ನಟಿ ಭಾಗ್ಯಶ್ರೀ ಪೋಷಕರಿಗೆ ಸ್ವಿಸ್ ಬ್ಯಾಂಕ್ ನೋಟಿಸ್!
ನಟಿ ಭಾಗ್ಯಶ್ರೀ ಪೋಷಕರಿಗೆ ಸ್ವಿಸ್ ಬ್ಯಾಂಕ್ ನೋಟಿಸ್| ಸಾಂಗ್ಲಿ ರಾಜಮನೆತನಕ್ಕೆ ಸ್ವಿಸ್ ಬ್ಯಾಂಕ್‌ನಿಂದ ನೋಟಿಸ್ ರವಾನೆ| ಭಾರತ ಸರ್ಕಾರ ಮಾಹಿತಿ ಕೋರಿಕೆ ಹಿನ್ನೆಲೆಯಲ್ಲಿ ನೋಟಿಸ್ ಜಾರಿ
ನವದೆಹಲಿ[ನ.25]: ಮೈನೇ ಪ್ಯಾರ್ ಕಿಯಾ ಚಿತ್ರದ ಮೂಲದ ಖ್ಯಾತರಾದ ಬಾಲಿವುಡ್ ನಟಿ ಭಾಗ್ಯಶ್ರೀ ಅವರ ಪೋಷಕರಿಗೆ ಸ್ವಿಸ್ ಬ್ಯಾಂಕ್‌ನಿಂದ ನೋಟಿಸ್ ಬಂದಿದೆ. ಭಾಗ್ಯಶ್ರೀ ಪೋಷಕರಾದ ವಿಜಯ್‌ಸಿಂಗ್ ಮಾಧವರಾವ್ ಪಟವರ್ಧನ್ ಮತ್ತು ರೋಹಿಣಿ ವಿಜಯ್‌ಸಿಂಗ್ ಅವರ ಕುರಿತ ಆಡಳಿತಾತ್ಮಕ ಮಾಹಿತಿ ನೀಡುವಂತೆ ಭಾರತ ಮಾಡಿದ್ದ ಮನವಿಯನ್ನು ಸ್ವಿಜರ್ಲೆಂಡ್‌ನ ತೆರಿಗೆ ಇಲಾಖೆ ಮಾನ್ಯ ಮಾಡಿದ್ದು, ಭಾಗ್ಯಶ್ರೀ ಪೋಷಕರಿಗೆ ನೋಟಿಸ್ ಜಾರಿ ಮಾಡಿದೆ.
ನೋಟಿಸ್‌ನಲ್ಲಿ, ಪ್ರಕರಣ ನಿರ್ವಹಣೆಗಾಗಿ ನಿಮ್ಮ ಪರ ನಾಮಿನಿಗಳನ್ನು ನೇಮಕ ಮಾಡಿ ಮತ್ತು ಭಾರತಕ್ಕೆ ಮಾಹಿತಿ ನೀಡುವುದರಿಂದ ಉದ್ಭವಿಸಬಹುದಾದ ವಿಷಯಗಳ ಬಗ್ಗೆ ನಿಮ್ಮ ಆಕ್ಷೇಪಗಳನ್ನು ನೋಟಿಸ್ ಪಡೆದ 10 ದಿನಗಳಲ್ಲಿ ಸಲ್ಲಿಸಿ ಎಂದು ನ.19ರಂದೇ ಸ್ವಿಸ್ ತೆರಿಗೆ ಇಲಾಖೆ ಸೂಚಿಸಿದೆ.
ಭಾರತದ 15 ಸ್ವಿಸ್ ಖಾತೆ ನಿಷ್ಕ್ರಿಯ; ವಾರಸ್ಥಾರರೇ ಇಲ್ಲ!
ಬ್ಯಾಂಕ್ ಖಾತೆದಾರರ ಯಾವುದೇ ಮಾಹಿತಿಯನ್ನು ಮತ್ತೊಂದು ದೇಶದ ಜೊತೆ ಹಂಚಿಕೊಳ್ಳುವ ಮೊದಲ ಪ್ರಕ್ರಿಯೆ ಇದಾಗಿರುವ ಕಾರಣ, ಶೀಘ್ರವೇ ನಟಿ ಭಾಗ್ಯಶ್ರೀ ಅವರ ಪೋಷಕರ ಸ್ವಿಸ್ ಬ್ಯಾಂಕ್ ಖಾತೆ ರಹಸ್ಯ ಭಾರತದ ಕೈಸೇರುವ ನಿರೀಕ್ಷೆ ಇದೆ. ಸಾಮಾನ್ಯವಾಗಿ ಅಕ್ರಮ ಹಣವನ್ನು ಇಟ್ಟಬಗ್ಗೆ ಮೇಲ್ನೋಟಕ್ಕೆ ಸಾಬೀತಾಗುವ ಪ್ರಕರಣಗಳಲ್ಲಿ ಮಾತ್ರವೇ ಇಂಥ ನೋಟಿಸ್ ನೀಡುವ ಕಾರಣ ಭಾಗ್ಯಶ್ರೀ ಪೋಷಕರಿಗೆ ಮುಂದಿನ ದಿನಗಳಲ್ಲಿ ತೆರಿಗೆ ಇಲಾಖೆ ತನಿಖೆ ಬಿಸಿ ಎದುರಾಗುವ ಸಾಧ್ಯತೆ ಹೆಚ್ಚಿದೆ.
ರಾಜಮನೆತನ: ಭಾಗ್ಯಶ್ರೀ ಅವರ ತಂದೆ ವಿಜಯ್‌ಸಿಂಗ್ ಪಟವರ್ಧನ್, ಮಹಾರಾಷ್ಟ್ರದ ಸಾಂಗ್ಲಿ ರಾಜಮನೆತನದ ಕೊನೆಯ ದೊರೆ. 1965ರಲ್ಲಿ ತಮ್ಮ ಅಜ್ಜನ ಸಾವಿನ ಬಳಿಕ ವಿಜಯ್‌ಸಿಂಗ್ ರಾಜನಾಗಿ ಅಧಿಕಾರ ನಡೆಸಿದ್ದರು. ಆದರೆ ಬಳಿಕ ಉದ್ಯಮದೆಡೆಗೆ ಆಸಕ್ತಿ ಬೆಳೆಸಿಕೊಂಡಿದ್ದ ವಿಜಯ್‌ಸಿಂಗ್, ಕೆಲ ಕಾಲ ಸಿನೆಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ಬಳಿಕ ಸಾಂಗ್ಲಿಯಲ್ಲಿ ಹಲವು ಶಿಕ್ಷಣ, ವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ವಿಜಯ್‌ಸಿಂಗ್ ಮತ್ತು ರೋಹಿಣಿ ಅವರ ಪುತ್ರಿ ಭಾಗ್ಯಶ್ರೀ, 1999ರಲ್ಲಿ ಬಿಡುಗಡೆಯಾದ ಮೈನೇ ಪ್ಯಾರ್ ಕಿಯಾ ಚಿತ್ರದ ಮೂಲಕ ದಿನ ಬೆಳಗಾಗುವುದರೊಳಗೆ ದೇಶಾದ್ಯಂತ ಖ್ಯಾತಿ ಪಡೆದುಕೊಂಡಿದ್ದರು.
Fact Check| ಸ್ವಿಸ್ ಬ್ಯಾಂಕ್ ಕಾಳಧನಿಕರ ಪಟ್ಟಿಬಿಡುಗಡೆ ಮಾಡಿದ ವಿಕಿಲೀಕ್ಸ್!
ನವೆಂಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: