ಟಾಟಾ ಮೋಟಾರ್ಸ್ ಐತಿಹಾಸಿಕ ಸಾಧನೆ: ಮಾರುತಿ ಸುಜುಕಿಯನ್ನು ಹಿಂದಿಕ್ಕಿ ಮೊದಲ ಸ್ಥಾನ
ಟಾಟಾ ಮೋಟಾರ್ಸ್ ಭಾರತದ ಕಾರು ಮಾರಾಟದಲ್ಲಿ ಮಾರುತಿ ಸುಜುಕಿಯನ್ನು ಹಿಂದಿಕ್ಕಿ ನಾಲ್ಕು ದಶಕಗಳಲ್ಲಿ ಮೊದಲ ಬಾರಿಗೆ ಅಗ್ರಸ್ಥಾನ ಪಡೆದಿದೆ. ಟಾಟಾ ಪಂಚ್ ಎಸ್‌ಯುವಿ ಮಾರುತಿಯ ವ್ಯಾಗನ್ ಆರ್ ಮತ್ತು ಸ್ವಿಫ್ಟ್‌ಗಿಂತ ಹೆಚ್ಚು ಮಾರಾಟವಾಗಿದೆ.
ಮುಂಬೈ: ಟಾಟಾ ಮೋಟಾರ್ಸ್ ಮೊದಲ ಬಾರಿ ಮಾರುತಿ ಸುಜುಕಿಯನ್ನು ಹಿಂದಿಕ್ಕಿ 4 ದಶಕಗಳಲ್ಲಿ ಮೊದಲ ಬಾರಿಗೆ ಭಾರತದ ಕಾರು ಮಾರಾಟದಲ್ಲಿ ಅಗ್ರಸ್ಥಾನ ಪಡೆದು ಐತಿಹಾಸಿಕ ಸಾಧನೆ ಮಾಡಿದೆ. ಆಟೋಕಾರ್‌ಪ್ರೊ ವರದಿಯ ಪ್ರಕಾರ, ಭಾರತೀಯ ವಾಹನ ತಯಾರಕರ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಟಾಟಾ ಪಂಚ್, ಮಾರುತಿ ಸುಜುಕಿಯ ವ್ಯಾಗನ್ ಆರ್ ಮತ್ತು ಸ್ವಿಫ್ಟ್ ಅನ್ನು ಹಿಂದಿಕ್ಕಿದೆ. 2024ರಲ್ಲಿ ವ್ಯಾಗನ್ ಆರ್‌ನ 1,91,000 ಕಾರು ಮಾರಾಟ ಆಗಿವೆ. ಆದರೆ ಟಾಟಾ ಎಸ್‌ಯುವಿ ಪಂಚ್ 202.000 ಯುನಿಟ್ ಗಳನ್ನು ಮಾರಾಟ ಮಾಡುವುದರೊಂದಿಗೆ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಇದು ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ.
ದೇಶದಲ್ಲಿ ಮಾರಾಟವಾಗುವ ಅಗ್ರ ಐದು ಕಾರುಗಳಲ್ಲಿ 3 ಎಸ್‌ಯುವಿಗಳಾಗಿವೆ. 2023 ರಲ್ಲಿ ಮುಂಚೂಣಿಯಲ್ಲಿದ್ದ ಮಾರುತಿ ಸುಜುಕಿಯ ಎರ್ಟಿಗಾ 2024 ರಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಪ್ರೀಮಿಯಂ ವಾಹನಗಳು ಮತ್ತು ಎಸ್‌ಯುವಿಗಳ ಕಡೆಗೆ ಗ್ರಾಹಕರ ಆದ್ಯತೆಯ ಬದಲಾವಣೆಯು, ವಿಶೇಷವಾಗಿ ಈ 10 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ, ಮಾರುತಿ ಸುಜುಕಿ ಕಾರಿನ ಮೇಲೆ ಒತ್ತಡವನ್ನು ಉಂಟುಮಾಡಿದೆ ಎಂದು ವರದಿ ಹೇಳಿದೆ. ಮಾರುತಿ ಸುಜುಕಿ, 2018 ರಲ್ಲಿ 52 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿತ್ತು. ಈಗ ಅದರ ಪಾಲು ಶೇ.41ಕ್ಕೆ ಕುಸಿದಿದೆ.
ಸತ್ಯ ನಾದೆಲ್ಲ ಜತೆ ಮೋದಿ ಭೇಟಿ: ಭಾರತದಲ್ಲಿ ಹೂಡಿಕೆಗೆ ಸ್ವಾಗತ
ನವದೆಹಲಿ: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ಭೇಟಿಯಾದರು. ಈ ವೇಳೆ ಭಾರತದಲ್ಲಿ ಮೈಕ್ರೋಸಾಫ್ಟ್ ಹೂಡಿಕೆಗೆ ಉತ್ಸುಕವಾಗಿದೆ ಎಂದು ಮೋದಿ ಹರ್ಷಿಸಿದರು. ಈ ಬಗ್ಗೆ ಟ್ವಿಟ್ ಮಾಡಿರುವ ನಾದೆಲ್ಲ, 'ಭಾರತವನ್ನು ಕೃತಕ ಬುದ್ದಿಮತ್ತೆಯ ತಾಣ ಮಾಡಲು ಉತ್ತು ಕರಾಗಿದ್ದೇವೆ ಮತ್ತು ಕೃತಕ ಬುದ್ದಿಮತ್ತೆಯಿಂದ ಪ್ರತಿಯೊಬ್ಬ ಭಾರತೀಯ ಪ್ರಯೋಜನ ಆಗುವಂತೆ ಕೆಲಸ ಮಾಡುತ್ತೇವೆ' ಎಂದಿದ್ದಾರೆ. ಇದಕ್ಕೆ ಹರ್ಷಿಸಿದ ಮೋದಿ, 'ಭಾರತದಲ್ಲಿ ಮೈಕ್ರೋಸಾಫ್ಟ್ ನ ಮಹತ್ವಾಕಾಂಕ್ಷೆಯ ವಿಸ್ತರಣೆ ಮತ್ತು ಹೂಡಿಕೆ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಸಂತೋಷವಾಗಿದೆ ತಂತ್ರಜ್ಞಾನ, ನಾವೀನ್ಯತೆ ಮತ್ತು ಎಐ ಬಗ್ಗೆ ಚರ್ಚಿಸಿದ್ದು ಅದ್ಭುತ' ಎಂದಿದ್ದಾರೆ.
ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವಾಯುದಾಳಿ- 40ಕ್ಕೂ ಹೆಚ್ಚಿನ ಜನರ ಬಲಿ : ಭಾರತ ಆಕ್ಷೇಪ
ನವದೆಹಲಿ: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿ 40ಕ್ಕೂ ಹೆಚ್ಚಿನ ಜನರನ್ನು ಬಲಿ ಪಡೆದ ಬಗ್ಗೆ ಭಾರತ ತೀವ್ರವಾಗಿ ಖಂಡಿಸಿದ್ದು, ಪಾಕಿಸ್ತಾನವು ತನ್ನ ವೈಫಲ್ಯತೆಯನ್ನು ಮುಚ್ಚಿಕೊಳ್ಳಲು ನೆರೆಹೊರೆಯವರ ಮೇಲೆ ದಾಳಿ ಮಾಡುತ್ತಿದೆ ಎಂದು ಹೇಳಿದೆ. ಭಾರತದ ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವಾಯು ದಾಳಿ ನಡೆಸಿ, ಅನೇಕ ಮಹಿಳೆಯರು, ಮಕ್ಕಳು ಮತ್ತು ಜೀವಗಳನ್ನು ಬಲಿ ಪಡೆದಿದೆ ಎಂಬ ಮಾಧ್ಯಮಗಳ ವರದಿಯನ್ನು ನಾವು ಗಮನಿಸಿದ್ದೇವೆ. ಪಾಕಿಸ್ತಾನದ ಈ ನಡೆಯನ್ನು ಭಾರತ ಸಾರಾಸಗಟಾಗಿ ಖಂಡಿಸುತ್ತದೆ. ಪಾಕಿಸ್ತಾನವು ತನ್ನ ಆಂತರಿಕ ವೈಫಲ್ಯವನ್ನು ಮರೆ ಮಾಡಲು ನೆರೆಹೊರೆಯವರ ಮೇಲೆ ಹೊಣೆ ಹೊರಿಸಲಿದೆ ಎಂದು ಹೇಳಿದರು.
ಈ ಕಂಪನಿಯಲ್ಲಿ ಹಾರ್ಡ್‌ವರ್ಕ್ ಮಾಡಿದವರಿಗೆ ಟಾಟಾ ಕಾರು, ರಾಯಲ್ ಎನ್‌ಫೀಲ್ಡ್ ಬೈಕ್ ಗಿಫ್ಟ್!
ಹಬ್ಬದ ಪ್ರಯುಕ್ತ ಟಾಟಾ ಕಾರಿಗೆ ಕೇವಲ 4.99 ಲಕ್ಷ ರೂ, ಭರ್ಜರಿ 2.05 ಲಕ್ಷ ರೂ ಡಿಸ್ಕೌಂಟ್ ಆಫರ್!