Asianet Suvarna News Asianet Suvarna News

ಆಡು ಮುಟ್ಟದ ಸೊಪ್ಪಿಲ್ಲ, ಟಾಟಾ ಮಾಡದ ಉದ್ಯಮವಿಲ್ಲ!

ಟಾಟಾ ಸಮೂಹ ಸಂಸ್ಥೆಗಳಲ್ಲಿ 10 ಲಕ್ಷಕ್ಕಿಂತಲೂ ಹೆಚ್ಚು ಜನರು ವಿವಿಧ ಸ್ತರಗಳಲ್ಲಿ ದುಡಿಯುತ್ತಿದ್ದಾರೆ. ಕಂಪನಿಯ ವಾರ್ಷಿಕ ಆದಾಯ 14 ಲಕ್ಷ ಕೋಟಿ ರು.ನಷ್ಟಿದೆ. ಷೇರುಪೇಟೆಯಲ್ಲಿ ನೊಂದಾಯಿತ ಎಲ್ಲಾ ಟಾಟಾ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ಅಂದಾಜು 34 ಲಕ್ಷ ಕೋಟಿ ರು.ನಷ್ಟಿದೆ.

Tata group of companies is the largest manufacturing company in India grg
Author
First Published Oct 11, 2024, 8:01 AM IST | Last Updated Oct 11, 2024, 8:01 AM IST

ಮುಂಬೈ(ಅ.11):  ಟಾಟಾ ಸಮೂಹ ಸಂಸ್ಥೆ ಭಾರತದ ಅತಿ ದೊಡ್ಡ ಉತ್ಪಾದನಾ ಸಂಸ್ಥೆಯಾಗಿದೆ. ಇದನ್ನು 1868ರಲ್ಲಿ ಭಾರತದ ಕೈಗಾರಿಕಾ ಪಿತಾಮಹಾ ಜೆಮ್‌ಶೆಡ್‌ಜಿ ಟಾಟಾ ಸ್ಥಾಪಿಸಿದರು. ಮಹಾರಾಷ್ಟ್ರದ ಮುಂಬೈ ಹಾಗೂ ನವಿಮುಂಬೈಗಳಲ್ಲಿ ಟಾಟಾ ಗ್ರೂಪ್‌ನ ಪ್ರಧಾನ ಕಚೇರಿ ಇದೆ.

ಟಾಟಾ ಸಮೂಹ ಸಂಸ್ಥೆಗಳಲ್ಲಿ 10 ಲಕ್ಷಕ್ಕಿಂತಲೂ ಹೆಚ್ಚು ಜನರು ವಿವಿಧ ಸ್ತರಗಳಲ್ಲಿ ದುಡಿಯುತ್ತಿದ್ದಾರೆ. ಕಂಪನಿಯ ವಾರ್ಷಿಕ ಆದಾಯ 14 ಲಕ್ಷ ಕೋಟಿ ರು.ನಷ್ಟಿದೆ. ಷೇರುಪೇಟೆಯಲ್ಲಿ ನೊಂದಾಯಿತ ಎಲ್ಲಾ ಟಾಟಾ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ಅಂದಾಜು 34 ಲಕ್ಷ ಕೋಟಿ ರು.ನಷ್ಟಿದೆ.

ರತನ್​ ಟಾಟಾ ಅಂತಿಮ ದರ್ಶನಕ್ಕೆ ಮಲತಾಯಿ ಸಿಮೋನ್: 94 ವಯಸ್ಸಿನ 70 ಸಾವಿರ ಕೋಟಿ ಉದ್ಯಮದ ಒಡತಿ!

ಟಾಟಾ ಸಮೂಹ 45 ದೇಶಗಳಲ್ಲಿ ಕಾರ್ಯಾಲಯಗಳನ್ನು ಹೊಂದಿವೆ. 156 ದೇಶಗಳಲ್ಲಿ ಟಾಟಾ ಸಮೂಹ ತನ್ನ ಸೇವೆ ನೀಡುತ್ತಿದೆ.

1. ಮಾಹಿತಿ ತಂತ್ರಜ್ಞಾನ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಎಕ್ಸ್‌ಸಿ, ಟಾಟಾ ಡಿಜಿಟಲ್, ಟಾಟಾ ಟೆಕ್ನಾಲಜೀಸ್
2. ಸ್ಟೀಲ್‌: ಟಾಟಾ ಸ್ಟೀಲ್‌
3. ಆಟೋಮೊಬೈಲ್ಸ್‌: ಟಾಟಾ ಮೋಟಾರ್ಸ್‌, ಜಾಗ್ವಾರ್‌, ಲ್ಯಾಂಡ್ ರೋವರ್‌, ಟಾಟಾ ಆಟೋಕಪ್ ಸಿಸ್ಟಮ್
4. ಗ್ರಾಹಕ ಮತ್ತು ಚಿಲ್ಲರೆ: ಟಾಟಾ ಕೆಮಿಕಲ್ಸ್, ಟಾಟಾ ಕನ್‌ಸ್ಯೂಮರ್‌ ಪ್ರೊಡಕ್ಷನ್‌, ಟೈಟಾನ್ ಕಂಪನಿ, ವೋಲ್ಟಾಸ್, ಇನ್ಫಿನಿಟಿ ರೀಟೇಲ್, ಟ್ರೆಂಟ್
5. ಇನ್ಫ್ರಾಸ್ಟ್ರಕ್ಚರ್‌: ಟಾಟಾ ಪವರ್‌, ಟಾಟಾ ಕನ್ಸಲ್‌ಟೆನ್ಸಿ ಎಂಜಿನಿಯರ್ಸ್, ಟಾಟಾ ರಿಯಾಲಿಟಿ ಮತ್ತು ಇನ್ಫ್ರಾಸ್ಟ್ರಕ್ಚರ್‌, ಟಾಟಾ ಹೌಸಿಂಗ್
6. ಹಣಕಾಸು ಸೇವೆಗಳು: ಟಾಟಾ ಕ್ಯಾಪಿಟಲ್, ಟಾಟಾ ಎಐಎ ಲೈಫ್, ಟಾಟಾ ಎಐಜಿ, ಟಾಟಾ ಅಸೆಟ್ ಮ್ಯಾನೇಜ್ಮೆಂಟ್
7. ಏರೋಸ್ಪೇಸ್ ಮತ್ತು ಡಿಫೆನ್ಸ್: ಟಾಟಾ ಅಡ್ವಾನ್ಸ್‌ಡ್‌ ಸಿಸ್ಟಮ್ಸ್
8. ಪ್ರವಾಸೋದ್ಯಮ ಮತ್ತು ಪ್ರಯಾಣ: ಇಂಡಿಯನ್‌ ಹೋಟೆಲ್‌ಗಳು, ತಾಜ್‌ ಹೋಟೆಲ್‌ಗಳು, ಟಾಟಾ ಎಸ್‌ಐಎ ಏರ್‌ಲೈನ್ಸ್, ಏರ್ ಇಂಡಿಯಾ
9. ಟೆಲಿಕಾಂ ಮತ್ತು ಮಾಧ್ಯಮ: ಟಾಟಾ ಕಮ್ಯುನಿಕೇಷನ್ಸ್, ಟಾಟಾ ಪ್ಲೇ, ಟಾಟಾ ಟೆಲಿಸರ್ವಿಸಸ್
10. ವ್ಯಾಪಾರ ಮತ್ತು ಹೂಡಿಕೆ: ಟಾಟಾ ಇಂಟರ್‌ನ್ಯಾಶನಲ್ಸ್, ಟಾಟಾ ಇಂಡಸ್ಟ್ರೀಸ್, ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್

ರತನ್‌ ಟಾಟಾ ಮಾಜಿ ಪ್ರೇಯಸಿಯ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದ ಸೈಫ್‌ ಅಲಿ ಖಾನ್‌ ಅಪ್ಪ!

ಟಾಟಾ ಉತ್ಪನ್ನಗಳು/ಬ್ರಾಂಡ್‌: ಬಿಗ್‌ ಬಾಸ್ಕೆಟ್‌, ಟಾಟಾ ನ್ಯೂ, ಟಾಟಾ ಟೀ, ಟೆಟ್ಲಿ, ಎಟ್‌ ಓ ಕ್ಲಾಕ್‌ ಕಾಫಿ, ಟಾಟಾ ಕಾಫಿ ಗ್ರಾಂಡ್, ಹಿಮಾಲಯನ್ ನ್ಯಾಚುರಲ್ ಮಿನರಲ್ ವಾಟರ್‌, ಟಾಟಾ ಕಾಪರ್ ಪ್ಲಸ್‌ ಮತ್ತು ಟಾಟಾ ಗ್ಲುಕೋ ಪ್ಲಸ್‌, ಟಾಟಾ ಉಪ್ಪು, ಟಾಟಾ ಶ್ಯಾಂಪೂ, ಮತ್ತು ಟಾಟಾ ಸೋಲ್‌ಫುಲ್

ಶಿಕ್ಷಣ ಸಂಸ್ಥೆಗಳು:

ಟಾಟಾ ಸಮೂಹ ಸಂಸ್ಥೆ ದೇಶಾದ್ಯಂತ ಶಿಕ್ಷಣ, ಸೇವಾವಲಯ, ಸಂಶೋಧನಾ ವಲಯಗಳಲ್ಲಿ ಹಲವು ಸಂಸ್ಥೆಗಳನ್ನು ನಡೆಸುತ್ತಿದೆ. ಇವುಗಳಲ್ಲಿ ಟಾಟಾ ಇನ್‌ಸ್ಟಿಟ್ಯೂಟ್ ಆಫ್‌ ಫಂಡಮೆಂಟಲ್ ರಿಸರ್ಚ್‌, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಸೈನ್ಸ್, ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಸೋಷಿಯಲ್ ಸೈನ್ಸ್, ಟಾಟಾ ಮೆಮೋರಿಯಲ್ ಆಸ್ಪತ್ರೆ ಪ್ರಮುಖವಾದವು.

Latest Videos
Follow Us:
Download App:
  • android
  • ios