ಹಲವು ವರ್ಷಗಳ ನಿರೀಕ್ಷೆಯ ಬಳಿಕ ಭಾರತದಲ್ಲಿ ಟೆಸ್ಲಾ ತನ್ನ ಕಾರು ಫ್ಯಾಕ್ಟರಿಯನ್ನು ತೆರೆಯಲು ನಿರ್ಧರಿಸಿದ್ದು, ಕಾರಿನ ಬೆಲೆ 20 ಲಕ್ಷ ರು. ಇರಲಿದೆ ಎಂದು ಮೂಲಗಳು ಹೇಳಿವೆ. ಈ ಕುರಿತಾಗಿ ಭಾರತ ಸರ್ಕಾರ ಹಾಗೂ ಟೆಸ್ಲಾ ಕಂಪನಿ ಈಗಾಗಲೇ ಮಾತುಕತೆಯನ್ನು ಆರಂಭಿಸಿವೆ.

ನವದೆಹಲಿ: ಹಲವು ವರ್ಷಗಳ ನಿರೀಕ್ಷೆಯ ಬಳಿಕ ಭಾರತದಲ್ಲಿ ಟೆಸ್ಲಾ ತನ್ನ ಕಾರು ಫ್ಯಾಕ್ಟರಿಯನ್ನು ತೆರೆಯಲು ನಿರ್ಧರಿಸಿದ್ದು, ಕಾರಿನ ಬೆಲೆ 20 ಲಕ್ಷ ರು. ಇರಲಿದೆ ಎಂದು ಮೂಲಗಳು ಹೇಳಿವೆ. ಈ ಕುರಿತಾಗಿ ಭಾರತ ಸರ್ಕಾರ ಹಾಗೂ ಟೆಸ್ಲಾ ಕಂಪನಿ ಈಗಾಗಲೇ ಮಾತುಕತೆಯನ್ನು ಆರಂಭಿಸಿವೆ.

ಈಗಾಗಲೇ ಚೀನಾದಲ್ಲಿ ತನ್ನ ಕಾರ್ಖಾನೆ ತೆರೆದಿರುವ ಟೆಸ್ಲಾ ಇದನ್ನು ಭಾರತಕ್ಕೂ ವಿಸ್ತರಿಸಲು ನಿರ್ಧರಿಸಿದ್ದು, ಭಾರತದಲ್ಲಿ ಉತ್ಪಾದನೆಯಾಗುವ ಕಾರುಗಳನ್ನು ಇಂಡೋ ಪೆಸಿಫಿಕ್‌ ವಲಯದಲ್ಲಿ ರಫ್ತು ಮಾಡುವ ಸಾಧ್ಯತೆ ಇದೆ. ಟೆಸ್ಲಾ ಈ ಬಾರಿ ಉತ್ತಮ ಯೋಜನೆಯೊಂದಿಗೆ ಭಾರತ ಸರ್ಕಾರವನ್ನು ಸಂಪರ್ಕಿಸಿದೆ. ಹಾಗಾಗಿ ಈ ಬಾರಿ ಈ ಯೋಜನೆ ಧನಾತ್ಮಕವಾಗಿ ಮುಂದುವರೆಯಲಿದೆ ಎಂಬ ವಿಶ್ವಾಸವಿದೆ. ಈಗಾಗಲೇ ವಾಣಿಜ್ಯ ಕೈಗಾರಿಕೆ ಸಚಿವಾಲಯ ಟೆಸ್ಲಾದೊಂದಿಗಿನ ಮಾತುಕತೆಯನ್ನು ಮುನ್ನಡೆಸುತ್ತಿದ್ದು, ಸರ್ಕಾರ ಈ ಬಾರಿ ಉತ್ತಮ ಡೀಲ್‌ ಮಾಡಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. 

ಮೂರ್ಮೂರು ಮದ್ವೆಯಾದ ಎಲಾನ್ ಮಸ್ಕ್ ನೆಟ್ ವರ್ಥ್ ಎಷ್ಟಿದೆ ಗೊತ್ತಾ?

ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ಸಮಯದಲ್ಲಿ ಟೆಸ್ಲಾ ಸಿಇಒ ಎಲಾನ್‌ ಮಸ್ಕ್ ಜೊತೆ ಮಾತುಕತೆ ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದೆ. ಮೋದಿ ಭೇಟಿಗೂ ಮುನ್ನ ಭಾರತ ಪ್ರವಾಸ ಕೈಗೊಂಡಿದ್ದ ಟೆಸ್ಲಾ ಕಂಪನಿಯ ಪದಾಧಿಕಾರಿಗಳು ಮಾತುಕತೆ ಆರಂಭಿಸಿದ್ದರು. ಆದರೆ ಮಸ್‌್ಕ ಮತ್ತು ಮೋದಿ ಭೇಟಿಯ ಬಳಿಕ ಈ ಮಾತುಕತೆ ಮತ್ತಷ್ಟುವೇಗ ಪಡೆದುಕೊಂಡಿದೆ.

ಟ್ವೀಟರ್‌ ಸ್ಥಳೀಯ ನಿಯಮ ಪಾ​ಲಿ​ಸ​ಬೇ​ಕು: ಎಲಾನ್‌ ಮಸ್ಕ್‌