* ಮೂಲದಲ್ಲೇ ಕಡಿತ ಆಗುವ ತೆರಿಗೆ* ಟಿಡಿಎಸ್‌ ಸಲ್ಲಿಕೆ ದಿನಾಂಕ ಜೂ.30ರವರೆಗೆ ವಿಸ್ತರಣೆ* ಫಾರ್ಮ್- 16 ನೀಡುವ ದಿನಾಕ ಜುಲೈ 15ಕ್ಕೆ ವಿಸ್ತಾರ

ನವದೆಹಲಿ: ಕಂಪನಿಗಳು ತಮ್ಮ ಉದ್ಯೋಗಿಗಳ ಟಿಡಿಎಸ್‌ ಅನ್ನು (ಮೂಲದಲ್ಲೇ ಕಡಿತ ಆಗುವ ತೆರಿಗೆ) ತರಿಗೆ ಇಲಾಖೆಗೆ ತುಂಬುವ ಗಡುವನ್ನು ಮೇ 31ರಿಂದ ಜೂನ್‌ 30ರವರೆಗೆ ವಿಸ್ತರಿಸಲಾಗಿದೆ. ಇದೇ ವೇಳೆ, ಕಂಪನಿಗಳು ತೆರಿಗೆ ಕಡಿತಕ್ಕೆ ಸಂಬಂಧಿಸಿದ ಫಾಮ್‌ರ್‍-16 ಅನ್ನು ಉದ್ಯೋಗಿಗಳಿಗೆ ನೀಡುವ ಗಡುವನ್ನು ಜೂನ್‌ 15ರಿಂದ ಜುಲೈ 15ಕ್ಕೆ ವಿಸ್ತರಿಸಲಾಗಿದೆ.

‘ಕೋವಿಡ್‌ ಸೋಂಕಿನ ಈ ಸಂಕಷ್ಟದ ಸಮಯದಲ್ಲಿ ಕಂಪನಿಗಳು ಹಾಗೂ ತೆರಿಗೆದಾರರಿಗೆ ಈಗಿನ ಗಡುವಿನಲ್ಲಿ ಕರ್ತವ್ಯ ಪೂರೈಸುವುದು ಕಷ್ಟಆಗಬಹುದು. ಹೀಗಾಗಿ ಗಡುವು ವಿಸ್ತರಿಸಲಾಗಿದೆ’ ಎಂದು ತೆರಿಗೆ ಇಲಾಖೆ ಹೇಳಿದೆ.

ತೆರಿಗೆ ಇಲಾಖೆ ಇತ್ತೀಚೆಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ದಿನಾಂಕವನ್ನು ತೆರಿಗೆ ಇಲಾಖೆ ಸೆಪ್ಟೆಂಬರ್‌ 30ಕ್ಕೆ ವಿಸ್ತರಿಸಿತ್ತು.