ಮೂರ್ಮೂರು ಮದ್ವೆಯಾದ ಎಲಾನ್ ಮಸ್ಕ್ ನೆಟ್ ವರ್ಥ್ ಎಷ್ಟಿದೆ ಗೊತ್ತಾ?
ಎಲೋನ್ ಮಸ್ಕ್ ಹೆಸರನ್ನು ಬಹುತೇಕ ಎಲ್ಲರೂ ಕೇಳಿರ್ತಾರೆ. ಶ್ರೀಮಂತ ವ್ಯಕ್ತಿ, ದೊಡ್ಡ ಕಂಪನಿ ಸಿಇಒ ಮಸ್ಕ್ ಮದುವೆ ವಿಷ್ಯದಲ್ಲೂ ಹಿಂದೆ ಬಿದ್ದಿಲ್ಲ. ಮೂರು ಮದುವೆಯಾದ ಮಸ್ಕ್ ಗೆ ಎಷ್ಟು ಮಕ್ಕಳು ಗೊತ್ತಾ? ಮಸ್ಕ್ ಕುಟುಂಬ, ವ್ಯವಹಾರದ ಬಗ್ಗೆ ಡಿಟೇಲ್ ಇಲ್ಲಿದೆ.
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಎಲೋನ್ ಮಸ್ಕ್ 52 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಎಲೋನ್ ಮಸ್ಕ್ ಒಟ್ಟು ನಿವ್ವಳ ಆಸ್ತಿ ಮೌಲ್ಯವು 219 ಬಿಲಿಯನ್ ಡಾಲರ್. 2023ರಲ್ಲಿ ಪ್ರಸ್ತುತ ವರ್ಷದಲ್ಲಿ ಇಲ್ಲಿಯವರೆಗೆ ಎಲೋನ್ ಮಸ್ಕ್ 81.8 ಶತಕೋಟಿ ಸಂಪಾದನೆ ಮಾಡಿದ್ದಾರೆ.
ಟ್ವಿಟರ್ (Twitter) ಸಿಇಒ ಹುದ್ದೆಯನ್ನು ಲಿಂಡಾ ಯಾಕಾರಿನೊ ಅವರಿಗೆ ಹಸ್ತಾಂತರಿಸಿದ ನಂತರ, ಎಲೋನ್ ಮಸ್ಕ್ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಾಸ್ಕ್ (Elon Musk) ವ್ಯವಹಾರದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವ ಅಗತ್ಯವಿದೆ. ಲಕ್ಷಾಂತರ ಯುವಕರಿಗೆ ಎಲೋನ್ ಮಸ್ಕ್ ಮಾದರಿಯಾಗಿದ್ದಾರೆ.
ಈ 6 ಟಿಪ್ಸ್ ಅನುಸರಿಸಿದ್ರೆ ದೊಡ್ಡ ಪ್ರಮಾಣದ ತೆರಿಗೆ ಉಳಿತಾಯ ಮಾಡ್ಬಹುದು, ಅದು ಹೇಗೆ? ಇಲ್ಲಿದೆ ಮಾಹಿತಿ
ಎಲೋನ್ ಮಸ್ಕ್ ವೈಯಕ್ತಿಕ ಜೀವನ (Personal Life) : ವ್ಯವಹಾರ (Business) ದಲ್ಲಿ ಸಾಕಷ್ಟು ಸುದ್ದಿ ಮಾಡಿರುವ ಎಲೋನ್ ಮಸ್ಕ್, ಕೌಟುಂಬಿಕ ವಿಷ್ಯದಲ್ಲೂ ಆಗಾಗ ಸುದ್ದಿಯಲ್ಲಿರುತ್ತಾರೆ. ಜೂನ್ 28, 1971 ರಂದು ಜನಿಸಿದ ಎಲೋನ್ ಮಸ್ಕ್ ಮೂರು ಮದುವೆಯಾಗಿದ್ದಾರೆ. ಮೊದಲ ಮದುವೆ ಕೆನಡಾದ ಬರಹಗಾರ ಜಸ್ಟಿನ್ ವಿಲ್ಸನ್ ಅವರೊಂದಿಗೆ 2000 ರಲ್ಲಿ ನಡೆಯಿತು. ಜಸ್ಟಿನ್ ವಿಲ್ಸನ್ 2004 ರಲ್ಲಿ ಗ್ರಿಫಿನ್ ಮತ್ತು ಕ್ಸೇವಿಯರ್ ಮಸ್ಕ್ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಇದರ ನಂತರ 2006 ರಲ್ಲಿ ವಿಲ್ಸನ್, ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದರು. 2008 ರಲ್ಲಿ ಮಸ್ಕ್, ವಿಲ್ಸನ್ ರಿಗೆ ವಿಚ್ಛೇದನ ನೀಡಿದ್ರು. 2010 ರಲ್ಲಿ ಅಮೇರಿಕನ್ ನಟಿ ತಲ್ಲುಲಾ ರಿಲೆ ಅವರನ್ನು ಮಸ್ಕ್ ವಿವಾಹವಾದರು. ಅವರಿಬ್ಬರೂ ಎರಡು ವರ್ಷಗಳ ನಂತರ ವಿಚ್ಛೇದನ ಪಡೆದಿದ್ದರು. 2013 ರಲ್ಲಿ ಮಸ್ಕ್ ತಾಲುಲಾ ರಿಲೆಯೊಂದಿಗೆ ಮತ್ತೆ ವಿವಾಹವಾದರು. ಅದು 2016 ರಲ್ಲಿ ಮತ್ತೆ ವಿಚ್ಛೇದನದಲ್ಲಿ ಕೊನೆಗೊಂಡಿತು. ಇದರ ನಂತರ, ಮಸ್ಕ್ ದೀರ್ಘಕಾಲದವರೆಗೆ ಸಿಂಗರ್ ಗ್ರಿಮ್ಸ್ ಜೊತೆ ಡೇಟಿಂಗ್ ನಲ್ಲಿದ್ದರು. ಅಬ್ಬರಿಗೂ ಒಬ್ಬ ಮಗನಿದ್ದಾನೆ. ಅವರ ಹೆಸರು X AE A-XII. ಇದಲ್ಲದೆ ಮಾರ್ಚ್ 2022 ರಲ್ಲಿ ಬಾಡಿಗೆ ತಾಯಿ ಮೂಲಕ ಹೆಣ್ಣು ಮಗುವನ್ನು ಪಡೆದಿರುವುದಾಗಿ ಗ್ರಿಮ್ಸ್ ಹೇಳಿದ್ದಾರೆ.
ಎಲೋನ್ ಮಸ್ಕ್ ಶಿಕ್ಷಣ (Qulification of Elons Musk) : ಎಲೋನ್ ಮಸ್ಕ್ 17ನೇ ವಯಸ್ಸಿನಲ್ಲಿ ಕೆನಡಾಕ್ಕೆ ತೆರಳಿ ಅಲ್ಲಿ ಕ್ವೀನ್ಸ್ ವಿಶ್ವವಿದ್ಯಾನಿಲಯ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಪಡೆದರು. ಅರ್ಥಶಾಸ್ತ್ರ ಮತ್ತು ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮಸ್ಕ್, 1995 ರಲ್ಲಿ ಕ್ಯಾಲಿಫೋರ್ನಿಯಾದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಹೆಚ್ಚುವರಿ ಶಿಕ್ಷಣ ಪಡೆದಿದ್ದಾರೆ.
ಐಟಿಆರ್ ಸಲ್ಲಿಕೆ ಮಾಡಲು ಪ್ಯಾನ್ ಕಾರ್ಡ್ ಇಲ್ಲವೆ? ಇ-ಪ್ಯಾನ್ ಡೌನ್ಲೋಡ್ ಮಾಡಲು ಈ ಸರಳ ವಿಧಾನ ಅನುಸರಿಸಿ
ಎಲೋನ ಮಸ್ಕ್ ವ್ಯವಹಾರ (Business):
Zip2 : ಇದು ಆನ್‌ಲೈನ್ ಯಲ್ಲೋ ಪೇಜ್ ಕಂಪನಿಯಾಗಿದೆ. ಇದನ್ನು ಎಲೋನ್ ಮಸ್ಕ್ ಮಾರಾಟ ಮಾಡಿದ್ದಾರೆ. ಇದ್ರ ಮಾರಾಟದ ವೇಳೆ ಮಸ್ಕ್ 300 ಮಿಲಿಯನ್ ಡಾಲರ್ ಹಣ ಗಳಿಸಿ, ದೊಡ್ಡ ಲಾಭ ಪಡೆದಿದ್ದರು.
XCom : ಎಲೋನ್ ಮಸ್ಕ್ ಇದ್ರಲ್ಲೂ ಹೂಡಿಕೆ ಮಾಡಿದ್ದಾರೆ.
SpaceX : 125 ಬಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಈ ಕಂಪನಿಯು ಬಾಹ್ಯಾಕಾಶ ಕ್ಷೇತ್ರದಲ್ಲಿ 24 ಲಾಂಚ್ ಮಾಡಿದೆ. ನಾಸಾದ ಗ್ರಾಹಕರಾಗಿ ಅನೇಕ ದಾಖಲೆಗಳನ್ನು ಈ ಕಂಪನಿ ಮಾಡಿದೆ.
ಟೆಸ್ಲಾ : ಎಲೋನ್ ಮಸ್ಕ್ ಅದನ್ನು ಮಾರ್ಟಿನ್ ಎಬರ್ಹಾರ್ಡ್ ಮತ್ತು ಮಾರ್ಕ್ ಟಾರ್ಪಿಂಗ್ ಅವರಿಂದ ಖರೀದಿಸಿದರು. 2004 ರಲ್ಲಿ ಮಸ್ಕ್ ಟೆಸ್ಲಾ ಮಂಡಳಿಗೆ ಅಧ್ಯಕ್ಷರಾಗಿ ಸೇರಿದ್ದರು. 2007 ರಲ್ಲಿ ಅವರು ಅದರ ಸಿಇಒ ಆದ್ರು.
ಓಪನ್ AI : ಇದು ಡಿಜಿಟಲ್ ಮತ್ತು ತಂತ್ರಜ್ಞಾನ ಸಂಶೋಧನಾ ಕಂಪನಿಯಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡಲು ಮಸ್ಕ್ ಈ ಸಂಸ್ಥೆಗೆ ಸಹ ಸಂಸ್ಥಾಪಕರಾಗಿ ಸೇರಿಕೊಂಡಿದ್ದಾರೆ.
ಸೋಲಾರ್ ಸಿಟಿ : ಟೆಸ್ಲಾ 2016 ರಲ್ಲಿ ಸೋಲಾರ್‌ಸಿಟಿಯನ್ನು 2.6 ಶತಕೋಟಿ ಮೊತ್ತಕ್ಕೆ ಖರೀದಿಸಿದೆ.
ನ್ಯೂರಾಲಿಂಕ್ : ನ್ಯೂರಾಲಿಂಕ್‌ನ ಸಹ-ಸಂಸ್ಥಾಪಕರಾಗಿ ಎಲೋನ್ ಮಾಸ್ಕ್ ಕೆಲಸ ಮಾಡ್ತಿದ್ದಾರೆ. ಮೆದುಳಿನ ಯಂತ್ರ ಇಂಟರ್ಫೇಸ್ ಆಗಿ ಮಾನವ ಮೆದುಳಿಗೆ ಅಳವಡಿಸುವ ಚಿಪ್ ತಯಾರಿಕೆಯಲ್ಲಿ ನಿರತರಾಗಿದ್ದಾರೆ.
ಟ್ವಿಟರ್ : 2016ರಲ್ಲಿ ಮಸ್ಕ್, ಟ್ವಿಟರ್ ನ ಅತಿದೊಡ್ಡ ಷೇರುದಾರರಾಗಿದ್ದರು. ಟ್ವಿಟರ್ ನಲ್ಲಿದ್ದಾಗ ಸಾಕಷ್ಟು ಚರ್ಚೆ, ಸುದ್ದಿಗೆ ಬಂದಿದ್ದ ಮಸ್ಕ್, ಈಗ ಸಿಇಒ ಸ್ಥಾನದಿಂದ ಕೆಳಗಿಳಿದಿದ್ದಾರೆ.