ಟಾಟಾ ನ್ಯಾನೋ ಪರಿಸರ ಪ್ರೇಮಿಗಳಿಗೆ ಖುಷಿ ಸುದ್ದಿ ನೀಡಿದೆ. ಕಡಿಮೆ ಬೆಲೆಗೆ ಪರಿಸರ ಸ್ನೇಹಿ ಕಾರ್ ಲಭ್ಯವಾಗಲಿದೆ. ಟಾಟಾ ನ್ಯಾನೋ ಇವಿ ಕಾರಿನ ಬೆಲೆ, ಫೀಚರ್ ಮಾಹಿತಿ ಇಲ್ಲಿದೆ.

ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿ ಕ್ರಾಂತಿ ತಂದಿದ್ದ ಟಾಟಾ ನ್ಯಾನೋ (Tata Nano) ಮತ್ತೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಭಾರತದ ರಸ್ತೆಯಲ್ಲಿ ಧೂಳೆಬ್ಬಿಸಲು ಕಂಪನಿ ಸಿದ್ಧವಾಗಿದೆ. ಕಡಿಮೆ ಖರ್ಚಿನ, ಪರಿಸರ ಸ್ನೇಹಿ ಕಾರ್ ಜನಸಾಮಾನ್ಯರಿಗೆ ಲಭ್ಯವಾಗುವ ಸಮಯ ಬಂದಿದೆ. ಟಾಟಾ ಕಂಪನಿ ತನ್ನ ಪ್ರಸಿದ್ಧ ಮತ್ತು ಎಲ್ಲರ ಗಮನ ಸೆಳೆದಿದ್ದ ಟಾಟಾ ನ್ಯಾನೋದ ಹೊಸ ಅವತಾರವಾಗಿ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡ್ತಿದೆ. ಈ ಬಾರಿ ಕಾರಿನ ಬೆಲೆ ಮಾತ್ರವಲ್ಲ ಕಾರಿನ ಫೀಚರ್ ಕೂಡ ಗ್ರಾಹಕರನ್ನು ಸೆಳೆಯುತ್ತಿದೆ. ಈ ಕಾರನ್ನು ಮಧ್ಯಮ ವರ್ಗದ ಜನರು ಸುಲಭವಾಗಿ ಖರೀದಿಸ್ಬಹುದು. ಬುಲೆಟ್ ಬೆಲೆಗೆ ಈ ಕಾರ್ ನಿಮಗೆ ಲಭ್ಯವಾಗಲಿದೆ.

ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ (Tata Nano Electric Car) ನ ಆರಂಭಿಕ ಬೆಲೆ 2.30 ಲಕ್ಷ. ಇದು ಭಾರತದ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ಸಾಧ್ಯತೆ ಇದೆ. ಟಾಟಾ ನ್ಯಾನೋ ಇವಿ ಶಕ್ತಿಶಾಲಿ ಎರಡು ಬ್ಯಾಟರಿ ಜೊತೆ ನಿಮಗೆ ಲಭ್ಯವಿದೆ. 17 kWh ಮತ್ತು 26kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಕಾರ್ ಹೊಂದಿದೆ. ಚಿಕ್ಕ ಬ್ಯಾಟರಿ ಒಂದೇ ಚಾರ್ಜ್ಗೆ 250 ರಿಂದ 300 ಕಿಲೋಮೀಟರ್ ಚಲಿಸಿದ್ರೆ ದೊಡ್ಡ ಬ್ಯಾಟರಿ 440 ಕಿಮೀ ಮೀಟರ್ ಓಡಲಿದೆ. ಈ ಕಾರು ಕೇವಲ 56 ನಿಮಿಷಗಳಲ್ಲಿ ಶೇಕಡಾ 80 ವರೆಗೆ ವೇಗವಾಗಿ ಚಾರ್ಜ್ ಆಗುತ್ತೆ ಅಂತ ಕಂಪನಿ ಹೇಳ್ಕೊಂಡಿದೆ. ಹೋಮ್ ಚಾರ್ಜಿಂಗ್ನೊಂದಿಗೆ ಬ್ಯಾಟರಿಯನ್ನು ಸಂಪೂರ್ಣ ಚಾರ್ಜ್ ಮಾಡೋಕೆ ನಿಮಗೆ 6 ಗಂಟೆ ಬೇಕಾಗುತ್ತದೆ.

ಈ ಎಲೆಕ್ಟ್ರಿಕ್ ವಾಹನದಲ್ಲಿ ಅನೇಕ ಆಕರ್ಷಕ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಇದರಲ್ಲಿ ಪವರ್ ಸ್ಟೀರಿಂಗ್, ಹವಾನಿಯಂತ್ರಣ, ಹೀಟರ್, ಪವರ್ ಔಟ್ಲೆಟ್, ಗೇರ್ ಶಿಫ್ಟ್ ಇಂಡಿಕೇಟರ್, ಲಗೇಜ್ ಹುಕ್ ಮತ್ತು ನೆಟ್, ಐಡಲ್ ಸ್ಟಾರ್ಟ್ ಸ್ಟಾಪ್ ಸಿಸ್ಟಮ್, ಫ್ರಂಟ್ ಕನ್ಸೋಲ್, ಫ್ರಂಟ್ ಪವರ್ ವಿಂಡೋ, 1 ಲೀ ಬಾಟಲ್ ಹೋಲ್ಡರ್, ಗ್ಲೋವ್ ಬಾಕ್ಸ್, ಡ್ಯುಯಲ್ ಟೋನ್ ಡ್ಯಾಶ್ಬೋರ್ಡ್, ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮೆಟಲ್ ಥೀಮ್, ಕಡಿಮೆ ಇಂಧನ ವಾರ್ನಿಂಗ್ ಸೇರಿವೆ. ಕಾರಿನ ಆರಂಭಿಕ ಬೆಲೆ 2.5 ಲಕ್ಷವಾಗಿದ್ದು, ಟಾಪ್ ವೇರಿಯಂಟ್ ಕಾರಿನ ಬೆಲೆ 5 ಲಕ್ಷದವರೆಗೆ ಲಭ್ಯವಿದೆ. ಕಾರ್ ಬುಕಿಂಗ್ 11 ಸಾವಿರದಿಂದ ಶುರುವಾಗುವ ಸಾಧ್ಯತೆ ಇದೆ.

ಇನ್ನು ಟಾಟಾ ನ್ಯಾನೋ ಇವಿಯ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಇದು ಪ್ರೀಮಿಯಂ ಸ್ಪರ್ಶದೊಂದಿಗೆ ಆಧುನಿಕ ಲುಕ್ ನೀಡ್ತಿದೆ. ಮೊದಲಿಗಿಂತ ಹೆಚ್ಚು ಕಾಂಫೆಕ್ಟ್ ಡಿಸೈನ್ ಮತ್ತು ಪ್ರೀಮಿಯಂ LED DRL ಗಳು ಮತ್ತು ಹೆಡ್ಲೈಟ್ಗಳು ಈ ವಾಹನದ ಸೌಂದರ್ಯವನ್ನು ಹೆಚ್ಚಿಸಿವೆ. ಇನ್ನಷ್ಟು ಆಕರ್ಷಕಗೊಳಿಸಲಿ, ಇದರಲ್ಲಿ ಸ್ಪೋರ್ಟಿ ಬಂಪರ್ ಮತ್ತು ತಾಜಾ ಗ್ರಿಲ್ ಅಳವಡಿಸಲಾಗಿದೆ. ಈ ಕಾರಿನ ಗರಿಷ್ಠ ವೇಗ 150KM/H. ಇದು ಕೇವಲ 6-9 ಸೆಕೆಂಡುಗಳಲ್ಲಿ 0 ರಿಂದ 60KM/H ವೇಗವನ್ನು ತಲುಪುತ್ತದೆ. ಇದು 40-55kW ವರೆಗೆ ವಿದ್ಯುತ್ ಉತ್ಪಾದಿಸುತ್ತದೆ. 100-140Nm ವರೆಗೆ ಟಾರ್ಕ್ ಉತ್ಪಾದಿಸುತ್ತದೆ.

ಟಾಟಾ ನ್ಯಾನೋ ಇವಿ ಭಾರತೀಯ ಇವಿ ಕ್ಷೇತ್ರದ ದಿಕ್ಕು ಬದಲಿಸುವ ಸಾಧ್ಯತೆ ಇದೆ. ಇದರ ಕೈಗೆಟುಕುವ ಬೆಲೆ, 300 ಕಿಮೀ ವ್ಯಾಪ್ತಿ ಮತ್ತು ಸ್ಮಾರ್ಟ್ ವೈಶಿಷ್ಟ್ಯ ಸಾಮಾನ್ಯ ಭಾರತೀಯ ಕುಟುಂಬಗಳಿಗೆ ಹತ್ತಿರವಾಗಲಿದೆ. ಸ್ಕೂಟರ್, ಬೈಕ್ ಬದಲು ಆರಾಮದಾಯಕ ಪ್ರಯಾಣಕ್ಕೆ ಜನರು ಈ ಕಾರ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.