Rare Earth Materials: ಚೀನಾ ಏಪ್ರಿಲ್‌ನಿಂದ ಅಪರೂಪದ ಅಯಸ್ಕಾಂತ ಖನಿಜವನ್ನು ರಫ್ತು ಮಾಡೋದನ್ನು ನಿರ್ಧರಿಸಿದೆ. ಚೀನಾದ ಈ ನಿರ್ಧಾರದಿಂದ ವಿಶ್ವದ ಆಟೋಮೊಬೈಲ್ ಕ್ಷೇತ್ರದ ನೇರ ಪರಿಣಾಮ ಬೀರಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ನವದೆಹಲಿ: ಅಪರೂಪ ಅಯಸ್ಕಾಂತ ಖನಿಜ (REE-Rare Earth Elements) ಉತ್ಪಾದನೆಯಲ್ಲಿ ಏಕಸ್ವಾಮ್ಯ ಹೊಂದಿರುವ ಚೀನಾಗೆ ಟಾಟಾ ಮೋಟರ್ಸ್ (Tata Motors) ತಿರುಗೇಟು ನೀಡಿದೆ. ಚೀನಾ ಏಪ್ರಿಲ್‌ನಿಂದ ಅಪರೂಪದ ಅಯಸ್ಕಾಂತ ಖನಿಜವನ್ನು ರಫ್ತು ಮಾಡೋದನ್ನು ನಿರ್ಧರಿಸಿದೆ. ಚೀನಾದ ಈ ನಿರ್ಧಾರದಿಂದ ವಿಶ್ವದ ಆಟೋಮೊಬೈಲ್ ಕ್ಷೇತ್ರದ ನೇರ ಪರಿಣಾಮ ಬೀರಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಭಾರತವೂ ಸಹ ಅಪರೂಪ ಅಯಸ್ಕಾಂತ ಖನಿಜಕ್ಕಾಗಿ ಚೀನಾದ ಮೇಲೆ ಅವಲಂಬಿತವಾಗಿತ್ತು. ಬೆಲೆ ಹೆಚ್ಚಳಕ್ಕೆ ಚೀನಾ ಈ ರೀತಿ ಮಾಡ್ತಿದೆ ಎಂಬ ವಿಶ್ಲೇಷಣೆಗಳು ವರದಿಯಾಗಿವೆ.
ಚೀನಾಗೆ ತಿರುಗೇಟು
ಅಪರೂಪ ಅಯಸ್ಕಾಂತ ಖನಿಜ ಪೂರೈಕೆ ಕಡಿಮೆಯಾದ್ರೆ ಭಾರತದ ಆಟೋ ಮೊಬೈಲ್ ಕ್ಷೇತ್ರದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಟಾಟಾ ಮೋಟಾರ್ಸ್, ಚೀನಾದ ನಿರ್ಧಾರದಿಂದ ಯಾವುದೇ ಪರಿಣಾಮ ಬೀರಿಲ್ಲ. ಪರ್ಯಾಯ ಮಾರ್ಗಗಳ ಮೂಲಕ ಅವುಗಳ ಪೂರೈಕೆಗೆ ಸಿದ್ಧತೆ ನಡೆಸಿದೆ. ಟಾಟಾ ಅಧ್ಯಕ್ಷ ಎನ್.ಚಂದ್ರಶೇಖರನ್, ಕಂಪನಿಯು ಈ ವಿಷಯದ ಬಗ್ಗೆ ಸರ್ಕಾರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಶುಕ್ರವಾರ ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದ್ದಾರೆ. ಈ ಮೂಲಕ ಖನಿಜ ನೀಡಲ್ಲ ಎಂದು ಹೇಳುತ್ತಿರುವ ಚೀನಾಗೆ ಟಾಟಾ ಮೋಟಾರ್ಸ್ ತಿರುಗೇಟು ನೀಡಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.
ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ !
ಷೇರುದಾರರೊಂದಿಗಿನ ಸಭೆಯಲ್ಲಿ ಮಾತನಾಡಿರುವ ಎನ್.ಚಂದ್ರಶೇಖರನ್, ಸದ್ಯ ನಾವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿಲ್ಲ. ಅಪರೂಪದ ಖನಿಜಗಳ ಪೂರೈಕೆಯಲ್ಲಿಯೂ ಸಮಸ್ಯೆ ಇಲ್ಲ. ಅವಶ್ಯಕತೆಗನುಗುಣವಾಗಿ ಅಯಸ್ಕಾಂತಗಳನ್ನು ಪೂರೈಸಲು ನಾವು ಸಮರ್ಥರಾಗಿದ್ದು, ನಮ್ಮಲ್ಲಿ ಅಗತ್ಯವಿರುವ ದಾಸ್ತಾನುಗಳಿವೆ. ಮಾರುಕಟ್ಟೆಯಲ್ಲಿರುವ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ದಾಸ್ತಾನಿನ ಉತ್ತಮ ನಿರ್ವಹಣೆಯನ್ನು ಮಾಡಲಾಗುತ್ತಿದೆ. ಇದೆಲ್ಲದರ ಜೊತೆ ಇತರ ಆಯ್ಕೆಗಳ ಮೇಲೆ ಕೆಲಸ ಮಾಡಲಾಗಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಉದ್ಯಮಕ್ಕೆ ಹಿನ್ನಡೆ ಸಾಧ್ಯತೆ
ಮುಂದುವರಿದು ಮಾತನಾಡಿರುವ ಎನ್. ಚಂದ್ರಶೇಖರನ್, ಆಟೋಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಉದ್ಯಮದ ಹಲವು ವಲಯಗಳಲ್ಲಿ ಅಪರೂಪದ ಭೂಮಿಯ ಆಯಸ್ಕಾಂತ ಅತಿಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ. ವಿಶೇಷವಾಗಿ ವಿದ್ಯುತ್ ವಾಹನಗಳು ಮತ್ತು ಮೋಟಾರ್‌ಗಳಲ್ಲಿ ಅಪರೂಪದ ಭೂಮಿಯ ಆಯಸ್ಕಾಂತ ಬಳಕೆ ಮಾಡಲಾಗುತ್ತದೆ. ಚೀನಾದ ನಿಷೇಧವು ಭಾರತದಲ್ಲಿನ ಆಟೋಮೊಬೈಲ್ ಮತ್ತು ಗೃಹೋಪಯೋಗಿ ಉಪಕರಣಗಳ ಉದ್ಯಮಕ್ಕೆ ಹಿನ್ನಡೆಯನ್ನು ಉಂಟುಮಾಡಬಹುದು ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷ
ಅಪರೂಪದ ಭೂಮಿಯ ಆಯಸ್ಕಾಂತದ ಕೊರತೆ ಸಮಸ್ಯೆಯನ್ನು ಪರಿಹರಿಸಲು ಭಾರತ ಸರ್ಕಾರದೊಂದಿಗೆ ಟಾಟಾ ಮೋಟಾರ್ಸ್ ನಿಕಟವಾಗಿ ಕೆಲಸ ಮಾಡುತ್ತಿದೆ. ಚೀನಾದಿಂದ ಅಗತ್ಯವಾದ ಅಪರೂಪದ ಭೂಮಿಯ ಆಯಸ್ಕಾಂತಗಳನ್ನು ಆಮದು ಮಾಡಿಕೊಳ್ಳಲು ಆಟೋ ಉದ್ಯಮವು ಈಗಾಗಲೇ ತ್ವರಿತ ಅನುಮೋದನೆಯನ್ನು ಕೋರಿದೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷ ತಮ್ಮ ಕಂಪನಿಯ ವ್ಯವಹಾರದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಎನ್. ಚಂದ್ರಶೇಖರನ್ ಷೇರುದಾರರ ಆತಂಕವನ್ನು ನಿವಾರಿಸಿದ್ದಾರೆ.
ಸವಾಲುಗಳನ್ನು ಎದುರಿಸಲು ನಾವು ಸಮರ್ಥ
ಪ್ರಪಂಚದಾದ್ಯಂತ ನಡೆಯುತ್ತಿರುವ ರಾಜಕೀಯ ಉದ್ವಿಗ್ನತೆಗಳು, ಮಿಲಿಟರಿ ಸಂಘರ್ಷ, ಪೂರೈಕೆಯಲ್ಲಿನ ಅಡೆತಡೆಗಳಿಂದಾಗಿ ಭವಿಷ್ಯದಲ್ಲಿನ ಆರ್ಥಿಕ ವಾತಾವರಣ ಅಸ್ಥಿರವಾಗಿರಲಿದೆ ಎಂದು ಚಂದ್ರಶೇಖರನ್ ಅನುಮಾನ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ವರ್ಷಗಳ ನಮ್ಮ ಕಾರ್ಯತಂತ್ರ ಆರ್ಥಿಕ ಸ್ಥಿತಿ ಮತ್ತು ವ್ಯವಹಾರ ರಚನೆಯನ್ನು ಎಷ್ಟು ಬಲಪಡಿಸಿದ್ದೇವೆ ಮುಂಬರುವ ಸವಾಲುಗಳನ್ನು ಎದುರಿಸಲು ನಾವು ಸಮರ್ಥವಾಗಿದ್ದೇವೆ ಎಂದು ಎನ್ ಚಂದ್ರಶೇಖರನ್ ಹೇಳುತ್ತಾರೆ.