Asianet Suvarna News Asianet Suvarna News

ನಿಮ್ಮ ಡೆಬಿಟ್ ಕಾರ್ಡ್‌ನಲ್ಲಿ ಈ ಚಿಪ್ ಇಲ್ಲಾಂದ್ರೆ ಅಷ್ಟೇ ಗತಿ!

ಎಟಿಎಂ ಡೆಬಿಟ್ ಕಾರ್ಡ್ ನಲ್ಲಿ ಇಎಂವಿ ಚಿಪ್! ಡೆಬಿಟ್ ಕಾರ್ಡ್ ಬದಲಾಯಿಸಿಕೊಳ್ಳುವಂತೆ ಎಸ್ ಬಿಐ ಮನವಿ! ಗ್ರಾಹಕರಿಗೆ ಸೂಚನೆ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ! ಮ್ಯಾಗ್ನೆಟಿಕ್ ಸ್ಟ್ರೈಪ್ ಬದಲಿಗೆ ಇಎಂವಿ ಚಿಪ್ ಅಳವಡಿಕೆ

Switch to chip-based debit cards: SBI
Author
Bengaluru, First Published Aug 28, 2018, 4:38 PM IST

ನವದೆಹಲಿ(ಆ.28): ಡಿಸೆಂಬರ್ 31ರೊಳಗೆ ಎಟಿಎಂ ಡೆಬಿಟ್ ಕಾರ್ಡ್ ನಲ್ಲಿ ಮ್ಯಾಗ್ನೆಟಿಕ್ ಸ್ಟ್ರೈಪ್ ಬದಲಿಗೆ ಇಎಂವಿ ಚಿಪ್ ಗೆ ಬದಲಾಯಿಸಿಕೊಳ್ಳುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸೂಚಿಸಿದೆ.

ಕೇವಲ ಚಿಪ್ ಆಧಾರಿತ ಮತ್ತು ಪಿನ್ ಹೊಂದಿದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳನ್ನು ನೀಡುವಂತೆ ಬ್ಯಾಂಕ್ ಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. ವಂಚನೆಯಿಂದ ಗ್ರಾಹಕರನ್ನು ರಕ್ಷಿಸುವುದು ಇದರ ಉದ್ದೇಶವಾಗಿದೆ.

ನಕಲಿ ಕಾರ್ಡುಗಳ ವಂಚನೆಯಿಂದ ಇವಿಎಂ ಚಿಪ್ ಆಧಾರಿತ ಕಾರ್ಡುಗಳು ಗ್ರಾಹಕರನ್ನು ರಕ್ಷಿಸುತ್ತದೆ. ವಂಚನೆ, ಕಾರ್ಡು ಕಳೆದುಹೋಗುವುದು ಮತ್ತು ಕದ್ದು ಹೋದರೆ ವಂಚನೆಯಾಗುವುದನ್ನು ಇಎಂವಿ ಚಿಪ್ ಆಧಾರಿತ ಕಾರ್ಡುಗಳು ರಕ್ಷಿಸಿ ಪಿನ್ ಸಂಖ್ಯೆಯನ್ನು ರಕ್ಷಿಸುತ್ತದೆ.

ರಿಸರ್ವ್ ಬ್ಯಾಂಕ್ ನ ಸೂಚನೆಯಂತೆ 2018ರ ಅಂತ್ಯದೊಳಗೆ ಮ್ಯಾಗ್ ಸ್ಟ್ರೈಪ್ ಡೆಬಿಟ್ ಕಾರ್ಡುಗಳನ್ನು ಇಎಂವಿ ಚಿಪ್ ಡೆಬಿಟ್ ಕಾರ್ಡು ಗಳಿಗೆ ಬದಲಾಯಿಸಬೇಕೆಂದು ಎಸ್ ಬಿಐ ಟ್ವೀಟ್ ಮಾಡಿದೆ.  ಇದನ್ನು ಗ್ರಾಹಕರಿಗೆ ಉಚಿತವಾಗಿ ನೀಡಲಾಗುತ್ತದೆ.

Follow Us:
Download App:
  • android
  • ios