ಷೇರುಮಾರುಕಟ್ಟೆಯಲ್ಲಿ ಇನ್ಮುಂದೆ HDFC ಲಿಮಿಟೆಡ್ ನಿಮ್ಮ ಕಣ್ಣಿಗೆ ಕಾಣೋದಿಲ್ಲ. ಇಂದಿನಿಂದ ಈ ಕಂಪನಿ ಟ್ರೇಡಿಂಗ್ ಬಂದ್ ಆಗಿದೆ. ಅದ್ರ ಜಾಗವನ್ನು ಬೇರೆ ಕಂಪನಿ ಪಡೆದಿದ್ದು ಯಾಕೆ ಎಂಬುದರ ವಿವರ ಇಲ್ಲಿದೆ. 

ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋರು ನೀವಾಗಿದ್ದರೆ ನಿಮಗೊಂದು ಮುಖ್ಯವಾದ ಮಾಹಿತಿ ಇದೆ. ವಸತಿ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಅಂದರೆ ಎಚ್ ಡಿಎಫ್ ಸಿ ಲಿಮಿಟೆಡ್ ನಿನ್ನೆಯಿಂದ ತನ್ನ ಷೇರುಗಳ ಟ್ರೇಡಿಂಗ್ ಬಂದ್ ಮಾಡಿದೆ. ಇದ್ರ ಮೂಲಕ ದೇಶದ ಅತ್ಯಂತ ಹಳೆಯ ಹೌಸಿಂಗ್ ಫೈನಾನ್ಸ್ ಕಂಪನಿಯ 4 ದಶಕಗಳ ಪಯಣ ಅಂತ್ಯಗೊಂಡಿತು. 44 ವರ್ಷಗಳ ಕಾಲ ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸಿದ್ದ ಎಚ್ ಡಿಎಫ್ ಸಿ ತನ್ನ ಟ್ರೇಡಿಂಗ್ ಬಂದ್ ಮಾಡಿದೆ. 

ಜುಲೈ 1, 2023ರಂದು ಎಚ್ ಡಿಎಫ್ ಸಿ (HDF c) ಬ್ಯಾಂಕ್ ಜೊತೆ ಎಚ್ ಡಿಎಫ್ ಸಿ ವಿಲೀನಗೊಂಡಿದ್ದು ಅಲ್ಲಿಂದ ಎಚ್ ಡಿಎಫ್ ಸಿ ಅಸ್ತಿತ್ವದಲ್ಲಿಲ್ಲ. ಇನ್ಮುಂದೆ ಈ ಎಚ್ ಡಿಎಫ್ ಸಿ ಜಾಗವನ್ನು ಬೇರೆ ಕಂಪನಿಗಳು ಪಡೆಯಲಿವೆ. 

ಕೇವಲ 999ಕ್ಕೆ ಜಿಯೋ ಕಂಪನಿಯಿಂದ ಮೊಬೈಲ್‌: 400 ಮಂದಿಗೆ ಗಿಫ್ಟ್‌

1977ರಲ್ಲಿ ಶುರುವಾಗಿತ್ತು ಎಚ್ ಡಿಎಫ್ ಸಿ : ಎಚ್ ಡಿಎಫ್ ಸಿ ಲಿಮಿಡೆಟ್ ಅಕ್ಟೋಬರ್ 17, 1977ರಂದು ಎಚ್ ಡಿ ಪರೇಕ್ ಮೂಲಕ ಶುಭಾರಂಭಗೊಂಡಿತ್ತು. 1978ರಲ್ಲಿ ಈ ಕಂಪನಿ ತನ್ನ ಐಪಿಒ ಶುರು ಮಾಡಿತ್ತು. ಇದ್ರ ಫೇಸ್ ವ್ಯಾಲ್ಯೂ 100 ರೂಪಾಯಿಯಾಗಿತ್ತು. ಆದ್ರೆ ಆ ಸಮಯದಲ್ಲಿ ಗೃಹ ಸಾಲ ಉತ್ಪನ್ನ ಹೆಚ್ಚು ಪ್ರಸಿದ್ಧಿ ಪಡೆದಿರಲಿಲ್ಲ. ಹಾಗಾಗಿ ಜನರಿಗೆ ಎಚ್ ಡಿಎಫ್ ಸಿ ಲಿಮಿಟೆಡ್ ಹೊಸ ಬ್ರ್ಯಾಂಡ್ ಆಗಿತ್ತು. ಹಾಗಾಗಿ ಎಚ್ ಡಿಎಫ್ ಸಿ ಲಿಮಿಡೆಟ್ ಐಪಿಒ (IPO) ಹೆಚ್ಚಿನ ಹೂಡಿಕೆ (Investment) ದಾರರನ್ನು ಪಡೆಯಲಿಲ್ಲ. ಪೂರ್ಣ ಚಂದಾದಾರಿಕೆಯನ್ನು ಸಹ ಪಡೆಯಲು ಸಾಧ್ಯವಾಗಲಿಲ್ಲ. ಆದ್ರೆ ನಿಧಾನವಾಗಿ ಈ ಕಂಪನಿ ಹೆಸರು ಗಳಿಸಲು ಶುರುಮಾಡಿತ್ತು. ನಂತ್ರ 10 ಮೌಲ್ಯಯುತ ಕಂಪನಿಗಳ ಪಟ್ಟಿಗೆ ಸೇರಿಕೊಂಡು ತನ್ನ ಅಸ್ತಿತ್ವದ ಕೊನೆಯವರೆಗೂ ತನ್ನ ಅಧಿಪತ್ಯವನ್ನು ಉಳಿಸಿಕೊಂಡಿತ್ತು. 

ಎಚ್ ಡಿಎಫ್ ಸಿ ಲಿಮಿಟೆಡ್ (HDFC Limited) ಈ ಹಂತಕ್ಕೆ ಹೋಗಲು ಇವರು ಕಾರಣ : ಎಚ್‌ಡಿಎಫ್‌ಸಿ ಗ್ರೂಪ್‌ನ ಅದ್ಭುತ ಸಾಧನೆಯ ಹಿಂದೆ ಎಚ್‌ಟಿ ಪಾರೇಖ್ ಅವರ ಸೋದರಳಿಯ ಮತ್ತು ಜೂನ್ 30 ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ದೀಪಕ್ ಪಾರೇಖ್ ಅವರಿಗೆ ಸಲ್ಲುತ್ತದೆ. ದೀಪಕ್ ಪಾರೇಖ್ ನೇತೃತ್ವದಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಎಚ್ ಡಿಎಫ್ ಸಿ ಲಿಮಿಟೆಡ್ ಹೊಸ ಆಯಾಮವನ್ನು ಶುರು ಮಾಡಿದೆ. ವಿಲೀನದ ಒಂದು ದಿನ ಮೊದಲು ಪತ್ರದ ಮೂಲಕ ತಮ್ಮ ನಿವೃತ್ತಿಯನ್ನು ಘೋಷಣೆ ಮಾಡಿದ್ದರು. ಕಂಪನಿಗೆ ವಿದಾಯ ಹೇಳುವ ಸಮಯ ಬಂದಿದೆ. ಮುಂದಿನ ದಿನಗಳಲ್ಲಿ ನಮ್ಮ ಕಂಪನಿ ಇನ್ನಷ್ಟು ಮೇಲಕ್ಕೇರಲಿದೆ ಎಂಬ ನಂಬಿಕೆ ನನಗಿದೆ. ಎಚ್ ಡಿಎಫ್ ಸಿ ಗ್ರೂಪ್ ನ ಅನುಭವ ಅಮೂಲ್ಯವಾದದ್ದು ಎಂದು ಅವರು ಬರೆದಿದ್ದರು.

Personal Finance: ಹೆಚ್ಚಿಗೆ ಸಂಬಳ ಬೇಕಾ? ಈ ಸಿಟಿಯಲ್ಲಿ ಸಿಗುತ್ತೆ ಅತ್ಯಧಿಕ ಸ್ಯಾಲರಿ

ಈ ವಿಷ್ಯದಲ್ಲಿ ರಿಲಾಯನ್ಸ್ ಹಿಂದಿಕ್ಕಿದ್ದ ಎಚ್ ಡಿಎಫ್ ಸಿ : ಈಗ ಎಚ್ ಡಿಎಫ್ ಸಿ ಬ್ಯಾಂಕ್ ಜೊತೆ ಎಚ್ ಡಿಎಫ್ ಸಿ ಗ್ರೂಪ್ ವಿಲೀನವಾಗಿದೆ. ಇದರೊಂದಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಮಾರುಕಟ್ಟೆ ಮೌಲ್ಯದಲ್ಲಿ ವಿಶ್ವದ ನಾಲ್ಕನೇ ಅತಿದೊಡ್ಡ ಬ್ಯಾಂಕ್ ಆಗಿದೆ. ವಿಲೀನದ ನಂತರ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ವೇಟೇಜ್ ಶೇಕಡಾ 14.43 ಕ್ಕೆ ಏರಿದೆ. ಇದು ದೇಶದ ಅತ್ಯಂತ ಮೌಲ್ಯಯುತ ಕಂಪನಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ಗಿಂತ ಹೆಚ್ಚಿದೆ. ನಿಫ್ಟಿಯಲ್ಲಿ ರಿಲಾಯನ್ಸ್ ವೇಟೇಜ್ ಶೇಕಡಾ 10.8ರಷ್ಟಿದೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಎಚ್ ಡಿಎಫ್ ಸಿಯಿಂದ ದೊಡ್ಡ ಲಾಭವಾಗಿದೆ. 1992ರ ಆಸುಪಾಸಿನಲ್ಲಿ ಕಂಪನಿ ಷೇರಿನ ಬೆಲೆ 7 ರೂಪಾಯಿ ಆಸುಪಾಸಿತ್ತು. ಟ್ರೇಡಿಂಗ್ ನ ಕೊನೆ ದಿನ ಬುಧವಾರದಂದು ಅದ್ರ ಬೆಲೆ 2,732 ರೂಪಾಯಿಯಾಗಿತ್ತು.