Business Idea : ರುಚಿ ರುಚಿ ಟೀ ನೀಡಿದ್ರೆ ಝಣ ಝಣ ಕಾಂಚಾಣ ಬರೋದು ಗ್ಯಾರಂಟಿ

ಲಾಭದಾಯಕ ವ್ಯವಹಾರ ಆಯ್ಕೆ ಮಾಡಿಕೊಳ್ಳುವಾಗ ಬುದ್ಧಿವಂತಿಕೆ ಉಪಯೋಗಿಸಬೇಕು. ಹೆಚ್ಚು ಜನರು ಬಳಸುವ ಹಾಗೆ ಸದಾ ಬೇಡಿಕೆಯಿರುವ ವ್ಯಾಪಾರ ಆಯ್ದುಕೊಳ್ಳಬೇಕು. ಹೆಚ್ಚು ಲಾಭ, ಕಡಿಮೆ ಹೂಡಿಕೆ ವಿಷ್ಯ ಬಂದಾಗ ಟೀ ಸ್ಟಾಲ್ ಬೆಸ್ಟ್ ಬ್ಯುಸಿನೆಸ್.
 

Tea Business Plan

ನಮ್ಮ ದೇಶದಲ್ಲಿ ಟೀ ಇಷ್ಟಪಡದ ಜನರು ಬಹಳ ವಿರಳ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಟೀ ಕುಡಿಯೋರಿದ್ದಾರೆ. ಕೆಲಸದ ಒತ್ತಡದಲ್ಲಿರುವ ಜನರು ಫ್ರೆಶ್ ಆಗಲು ಟೀ ಸೇವನೆ ಮಾಡ್ತಾರೆ. ಬ್ಯುಸಿನೆಸ್ ಮಾಡುವ ಪ್ಲಾನ್ ನಲ್ಲಿದ್ದರೆ ನೀವು ಟೀ ಶಾಪ್ ತೆರೆದು ಆದಾಯ ಗಳಿಸಬಹುದು. ನಾವಿಂದು ಟೀ ಶಾಪ್ ತೆಗೆಯುವ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ. 

ಟೀ (Tea) ಶಾಪ್ ಶುರು ಮಾಡೋದು ಹೇಗೆ? :  ದೊಡ್ಡ ಮತ್ತು ಸಣ್ಣ ಪಟ್ಟಣಗಳು ಮತ್ತು ದೂರದ ಹಳ್ಳಿಗಳಲ್ಲಿನ ಗ್ರಾಹಕ (Customer) ರನ್ನು ಗುರಿಯಾಗಿಟ್ಟುಕೊಂಡು ಕಡಿಮೆ ಹೂಡಿಕೆ (Investment) ಯೊಂದಿಗೆ ಚಹಾ ವ್ಯಾಪಾರ (business)ವನ್ನು ಪ್ರಾರಂಭಿಸಬಹುದು. ಟೀ ವ್ಯಾಪಾರ ಸಣ್ಣ ವ್ಯಾಪಾರದಡಿ ಬರುತ್ತದೆ. ಯಾವುದೇ ತೊಂದರೆಗಳಿಲ್ಲದೆ ಒಬ್ಬ ವ್ಯಕ್ತಿ ಆರಾಮವಾಗಿ ನಡೆಸಬಹುದು. 
ನೀವು ಸ್ವಂತ ಟೀ ಸ್ಟಾಲ್ ಕೂಡ ತೆರೆಯಬಹುದು ಇಲ್ಲವೆ ಫ್ರಾಂಚೈಸಿ ಕೂಡ ಪಡೆಯಬಹುದು. ಕೆಲ ಪ್ರಸಿದ್ಧ ಕಂಪನಿಗಳ ಫ್ರಾಂಚೈಸಿ ಪಡೆದು ನೀವು ಟೀ ಶಾಪ್ ತೆರೆಯಬಹುದು. ಇದಕ್ಕೆ ಖರ್ಚು ಕಡಿಮೆ, ಹಾಗೆಯೇ ಕಂಪನಿಯ ಬಗೆ ಬಗೆಯ ಟೀಗಳನ್ನು ನೀವು ಇಲ್ಲಿ ಮಾರಾಟ ಮಾಡಬಹುದು. ಹಾಗಾಗಿ ನೀವು ಯಾವುದನ್ನು ಆಯ್ಕೆ ಮಾಡಿಕೊಳ್ತಿರಿ ಎಂಬುದನ್ನು ನಿರ್ಧರಿಸಿ. 

ಟೀ ಸ್ಟಾಲ್ ತೆರೆಯಲು ಏನೇನು ಬೇಕು ? : ಟೀ ತಯಾರಿಸಲು ಪಾತ್ರೆಗಳು,ಕೆಟಲ್, ಸರ್ವಿಂಗ್ ಗ್ಲಾಸ್, ಗ್ಲಾಸ್ ಹೋಲ್ಡರ್, ಎಲ್ಪಿಜಿ ಸಿಲಿಂಡರ್, ಒಲೆ, ಹಾಲು, ಸಕ್ಕರೆ, ನೀರು, ಟೀ ಪೌಡರ್, ಮಸಾಲೆ ಸೇರಿದಂತೆ ಕೆಲ ಸಾಮಗ್ರಿ ಬೇಕಾಗುತ್ತದೆ. ಟೀ ಸ್ಟಾಲ್‌ನಲ್ಲಿ ಕೆಲಸ ಮಾಡಲು ನೀವು ಕಾರ್ಮಿಕರನ್ನು ಕೂಡ ನೇಮಿಸಿಕೊಳ್ಳಬಹುದು. ಅವರ ಸಹಾಯದಿಂದ ಅಂಗಡಿ, ಮಾರುಕಟ್ಟೆ, ಕಚೇರಿ ಹೀಗೆ ಹಲವೆಡೆ ಟೀ ವಿತರಿಸಬಹುದು. 

Business Ideas: ಹಸುವಿನ ಸಗಣಿ ನೀಡ್ತಿದೆ ಕೈತುಂಬ ಹಣ

ನೋಂದಣಿ (Registration) : ವ್ಯಾಪಾರಕ್ಕೆ ನೋಂದಣಿ ಅಗತ್ಯವಿದೆ. ಒಂದು ಹೆಸರನ್ನು ಆಯ್ಕೆ ಮಾಡಿಕೊಂಡು ನೀವು ನೋಂದಣಿ ಮಾಡಬೇಕಾಗುತ್ತದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಟೀ ಸ್ಟಾಲ್ ಅನ್ನು ಏಕಮಾತ್ರ ಮಾಲೀಕತ್ವ ಅಥವಾ ಪಾಲುದಾರಿಕೆ ಸಂಸ್ಥೆಯಾಗಿ ಸ್ಥಾಪಿಸಬಹುದು. ಈ ವ್ಯಾಪಾರನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (MSME) ಅಥವಾ ಸಣ್ಣ ಪ್ರಮಾಣದ ಕೈಗಾರಿಕೆ (SSI) ಎಂದು ನೋಂದಾಯಿಸುವ ಮೂಲಕ ನೀವು ಸರ್ಕಾರಿ ಯೋಜನೆಗಳು ಮತ್ತು ಸಬ್ಸಿಡಿಗಳ ಲಾಭವನ್ನು ಪಡೆಯಬಹುದು. ಅಲ್ಲದೆ ರಾಜ್ಯ ಸರ್ಕಾರದಿಂದ ವ್ಯಾಪಾರಕ್ಕೆ ಅನುಮತಿ ಪಡೆಯಬೇಕಾಗುತ್ತದೆ. ಅಲ್ಲದೆ FSSAI ನಿಂದ ಪರವಾನಗಿ ಪಡೆಯಬೇಕು. 

ಟೀ ಸ್ಟಾಲ್‌ಗೆ (Tea Stall) ಸ್ಥಳದ ಆಯ್ಕೆ : ಯಾವುದೇ ವ್ಯವಹಾರದ ಯಶಸ್ಸು ಅಥವಾ ವೈಫಲ್ಯ ಸಂಪೂರ್ಣವಾಗಿ ವ್ಯಾಪಾರವನ್ನು ಸ್ಥಾಪಿಸಿದ ಸ್ಥಳವನ್ನು ಅವಲಂಬಿಸಿರುತ್ತದೆ. ಟೀ ಸ್ಟಾಲ್ ಅಥವಾ ಫ್ರ್ಯಾಂಚೈಸ್ ವ್ಯಾಪಾರಕ್ಕಾಗಿ ಸ್ಥಳ ಆಯ್ಕೆ ಮಾಡಿಕೊಳ್ಳುವ ವೇಳೆ ನೀವು ಕೆಲವು ಶೋಧನೆ ನಡೆಸಬೇಕು. ಜನನಿಬಿಡಿ ಪ್ರದೇಶ ಹಾಗೂ ಮಾರುಕಟ್ಟೆ ಪ್ರದೇಶದಲ್ಲಿ ಇದನ್ನು ತೆರೆಯಬೇಕು. ಟೀ ಸ್ಟಾಲ್‌ಗೆ ಹೆಚ್ಚಿನ ಸ್ಥಳಾವಕಾಶದ ಅಗತ್ಯವಿಲ್ಲ. ಟೀ ತಯಾರಿಕೆಗೆ ಸುಮಾರು 500 ಚದರ ಅಡಿ ವಿಸ್ತೀರ್ಣದ ಜಾಗ ಅವಶ್ಯಕವಿದೆ. ಹೆಚ್ಚಿನ ಸ್ಥಳವಿದ್ದರೆ ನೀವು ಆಸನದ ವ್ಯವಸ್ಥೆ ಮಾಡಬಹುದು. ಇಲ್ಲವೆ ಹಾಗೆಯೇ ಸರ್ವ್ ಮಾಡಬಹುದು.

Business Ideas: ಬಟ್ಟೆಗೆ ಅಗತ್ಯವಾಗಿರುವ ದಾರ ತಯಾರಿಸಿ ಕೈ ತುಂಬ ಗಳಿಸಿ

ಟೀ ವ್ಯವಹಾರದ ಲಾಭ : ಮೊದಲೇ ಹೇಳಿದಂತೆ ನೀವು ಯಾವ ಸ್ಥಳದಲ್ಲಿ ಇದನ್ನು ಶುರು ಮಾಡಿದ್ದೀರಿ ಎಂಬುದು ಹಾಗೆ ನಿಮ್ಮ ಟೀ ಗುಣಮಟ್ಟದ ಮೇಲೆ ಲಾಭ ಸಿಗುತ್ತದೆ. ಉತ್ತಮ ಟೀ ತಯಾರಾಗ್ತಿದ್ದರೆ ಗ್ರಾಹಕರು ಬಂದೇ ಬರ್ತಾರೆ. ವೆರೈಟಿ ಟೀ ಲಭ್ಯವಿದ್ರೆ ಲಾಭ ಹೆಚ್ಚು.
 

Latest Videos
Follow Us:
Download App:
  • android
  • ios