ನ.1ರಿಂದ ಬದಲಾಗಲಿವೆ ಈ 4 ನಿಯಮಗಳು; ಗ್ರಾಹಕರ ಜೇಬಿನ ಮೇಲೆ ಹೆಚ್ಚಲಿದೆ ಹೊರೆ!

ಪ್ರತಿ ತಿಂಗಳು ಪ್ರಾರಂಭವಾದಾಗ ಕೆಲವೊಂದು ನಿಯಮಗಳಲ್ಲಿ ಬದಲಾವಣೆಯಾಗೋದು ಸಹಜ. ಇವುಗಳಲ್ಲಿ ಕೆಲವು ಬದಲಾವಣೆಗಳು ಗ್ರಾಹಕರ ಜೇಬಿನ ಮೇಲೆ ನೇರ ಪರಿಣಾಮ ಬೀರಬಲ್ಲವು. ಹೀಗಾಗಿ ನಾಳೆಯಿಂದ ಪ್ರಾರಂಭವಾಗಲಿರುವ ನವೆಂಬರ್ ನಲ್ಲಿ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಇಲ್ಲಿದೆ ಮಾಹಿತಿ. 

These Rules changes From 1st November 2022 will affect your pocket

ನವದೆಹಲಿ (ಅ.31): ನಾಳೆಯಿಂದ ನವೆಂಬರ್ ತಿಂಗಳು ಪ್ರಾರಂಭವಾಗಲಿದೆ. ಹೊಸ ತಿಂಗಳಿಗೆ ಕಾಲಿಡುವ ಮುನ್ನ ಆ ತಿಂಗಳಲ್ಲಿ ಏನೆಲ್ಲ ಬದಲಾವಣೆಗಳಾಗಲಿವೆ ಎಂಬ ಬಗ್ಗೆ ಮಾಹಿತಿ ಹೊಂದಿರೋದು ಕೂಡ ಅಗತ್ಯ. ಏಕೆಂದರೆ ಕೆಲವೊಂದು ಆರ್ಥಿಕ ಬದಲಾವಣೆಗಳು ನೇರವಾಗಿ ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರಲಿವೆ. ಈಗಂತೂ ದೇಶದಲ್ಲಿ ಹಣದುಬ್ಬರ ಏರಿಕೆಯಿಂದ ಬಹುತೇಕ ವಸ್ತುಗಳು ದುಬಾರಿಯಾಗಿವೆ. ಹೀಗಿರೋವಾಗ ಬದಲಾಗುವ ನಿಯಮಗಳ ಬಗ್ಗೆ ಕೂಡ ಮಾಹಿತಿ ಹೊಂದಿರೋದು ಅಗತ್ಯ. ಪ್ರತಿ ತಿಂಗಳ ಮೊದಲ ದಿನ ಎಲ್ ಪಿಜಿ ಸಿಲಿಂಡರ್ ಬೆಲೆ ಬದಲಾಗೋದು ಸಾಮಾನ್ಯ. ಹೀಗಾಗ ನವೆಂಬರ್ ನಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ. ಇನ್ನು ನವೆಂಬರ್ ನಿಂದ ಎಲ್ಐಸಿ ಪಾಲಿಸಿ ಖರೀದಿಸೋರು ಕಡ್ಡಾಯವಾಗಿ ಕೆವೈಸಿ ಮಾಹಿತಿ ನೀಡಬೇಕು ಎಂಬ ನಿಯಮ ಕೂಡ ಜಾರಿಯಾಗುವ ಸಾಧ್ಯತೆಯಿದೆ. ಇನ್ನು ನವದೆಹಲಿಯಲ್ಲಿ ನವೆಂಬರ್  1ರಿಂದ ವಿದ್ಯುತ್ ಸಬ್ಸಿಡಿಗೆ ಸಂಬಂಧಿಸಿ ಹೊಸ ನಿಯಮ ಜಾರಿಯಾಗುವ ಸಾಧ್ಯತೆಯಿದೆ. ಇನ್ನು ಮಾಧ್ಯಮ ವರದಿ ಅನ್ವಯ ನವೆಂಬರ್ 1ರಿಂದ ರೈಲಿನ ಹೊಸ ವೇಳಾಪಟ್ಟಿಯನ್ನು ಭಾರತೀಯ ರೈಲ್ವೆ ಪ್ರಕಟಿಸಲಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. 

ಎಲ್ ಪಿಜಿ ಸಿಲಿಂಡರ್ ಬೆಲೆ ಬದಲಾವಣೆ
ನವೆಂಬರ್ 1ರಂದು ವಾಣಿಜ್ಯ ಹಾಗೂ ಗೃಹ ಬಳಕೆ ಎಲ್ಪಿಜಿ  ಸಿಲಿಂಡರ್ (LPG Cylinder) ಬೆಲೆಯಲ್ಲಿ ವ್ಯತ್ಯಾಸವಾಗುವ ನಿರೀಕ್ಷೆಯಿದೆ. ಗೃಹ ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳವಾಗಬಹುದು ಇಲ್ಲವೇ ಇಳಿಕೆ ಕೂಡ ಆಗಬಹುದು. ಹಾಗೆಯೇ ಕೆಲವೊಮ್ಮೆ ಯಾವುದೇ ಬದಲಾವಣೆ ಕೂಡ ಆಗದೇ ಇರಬಹುದು. ಜುಲೈನಿಂದ ದೇಶದಲ್ಲಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಕ್ಟೋಬರ್ ನಲ್ಲಿ ವಾಣಿಜ್ಯ ಸಿಲಿಂಡರ್ ದರವನ್ನು 25 ರೂ. ಇಳಿಕೆ ಮಾಡಲಾಗಿತ್ತು. ಇದರಿಂದ 1,885ರೂ.ಇದ್ದ ಸಿಲಿಂಡರ್‌ ದರ 1859.5ರೂ.ಗೆ ಇಳಿಕೆಯಾಗಿದೆ.  ಆದರೆ, ಗೃಹ ಬಳಕೆಯ 14.2 ಕೆ.ಜಿ ಸಿಲಿಂಡರ್‌ ಬೆಲೆ 1,053 ರೂ. ಇದ್ದು, ಯಾವುದೇ ಬದಲಾವಣೆಯಾಗಿಲ್ಲ. 

ಸಕ್ಕರೆ ರಫ್ತಿನ ಮೇಲಿನ ನಿರ್ಬಂಧ ಮತ್ತೆ 1 ವರ್ಷ ಮುಂದುವರಿಕೆ

ಸಬ್ಸಿಡಿ ಹೊಸ ನಿಯಮ
ನವದೆಹಲಿಯಲ್ಲಿ ನವೆಂಬರ್ ನಿಂದ ವಿದ್ಯುತ್ ಸಬ್ಸಿಡಿಗೆ (Subsidy) ಸಂಬಂಧಿಸಿದ ಹೊಸ ನಿಯಮ ಜಾರಿಯಾಗಲಿದೆ. ಈ ನಿಯಮದ ಅನ್ವಯ ಅಕ್ಟೋಬರ್ 31ರ ತನಕ ವಿದ್ಯುತ್  (Electricity) ಸಬ್ಸಿಡಿ  (Subsidy) ಪಡೆಯಲು ಯಾರು ನೋಂದಣಿ ಮಾಡಿಲ್ಲವೋ ಅವರಿಗೆ ನವೆಂಬರ್ 1ರಿಂದ ವಿದ್ಯುತ್ ಸಬ್ಸಿಡಿ ಸಿಗೋದಿಲ್ಲ. ನವದೆಹಲಿಯಲ್ಲಿ ಪ್ರತಿ ತಿಂಗಳು 200 ಯುನಿಟ್ ತನಕ ಉಚಿತ ವಿದ್ಯುತ್ ಪಡೆಯಲು ನೋಂದಣಿ ಮಾಡಿಸೋದು ಅಗತ್ಯ. ಯಾರು ಅಕ್ಟೋಬರ್ 31ರ ತನಕ ನೋಂದಣಿ ಮಾಡಿಸಿಲ್ಲವೋ ಅಂಥವರಿಗೆ ಸಬ್ಸಿಡಿ ಸಿಗೋದಿಲ್ಲ. 

ಕೆವೈಸಿ ಅಗತ್ಯ
ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (IRDAI) ನವೆಂಬರ್ 1ರಿಂದ ಪಾಲಿಸಿದಾರರಿಗೆ ಕೆವೈಸಿ (KYC) ಮಾಹಿತಿ ನೀಡೋದನ್ನು ಕಡ್ಡಾಯಗೊಳಿಸುವ ಸಾಧ್ಯತೆಯಿದೆ. ಈ ತನಕ ಜೀವ ವಿಮಾ (Life Insurance) ಹೊರತಾದ ಪಾಲಿಸಿಗಳನ್ನು (Policies) ಖರೀದಿಸುವಾಗ ಕೆವೈಸಿ ನೀಡೋದು ಪಾಲಿಸಿದಾರರ ಸ್ವ ಇಚ್ಛೆಗೆ ಬಿಟ್ಟಿದ್ದಾಗಿತ್ತು. ಆದರೆ, ಇನ್ಮುಂದೆ ಕೆವೈಸಿ ನೀಡೋದು ಕಡ್ಡಾಯ. 

Personal Finance : ಖರ್ಚು ಮಾಡಿದ್ದು ಸಾಕು, ನವೆಂಬರ್ ನಲ್ಲಿ ಉಳಿತಾಯ ಶುರು ಮಾಡಿ..

ರೈಲಿನ ಸಮಯ ಬದಲು
ಭಾರತೀಯ ರೈಲ್ವೆ ಇಲಾಖೆ ರೈಲುಗಳ ವೇಳಾಪಟ್ಟಿಯನ್ನು ನವೆಂಬರ್ 1ರಿಂದ ಬದಲಾಯಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. 10 ಸಾವಿರ ಪ್ರಯಾಣಿಕ ರೈಲುಗಳು ಮತ್ತು 5 ಸಾವಿರ ಸರಕು ರೈಲುಗಳು ನವೆಂಬರ್ 1ರಿಂದ ಸಮಯ ಬದಲಾಯಿಸುವ ನಿರೀಕ್ಷೆಯಿದೆ. ಹಾಗೆಯೇ ದೇಶದಲ್ಲಿ ಸಂಚರಿಸುವ ಸುಮಾರು 30 ರಾಜಧಾನಿ ರೈಲುಗಳ ಸಮಯ ಕೂಡ ಬದಲಾಗುವ ಸಾಧ್ಯತೆಯಿದೆ. 

Latest Videos
Follow Us:
Download App:
  • android
  • ios