ಆರ್ ಬಿಐ ಇತ್ತೀಚೆಗಷ್ಟೇ ರೆಪೋ ದರ ಹೆಚ್ಚಳ ಮಾಡಿದೆ. ಪರಿಣಾಮ ಬ್ಯಾಂಕ್ ಗಳು ಕೂಡ ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಳ ಮಾಡಿವೆ. ಹಾಗಾದ್ರೆ ಪ್ರಸ್ತುತ ಯಾವೆಲ್ಲ ಬ್ಯಾಂಕ್ ಗಳು ಎಫ್ ಡಿ ಮೇಲೆ ಉತ್ತಮ ಬಡ್ಡಿ ನೀಡುತ್ತಿವೆ. ಇಲ್ಲಿದೆ ಮಾಹಿತಿ.   

ನವದೆಹಲಿ (ಅ.12): ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಇತ್ತೀಚೆಗೆ ರೆಪೋ ದರವನ್ನು 50 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿದೆ. ಇದ್ರಿಂದ ಪ್ರಸ್ತುತ ರೆಪೋ ದರ ಶೇ.5.9ಕ್ಕೆ ಏರಿಕೆಯಾಗಿದೆ. ಇದ್ರಿಂದ ಅನೇಕ ಬ್ಯಾಂಕ್ ಗಳು ಸ್ಥಿರ ಠೇವಣಿ (ಎಫ್ ಡಿ) ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿವೆ. ಹೀಗಾಗಿ ಎಫ್ ಡಿ ಅಥವಾ ಆರ್ ಡಿ ಖಾತೆಗಳಲ್ಲಿ ಹೂಡಿಕೆ ಮಾಡೋರಿಗೆ ಉತ್ತಮ ರಿಟರ್ನ್ಸ್ ಸಿಗಲಿದೆ. ಈಗಾಗಲೇ ಫಿನ್ ಕೇರ್ ಸ್ಮಾಲ್ ಫೈನಾನ್ಷ್ ಬ್ಯಾಂಕ್, ಬಂಧನ್ ಬ್ಯಾಂಕ್ ಹಾಗೂ ಡೌಸಿ ಬ್ಯಾಂಕ್ ಸೇರಿದಂತೆ ಖಾಸಗಿ ಬ್ಯಾಂಕ್ ಗಳಲ್ಲಿ ಸ್ಥಿರ ಠೇವಣಿ ಹೊಂದಿರೋರಿಗೆ ಈಗಾಗಲೇ ಬಡ್ಡಿ ಏರಿಕೆ ಖುಷಿ ಹಬ್ಬದ ಮೆರುಗು ಹೆಚ್ಚಿಸಿದೆ. ಇನ್ನು ಸಾರ್ವಜನಿಕ ವಲಯದ ಬ್ಯಾಂಕ್ ಗಳು ಕೂಡ ತನ್ನ ಗ್ರಾಹಕರಿಗೆ ಎಫ್ ಡಿ ಮೇಲೆ ಉತ್ತಮ ಬಡ್ಡಿ ನೀಡಲು ಮುಂದಾಗಿವೆ. ಹೀಗಾಗಿ ಪ್ರಸ್ತುತ ಎಫ್ ಡಿ ಗಳಲ್ಲಿ ಹೂಡಿಕೆ ಮಾಡಿದ್ರೆ ಕೂಡ ಉತ್ತಮ ರಿಟರ್ನ್ಸ್ ಸಿಗಲಿದೆ. ಹಾಗಾದ್ರೆ ಯಾವ ಬ್ಯಾಂಕ್ ಸ್ಥಿರ ಠೇವಣಿ (ಎಫ್ ಡಿ) ಅಥವಾ ಆರ್ ಡಿ ಮೇಲೆ ಶೇ.7 ಅಥವಾ ಅದಕ್ಕಿಂತ ಹೆಚ್ಚಿನ ಬಡ್ಡಿ ನೀಡುತ್ತಿದೆ? ಇಲ್ಲಿದೆ ಮಾಹಿತಿ.

ಕೆನರಾ ಬ್ಯಾಂಕ್ 
666 ದಿನಗಳ ಅವಧಿಯ ಠೇವಣಿ ಮೇಲೆ ಕೆನರಾ ಬ್ಯಾಂಕ್ (Canara Bank) ಶೇ.7ರಷ್ಟು ಆಕರ್ಷಕ ಬಡ್ಡಿದರ (Interest rate) ನೀಡುತ್ತಿದೆ. ಈ ದರ ಸಾಮಾನ್ಯ ಸಾರ್ವಜನಿಕರಿಗೆ ಮಾತ್ರ. ಹಿರಿಯ ನಾಗರಿಕರಿಗೆ (Senior Citizen) ಬಡ್ಡಿದರ ಶೇ.7.5ರಷ್ಟಿದೆ. ಇನ್ನು 5 ವರ್ಷಗಳು ಹಾಗೂ ಅದಕ್ಕಿಂತ ಮೇಲ್ಪಟ್ಟ 10 ವರ್ಷಗಳ ಅವಧಿಯ ಎಫ್ ಡಿಗಳಿಗೆ ಸಾಮಾನ್ಯ ಸಾರ್ವಜನಿಕರಿಗೆ ಶೇ.7ಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇ.7.5 ಬಡ್ಡಿ ನೀಡಲಾಗುತ್ತಿದೆ. ಈ ದರಗಳು 2 ಕೋಟಿ ರೂ.ಕ್ಕಿಂತ ಕಡಿಮೆ ಮೊತ್ತದ ಠೇವಣಿಗಳಿಗಷ್ಟೇ ಅನ್ವಯಿಸುತ್ತವೆ. ಇನ್ನು 180 ದಿನಗಳು ಹಾಗೂ ಅದಕ್ಕಿಂತ ಹೆಚ್ಚಿನ ಅವಧಿಯ ಎಫ್ ಡಿ (FD) ಹೊಂದಿರುವ ಹಿರಿಯ ನಾಗರಿಕರಿಗೆ (Senior Citizens) ಈ ಮೇಲಿನ ಬಡ್ಡಿ ಮೇಲೆ ಹೆಚ್ಚುವರಿ ಶೇ.0.50 ನೀಡಲಾಗುತ್ತದೆ. 

ಸ್ವಿಸ್ ಬ್ಯಾಂಕ್‌ನ ಕಪ್ಪು ಹಣ ಖಾತೆದಾರರ ವಿವರ ಕೇಂದ್ರ ಸರ್ಕಾರಕ್ಕೆ ಲಭ್ಯ, ಹಲವರಿಗೆ ಶುರುವಾಗಿದೆ ನಡುಕ!

ಐಡಿಎಫ್ ಸಿ ಬ್ಯಾಂಕ್
ಈ ಬ್ಯಾಂಕ್ ಸಾಮಾನ್ಯ ಗ್ರಾಹಕರ 750 ದಿನಗಳ ಅವಧಿಯ ಎಫ್ ಡಿ (FD) ಮೇಲೆ ಶೇ.7.25 ಬಡ್ಡಿದರ ವಿಧಿಸಿದ್ರೆ, ಹಿರಿಯ ನಾಗರಿಕರಿಗೆ ಶೇ.7.75 ಬಡ್ಡಿ ನೀಡುತ್ತದೆ. 

ಆರ್ ಬಿಎಲ್ ಬ್ಯಾಂಕ್
ಖಾಸಗಿ ವಲಯದ ಈ ಬ್ಯಾಂಕ್ 15 ತಿಂಗಳ ಮೆಚ್ಯುರಿಟಿ (Maturity) ಅವಧಿ ಹೊಂದಿರುವ ಸಾಮಾನ್ಯ ಗ್ರಾಹಕರ ಠೇವಣಿ ಮೇಲೆ ಶೇ.7ರಷ್ಟು ಬಡ್ಡಿದರ ವಿಧಿಸುತ್ತದೆ. ಇನ್ನು ಹಿರಿಯ ನಾಗರಿಕರಿಗೆ ಶೇ.7.5 ಬಡ್ಡಿದರ ನೀಡುತ್ತದೆ. 725 ದಿನಗಳ ಅವಧಿಯ ಎಫ್ ಡಿ (FD) ಮೇಲೆ ಸಾಮಾನ್ಯ ಗ್ರಾಹಕರಿಗೆ ಶೇ. 7.25 ಹಾಗೂ ಹಿರಿಯ ನಾಗರಿಕರಿಗೆ ಶೇ.7.75 ರಷ್ಟು ಬಡ್ಡಿ ನೀಡುತ್ತದೆ. 726 ದಿನಗಳಿಂದ 24 ತಿಂಗಳಿಗಿಂತ ಕಡಿಮೆ ಅವಧಿಯ ಎಫ್ ಡಿ ಗಳ ಮೇಲೆ ಹಿರಿಯ ನಾಗರಿಕರಿಗೆ ಶೇ.7.50 ಹಾಗೂ ಸಾಮಾನ್ಯ ಗ್ರಾಹಕರಿಗೆ ಶೇ.7ರಷ್ಟು ಬಡ್ಡಿ ನೀಡುತ್ತದೆ.

ಸೋಪಿನ ಬೆಲೆಯಲ್ಲಿ ಶೇ.15ರಷ್ಟು ಇಳಿಕೆ;ಲಕ್ಸ್, ಲೈಫ್ ಬಾಯ್, ಗೋದ್ರೇಜ್ ಸೋಪುಗಳು ಅಗ್ಗ

ಬಂಧನ್ ಬ್ಯಾಂಕ್
ಒಂದು ವರ್ಷದಿಂದ 5 ವರ್ಷಗಳಿಗಿಂತ ಕಡಿಮೆ ಅವಧಿಯ ಎಫ್ ಡಿ (FD) ಮೇಲೆ ಸಾಮಾನ್ಯ ಜನರಿಗೆ ಶೇ.7 ಹಾಗೂ ಹಿರಿಯ ನಾಗರಿಕರಿಗೆ ಶೇ. 7.5ರಷ್ಟು ಬಡ್ಡಿಯನ್ನು (Interest) ಬಂಧನ್ ಬ್ಯಾಂಕ್ ನೀಡುತ್ತದೆ.