ತೆರಿಗೆ ಉಳಿತಾಯದ ಎಫ್ ಡಿಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಾ? ಹಾಗಾದ್ರೆ ಈ ವಿಚಾರಗಳು ನಿಮಗೆ ತಿಳಿದಿರಲೇಬೇಕು

ತೆರಿಗೆ ಉಳಿತಾಯದ ಎಫ್ ಡಿಗಳಲ್ಲಿ ಹೂಡಿಕೆ ಮಾಡುವ ಮುನ್ನ ಕೆಲವೊಂದು ವಿಚಾರಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಹಾಗಾದ್ರೆ ತೆರಿಗೆ ಉಳಿತಾಯದ ಎಫ್ ಡಿಗಳ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ. 
 

Tax Saving FD Here Are Benefits And Key Considerations You Must Know Before Investing anu

Business Desk: ತೆರಿಗೆ ಉಳಿತಾಯದ ಸ್ಥಿರ ಠೇವಣಿ (ಎಫ್ ಡಿ) ವಿಶೇಷ ಉಳಿತಾಯ ಯೋಜನೆಯಾಗಿದ್ದು, ಇದು ಠೇವಣಿದಾರರಿಗೆ ಭವಿಷ್ಯಕ್ಕೆ ಹಣ ಉಳಿತಾಯ ಮಾಡಲು ನೆರವು ನೀಡುವ ಜೊತೆಗೆ ತೆರಿಗೆ ಪ್ರಯೋಜನಗಳನ್ನು ಕೂಡ ಒಳಗೊಂಡಿದೆ. ಇತರ ನಿಯಮಿತ ಎಫ್ ಡಿಗಳಿಗೆ ಹೋಲಿಸಿದರೆ ಈ ಖಾತೆಗಳು ಅನೇಕ ವಿಶೇಷತೆಗಳನ್ನು ಒಳಗೊಂಡಿವೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ನಿಮ್ಮ ಆದಾಯದ ಮೇಲೆ ತೆರಿಗೆ ಕಡಿತದ ಪ್ರಯೋಜನಗಳನ್ನು ಪಡೆಯಲು ಇದು ನೆರವು ನೀಡುತ್ತದೆ. ನೀವು ತೆರಿಗೆ ಉಳಿತಾಯದ ಎಫ್ ಡಿಯಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ತೆರಿಗೆ ವ್ಯಾಪ್ತಿಗೊಳಪಡುವ ಆದಾಯವನ್ನು ವಾರ್ಷಿಕ 1.5 ಲಕ್ಷ ರೂ.ನಷ್ಟು  ಕಡಿಮೆ ಮಾಡಿಕೊಳ್ಳಬಹುದು. ಆದರೆ, ತೆರಿಗೆ ಉಳಿತಾಯದ ಎಫ್ ಡಿಯಲ್ಲಿ ಹೂಡಿಕೆ ಮಾಡುವ ಮುನ್ನ ನೀವು ಕೆಲವು ವಿಚಾರಗಳನ್ನು ತಿಳಿದಿರೋದು ಅಗತ್ಯ. ಹಾಗಾದ್ರೆ ಯಾವೆಲ್ಲ ವಿಚಾರಗಳನ್ನು ಗಮನಿಸಬೇಕು?

1.ಉದ್ದೇಶ ಹಾಗೂ ಸಮಯಾವಧಿ
ತೆರಿಗೆ ಉಳಿತಾಯದ ಎಫ್ ಡಿಗಳು ದೀರ್ಘಾವಧಿ ಉಳಿತಾಯವನ್ನು ಪ್ರೋತ್ಸಾಹಿಸುತ್ತವೆ. ಇವುಗಳು ಸಾಮಾನ್ಯವಾಗಿ 5 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿರುತ್ತವೆ. ಅಂದರೆ ಈ ಅವಧಿ ಮುಗಿಯೋದಕ್ಕಿಂತ ಮುನ್ನ ನೀವು ಹಣವನ್ನು ವಿತ್ ಡ್ರಾ ಮಾಡುವಂತಿಲ್ಲ. ಈ ಲಾಕ್ -ಇನ್ ಅವಧಿ ಉಳಿತಾಯದ ಕಡೆಗೆ ಶಿಸ್ತಿನ ಮಾರ್ಗವನ್ನು ಅನುಸರಿಸಲು ನೆರವು ನೀಡುತ್ತವೆ.

ಭಾರತದಲ್ಲೇ ದುಬಾರಿ ಬರ್ತ್‌ಡೇ ಪಾರ್ಟಿ ನೀತಾ ಅಂಬಾನಿಯದು; ಖರ್ಚು ಕೇಳಿದರೆ ತಲೆ ತಿರುಗೋದು ಗ್ಯಾರಂಟಿ!

2.ತೆರಿಗೆ ಕಡಿತ
ತೆರಿಗೆ ಉಳಿತಾಯದ ಎಫ್ ಡಿಗಳಲ್ಲಿ ಹೂಡಿಕೆ ಮಾಡೋದ್ರಿಂದ ಇದು ನಿಮ್ಮ ಆದಾಯದ ಮೇಲೆ ತೆರಿಗೆ ಕಡಿತದ ಪ್ರಯೋಜನಗಳನ್ನು ಪಡೆಯಲು ನೆರವು ನೀಡುತ್ತದೆ. ಇದರಡಿಯಲ್ಲಿ ನೀವು ವಾರ್ಷಿಕ  1.5 ಲಕ್ಷ ರೂ. ತನಕ ತೆರಿಗೆ ಕಡಿತ ಕ್ಲೇಮ್ ಮಾಡಬಹುದು. ಇದು ನಿಮ್ಮ ತೆರಿಗೆ ಹೊರೆಯನ್ನು ಗಮನಾರ್ಹ ಪ್ರಮಾಣದಲ್ಲಿ ತಗ್ಗಿಸುತ್ತದೆ. ಈ ಕಡಿತವು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ಲಭ್ಯವಿದೆ. ಆ ಮೂಲಕ ಇದು ತೆರಿಗೆ ಯೋಜನೆಗೆ ಜನಪ್ರಿಯ ಆಯ್ಕೆಯಾಗಿದೆ.

3.ಬಡ್ಡಿ ಹಾಗೂ ರಿಟರ್ನ್ಸ್
ತೆರಿಗೆ ಉಳಿತಾಯದ ಎಫ್ ಡಿ ಮೇಲೆ ಗಳಿಸಿದ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. ಇದಕ್ಕೆ ಶೇ.5.5ರಿಂದ ಶೇ. 7.75 ಬಡ್ಡಿ ಲಭಿಸುತ್ತದೆ. ಈ ಎಫ್ ಡಿ ಮೇಲೆ ಗಳಿಸಿದ ಬಡ್ಡಿ ನಿಮ್ಮ ತೆರಿಗೆ ವ್ಯಾಪ್ತಿಗೊಳಪಡುವ ಆದಾಯಕ್ಕೆ ಸೇರುತ್ತದೆ. ಆದರೆ, ಈ ಎಫ್ ಡಿ ಮೇಲಿನ ರಿಟರ್ನ್ ಇದನ್ನು ಅರ್ಹವಾದ ಹೂಡಿಕೆಯನ್ನಾಗಿಸುತ್ತದೆ.

ತೆರಿಗೆ ಉಳಿತಾಯದ ಎಫ್ ಡಿಗಳ ಪ್ರಯೋಜನಗಳು:
1.ಭದ್ರತೆ ಹಾಗೂ ಕಡಿಮೆ ಅಪಾಯ
ತೆರಿಗೆ ಉಳಿತಾಯದ ಎಫ್ ಡಿಗಳಿಗೆ ಬ್ಯಾಂಕುಗಳ ಭದ್ರತೆ ಕೂಡ ಇದೆ. ಅಲ್ಲದೆ, ನಿಯಂತ್ರಣ ಪ್ರಾಧಿಕಾರಗಳು ಕೂಡ ಇಂಥ ಎಫ್ ಡಿಗಳನ್ನು ಹತ್ತಿರದಿಂದ ಗಮನಿಸುತ್ತವೆ. ಆ ಮೂಲಕ ಹೆಚ್ಚಿನ ಭದ್ರತೆ ಒದಗಿಸುತ್ತವೆ. ಹೀಗಾಗಿ ಇದರಲ್ಲಿ ಹೂಡಿಕೆ ಮಾಡಿದರೆ ಅಪಾಯ ಕಡಿಮೆ.

2.ಅಧಿಕ ಬಡ್ಡಿದರ
ನಿಯಮಿತ ಉಳಿತಾಯ ಖಾತೆಗಳಿಗೆ ಹೋಲಿಸಿದ್ರೆ ತೆರಿಗೆ ಉಳಿತಾಯದ ಎಫ್ ಡಿಗಳು ಅಧಿಕ ಬಡ್ಡಿದರ ನೀಡುತ್ತವೆ. ಈ ಮೂಲಕ ಸಮಯ ಕಳೆದಂತೆ ಉತ್ತಮ ರಿಟರ್ನ್ಸ್ ನೀಡುತ್ತವೆ.

3.ಸಮರ್ಪಕವಾದ ಠೇವಣಿ ಆಯ್ಕೆಗಳು
ಒಂದೇ ಬಾರಿಗೆ ದೊಡ್ಡ ಮೊತ್ತದ ಠೇವಣಿಯಿಡಲು ಈ ಎಫ್ ಡಿ ನೆರವು ನೀಡುತ್ತದೆ. ನಿಮ್ಮ ಅನುಕೂಲ ಹಾಗೂ ಹಣಕಾಸಿನ ಗುರಿಗಳನ್ನು ಆಧರಿಸಿ ಠೇವಣಿ ಮೊತ್ತವನ್ನು ಹೊಂದಾಣಿಕೆ ಮಾಡಬಹುದು. 

Tax Planning: ವಿವಿಧ ವಿಮೆಗಳಿಂದ ಎಷ್ಟು ತೆರಿಗೆ ಉಳಿತಾಯ ಮಾಡ್ಬಹುದು? ಹೇಗೆ? ಇಲ್ಲಿದೆ ಮಾಹಿತಿ

4.ತೆರಿಗೆ ಕಡಿತಗಳು ಹಾಗೂ ಟಿಡಿಎಸ್ 
ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಹೊರತುಪಡಿಸಿ ನೀವು ವಾರ್ಷಿಕ  1,50,000 ರೂ. ತನಕ ಆದಾಯ ತೆರಿಗೆ ಕಡಿತದ ಪ್ರಯೋಜನಗಳನ್ನು ಪಡೆಯಬಹುದು. ಆದರೆ, ನೆನಪಿಡಿ ಬಡ್ಡಿ ಗಳಿಕೆ ಟಿಡಿಎಸ್ ಗೆ ಒಳಪಡುತ್ತದೆ. 

5.ಅವಧಿಪೂರ್ವ ವಿತ್ ಡ್ರಾ
ತೆರಿಗೆ ಉಳಿತಾಯದ ಎಫ್ ಡಿಗಳು ದೀರ್ಘಾವಧಿಯ ಉಳಿತಾಯಕ್ಕೆ ಉತ್ತೇಜನ ನೀಡುತ್ತವೆ. ಅವಧಿಪೂರ್ವ ವಿತ್ ಡ್ರಾಗೆ ಅವಕಾಶ ನೀಡುವುದಿಲ್ಲ. 

Latest Videos
Follow Us:
Download App:
  • android
  • ios