ಹಬ್ಬದ ಪ್ರಯುಕ್ತ ಟಾಟಾ ಕಾರಿಗೆ ಕೇವಲ 4.99 ಲಕ್ಷ ರೂ, ಭರ್ಜರಿ 2.05 ಲಕ್ಷ ರೂ ಡಿಸ್ಕೌಂಟ್ ಆಫರ್!
ಸಾಲು ಸಾಲು ಹಬ್ಬಗಳ ಪ್ರಯುಕ್ತ ಟಾಟಾ ಮೋಟಾರ್ಸ್ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಗರಿಷ್ಠ 2.05 ಲಕ್ಷ ರೂ ಡಿಸ್ಕೌಂಟ್ ನೀಡಲಾಗಿದೆ. ಹೀಗಾಗಿ ಇದೀಗ 4.99 ಲಕ್ಷ ರೂಪಾಯಿಂದ ಟಾಟಾ ಕಾರಿನ ಬೆಲೆ ಆರಂಭಗೊಳ್ಳುತ್ತಿದೆ. ಆಫರ್ ಬಳಿಕ ಯಾವ ಕಾರಿಗೆ ಎಷ್ಟು ರೂಪಾಯಿ?
ಬೆಂಗಳೂರು(ಸೆ.12) ಹಬ್ಬದ ಪ್ರಯುಕ್ತ ಟಾಟಾ ಮೋಟಾರ್ಸ್ ಕಾರು ಉತ್ಸವ ಆರಂಭಿಸಿದೆ. ಹಬ್ಬದ ಸಂದರ್ಭದಲ್ಲಿ ಗ್ರಾಹಕರು ತಮ್ಮ ನೆಚ್ಚಿನ ಟಾಟಾ ಕಾರುಗಳನ್ನು ಖರೀದಿಸುವ ಮೂಲಕ ಕನಸು ಈಡೇರಿಸಲು ಟಾಟಾ ಇದೀಗ ಮಹತ್ವದ ಡಿಸ್ಕೌಂಟ್ ಆಫರ್ ಘೋಷಿಸಿದೆ. ಗರಿಷ್ಠ 2.05 ಲಕ್ಷ ರೂಪಾಯಿವರೆಗೆ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಹೀಗಾಗಿ ಇದೀಗ ಟಾಟಾ ಕಾರುಗಳ ಬೆಲೆ ಕೇವಲ 4.99 ಲಕ್ಷ ರೂಪಾಯಿಗೆ ಆರಂಭಗೊಳ್ಳುತ್ತಿದೆ. ಇದು ಲಿಮಿಟೆಡ್ ಪಿರಿಯೆಡ್ ಆಫರ್. ಹೀಗಾಗಿ ಅಕ್ಟೋಬರ್ 31, 2024ರ ವರೆಗೆ ಈ ವಿಶೇಷ ಆಫರ್ ಲಭ್ಯವಿರುತ್ತದೆ. ಈ ದಿನಾಂಕದೊಳಗೆ ಬುಕ್ ಮಾಡುವ ಎಲ್ಲಾ ಗ್ರಾಹಕರಿಗೆ ಕಾರ್ ಉತ್ಸವ ಆಫರ್ ಲಭ್ಯವಾಗಲಿದೆ.
ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳಾದ ಟಾಟಾ ಟಿಯಾಗೋ, ಟಾಟಾ ಟಿಗೋರ್, ಟಾಟಾ ಅಲ್ಟ್ರೋಜ್, ಟಾಟಾ ನೆಕ್ಸಾನ್, ಟಾಟಾ ಹ್ಯಾರಿಯರ್, ಟಾಟಾ ಸಫಾರಿ ಕಾರಿಗೆ ಈ ಆಫರ್ ಅನ್ವಯವಾಗಲಿದೆ. ice ಎಂಜಿನ್ ಕಾರುಗಳ ಮೇಲೆ ಕಾರು ಉತ್ಸವ ಅಡಿಯಲ್ಲಿ ಹಬ್ಬದ ವಿಶೇಷ ಆಫರ್ ನೀಡಲಾಗಿದೆ. ಇದರ ಜೊತೆಗೆ ಇತರ ಕೆಲ ಆಫರ್ ಕೂಡ ಇರಲಿದೆ.
ಬರೋಬ್ಬರಿ 12 ಲಕ್ಷ ರೂ ಡಿಸ್ಕೌಂಟ್, ಟಾಟಾ, ಮಹೀಂದ್ರ ಸೇರಿ ಕೆಲ ಕಾರಿಗೆ ಭಾರಿ ರಿಯಾಯಿತಿ ಘೋಷಣೆ!
ಹಬ್ಬದ ಕಾರು ಉತ್ಸವ ಆಫರ್ ಬಳಿಕ ಟಾಟಾ ಕಾರುಗಳ ಆರಂಭಿಕ ಬೆಲೆ:
ಟಿಯಾಗೋ ₹ 4.99 ಲಕ್ಷ (ಎಕ್ಸ್ ಶೋ ರೂಂ)
ಟಿಗೋರ್ ₹ 5.99 ಲಕ್ಷ (ಎಕ್ಸ್ ಶೋ ರೂಂ)
ಆಲ್ಟ್ರೋಜ್ ₹6.49 ಲಕ್ಷ (ಎಕ್ಸ್ ಶೋ ರೂಂ)
ನೆಕ್ಸಾನ್ ₹7.99 ಲಕ್ಷ (ಎಕ್ಸ್ ಶೋ ರೂಂ)
ಹ್ಯಾರಿಯರ್ ₹14.99 ಲಕ್ಷ (ಎಕ್ಸ್ ಶೋ ರೂಂ)
ಸಫಾರಿ ₹15.49 ಲಕ್ಷ (ಎಕ್ಸ್ ಶೋ ರೂಂ)
ಕಾರು ಉತ್ಸವ ಆಫರ್ ಜೊತೆಗೆ ಎಲ್ಲಾ ಟಾಟಾ ಶೋ ರೂಂಗಳಲ್ಲಿ ಬರೋಬ್ಬರಿ 45,000 ರೂಪಾಯಿ ವರೆಗಿನ ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ. ಹೀಗಾಗಿ ಈ ಹಬ್ಬದ ಸೀಸನ್‌ನಲ್ಲಿ ಟಾಟಾ ಕಾರು ಖರೀದಿಸಲು ಹೆಚ್ಚು ಸೂಕ್ತ ಸಮಯವಾಗಿದೆ. ಜನಪ್ರಿಯ ಕಾರುಗಳು ಮತ್ತು ಎಸ್‌ಯುವಿ ಮೇಲೆ ಅಚ್ಚರಿಗೊಳಿಸುವ ರಿಯಾಯಿತಿ ಬೆಲೆ ಘೋಷಿಸಿರುವ ಕಾರಣ ಗ್ರಾಹಕರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ.
ಹಬ್ಬದ ಸೀಸನ್ ಆರಂಭವಾಗಿರುವ ಈ ಸಂಭ್ರಮದಲ್ಲಿ ನಮ್ಮ ಅಮೂಲ್ಯ ಗ್ರಾಹಕರಿಗೆ ಆಕರ್ಷಕವಾದ ಆಫರ್‌ಗಳನ್ನು ಒದಗಿಸಲು ನಾವು ಹೆಚ್ಚು ಉತ್ಸುಕರಾಗಿದ್ದೇವೆ ಎಂದು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ವಿವೇಕ್ ಶ್ರೀವತ್ಸವ್ ಹೇಳಿದ್ದಾರೆ. ಗ್ರಾಹಕರಿಗೆ ಇದರ ಜೊತೆಗೆ ಆಕರ್ಷಕ ಎಕ್ಸ್ ಚೇಂಜ್ ಆಫರ್ ಮತ್ತು ನಗದು ಪ್ರಯೋಜನಗಳು ಕೂಡ ಲಭ್ಯವಿದೆ. ಟಾಟಾ ಕಾರುಗಳು ಅತ್ಯುತ್ತಮ ಸುರಕ್ಷತೆ, ಆಕರ್ಷಕ ವಿನ್ಯಾಸ, ಉತ್ತಮ ಪರ್ಫಾಮೆನ್ಸ್ ಎಂಜಿನ್ ಜೊತೆಗೆ ಆರಾಮದಾಯಕ ಪ್ರಯಾಣ ಒದಗಿಸುತ್ತದೆ. ಈ ಬಾರಿಯ ಹಬ್ಬವನ್ನು ಟಾಟಾ ಮೋಟಾರ್ಸ್ ಜೊತೆ ಆಚರಿಸಿಕೊಳ್ಳಲು ಈ ವಿಶೇಷ ಆಫರ್ ನೆರವಾಗಲಿದೆ ಎಂದು ವಿವೇಕ್ ಶ್ರೀವಾತ್ಸವ್ ಹೇಳಿದ್ದಾರೆ.
ಅತ್ಯಾಕರ್ಷಕ ಕೂಪ್ ಕಾರು ಟಾಟಾ ಕರ್ವ್ ಬೆಲೆ ಘೋಷಣೆ, 6 ಬಣ್ಣದಲ್ಲಿ ಲಭ್ಯ!