ಪಡೆಯಬಹುದು. ಅಟಲ್ ಪಿಂಚಣಿ ಯೋಜನೆ ಕೇಂದ್ರ ಸರ್ಕಾರದ ಹೂಡಿಕೆ ಯೋಜನೆಯಾಗಿದ್ದು, ಇದರಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಲು ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ ಹೊಂದಿರೋದು ಅಗತ್ಯ. ಈ ಯೋಜನೆಗೆ ಸೇರ್ಪಡೆಗೊಂಡ ಬಳಿಕ ಪತಿ ಹಾಗೂ ಪತ್ನಿ ಇಬ್ಬರೂ ಈ ಯೋಜನೆ ಪ್ರಯೋಜನ ಪಡೆಯಬಹುದು. ಈ ಯೋಜನೆಯಡಿಯಲ್ಲಿ ನೀವು ವಾರ್ಷಿಕ 1.5ಲಕ್ಷ ರೂ. ತನಕ ತೆರಿಗೆ ಪ್ರಯೋಜನ ಪಡೆಯಬಹುದು. 

ಪ್ರಯೋಜನಗಳೇನು?
ಈ ಯೋಜನೆಯಿಂದ ಪ್ರಯೋಜನ ಪಡೆಯಲು ನೀವು ಮೊದಲಿಗೆ ಬ್ಯಾಂಕ್ ಖಾತೆ ತೆರೆಯಬೇಕು. ಆ ಬಳಿಕ ಸಮೀಪದ ಅಂಚೆ ಕಚೇರಿಗೆ ಭೇಟಿ ನೀಡಿ ಅಲ್ಲಿ ಅಟಲ್ ಪಿಂಚಣಿ ಯೋಜನೆಯ ಅರ್ಜಿ ಭರ್ತಿ ಮಾಡಿ. ಈ ಯೋಜನೆಗೆ 18-40 ವಯಸ್ಸಿನ ನಡುವೆ ಇರೋರು ಸೇರ್ಪಡೆಯಾಗಬಹುದು. ಈ ಯೋಜನೆ ಪ್ರಯೋಜನ ಪಡೆಯಲು ನೀವು ಮೊದಲು ಇದರಲ್ಲಿ ಹೂಡಿಕೆ ಮಾಡಬೇಕು. ನಿಮಗೆ  60 ವರ್ಷ ಪೂರ್ಣಗೊಂಡ ಬಳಿಕ ಪಿಂಚಣಿ ರೂಪದಲ್ಲಿ ಪ್ರತಿ ತಿಂಗಳು ಹಣ ಪಡೆಯಬಹುದು. 

ಮತ್ತೆ ಗೃಹ, ವಾಹನ ಬಡ್ಡಿ ದರ ಏರಿಕೆ ಖಚಿತ: ನಾಡಿದ್ದು ಆರ್‌ಬಿಐ ಬಡ್ಡಿದರ ಏರಿಕೆ?

ಅರ್ಜಿದಾರ ಮರಣ ಹೊಂದಿದ್ರೂ ಸಿಗುತ್ತೆ ಪ್ರಯೋಜನ
ಅಟಲ್ ಪಿಂಚಣಿ ಯೋಜನೆಗೆ ಸೇರ್ಪಡೆಗೊಂಡಿರುವ ಅರ್ಜಿದಾರ ಒಂದು ವೇಳೆ ಮರಣ ಹೊಂದಿದರೂ ಆತನ ಕುಟುಂಬ ಸದಸ್ಯರಿಗೆ ಅದರ ಪ್ರಯೋಜನ ಸಿಗಲಿದೆ. ಅರ್ಜಿದಾರ ಮರಣ ಹೊಂದಿದ್ರೆ ಆತ ಅಥವಾ ಆಕೆಯ ಸಂಗಾತಿಗೆ ಯೋಜನೆಯ ಪ್ರಯೋಜನ ಸಿಗಲಿದೆ. ಒಂದು ವೇಳೆ ಪತಿ ಹಾಗೂ ಪತ್ನಿ ಇಬ್ಬರೂ ಯಾವುದೋ ಕಾರಣಕ್ಕೆ ಮರಣ ಹೊಂದಿದರೆ ಮಕ್ಕಳಿಗೆ ಈ ಯೋಜನೆ ಪ್ರಯೋಜನ ಸಿಗಲಿದೆ. 

ಅಟಲ್ ಪಿಂಚಣಿ ಯೋಜನೆಯನ್ನು  (APY scheme) ಕೇಂದ್ರ ಸರ್ಕಾರ 2015-16ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿತ್ತು. ಕೇಂದ್ರ ಸರ್ಕಾರದ (Central government) ಈ ಯೋಜನೆ ವೃದ್ಧಾಪ್ಯದಲ್ಲಿ ಆದಾಯ ಭದ್ರತೆ ನೀಡುವ ಜೊತೆಗೆ ಅಸಂಘಟಿತ ವಲಯದ ಎಲ್ಲ ನಾಗರಿಕರನ್ನು ಕೇಂದ್ರೀಕರಿಸಿತ್ತು. ಈ ಯೋಜನೆಯನ್ನು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಮೂಲಕ ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (PFRDA) ನಿರ್ವಹಿಸುತ್ತದೆ. 

ಬ್ಯಾಂಕ್ ಲಾಕರ್ ಬೇಕಿದೆಯಾ? ಯಾವ ಬ್ಯಾಂಕ್ ಎಷ್ಟು ಶುಲ್ಕ ವಿಧಿಸುತ್ತದೆ? ಇಲ್ಲಿದೆ ಮಾಹಿತಿ

ಕೇಂದ್ರ ಸರ್ಕಾರ ಇತ್ತೀಚೆಗೆ ಅಟಲ್ ಪಿಂಚಣಿ ಯೋಜನೆಯ (ಎಪಿವೈ ಯೋಜನೆ)) ಹೂಡಿಕೆ (Investment) ನಿಯಮಗಳಲ್ಲಿ (Rules) ಬದಲಾವಣೆ ಮಾಡಿದೆ.  ಆದಾಯ ತೆರಿಗೆ ಪಾವತಿಸುವ ಹೂಡಿಕೆದಾರರು (Investors) 2022ರ ಅಕ್ಟೋಬರ್ 1ರಿಂದ ಅಟಲ್ ಪಿಂಚಣಿ ಯೋಜನೆಗೆ ಸೇರ್ಪಡೆಗೊಳ್ಳಲು ಅರ್ಹರಾಗಿರೋದಿಲ್ಲ. ಒಂದು ವೇಳೆ ಆದಾಯ ತೆರಿಗೆ (Income Tax) ಪಾವತಿಸುತ್ತಿರುವ ವ್ಯಕ್ತಿ ಅಕ್ಟೋಬರ್ 1 ಅಥವಾ ಅದರ ನಂತರ ಎಪಿವೈ ಯೋಜನೆಗೆ (APY Yojana) ಸೇರ್ಪಡೆಗೊಂಡರೆ ಅಂಥ ಖಾತೆಯನ್ನು ಮುಚ್ಚಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. 
 

Follow Us:
Download App:
  • android
  • ios